ಅಂಕಣಗಳು

ಸಮ ಸಮಾಜದ ಕನಸು ಕಂಡಿದ್ದ ಹೋರಾಟಗಾರ ಜವರಪ್ಪಗೌಡ

ಪ್ರೊ.ಬಿ.ಜಯಪ್ರಕಾಶ್‌ಗೌಡ

ಬದುಕಿದ್ದರೆ ೧೦೯ ವರ್ಷಗಳನ್ನು ಪೂರೈಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಪಿ. ಎನ್. ಜವರಪ್ಪಗೌಡರು ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದವರು. ಜವರಪ್ಪಗೌಡರು ಗಾಂಧೀಜಿಯಿಂದ ಪ್ರಭಾವಿತರಾಗಿದ್ದರು. ಮಂಡ್ಯ ಜಿಲ್ಲೆಯಲ್ಲಿ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು ಬದುಕಿದ ಕೆಲವು ಮಹನೀಯರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಪಿ. ಎನ್. ಜವರಪ್ಪಗೌಡರೂ ಒಬ್ಬರು. ಮಂಡ್ಯ ಜಿಲ್ಲೆಯ ಬರ ಪ್ರದೇಶವಾದ ನಾಗಮಂಗಲದ ಪಾಲಗ್ರಹಾರದಲ್ಲಿ ಜನಿಸಿದ ಪಿ. ಎನ್. ಜವರಪ್ಪಗೌಡರು ಬಡತನವನ್ನು ಹಾಸುಂಡು ಬೆಳೆದವರು. ಅವರನ್ನು ಪ್ರೌಢಶಾಲೆಯ ಹಂತದಲ್ಲಿರುವಾಗಲೇ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿ ಕೈಬೀಸಿ ಕರೆಯುತ್ತದೆ. ತತ್ಪರಿಣಾಮವಾಗಿ ಓದನ್ನು ಮೊಟಕುಗೊಳಿಸಿ ಮೈಸೂರಿನಲ್ಲಿ ಜರುಗುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಹೋರಾಟದಲ್ಲಿ ಭಾಗವಹಿಸುತ್ತಾರೆ. ಜವರಪ್ಪಗೌಡರ ಮೇಲೆ ಅಂದಿನ ಚಳವಳಿ ನಾಯಕರಾದ ಎಂ. ಎನ್. ಜೋಯಿಸ್, ತಗಡೂರು ರಾಮಚಂದ್ರರಾವ್, ಸಾಹುಕಾರ್ ಚನ್ನಯ್ಯ, ಹೆಚ್. ಕೆ. ವೀರಣ್ಣಗೌಡ, ಹೆಚ್. ಸಿ. ದಾಸಪ್ಪ ಮುಂತಾದವರು ಪ್ರಭಾವ ಬೀರುತ್ತಾರೆ. ಚುರುಕಾಗಿದ್ದ ಜವರಪ್ಪಗೌಡರ ಕಾರ್ಯತತ್ಪರತೆ, ಆಸಕ್ತಿ ಹಾಗೂ ಮಾತುಗಾರಿಕೆಯ ಪರಿಯನ್ನು ಕಂಡ ಅಂದಿನ ನಾಯಕರು ಬೆನ್ನು ತಟ್ಟುತ್ತಾರೆ. ಜವರಪ್ಪಗೌಡರು ಚಳವಳಿಯ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟುಗಳನ್ನು, ಬೂಟಿನ ಒದೆತಗಳನ್ನು ಸಹಿಸಿಕೊಂಡು ಅನೇಕ ಬಾರಿ ತುರಂಗವಾಸವನ್ನು ಅನುಭವಿಸುತ್ತಾರೆ. ಯಾವುದೇ ನಿರ್ದಿಷ್ಟ ನೆಲೆ ಇಲ್ಲದ ಜವರಪ್ಪಗೌಡ ಹಸಿವನ್ನು ಲೆಕ್ಕಿಸದೆ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಲ್ಲೇ ತಂಗಿ, ಸಿಕ್ಕಲ್ಲಿ ಊಟಮಾಡಿ ಹೋರಾಟದಲ್ಲಿ ಭಾಗವಹಿಸಿದ್ದು ಒಂದು ರೋಚಕವಾದ ಸಂಗತಿ. ಸ್ವತಂತ್ರ ಭಾರತದಲ್ಲಿ ಜನಸಾಮಾನ್ಯರ ಬದುಕು ಹಸನಾಗಲು ಅಗತ್ಯವಾದ ಎಲ್ಲ ಅಂಶಗಳನ್ನೂ ಅನುಷ್ಠಾನಗೊಳಿಸಬೇಕು. ತನ್ಮೂಲಕ ಸಮ ಸಮಾಜದ ನಿರ್ಮಾಣವಾಗಬೇಕು ಎಂಬ ಕನಸನ್ನು ಹದಿಹರಯದಲ್ಲೇ ಕಂಡುಕೊಂಡವರು ಜವರಪ್ಪಗೌಡ.

