ಅಂಕಣಗಳು

ಮೀಸಲಾತಿ ವಿರೋಧಿ ದನಿಗೆ ಮೋದಿ ಮಣಿಯುವರೇ?

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ 

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೇಶದಲ್ಲಿ ದಿಢೀರನೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ( ಜೆನ್ -ಝೀ)ಯ ಒಂದು ತಿಂಗಳ ಜಂತರ್ ಮಂಥರ್ ಹೋರಾಟ, ಯಾವ ವಿರೋಧ ಮತ್ತು ಪ್ರತಿಭಟನೆಗಳಿಗೂ ಕ್ಯಾರೆ ಎನ್ನದೆ ತಾನು ಮಾಡಿದ್ದೇ ಸರಿ, ತಾನು ನಡೆದದ್ದೇ ದಾರಿ ಎಂದುಕೊಳ್ಳುತ್ತಿದ್ದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಯುವ ಶಕ್ತಿಯ ಮುಂದೆ ಮಂಡಿಯೂರಿದ್ದು ಈಗ ಇತಿಹಾಸ. ನಮ್ಮ ದೇಶದ ನೆರೆಹೊರೆ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾ ದೇಶ ಮತ್ತು ನೇಪಾಳದಲ್ಲಿ ಬಿಸಿ ರಕ್ತದ ವಿದ್ಯಾರ್ಥಿ ಹೋರಾಟ ಹುಟ್ಟಿದ್ದು ಮತ್ತು ಈ ಮೂರು ದೇಶದಲ್ಲಿ ತಂದ ಬದಲಾವಣೆ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಕಾಣಿಸಿಕೊಂಡ ಜೆನ್ ಝೀ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ಬೆಚ್ಚಿ ಬಿದ್ದಿರುವುದು ಆ ಸರ್ಕಾರದ ಚಿಂತನೆಯಲ್ಲಿ ಢಾಳಾಗಿ ಕಾಣಿಸುತ್ತದೆ. ಅದಕ್ಕಾಗಿ ಈಗ ಕೆಲವು ಹಿತಾಸಕ್ತ ಗುಂಪುಗಳು ಈ ವಿಷಯವನ್ನು ದಿಕ್ಕುತಪ್ಪಿಸಿ ಮೀಸಲಾತಿ ವಿರೋಧಿ ಹೋರಾಟಕ್ಕೆ ಚಾಲನೆ ಕೊಡುವ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ.

ಈ ಯುವ ಶಕ್ತಿಯ ಹೋರಾಟವನ್ನು ಆರಂಭದ ಚಿವುಟಿ ಹಾಕಲು ಕೇಂದ್ರ ಸರ್ಕಾರ ತನಗಿರುವ ಅಧಿಕಾರ ಮತ್ತು ತನ್ನ ಸಂಘ ಪರಿವಾರದ ಸಂಘಟನೆಗಳ ಹತ್ತಾರು ಮಾರ್ಗಗಳ ಮೂಲಕ ಪ್ರಯತ್ನಿಸುತ್ತಿರುವುದು ಅದರ ಕಾರ್ಯವೈಖರಿಯನ್ನು ಒಳಹೊಕ್ಕಿ ನೋಡಿದವರಿಗೆ ಅರ್ಥವಾಗುತ್ತದೆ. ಹಿಂದೂ ಧರ್ಮದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಬೆರೆತುಹೋಗಿರುವ ಮೇಲು-ಕೀಳು ಮತ್ತು ತಾರತಮ್ಯದ ಸಿದ್ಧಾಂತದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಯುತ್ತಾ ಬಂದಿದೆ. ಬಿಜೆಪಿ ಆಡಳಿತದಲ್ಲಿ ಆ ಪಕ್ಷದ ಕಾರ್ಯವೈಖರಿ ಮತ್ತು ಅದರ ಮೂಲ ಬೇರಿನಂತಿರುವ ಸಂಘ ಪರಿವಾರದ ಶಾಖೆಗಳು ತನ್ನ ಈ ಹಿಡನ್ ಅಜೆಂಡಾವನ್ನು ಜರಿಗೆ ತರುವ ನಿರಂತರ ಪ್ರಯತ್ನ ಹೊಸದೇನಲ್ಲ. ಸಮಾನತೆ ಎನ್ನುವ ವಿಷಯ ಬಲಪಂಥೀಯ ಅಂದರೆ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವ ಮನಃಸ್ಥಿತಿಯ ಮಂದಿಗೆ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ತುಳಿತಕ್ಕೊಳಪಟ್ಟ ಜನರು ತಮ್ಮಂತೆ ಮತ್ತು ತಮ್ಮ ಸಮಕ್ಕೆ ಬೆಳೆಯುವುದು ಅಪಥ್ಯ.

