ಎಡಿಟೋರಿಯಲ್

ಸೌಂದರ್ಯ ಹದಗೆಡಿಸುವ ಫ್ಲೆಕ್ಸ್ ಹಾವಳಿ ತಡೆ ಅಗತ್ಯ

ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಅರಮನೆ ನಗರಿ ಮೈಸೂರಿನ ಸೌಂದರ್ಯವನ್ನು ಹದಗೆಡಿಸುವಂತಹ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ರೂಪಿಸಿರುವ ನಿಯಮಗಳನ್ನು ಮೈಸೂರು ನಗರಪಾಲಿಕೆಯು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗ ಬೇಕಾಗಿದೆ. ಆಡಳಿತ ಪಕ್ಷವಾಗಲೀ ಅಥವಾ ವಿರೋಧ ಪಕ್ಷಗಳಾಗಲೀ ಅನುಮತಿ ಇಲ್ಲದೆ ಅಳವಡಿಸುವ ಫ್ಲೆಕ್ಸ್ಗಳನ್ನು ತೆರವುಗೊಳಿಸುವುದಕ್ಕೆ ಸೀಮಿತವಾಗದೆ ದಂಡದ ಅಸ್ತ್ರವನ್ನು ಪ್ರಯೋಗಿಸಿದರೆ ಖಂಡಿತ ತಡೆಗಟ್ಟಬಹುದು. ಈ ವಿಚಾರದಲ್ಲಿ ಜಿಲ್ಲಾಡಳಿತ ಕೊನೆಗೂ ಕೈಗೊಂಡಿರುವ ನಿರ್ಧಾರವನ್ನು ಪಾಲಿಸುವಂತೆ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ಕೋಲಾರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಅಳವಡಿಸಿದ್ದ -ಕ್ಸ್‌ಗಳನ್ನು ತೆರವುಗೊಳಿಸಿದ್ದಕ್ಕೆ ಪೌರಾಯುಕ್ತರನ್ನು ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಯೊಡ್ಡಿದ್ದ ಪ್ರಕರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ರಾಜಕೀಯ ಪಕ್ಷಗಳ ಮುಖಂಡರು ಯಾವುದೇ ಅನುಮತಿ ಇಲ್ಲದೆ ಫ್ಲೆಕ್ಸ್‌ ಅಳವಡಿಸುವುದನ್ನು ತಡೆಯಬೇಕೆಂಬ ಕೂಗು ಎದ್ದಿತ್ತು.

ಇದರಿಂದಾಗಿ, ಮೈಸೂರು ನಗರದಲ್ಲೂ ಎಲ್ಲೆಂದರಲ್ಲಿ ಹುಟ್ಟುಹಬ್ಬ, ಜಯಂತಿ ಸಮಾರಂಭಗಳು, ನಿಧನ ಹೀಗೆ ಹತ್ತಾರು ವಿಚಾರಗಳನ್ನು ಮುಂದಿಟ್ಟುಕೊಂಡು ಫ್ಲೆಕ್ಸ್‌‌ಗಳನ್ನು ಅಳವಡಿಸುವುದಕ್ಕೆ ಕಡಿವಾಣ ಹಾಕುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಒತ್ತಾಯಿಸುತ್ತಲೇ ಬಂದಿದ್ದರು. ಅದೇ ರೀತಿ ಪಾರಂಪರಿಕ ನಗರದ ಸೌಂದರ್ಯಕ್ಕೆ ಧಕ್ಕೆ ತರುವುದಕ್ಕೆ ಅವಕಾಶ ಕೊಡದಂತೆ ಜಿಲ್ಲಾಡಳಿತ, ಮೈಸೂರು ನಗರಪಾಲಿಕೆಯ ಮೇಲೆ ಒತ್ತಡ ಹಾಕಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಮೈಸೂರು ನಗರ ಮತ್ತು ಜಿಲ್ಲೆಯ ಸಾರ್ವಜನಿಕ ಪ್ರದೇಶಗಳಲ್ಲಿ ಈಗಾಗಲೇ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿರುವುದು ಗಮನಾರ್ಹವಾಗಿದೆ.

ನಗರದಲ್ಲಿ ಸೌಂದರ್ಯ ಹಾಳು ಮಾಡುವಂತಹ ಫ್ಲೆಕ್ಸ್‌‌ಗಳನ್ನು ಅಳವಡಿಸುವುದನ್ನು ಯಾವುದೋ ಒಂದು ಪಕ್ಷ, ಒಬ್ಬ ಮುಖಂಡರು ಮಾಡುತ್ತಿಲ್ಲ. ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ ನಡೆದರೂ ಅವರ ಮನೆಯ ಉದ್ದಕ್ಕೂ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಹಾಕಿದರೆ, ಜಯಂತಿ ಸಮಾರಂಭಗಳಲ್ಲಿ ಪೈಪೋಟಿಗೆ ಬಿದ್ದವರಂತೆ ವಿದ್ಯುತ್ ಕಂಬ, ರಸ್ತೆಬದಿಯ ತಿರುವು, ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸುತ್ತಾರೆ. ವಿಶೇಷವಾಗಿ ಬೃಹತ್ ಸಮಾವೇಶ ನಡೆದಾಗ ಆಯಾಯ ರಾಜಕೀಯ ಪಕ್ಷದ ಪ್ರಮುಖರು ನಿರ್ದಿಷ್ಟವಾದ ಫ್ಲೆಕ್ಸ್‌ಗಳ ಅಳವಡಿಕೆಗೆ ಅನುಮತಿ ಪಡೆದರೂ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಅಳವಡಿಸುವುದು ನಡೆಯತ್ತದೆ. ಸಂಜೆ ಹೊತ್ತು ಅಭಯ ತಂಡದ ನೌಕರರು ಇಡೀ ಮೈಸೂರಿನಲ್ಲಿ ಸುತ್ತಾಡಿ ತೆರವುಗೊಳಿಸಬೇಕಾಗಿದೆ.

