ಜಿಲ್ಲೆಗಳು

ಸಾಕು ಪ್ರಾಣಿಗಳಿಗೆ ಕಂಟಕವಾದ ಹುಲಿ, ಚಿರತೆ!

ಬಿಸಲವಾಡಿ, ಮುಕ್ಕಡಹಳ್ಳಿಯಲ್ಲಿ ಗೋವುಗಳು-ಕರು ಬಲಿ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ ದೃಶ್ಯ ನೋಡಿದರೆ ಭಯ. ಅವು ಗ್ರಾಮದ ಹತ್ತಿರ ಬಂದು ಗೋವು, ಕರುಗಳನ್ನು ಕೊಂದು ತಿಂದುಹೋದರೆ! ಹೌದು, ತಾಲ್ಲೂಕಿನ ಬಿಸಲವಾಡಿ ಬಳಿ ಹುಲಿ ಉಪಟಳ ಹಾಗೂ ಮುಕ್ಕಡಹಳ್ಳಿ ಗ್ರಾಮದ ಹತ್ತಿರ ಚಿರತೆ ಹಾವಳಿ ಎಲ್ಲರನ್ನು ಭಯಭೀತರನ್ನಾಗಿಸಿದೆ. ಈ ಗ್ರಾಮಗಳು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟಿವೆ. ಬಿಸಲವಾಡಿ ಶಿವಣ್ಣಶೆಟ್ಟಿ ಅವರ ೨ ಹಸುಗಳು ಗುರುವಾರ(ನ.೩) ಹುಲಿಬಾಯಿಗೆ ತುತ್ತಾಗಿವೆ.
ಮೂರು ಹಸುಗಳನ್ನು ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು. ಸಂಜೆ ಎಂದಿನಂತೆ ಮೂರೂ ಹಸುಗಳು ಮನೆಗೆ ಹಿಂದಿರುಗಲಿಲ್ಲ, ಒಂದು ಮಾತ್ರ ಬಂದಿತು. ಮಾರನೇ ದಿನ ಜಮೀನಿನಲ್ಲಿ ಹುಡುಕಿದಾಗ ಎರಡು ಹಸುಗಳು ಸತ್ತುಬಿದ್ದಿದ್ದವು. ಹುಲಿ ಅರೆಬರೆ ತಿಂದು ಬಿಟ್ಟುಹೋಗಿತ್ತು. ಹೆಜ್ಜೆ ಗುರುತು, ಬೇಟೆಯಾಡಿರುವ ರೀತಿಯಿಂದ ಹುಲಿ ಎಂಬುದು ಅರಣ್ಯ ಇಲಾಖೆಗೆ ದೃಢಪಟ್ಟಿದೆ.

ಇದು ಹುಲಿರಾಯನ ಕತೆಯಾದರೆ ಇನ್ನು ಚಿರತೆ ಮುಕ್ಕಡಹಳ್ಳಿ-ಹರವೆ ನಡುವಿನ ಜಮೀನೊಂದರಲ್ಲಿ ಸುಮಾರು ಒಂದೂವರೆ ವರ್ಷದ ಕರುವನ್ನು ಕೊಂದು ತಿಂದು ಅದರ ಕಳೇಬರವನ್ನು ಬಿಟ್ಟುಹೋಗಿದೆ. ಗ್ರಾಮದ ಶಿವಣ್ಣ ಅವರು ಜಮೀನಿಂದ ಮನೆಗೆ ಹಸುಗಳೊಂದಿಗೆ ಮುಂದೆ ಬಂದಿದ್ದು ಹಿಂದೆ ಕರು ಬರುತ್ತಿತ್ತು. ಈ ವೇಳೆ ಚಿರತೆ ದಾಳಿ ಮಾಡಿದೆ. ಕರು ಕಾಣದಿದ್ದಾಗ ವಾಪಸ್ ಜಮೀನಿಗೆ ಬಂದು ನೋಡಿದಾಗ ಅದು ಇರಲಿಲ್ಲ. ಮಾರನೇ ದಿನ ಅದರ ಕಳೇಬರ ಬಿಡಿಬಿಡಿಯಾಗಿ ಬಿದ್ದಿರುವುದು ಗೋಚರಿಸಿದೆ.

