ಎರಡು ವರ್ಷಗಳ ನಂತರ ಅದ್ಧೂರಿ ಜಾತ್ರೆ; ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ
ನಂಜನಗೂಡು: ರಾಜ್ಯದ ಅತ್ಯಂತ ಜನಾಕರ್ಷಣೆಯ, ಅಕ್ಷರ ದಾಸೋಹ, ಜ್ಞಾನ ದಾಸೋಹದ ಜಾತ್ರೆ ಎಂದೇ ಬಿಂಬಿತವಾಗಿರುವ ಸುತ್ತೂರಿನ ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಸುತ್ತೂರಿನ ಅಂಗಳದಲ್ಲಿ ಈಗ ಭಾರೀ ಸಿದ್ಧತೆ ಆರಂಭವಾಗಿದೆ.
ಜ. 18ರ ಬುಧವಾರದಿಂದ ಜನವರಿ 23 ರವರೆಗೆ ನಡೆಯುವ ಈ ಜಾತ್ರೆಗೆ ಪ್ರತಿ ದಿನ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದ್ದು ಅವರಿಗೆ ಸಕಲ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಐದಾರು ಲಕ್ಷ ಜನ ಭಾಗವಹಿಸುವ ಈ ಜಾತ್ರೆಯಲ್ಲಿ ಜನರ ಸೇವೆಗೆ ಟೊಂಕ ಕಟ್ಟಿ ನಿಲ್ಲುವ ಸ್ವಯಂಸೇವಕರ ವಸತಿಗಾಗಿ ಅತ್ಯಾಧುನಿಕ, ತಾತ್ಕಾಲಿಕ ವಸತಿ ಗೃಹಗಳ ನಿರ್ಮಾಣವೀಗ ಸದ್ದಿಲ್ಲದೆ ಸುತ್ತೂರಿನ ಕಪಿಲಾ ತೀರದಲ್ಲಿ ಸದ್ದಿಲ್ಲದೆ ಆರಂಭವಾಗಿದೆ.
ಹಸಿರಿನ ಮರಗಳ ನೆರಳಲ್ಲಿ ಸಾಮೂಹಿಕ ದಾಸೋಹದ ವ್ಯವಸ್ಥೆಗಾಗಿ ಚಪ್ಪರದ ನಿರ್ಮಾಣ ಹಾಗೂ ಕಾಲ ಕಾಲಕ್ಕೆ ಸರಿಯಾಗಿ ಅಸಂಖ್ಯಾತ ಜನರ ಉದರ ತುಂಬಲು ವಿವಿಧ ಭಕ್ಷ್ಯ ಭೋಜನಗಳ ತಯಾರಿಕೆಗಾಗಿ ಒಲೆಗಳ ನಿರ್ಮಾಣವೂ ಭರದಿಂದ ಸಾಗುತ್ತಿದೆ. ಒಟ್ಟಾರೆ ಎರಡು ವರ್ಷಗಳ ನಂತರ ಅದ್ಧೂರಿಯಾಗಿ ನಡೆಯುವ ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರೋತ್ಸವದ ಸಿದ್ಧತೆ ಭರದಿಂದ ನಡೆಯುತ್ತಿದೆ.
ಸಿರಿಧಾನ್ಯಗಳಿಗೆ ಒತ್ತು
ಈ ಬಾರಿಯ ಜಾತ್ರೆಯ ಕೃಷಿ ಮೇಳದಲ್ಲಿ ಸಿರಿಧಾನ್ಯಗಳು, ಅದರ ತಿಂಡಿ ತಿನುಸುಗಳ ತಯಾರಿಕೆ ಹಾಗೂ ಅದರ ಬಳಕೆಗೆ ಮತ್ತು ಅದರಿಂದಾಗುವ ಉಪಯೋಗಗಳ ಅರಿವು ಮೂಡಿಸಲೂ ಮಠ ಸಜ್ಜಾಗಿದ್ದು, ಕೃಷಿ ಮೇಳವನ್ನು ಸಿರಿಧಾನ್ಯದ ಮೇಳವಾಗಿಸಬಹುದಾದಾದ ಕಾರ್ಯವನ್ನೂ ಇಲ್ಲಿ ಕಾಣಬಹುದಾಗಿದೆ.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…