ಈ ಅಸಮಾನತೆಯ ಸಿದ್ಧಾಂತವನ್ನು ಆರಾಧಿಸುವ ವೈದಿಕ ಮನಃಸ್ಥಿತಿ ಈಗ ಅವರಲ್ಲಷ್ಟೇ ಉಳಿದಿಲ್ಲ. ಎಂದರ ಯಥೇಚ್ಛವಾಗಿ ಬೆಳೆಯುವ ಪಾರ್ಥೇನಿಯಂನಂತೆ ಬಲಿಷ್ಠ ಜತಿ ಮತ್ತು ಹಿಂದುಳಿದ ಹಲವು ಜತಿಯ ಕೆಲವು ಮಂದಿಯೂ ದಲಿತರು ತಲೆ ಎತ್ತಿ ಬದುಕುವುದನ್ನು ಸಹಿಸುವುದಿಲ್ಲ. ಹಿಂದುಳಿದ ಜತಿಗಳ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಜರಿಗೆ ತಂದ ಮಂಡಲ್ ಆಯೋಗದ ವರದಿಯನ್ನು ವಿರೋಽಸಿ ಬೀದಿಗಿಳಿದ ಹೋರಾಟದ ಇತಿಹಾಸವನ್ನು ಸೀಳಿ ನೋಡಿದರೆ ಈ ಚಳವಳಿಯ ನಾಯಕತ್ವ ವಹಿಸಿಕೊಂಡು ಅದರ ಸತ್ಯಾಸತ್ಯತೆಯನ್ನು ಅರಿಯದೆ ಅದನ್ನು ವಿರೋಽಸಿದ ಬಹುತೇಕ ಮಂದಿಯೇ ಈ ಹಿಂದುಳಿದ ಯುವಶಕ್ತಿ ಎನ್ನುವ ಕಟು ಸತ್ಯ ತಿಳಿಯುತ್ತದೆ.

ಈ ರೀತಿ ಅಮಾಯಕರನ್ನು ದಿಕ್ಕುತಪ್ಪಿಸುವಲ್ಲಿ ಸನಾತನ ಸಿದ್ಧಾಂತದ ಪೀಳಿಗೆ ಎತ್ತಿದ ಕೈ. ಈಗ ಬಹುಶಃ ಅದೇ ನಡೆಯುತ್ತಿರುವಂತೆ ಕಾಣುತ್ತದೆ. ದೇಶದಲ್ಲಿ ಶೇ. ೩ರಷ್ಟಿರುವ ಜನಸಂಖ್ಯೆಗೆ ಆರ್ಥಿಕ ಆಧಾರದ ಮೇಲೆ ಮೀಸಲಾತಿಯನ್ನು ಜರಿಗೆ ತಂದಿರುವಾಗ ದೇಶದಲ್ಲಿ ಆಗಾಗ್ಗೆ ಚರ್ಚೆಯಾಗುವ ವಿಷಯ ಮೀಸಲಾತಿ ಯಾರಿಗಿಲ್ಲ; ಯಾವ ಜತಿಗಿಲ್ಲ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಮೀಸಲಾತಿ ವಿರೋಧಿಗಳಿಂದ ಉತ್ತರ ಸಿಗುವುದಿಲ್ಲ. ಇವರ ಮುಖ್ಯ ಗುರಿ ಪರಿಶಿಷ್ಟ ಜತಿಗೆ ಇರುವ ಮೀಸಲಾತಿ ಮಾತ್ರ. ಪರಿಶಿಷ್ಟರು ಸಮಾಜದ ಮುಂಚೂಣಿಗೆ ಬರಕೂಡದೆಂದು ಅವರ ತಲೆಯಲ್ಲಿ ಸೇರಿಕೊಂಡಿರುವ ತಾರತಮ್ಯದ ಮನಃಸ್ಥಿತಿ ಆಗಾಗ್ಗೆ ಇವರನ್ನು ಜಗೃತಗೊಳಿಸುತ್ತಿರುತ್ತದೆ. ಇದು ಅವರ ಮೆದುಳಿಗೆ ಒಳಹೊಕ್ಕಿರುವ ಹುಳು. ದೇಹದ ಆರೋಗ್ಯ ಕೆಟ್ಟಾಗ ಅದಕ್ಕೆ ಹಲವು ಬಗೆಯ ಔಷಧ ಸಿಗುತ್ತದೆ. ಆದರೆ ಅಸೂಯೆ ಮತ್ತು ಅಸಮಾನತೆಯನ್ನೇ ಹಾಸುಹೊಕ್ಕವರ ಅನಾರೋಗ್ಯಕ್ಕೆ ಮದ್ದು ಸಿಗುವುದು ದುರ್ಲಭ.