ಮಂಡ್ಯ ಜಿಲ್ಲೆ ೧೯೩೮ರಲ್ಲಿ ರಚಿತವಾದಾಗ ಮೈಸೂರಿನಲ್ಲೇ ನೆಲೆನಿಂತಿದ್ದ ಜವರಪ್ಪಗೌಡರ ಮನಸ್ಸಿನಲ್ಲಿ ಮಂಡ್ಯ ಜಿಲ್ಲೆಯನ್ನೊಂದು ಆದರ್ಶ ಜಿಲ್ಲೆಯನ್ನಾಗಿ ಮಾಡಬೇಕೆಂಬ ಹಾಗೂ ಅದಾಗಲೇ ಉದಯಿಸಿದ್ದ ಯುವ ನಾಯಕರನ್ನು ಸಂಘಟನಾತ್ಮಕವಾಗಿ ಜೊತೆಗೂಡಿಸಿ ರಚನಾತ್ಮಕವಾಗಿ ಜಿಲ್ಲೆಯನ್ನು ಕಟ್ಟಬೇಕೆಂಬ ಹಂಬಲ ಮೂಡಿದ್ದುದು ನಿಜಕ್ಕೂ ವಿಸ್ಮಯದ ಸಂಗತಿ. ಸ್ವಾಂತಂತ್ರ್ಯ ಹೋರಾಟದ ಸಂದರ್ಭದಲ್ಲಿಯೇ ಅಂದಿನ ಪತ್ರಿಕಾ ದಿಗ್ಗಜರಾದ ತಿ. ತಾ. ಶರ್ಮ, ಸಿದ್ದನಹಳ್ಳಿ ಕೃಷ್ಣಶರ್ಮ, ರಂಗನಾಥ ದಿವಾಕರ, ಪಾಟೀಲ ಪುಟ್ಟಪ್ಪ ಮುಂತಾದವರ ಸಖ್ಯ ದೊರೆತು ತಾನೂ ಪತ್ರಕರ್ತನಾಗಬೇಕೆಂಬ ಕನಸನ್ನು ಕಂಡು ಬೆಂಗಳೂರಿಗೆ ತೆರಳಿ ಸ್ವತಂತ್ರವಾಗಿ ‘ವಿಶ್ವಾಮಿತ್ರ’ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು. ಸ್ವಾತಂತ್ರ್ಯದ ಪರಿಕಲ್ಪನೆಯ ಬಗ್ಗೆ ನಿರ್ಭೀತವಾಗಿ ಬರೆದದ್ದು ಅವರ ಧೀಶಕ್ತಿಗೆ ಸಾಕ್ಷಿಯಾಗುತ್ತದೆ.

ಆ ಸಂದರ್ಭದಲ್ಲಿಯೇ ಮದುವೆಯಾಗಿ ಸಂಸಾರವನ್ನು ಪ್ರಾರಂಭಿಸಿದ ಜವರಪ್ಪಗೌಡರು ಬೆಂಗಳೂರಿನ ಬಡಾವಣೆಯ ಸಣ್ಣ ಮನೆಯೊಂದರಲ್ಲಿ ಹಸು ಸಾಕಾಣಿಕೆ ಮಾಡಿಕೊಂಡು, ಹಾಲು ಮಾರಿ ಜೀವನ ಸಾಗಿಸುತ್ತಿದ್ದರು.

