ಜಿಲ್ಲೆಗಳು

ಆಂದೋಲನ ಸಂದರ್ಶನ : ʼರಸಗೊಬ್ಬರ ಕೊರತೆಯಿಲ್ಲ; ಆತಂಕ ಬೇಡʼ

ಚಿರಂಜೀವಿ ಹುಲ್ಲಹಳ್ಳಿ

ಆಂದೋಲನ ಸಂದರ್ಶನ : ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್

ಮೈಸೂರು: ‘ಆಂದೋಲನ’ ದಿನ ಪತ್ರಿಕೆ ನಡೆಸಿದ ಕಿರು ಸಂದರ್ಶನದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಂ.ಚಂದ್ರಶೇಖರ್ ರೈತರ ಸಮಸ್ಯೆಗಳ ಪರಿಹಾರ ಮತ್ತು ಇಲಾಖೆಯಲ್ಲಿನ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ದೊರೆಕಿಸುವ ಕಾರ್ಯಕ್ರಮಗಳನ್ನು ತಿಳಿಸಿದರು.
ಕೆಲವು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಲಾಖೆಯ ಅಧಿಕಾರಗಳ ಮೇಲೆ ದಬ್ಬಾಳಿಕೆ ನಡೆಸಲು ರಸಗೊಬ್ಬರದ ಕೊರತೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಈಗಾಗಲೇ ಜಿಲ್ಲೆಯಲ್ಲಿ ೩ ಭಾಗಗಳಲ್ಲಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮತ್ತು ಉಗ್ರಾಣವನ್ನು ಪತ್ತೆ ಹಚ್ಚಲಾಗಿದೆ. ಕಾಳಸಂತೆಯ ರಸಗೊಬ್ಬರದ ಕಡಿವಾಣಕ್ಕಾಗಿ ಸಹಾಯವಾಣಿಯನ್ನು ಕೂಡ ತೆರೆಯಲಾಗಿದ್ದು, ನಿತ್ಯ ೫ರಿಂದ ೧೦ ಕರೆಗಳು ಬರುತ್ತಿವೆ. ಇದರಲ್ಲಿ ಒಂದೆರಡು ಕರೆಗಳು ಮಾತ್ರ ನಿಜವಾಗಿರುತ್ತವೆ. ಕಾಳಸಂತೆಯಲ್ಲಿ ರಸಗೊಬ್ಬರದ ಮಾರಾಟದ ಕಡಿವಾಣಕ್ಕೆ ರೈತರ ಬೆಂಬಲ ಮತ್ತು ಮಾಹಿತಿ ನೀಡಿ ಎನ್ನುವುದು ಅವರ ಮನವಿ.

ಅತಿವೃಷ್ಟಿಯಿಂದಾದ ಬೆಳೆ ಪರಿಹಾರ ರೈತರಿಗೆ ತಲುಪುತ್ತಿದೆಯೇ?
ಜಿಲ್ಲೆಯಲ್ಲಿ ಮುಂಗಾರು ನಿಧಾನವಾಗಿ ಆರಂಭವಾದರೂ ವಾಡಿಕೆ ಮಳೆ ಪ್ರಯಾಣದಲ್ಲಿ ಕೊರತೆ ಕಾಣಲಿಲ್ಲ. ಜೊತೆಗೆ ಕೇರಳ ಭಾಗದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಜಲಾಶಯಗಳು ಸಂಪೂರ್ಣ ಭರ್ತಿಯಾದವು. ಕೆರೆ-ಕಟ್ಟೆಗಳ ಕೊಡಿ ಬಿದ್ದ ಹಿನ್ನೆಲೆಯಲ್ಲಿ ಅತಿವೃಷ್ಠಿ ಸಂಭವಿಸಿ ಜಿಲ್ಲೆಯ ೪೧೮ ಹೆಕ್ಟೇರ್ ಬೆಳೆ ಹಾನಿಗೆ ತುತ್ತಾಯಿತು. ತಕ್ಷಣ ಕಾರ್ಯ ಪ್ರವೃತ್ತರಾದ ಇಲಾಖೆಯು ಹಾನಿಗೊಳಗಾದ ಬೆಳೆ ಮತ್ತು ಜಮೀನಿನ ಸಮೀಕ್ಷೆ ನಡೆಸಿ ಪರಿಹಾರ ದೊರೆಕುವಂತೆ ಮಾಡಿದೆ.
ಇದರಿಂದ ಬೆಳೆಯಾಗಿ ಸಂಕಷ್ಟಕ್ಕೆ ಸಿಲುಕಿದ ೭೫೦ ಕ್ಕೂ ಹೆಚ್ಚು ಮಂದಿಗೆ ಪರಿಹಾರ ಹಣ ತಲುಪುವಂತಾಗಿದೆ. ಹಣ ಬಿಡುಗಡೆಯಾದ ತಕ್ಷಣವೇ ಇನ್ನುಳಿದ ರೈತರಿಗೆ ಪರಿಹಾರ ಸಿಗಲಿದ್ದು, ಆತಂಕ ಪಡುವ ಅಗತ್ಯವಿಲ್ಲ. ಸದ್ಯಕ್ಕೆ ಯಾವುದೇ ಹಾನಿ ಅಥವಾ ರೋಗ ಬಾಧಿಸುವ ಭೀತಿ ಇಲ್ಲ.