ಈ ಮೀಸಲಾತಿಯ ವಿರೋಧಿ ಮಂದಿಗೆ ಕಣ್ಣಿಗೆ ರಾಚುವಂತೆ ಕಾಣುವುದು ರಾಜಕೀಯವಾಗಿ ಬೆಳದು ಬಂದಿರುವ ಮಲ್ಲಿಕಾರ್ಜುನ ಖರ್ಗೆಯಂತಹ ಕೆಲವು ರಾಜಕಾರಣಿಗಳು ಮತ್ತು ಸುಸ್ಥಿತಿ ತಲುಪಿರುವ ಬೆರಳೆಣಿಕೆಯಷ್ಟಿರುವ ಉನ್ನತ ಅಧಿಕಾರಿ ವರ್ಗ ಮತ್ತು ಶೇ. ೩೫ ಅಂಕ ಗಳಿಸಿದರೂ ದಲಿತರಿಗೆ ಉದ್ಯೋಗ ಸಿಗುವುದೆನ್ನುವ ಅವಾಸ್ತವಿಕ ಮತ್ತು ಐವತ್ತು ವರ್ಷಗಳ ಓಬಿರಾಯನ ಕಾಲದ ಚಿಂತನೆ. ದಲಿತ ಕುಟುಂಬದಿಂದ ಬರುವ ಬಹುತೇಕ ಮಂದಿ ವಿದ್ಯಾರ್ಥಿಗಳು ಬೇರೆಯವರಲ್ಲಿ ಅಸೂಯೆ ಹುಟ್ಟಿಸುವಂತೆ ಶೇ. ೮೦ಕ್ಕಿಂತಲೂ ಹೆಚ್ಚಿನ ಅಂಕ ಪಡೆಯುವವರಿzರೆ.

ಪರಿಶಿಷ್ಟ ಜತಿಯ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಮಾನ್ಯವಾಗಿ ಕನಿಷ್ಠ ಶೇ. ೬೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು ಮತ್ತು ವಿದ್ಯಾರ್ಥಿ ವೇತನ ಪಡೆಯಲು ಕುಟುಂಬದ ವಾರ್ಷಿಕ ಆದಾಯ ೨,೫೦,೦೦೦ ರೂಪಾಯಿಗಿಂತ ಹೆಚ್ಚಿರಬಾರದು. ತಾಂತ್ರಿಕ, ವೈದ್ಯಕೀಯ ಮತ್ತು ಇತರೆ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿ ವೇತನ ಪಡೆಯಲು ವಾರ್ಷಿಕ ಆದಾಯದ ಮಿತಿ ರೂ. ೪,೫೦,೦೦೦ಕ್ಕಿಂತ ಹೆಚ್ಚಿರಬಾರದು. ಈ ಮಾನದಂಡ ಕ್ರೀಮಿ ಲೇಯರ್ ಜರಿಯಲ್ಲಿದ್ದರೂ ಹಿಂದುಳಿದ ವಿದ್ಯಾರ್ಥಿಗಳು ಈ ಬಗೆಯ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯದ ಮಿತಿ ರೂ.ಎಂಟು ಲಕ್ಷ ಮೀರಿರಬಾರದು. ಹಿಂದುಳಿದ ವರ್ಗಕ್ಕೆ ಹಾಕಿರುವ ಆದಾಯ ಮಿತಿಗಿಂತ ಪರಿಶಿಷ್ಟ ಜತಿಯ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಡಿಮೆ ಆದಾಯದ ಮಿತಿಯನ್ನು ವಿಧಿಸಿರುವುದು ವಿಪರ್ಯಾಸ !