೧೯೩೭ರಲ್ಲಿ ಜರುಗಿದ ಐತಿಹಾಸಿಕ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಜವರಪ್ಪಗೌಡರು ಸ್ವಯಂ ಸೇವಕರಾಗಿ ಪಾಲ್ಗೊಂಡಾಗ ಅಂದಿನ ಜಿಲ್ಲೆಯ ಯುವ ಮುಂದಾಳಾಗಿದ್ದ ಕೆ. ವಿ. ಶಂಕರಗೌಡರ ಪರಿಚಯವಾಗುತ್ತದೆ. ಪರಿಚಯ ಸ್ನೇಹವಾಗಿ ಮಾರ್ಪಟ್ಟು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಜವರಪ್ಪಗೌಡ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶಂಕರಗೌಡ, ಬೊಮ್ಮೇಗೌಡ ಮುಂತಾದ ಯುವ ಮುಂದಾಳುಗಳ ಪಡೆ ಜವರಪ್ಪಗೌಡರನ್ನು ಸಂಸಾರ ಸಮೇತ ಮಂಡ್ಯಕ್ಕೆ ತಂದು ನೆಲೆಗೊಳಿಸುತ್ತಾರೆ. ಅಂದಿನಿಂದ ಪ್ರಾರಂಭವಾದ ಇವರ ನಡುವಿನ ಗೆಳೆತನ ೧೯೯೦ರವರೆಗೂ ನಿರಂತರವಾಗಿ ನಡೆದುಕೊಂಡು ಬಂದದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಜವರಪ್ಪಗೌಡರು ಸಕ್ರಿಯವಾಗಿ ರಾಜಕಾರಣದಲ್ಲಿದ್ದರೂ ಯಾವುದೇ ರಾಜಕೀಯ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಬದಲಾಗಿ ಸಾಹಿತ್ಯದ ಬಗ್ಗೆ ಒಲವು ಇರಿಸಿಕೊಂಡು ಅಂದಿನ ರಾಷ್ಟ್ರಕವಿ ಕುವೆಂಪು ಅವರ ಟೀಕೆನಿಷ್ಠವಾದ ಒಡನಾಟವನ್ನಿಟ್ಟುಕೊಂಡು, ತನ್ಮೂಲಕ ನಾಡಿನ ಬಗ್ಗೆ ಒಲವಿರಿಸಿಕೊಂಡಿದ್ದವರು. ಕುವೆಂಪು ಅವರು ಮಾತ್ರವಲ್ಲದೆ ಅಂದಿನ ಪ್ರಮುಖ ಸಾಹಿತಿಗಳಾಗಿದ್ದ ಶಿವರಾಮ ಕಾರಂತ, ಬೇಂದ್ರೆ, ಪು. ತಿ. ನ. , ದೇ. ಜವರೇಗೌಡ, ಹಾ. ಮಾ. ನಾಯಕ, ಖಾದ್ರಿ ಶಾಮಣ್ಣ ಮುಂತಾದ ಸಾಹಿತ್ಯ ಪತ್ರಕರ್ತ ದಿಗ್ಗಜರೊಡನೆಯೂ ಸಂವಾದಿಸುತ್ತಾ, ರಾಷ್ಟ್ರ ನಿರ್ಮಾಣಕ್ಕೆ ತನ್ಮೂಲಕ ಜಿಲ್ಲೆಯ ಪ್ರಗತಿಗೆ ತನ್ನದೇ ಆದ ಕಾಣಿಕೆಯನ್ನು ನೀಡಿದವರು. ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಮಂಡ್ಯದ ಜನತೆಗೆ ಪರಿಚಯ ಮಾಡಿಕೊಡುತ್ತಾ ಕುವೆಂಪು ಅವರ ಬಗೆಗೆ ಮಂಡ್ಯದ ನಂಟನ್ನು ಸ್ಥಾಪಿಸಿಬಿಡುತ್ತಾರೆ. ಸ್ವಾತಂತ್ರ್ಯಾನಂತರದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡಪ್ರಭ, ಸಂಯುಕ್ತ ಕರ್ನಾಟಕದ ವರದಿಗಾರರಾಗಿಯೂ ಸೇವೆ ಸಲ್ಲಿಸುತ್ತಾ ಅನೇಕ ಜನ ನಾಯಕರ ಸೃಷ್ಟಿಗೆ ಕಾರಣರಾಗುತ್ತಾರೆ.