ಈ ಘಟನೆ ನಡೆದು ೫ ದಿನಗಳಾಗಿವೆ. ಕಾಕತಾಳೀಯವೋ ಅಥವಾ ಅಲ್ಲಿಯೇ ಚಿರತಗಳು ಬೀಡುಬಿಟ್ಟಿವೆಯೋ ಗೊತ್ತಿಲ್ಲ. ಶಿವಣ್ಣ ಅವರಿಗೆ ಸೇರಿದ ಕರು ಹಾಗೂ ಕುರಿಯನ್ನು ಕಳೆದ ವರ್ಷವೂ ಇದೇ ರೀತಿ ಚಿರತೆ ಬೇಟೆಯಾಡಿತ್ತು.
ಹರವೆ ಮತ್ತು ಮುಕ್ಕಡಹಳ್ಳಿ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಲು ದಾರಿಯಲ್ಲಿರುವ ಜಮೀನೊಂದರಲ್ಲಿ ಚಿರತೆ ದಾಳಿ ಮಾಡಿ ಕರುವನ್ನು ಕೊಂದಿರುವ ವಿಚಾರವನ್ನು ಪ್ರಗತಿಪರ ಕೃಷಿಕ ಮಧುಸೂದನ್ ಅವರು ಅರಣ್ಯ ಇಲಾಖೆಯ ಆರ್‌ಎಫ್‌ಒ ಗಮನಕ್ಕೆ ತರಲಾಗಿ ಆ ಕೂಡಲೇ ಬೋನನ್ನು ತಂದಿರಿಸಲಾಗಿದೆ. ಆದರೆ ಬೋನಿಗೆ ಚಿರತೆ ಬಿದ್ದಿಲ್ಲ. ಹೀಗಾಗಿ ಕೃಷಿಕರು, ದನಗಾಹಿಗಳು ಮತ್ತು ಕಾರ್ಮಿಕರು ಜೀವಭಯದಿಂದ ತಿರುಗಾಡುವಂತಾಗಿದೆ. ಹುಲಿ ಹಸುಗಳನ್ನು ಕೊಂದಿರುವ ಬಿಸಲವಾಡಿ ಗ್ರಾಮ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಹತ್ತಿರದಲ್ಲೇ ಹೊನ್ನಹಳ್ಳಿ ಗುಡ್ಡವೂ ಇದೆ. ಇಲ್ಲಿ ಚಿರತೆಗಳ ಕಾಟವೂ ಜಾಸ್ತಿಯಾಗಿದೆ.. ಹೀಗಾಗಿ ಈ ಭಾಗದಲ್ಲಿ ಹಸು, ಮೇಕೆ, ಕುರಿ, ನಾಯಿಗಳು ಬಲಿಯಾಗುತ್ತಲೇ ಇವೆ. ಕಳೆದ 4 ತಿಂಗಳಲ್ಲಿ 8 ಸಾಕು ಪ್ರಾಣಿಗಳು ಬಲಿಯಾಗಿವೆ ಎಂದು ಚಾಮರಾಜನಗರ ಪ್ರಾದೇಶಿಕ ಅರಣ್ಯವಲಯದ(ಕೇಂದ್ರಸ್ಥಾನ) ಮೂಲಗಳು ತಿಳಿಸಿವೆ.


ಬೋನಿಗೆ ಚಿರತೆ ಬೀಳುವ ಸಾಧ್ಯತೆ ತುಂಬಾ ಕಡಿಮೆ. ಆದ್ದರಿಂದ ಅದನ್ನು ಹಿಡಿದು ಹೊರಗೆ ಸ್ಥಳಾಂತರಿಸಬೇಕು. ಚಿರತೆ ದಾಳಿಯಿಂದ ತಿ.ನರಸೀಪುರ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಮೃತಪಟ್ಟಿದ್ದು ಇದು ಎಲ್ಲರಿಗೂ ಎಚ್ಚರಿಕೆಯಾಗಿದೆ.

ಮುಕ್ಕಡಹಳ್ಳಿ ಮಧುಸೂದನ್, ಪ್ರಗತಿಪರ ರೈತ.

andolanait

Recent Posts

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

3 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

3 hours ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

3 hours ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

3 hours ago

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ  ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…

3 hours ago

ಚಾ.ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಯೋಗೇಶ್ ನೇಮಕ

ರಾಜೇಶ್ ಬೆಂಡರವಾಡಿ ಪ್ರಥಮ ಬಾರಿಗೆ ಇತರೆ ಹಿಂದುಳಿದ ವರ್ಗಕ್ಕೆ ಒಲಿದ ಡಿಸಿಸಿ ಅಧ್ಯಕ್ಷ ಸ್ಥಾನ  ಚಾಮರಾಜನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…

3 hours ago