Andolana originals

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ

೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು

ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ತಡ ರಾತ್ರಿ ನಡೆದ ಗುಂಡಿನ ದಾಳಿ ಯಲ್ಲಿ ೩ ಮಂದಿ ಬೇಟೆಗಾರರು ಸ್ಥಳದಲ್ಲೇ ಮೃತಪಟ್ಟಿ ರುವ ಘಟನೆ ಮಾದರಿಯಲ್ಲಿ ೨೦೧೪ರಿಂದ ೨೦೨೪ರವರೆಗೆ ಮೂರು ಘಟನೆಗಳು ನಡೆದಿವೆ.

ಪಾಲಾರ್ ಗಡಿಯಲ್ಲಿ ಘಟನೆ: ೨೦೧೪ರ ಅಕ್ಟೋಬರ್ ತಿಂಗಳಲ್ಲಿ ಕಾವೇರಿ ವನ್ಯಜೀವಿಧಾಮದ ಪಾಲಾರ್ ಗಡಿ ಪ್ರದೇಶದಲ್ಲಿ ಕರ್ನಾಟಕದ ಅರಣ್ಯ ಸಿಬ್ಬಂದಿ ಮತ್ತು ತಮಿಳುನಾಡಿನವರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಪಳನಿ ಎಂಬ ವ್ಯಕ್ತಿ ಗುಂಡೇಟಿನಿಂದ ಕಾವೇರಿ ಹಿನ್ನೀರಿನಲ್ಲಿ ಬಿದ್ದಿದ್ದ. ನಂತರ ಆತನ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಕೆಲವು ಭಾಗಗಳಿಗೆ ಹಾನಿಯಾಗಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಕಚೇರಿ ಮತ್ತು ವಸತಿಗೃಹದ ಮೇಲೆ ದಾಳಿ ನಡೆಸಿ, ವಾಹನಕ್ಕೆ ಬೆಂಕಿ ಹಚ್ಚಿದ್ದರು. ಬಂದೂಕು ಮತ್ತು ದಂತವನ್ನೂ ಕೊಂಡೊಯ್ದಿದ್ದರು ಎಂದು ವರದಿಯಾಗಿತ್ತು.

ಅರಣ್ಯ ಇಲಾಖೆಯು ಅವರು ಬೇಟೆಗಾರರು ಎಂದು ಹೇಳಿದ್ದರೆ, ಕುಟುಂಬದವರು ಮೀನು ಹಿಡಿಯಲು ಹೋಗಿದ್ದರು ಎಂದು ವಾದಿಸಿದ್ದರು. ಪಳನಿಯ ಪತ್ನಿಯ ದೂರಿನ ಆಧಾರದ ಮೇಲೆ ಅರಣ್ಯ ಸಿಬ್ಬಂದಿ ವಿರುದ್ಧ ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆಗಲೂ ಶವವನ್ನು ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು.

ಅಡಿಪಾಲಾರ್‌ನಲ್ಲಿ ಘಟನೆ: ೨೦೨೩ರ ಫೆಬ್ರವರಿ ೧೪ರ ರಾತ್ರಿ ಗೋಪಿನಾಥಂ ವಲಯದ ಅಡಿಪಾಲಾರ್ ಅರಣ್ಯದಲ್ಲಿ ಮತ್ತೆ ಗುಂಡಿನ ಚಕಮಕಿ ನಡೆದಿತ್ತು. ಅರಣ್ಯ ಸಿಬ್ಬಂದಿ ಹೇಳಿಕೆಯ ಪ್ರಕಾರ, ಬೇಟೆಗಾರರು ೨೦ರಿಂದ ೨೫ ಮೀಟರ್ ದೂರದಿಂದ ಗುಂಡು ಹಾರಿಸಿದಾಗ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಿದ್ದರು. ಆರೋಪಿ ಎನ್ನಲಾಗಿದ್ದ ರಾಜು ಎಂಬಾತ ನದಿಗೆ ಜಿಗಿದಿದ್ದರು.

ಸ್ಥಳದಲ್ಲಿ ಎರಡು ಜಿಂಕೆಗಳ ಕಳೇಬರ, ಒಂದು ನಾಡಬಂದೂಕು, ಟಾರ್ಚ್, ಮೊಬೈಲ್ ಮತ್ತು ಪಾದರಕ್ಷೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಗುಂಡಿನ ಚಕಮಕಿಯ ಬಳಿಕ ನದಿಗೆ ಹಾರಿದ್ದ ರಾಜು ಅವರ ಮೃತದೇಹ ಮೂರು ದಿನಗಳ ನಂತರ ಪಾಲಾರ್ ನದಿಯಲ್ಲಿ ಪತ್ತೆಯಾಗಿತ್ತು. ಕುಟುಂಬದವರು ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದರು. ೨೦೧೪ರಲ್ಲಿ ನಡೆದ ಚಕಮಕಿಯಲ್ಲಿಯೂ ರಾಜು ಭಾಗಿಯಾಗಿದ್ದನೆಂದು ಅರಣ್ಯ ಇಲಾಖೆಯ ಮೂಲಗಳು ಹೇಳಿದ್ದವು.

ಬಂಡೀಪುರದಲ್ಲಿ ಘಟನೆ: ೨೦೨೩ರ ನವೆಂಬರ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿಗೆ ಭೀಮನಬೀಡು ಗ್ರಾಮದ ಮಧು ಎಂಬ ಯುವಕ ಬಲ್ಲಿಯಾಗಿದ್ದ. ಎಂಟರಿಂದ ಹತ್ತು ಮಂದಿಯ ತಂಡ ಕಡವೆಯನ್ನು ಬೇಟೆಯಾಡಿತ್ತು. ಸಿಬ್ಬಂದಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಎದುರಿನಿಂದ ಗುಂಡಿನ ದಾಳಿ ಮುಂದುವರಿದ ಕಾರಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದರು. ಕಡವೆ ಕಳೇಬರ ಮತ್ತು ಬಂದೂಕು ವಶಪಡಿಸಿಕೊಂಡಿದ್ದಾಗಿ ತಿಳಿಸಿದ್ದರು. ಹನೂರಿನ ಈಗಿನ ಪ್ರಕರಣದಲ್ಲಿಯೂ ಇದೇ ಮಾದರಿ ಮರುಕಳಿಸಿರುವುದರಿಂದ ಹಳೆಯ ಪ್ರಕರಣಗಳ ತನಿಖಾ ವರದಿ ಮತ್ತು ಅಂತಿಮ ನ್ಯಾಯಿಕ ಫಲಿತಾಂಶಗಳನ್ನು ಮರುಪರಿಶೀಲಿಸುವ ಅಗತ್ಯವಿದೆ.

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

13 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

13 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

20 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

20 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

20 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

20 hours ago