೧೯೪೭ರ ನಂತರ ಮಂಡ್ಯ ಜಿಲ್ಲೆಯ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದವರು ದಿ. ಕೆ. ವಿ. ಶಂಕರಗೌಡ, ಜಿ. ಎಸ್. ಬೊಮ್ಮೇಗೌಡ, ಕೆ. ಸಿಂಗಾರಿಗೌಡ, ಬಿ. ವೈ. ನೀಲೇಗೌಡ, ಹೆಚ್. ಕೆ. ವೀರಣ್ಣಗೌಡ, ಎಸ್. ಎಂ. ಲಿಂಗಪ್ಪ, ಎ. ಜಿ. ಬಂದೀಗೌಡ, ಸಿ. ಬಂದೀಗೌಡ ಮುಂತಾದವರು. ಇವರೆಲ್ಲಾ ಅಂದಿನ ಕಾಂಗ್ರೆಸ್‌ನ ಕಟ್ಟಾಳುಗಳು. ಜವರಪ್ಪಗೌಡರ ವಿಶೇಷವೆಂದರೆ ಯಾವ ಅಧಿಕಾರಕ್ಕೂ ಆಸೆಪಡದೆ ಇವರೆಲ್ಲರನ್ನೂ ಒಟ್ಟಾಗಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ತನ್ಮೂಲಕ ಸಹಕಾರ, ಶಿಕ್ಷಣ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಈ ಯುವನಾಯಕರು ದುಡಿಯುವಂತೆ ಪ್ರೇರೇಪಿಸುತ್ತಾರೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪ್ರಮುಖವಾಗಿ ಶಂಕರಗೌಡ, ಸಿಂಗಾರಿಗೌಡ, ಬೊಮ್ಮೇಗೌಡ, ಎಂ. ಕೆ. ಶಿವನಂಜಪ್ಪ, ಜಿ. ಎಸ್. ಬೊಮ್ಮೇಗೌಡ ಮುಂತಾದವರನ್ನು ಒಟ್ಟುಗೂಡಿಸುತ್ತಾ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗ ಅವರವರ ನಡುವೆ ಉಂಟಾಗಿದ್ದ ಮನಸ್ತಾಪಗಳನ್ನು ತಿಳಿಗೊಳಿಸುತ್ತ, ಪರಸ್ಪರರಿಗೆ ಅರಿವಿಲ್ಲದಂತೆ ತನ್ನ ಮನೆಗೆ ಊಟಕ್ಕೆ ಆಹ್ವಾನಿಸುತ್ತಾ, ಆಹ್ವಾನಿತರಾಗಿ ಬಂದವರ ಮನಸ್ಸಿನ ದುಗುಡವನ್ನು ತಮ್ಮ ತಿಳಿಹಾಸ್ಯದ ಮಾತುಗಳಿಂದ ದೂರವಾಗಿಸುತ್ತಾ ಜಿಲ್ಲೆಯ ಅಭಿವೃದ್ಧಿಯೊಂದನ್ನೇ ಅವರ ಮನಸ್ಸಿನಲ್ಲಿ ಸ್ಥಾಯಿಗೊಳಿಸಿ ಬದುಕಿರುವವರೆಗೂ ಅವರು ಭಿನ್ನವಾಗದಂತೆ ನಡೆಸಿಕೊಂಡದ್ದು ಅವರ ಶ್ರೇಷ್ಠ ವ್ಯಕ್ತಿತ್ವದ ಹೆಗ್ಗಳಿಕೆಗೆ ಸಾಕ್ಷಿಯನ್ನೊದಗಿಸುತ್ತದೆ. ಇಂದು ಒಂದೇ ಪಕ್ಷದ ನಾಯಕರ ನಡುವೆ ಉಂಟಾಗುವ ಭಿನ್ನಮತವನ್ನು ಪ್ರೋತ್ಸಾಹಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಿಸುಣರನ್ನು ಕಂಡಾಗ ಜವರಪ್ಪಗೌಡರು ನಮಗೆ ಪರ್ವತ ಸದೃಶವಾಗಿ ಕಾಣುತ್ತಾರೆ.