ಕೃಷಿ ಸಂಜೀಜಿನಿ ಯೋಜನೆಯ ಪ್ರಗತಿ ಹೇಗಿದೆ?
ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ಬಾಧೆಗಳು, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ನಿಖರವಾಗಿ ಹಾಗೂ ಸಮಯೋಚಿತವಾಗಿ ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರವು ಕೃಷಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಸಂಜೀವಿನಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿಯಲ್ಲಿ ಆಸಕ್ತರು, ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿಗಳು ತಮ್ಮ ಬಿಡುವಿನ ಸಮಯದಲ್ಲಿ ಸ್ವ-ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊದಲು ಜಿಲ್ಲೆಗೆ ಒಂದು ವಾಹನ ಇತ್ತು. ಈಗ ಪ್ರತಿ ತಾಲ್ಲೂಕಿಗೂ ತಲಾ ೧ ವಾಹನ ಸೇವೆ ಒದಗಿಸಿದೆ. ರೈತರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಲಾಖೆಯಿಂದಿರುವ ವಿಶೇಷ ಕಾರ್ಯಕ್ರಮಗಳೇನು?

ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹಿಸುವ ಸಲುವಾಗಿ ಡೀಸೆಲ್ ಖರೀದಿಗೆ ಸಹಾಯಧನ ನೀಡುವ ರೈತ ಶಕ್ತಿ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಯೋಜನೆಯಡಿ ಪ್ರತಿೊಂಬ್ಬ ರೈತರಿಗೂ, ಎಕರೆಗೆ ತಲಾ ೨೫೦ ರೂ.ನಂತೆ ಗರಿಷ್ಠ ೫ ಎಕರೆಯವರೆಗೆ ಸಹಾಯಧನ ನೀಡಲಾಗುತ್ತದೆ.

ಪ್ರಸ್ತುತದ ಬೆಳೆಗಳಿಗೆ ರೋಗ ಬಾಧಿಸುವ ಸೂಚನೆ ಇದೆಯೇ?
ಜಿಲ್ಲೆಯಲ್ಲಿ ಮುಂಗಾರು ತಡವಾಗಿ ಆಗಮಿಸಿದ್ದು, ಪ್ರಸ್ತುತ ಭತ್ತ, ರಾಗಿ, ಮುಸುಕ್ಕಿನ ಜೋಳ, ಕಬ್ಬು, ಉರುಳಿ ಮುಂತಾದ ಬೆಳೆಗಳು ಹೆಚ್ಚು ಹೆಕ್ಟೇರ್‌ನಲ್ಲಿವೆ. ಯಾವುದೇ ರೋಗ ಬಾಧಿಸುವ ಭೀತಿಯಿಲ್ಲ. ರೋಗಕ್ಕೆ ತುತ್ತಾಗುವ ಮುಂಚೆಯೇ ಕೀಟ ನಾಶಕಗಳನ್ನು ಸಿಂಪಡಿಸಿಕೊಳ್ಳಬೇಕು. ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದು ಬೆಳೆಯನ್ನು ರಕ್ಷಿಸಿ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು. ಇದಕ್ಕಾಗಿ ಕೃಷಿ ಸಂಜೀವಿನಿ ವಾಹನಗಳನ್ನು ರೈತರ ಜಮೀನಿಗೆ ಕಳುಹಿಸಲಾಗುತ್ತಿದೆ ಎನ್ನುವುದು ಅವರ ವಿವರಣೆ.

andolanait

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

18 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

20 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

20 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

20 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

20 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

23 hours ago