ಈ ಮಧ್ಯೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ , ಸಂವಿಧಾನ ಬದಲಿಸುವ ಅವಕಾಶ ತಮಗೇನಾದರೂ ಸಿಕ್ಕರೆ, ಸಂವಿಧಾನದ ವಿಽ ೧೪ರ ಪ್ರಕಾರ ಎಲ್ಲರೂ ಸಮಾನರು ಎಂದು ಹೇಳುವ ಅಂಶವನ್ನು ಆಧಾರವನ್ನಾಗಿಟ್ಟುಕೊಂಡು ಮೀಸಲಾತಿಯನ್ನು ರದ್ದುಪಡಿಸುವೆ ಎಂಬುದಾಗಿ ಮಾತನಾಡಿರುವುದನ್ನು ಗಮನಿಸಿದರೆ ಅವರು ಕೇವಲ ಸಂವಿಧಾನದ ವಿಧಿಗಳನ್ನಷ್ಟೇ ಆಧಾರವನ್ನಾಗಿಟ್ಟುಕೊಂಡು ಹೇಳಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅವರು ಸಮಾಜದ ಇತಿಹಾಸ ಮತ್ತು ವಾಸ್ತವವಾಗಿರುವ ಮನುಷ್ಯ- ಮನುಷ್ಯರ ನಡುವೆ ಹುಟ್ಟು ಹಾಕಿದ ತಾರತಮ್ಯ, ಬಡತನ, ಅಸ್ಪೃಶ್ಯತೆ ಮತ್ತು ಜತಿ ತಾರತಮ್ಯದಂತಹ ಅಮಾನವೀಯ ಸ್ಥಿತಿಗತಿಯ ಬಗೆಗೆ ಅವರಿಗೆ ಅರಿವಿದ್ದಂತೆ ಕಾಣುವುದಿಲ್ಲ ಎನ್ನುವುದು ಅವರ ಹೇಳಿಕೆಯಿಂದ ಅರ್ಥವಾಗುತ್ತದೆ. ಹಾಗಾಗಿ ಅವರ ಹೇಳಿಕೆಗೆ ಮೀಸಲಾತಿಯನ್ನು ಯಾಕಾಗಿ ಜರಿಗೆ ತರಲಾಗಿದೆ ಎನ್ನುವುದನ್ನು ಸಂವಿಧಾನದ ವಿಧಿ ೧೫ (೪) ಮತ್ತು ೧೬ (೪) ಗಳೇ ಉತ್ತರ ನೀಡಿವೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಹಿನ್ನೆಲೆಯಲ್ಲಿ ನೀಡಿರುವ ಮೀಸಲಾತಿಯ ಅವಶ್ಯಕತೆ ಮತ್ತು ಅರ್ಥವನ್ನು ಅರಿಯಬೇಕಿದೆ.