ಮಂಡ್ಯದ ಶ್ರೀಮಂತ ನಾಯಕರಾಗಿದ್ದ ಶಂಕರಗೌಡರು ತಮ್ಮ ಕೊನೆಯ ದಿನಗಳಲ್ಲಿ ಒಮ್ಮೆ ನನ್ನೊಡನೆ ಮಾತನಾಡುತ್ತಾ ಜವರಪ್ಪಗೌಡರ ಶ್ರೇಷ್ಠತೆಯನ್ನು ಹೀಗೆ ತಿಳಿಸುತ್ತಾರೆ. “ನೋಡಿ ಜಯಪ್ರಕಾಶ್! ನನ್ನ ರಾಜಕೀಯ ಅಭ್ಯುದಯದಲ್ಲಿ ಜವರಪ್ಪಗೌಡರ ಪಾತ್ರ ಬಹಳ ಮುಖ್ಯವಾದದ್ದು. ನನ್ನನ್ನು ಸದಾ ಕ್ರಿಯಾಶಾಲಿಯಾಗಿರುವಂತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರೆಂದೂ ನನ್ನ ಬಳಿ ರಾಜಕೀಯ ಅಽಕಾರಕ್ಕಾಗಿ ಒತ್ತಾಯಿಸಿದವರಲ್ಲ. ಬದಲಾಗಿ ನಾನೇ ಅವರನ್ನು ಕೇಳಿಕೊಂಡು ರಾಜ್ಯ ವಯಸ್ಕರ ಶಿಕ್ಷಣ ಸಮಿತಿಗೆ ನೇಮಿಸಿದಾಗ ಕೆಲವರು ಹುಬ್ಬೇರಿಸಿದ್ದೂ ಉಂಟು. ಆದರೆ ಜವರಪ್ಪಗೌಡರು ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದು ಮಾತ್ರವಲ್ಲದೆ, ರಾಷ್ಟ್ರಮಟ್ಟದ ‘ಜವಾಹರಲಾಲ್ ನೆಹರು’ ಪ್ರಶಸ್ತಿಗೂ ಭಾಜನವಾಗುವಂತೆ ಮಾಡಿದರು” ಎಂದಿದ್ದರು. ಈ ಮಾತುಗಳನ್ನು ನಾನು ಅನುಮೋದಿಸುತ್ತೇನೆ.

ಇಂತಹ ವ್ಯಕ್ತಿಯನ್ನು ಇಂದಿನ ಯುವ ಪೀಳಿಗೆಗೆ ನೆನಪಿಸಿಕೊಡಬೇಕಾದದ್ದು ಮತ್ತು ಅವರ ಜೀವನವನ್ನು ದಾಖಲಿಸಿ ಮುಂದಿನ ಪೀಳಿಗೆಗೆ

ಆಂದೋಲನ ಡೆಸ್ಕ್

Recent Posts

ವೆನೆಜುವೆಲಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ತುರ್ತು ಪರಿಸ್ಥಿತಿ ಘೋಷಣೆ

ಕ್ಯಾರಕಾಸ್‌ : ವೆನೆಜುವೆಲಾ ಕರಾವಳಿಯ ಸಮೀಪ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶವನ್ನು ಬೆಚ್ಚಿಬೀಳಿಸಿವೆ. ರಿಕ್ಟರ್ ಮಾಪಕದಲ್ಲಿ…

7 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 25  ಗುರುವಾರ  

2 hours ago

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

13 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

16 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

16 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

16 hours ago