ನಗರಪಾಲಿಕೆಗೆ ಫ್ಲೆಕ್ಸ್‌ ಅಳವಡಿಕೆಯಿಂದ ಬರುವ ಶುಲ್ಕಕ್ಕಿಂತ ತೆರವುಗೊಳಿಸುವುದಕ್ಕೆ ಡೀಸೆಲ್, ಹೆಚ್ಚುವರಿ ಸಿಬ್ಬಂದಿ ವೇತನವೇ ತುಸು ಜಾಸ್ತಿಯಾಗುವಂತಾಗಿದೆ. ಹೀಗಾಗಿ, ನಗರಪಾಲಿಕೆಯು ಫ್ಲೆಕ್ಸ್‌ ಹಾವಳಿ ತಡೆಗೆ ಮತ್ತು ಅಳವಡಿಸುವ ಮುನ್ನ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ರಚಿಸಬೇಕು. ಈ ತಂಡಕ್ಕೆ ಕರ್ನಾಟಕ ಬಹಿರಂಗ ಸ್ಥಳಗಳ ಅಧಿನಿಯಮ ೨೦೨೦ ರನ್ವಯ ಕಾಯ್ದೆಯ ಕಲಂ ೩ರನ್ವಯ ಅನಧಿಕೃತ ಫ್ಲೆಕ್ಸ್‌‌ಗಳ ಮೂಲಕ ನಗರದ ಸೌಂದರ್ಯಗನ್ನು ವಿರೂಪಗೊಳಿಸುವುದಕ್ಕೆ ಗರಿಷ್ಟ ಆರು ತಿಂಗಳಗಳ ಸೆರೆವಾಸದ ದಂಡನೆ ಅಥವಾ ಗರಿಷ್ಟ ಒಂದು ಸಾವಿರ ರೂ.ಗಳವರೆಗೆ ದಂಡ ವಸೂಲಾತಿ ಅಥವಾ ಎರಡು ವಿಧವಾದ ದಂಡನೆ ವಿಧಿಸಲು ಇರುವ ಅವಕಾಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎನ್ನುವುದನ್ನು ನೋಡದೆ, ಪ್ರಬಲರು ಎನ್ನುವುದನ್ನು ನೋಡದೆ ಯಾರೇ ಅನಧಿಕೃತವಾಗಿ ಫ್ಲೆಕ್ಸ್‌ ಅಳವಡಿಸಿದರೂ ಅಂತಹವರ ಮೇಲೆ ಮೊಕದ್ದಮೆ ದಾಖಲಿಸಿ ದಂಡ ವಿಧಿಸುವಂತಹ ಕೆಲಸ ಮಾಡಿದರೆ ಖಂಡಿತವಾಗಿಯೂ ಬ್ರೇಕ್ ಹಾಕಬಹುದಾಗಿದೆ. ರಾಜಕಾರಣಿಗಳು ಆಯಾಯ ಕಾಲಕ್ಕೆ ತಕ್ಕಂತೆ ಮಾತಿನ ವರಸೆ ಬದಲಿಸಬಹುದು. ಆದರೆ, ಅಧಿಕಾರಿಗಳು ಮಾತ್ರ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಕಾನೂನುಬಾಹಿರ ಅಳವ ಡಿಕೆಗೆ ಮುಲಾಜಿಲ್ಲದೆ ಕ್ರಮಕೈಗೊಂಡರೆ ಮಾತ್ರ ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಕಾಪಾಡಬಹುದು. ಈ ವಿಚಾರದಲ್ಲಿ, ಸಾರ್ವಜನಿಕರು, ಸಂಘಟನೆಗಳು ಕೂಡ ಆಗಿಂದಾಗ್ಗೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ.

” ನಗರಪಾಲಿಕೆಯು ಫ್ಲೆಕ್ಸ್‌ ಹಾವಳಿ ತಡೆಗೆ ಮತ್ತು ಅಳವಡಿಸುವ ಮುನ್ನ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ರಚಿಸಬೇಕು. ಈ ತಂಡ ಕರ್ನಾಟಕ ಬಹಿರಂಗ ಸ್ಥಳಗಳ ಅಧಿನಿಯಮ ೨೦೨೦ ರನ್ವಯ ಕಾಯ್ದೆಯ ಕಲಂ ೩ರನ್ವಯ ಅನಧಿಕೃತ ಫ್ಲೆಕ್ಸ್‌‌ಗಳ ಮೂಲಕ ವಿರೂಪಗೊಳಿಸುವವರಿಗೆ ದಂಡ ವಿಧಿಸಬೇಕು”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

6 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

6 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

6 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

6 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

6 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

8 hours ago