ಮಳವಳ್ಳಿ ಮಹದೇವಸ್ವಾಮಿ ಅವರ ಕಂಠ ಸಿರಿಗೆ ತಲೆದೂಗಿದ ಪ್ರೇಕ್ಷಕರು
ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಮಂಗಳವಾರ ಸಂಜೆ ನಡೆದ ಜನಪದೋತ್ಸವದಲ್ಲಿ ಖ್ಯಾತ ಗಾಯಕ ಡಾ.ಮಳವಳ್ಳಿ ಮಹಾದೇವಸ್ವಾಮಿ ಅವರು ಹರಿಸಿದ ಜನಪದ ಕಥನದ ಮೋಡಿ ಬಹುರೂಪಿಗೆ ಕಳೆ ತಂದಿತು.
ಮಳವಳ್ಳಿ ಮಹಾದೇವಸ್ವಾಮಿ ಅವರು ಕಂಚಿನ ಕಂಠದ ಮೂಲಕ ಮಂಟೇಸ್ವಾಮಿ ಕಾವ್ಯದ ಕಲ್ಯಾಣ ಪಟ್ಟಣದ ಸಾಲನ್ನು ಹಾಡುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಕಲಾರಸಿಕರು ತಲೆದೂಗಿದರು. ದಮ್ಮಡಿ, ಕರ್ಮಚಿ ಮತ್ತು ತಾಳದಲ್ಲಿ ಮಂಟೇಸ್ವಾಮಿ ಅವರು ಕಲ್ಯಾಣ ಪಟ್ಟಣದಲ್ಲಿ ಬಸವಣ್ಣ ಮತ್ತು ನೀಲಾಂಬಿಕೆಗೆ ದರ್ಶನ ನೀಡಿ ಕೂಡಲ ಸಂಗಮದಲ್ಲಿ ಐಕ್ಯವಾಗುವ ಹಿನ್ನೆಲೆ ಮತ್ತು ಮುಂದಿನ ಕಲಿಯ ಬಗ್ಗೆ ಎಚ್ಚರಿಸಿದ್ದ ಕಥೆಯನ್ನು ತಮ್ಮ ಕಂಚಿನ ಕಂಠದ ಮೂಲಕ ಪ್ರಸ್ತುತಪಡಿಸಿದರು.
ಕಲ್ಯಾಣದಲ್ಲಿ ಬಸವಣ್ಣನವರನ್ನು ಭೇಟಿ ಮಾಡಲು ಆಗಮಿಸುವ ಮಂಟೇಸ್ವಾಮಿ ಸೇವಕನಿಂದ ಅಪಮಾನಕ್ಕೆ ಒಳಗಾಗುತ್ತಾರೆ. ಕೋಪಗೊಂಡು ಶಿವಭಕ್ತ ಹರಳಯ್ಯನ ಮನೆ ಮುಂದೆ ಕೂರುವ ಮಂಟೇಸ್ವಾಮಿ ಅವರನ್ನು ಬಸವಣ್ಣ ಸಮಾಧಾನಪಡಿಸುವ ಪ್ರಸಂಗವನ್ನು ಮನಮುಟ್ಟುವಂತೆ ಹಾಡಿದರು.
ಕಲಿಗಾಲದ ಬಗ್ಗೆ ಮಂಟೇಸ್ವಾಮಿ ನುಡಿಯನ್ನು ಹಾಡುವಾಗ ಸಭಿಕರು ಹೌದೆಂದು ತಲೆಯಾಡಿಸಿದರು. ಒಂದು ಗಂಟೆಗಳ ಕಾಲ ಮಂಟೇಸ್ವಾಮಿ ಮಹತ್ವವನ್ನು ಕೇಳುಗರ ಎದೆಗೆ ಮುಟ್ಟಿಸಿದರು. ಮಂಗಳವಾರ ಮಳೆ ಬಿಡುವು ನೀಡಿದ್ದರಿಂದ ಜನರು ಕಿಕ್ಕಿರಿದು ನೆರೆದು ಗಾಯನ ಆಲಿಸಿದರು.
ದಮ್ಮಡಿಯಲ್ಲಿ ಮಹೇಶ್ ಮತ್ತು ಮಂಜು, ಕರ್ಮಚಿಯನ್ನು ಕೊಳತ್ತೂರು ನಂಜುಂಡಸ್ವಾಮಿ, ತಗ್ಗಳ್ಳಿ ಮಹಾದೇವ್, ತಾಳದಲ್ಲಿ ಮಹದೇವಸ್ವಾಮಿ ಅವರು ಸಹಕಾರ ನೀಡಿದರು.ಇದಕ್ಕೂ ಮುನ್ನ ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡ ಪ್ರಸ್ತುತಪಡಿಸಿದ ಜನಪದೋತ್ಸವದ ಕಂಗೀಲು ನೃತ್ಯ ಹೊಸ ರಂಗು ಮೂಡಿಸಿತು. ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿುುಂತ್ತಿದ್ದುದ್ದು ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು. ಆಚರಣೆುೂಂ ಹೌದು. ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶನ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿುಂ ರಂಗಾಸಕ್ತರು ಈ ಕಲೆುಂ ಸವಿ ಸವಿದರು.
ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…