ಈ ಎಲ್ಲ ವಾದ ವಿವಾದ ಅಕಾಡೆಮಿಕ್ ಆಗಿ ನಡೆಯುವ ಚರ್ಚೆ ಮತ್ತು ಅಸಹನೆಯಿಂದ ಕೂಡಿದ ವಿವೇಕರಹಿತ ಬೀದಿ ಹೋರಾಟಕ್ಕಷ್ಟೇ ಚಂದ. ಆದರೆ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಾದುದು ಪ್ರಜಪ್ರಭುತ್ವದ ಮೌಲ್ಯಗಳನ್ನಾಧರಿಸಿದ ರಾಜಕೀಯ ವ್ಯವಸ್ಥೆಯಿಂದ . ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಮೀಸಲಾತಿ ರದ್ದು ಮಾಡಬೇಕೆನ್ನುವ ಕೂಗು ಕಾಣಿಸಿಕೊಳ್ಳುವುದು ಹೊಸದೇನಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ೧೯೯೮ ಮತ್ತು ೧೯೯೯ರಿಂದ ೨೦೦೪ರವರೆಗೆ ಅಧಿಕಾರಕ್ಕೆ ಬಂದಾಗಲೂ ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ರದ್ದು ವಿಷಯ ಗಂಭೀರವಾಗಿಯೇ ಮುನ್ನೆಲೆಗೆ ಬಂದಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಈ ಐವತ್ತು ವರ್ಷಗಳಲ್ಲಿ ಸಂವಿಧಾನದಿಂದ ಆಗಿರುವ ಸಾಧನೆ ಮತ್ತು ಲೋಪ ದೋಷ ಕುರಿತಂತೆ ಪರಾಮರ್ಶೆ ನಡೆಸಲು ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಯಿತು. ಸಂವಿಧಾನ ಪರಾಮರ್ಶೆ ಹೆಸರಿನಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವ ಷಡ್ಯಂತರ ಬಿಜೆಪಿ ಸರ್ಕಾರದ್ದು ಎನ್ನುವ ಆರೋಪಗಳು ಗಟ್ಟಿಯಾಗಿ ಕೇಳಿ ಬಂದಿತು.

ಆ ದಿನಗಳಲ್ಲಿ ಸಂಸತ್ತಿನಲ್ಲಿ ಬಲವಾಗಿದ್ದ ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡದ ಸಂಸತ್ ಸದಸ್ಯರ ವೇದಿಕೆ ಈ ವಿಷಯವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸರ್ಕಾರದ ಜೊತೆ ಹೋರಾಟಕ್ಕೆ ಕೈಗೆತ್ತಿಕೊಂಡಿತು. ದೇಶದಾದ್ಯಂತ ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳಿಂದಲೂ ವ್ಯಾಪಕ ವಿರೋಧ ವ್ಯಕ್ತವಾಯಿತು. ಪ್ರಧಾನಿ ವಾಜಪೇಯಿ ಅವರ ಮೇಲೆ ಈ ಪರಿಶಿಷ್ಟರ ಸಂಸತ್ ಸದಸ್ಯರ ವೇದಿಕೆ ಸ್ಪಷ್ಟನೆ ಕೇಳಿತು. ಈ ವೇದಿಕೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಇದ್ದು ಬಿಜೆಪಿಯಲ್ಲಿದ್ದ ಪರಿಶಿಷ್ಟ ಸದಸ್ಯರು ಆಂತರಿಕವಾಗಿ ಸಂವಿಧಾನ ಪರಾಮರ್ಶೆಯನ್ನು ಕೈಬಿಡಬೇಕೆಂದು ಒತ್ತಡ ತಂದರು. ಆ ದಿನಗಳಲ್ಲಿ ಈ ವೇದಿಕೆಯ ಸಂಚಾಲಕರಾಗಿದ್ದ ಬೂಟಾಸಿಂಗ್ ಮತ್ತು ರಾಂ ವಿಲಾಸ್ ಪಾಸ್ವಾನ್ ಸಕ್ರಿಯವಾಗಿ ಬಿಜೆಪಿ ಸರ್ಕಾರದ ಈ ನಿಲುವಿನ ವಿರುದ್ಧ ಹೋರಾಡಲು ವೇದಿಕೆ ಸಜ್ಜು ಮಾಡುವಲ್ಲಿ ನಿರತರಾಗಿದ್ದರು. ಆ ವೇಳೆಗೆ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರ ವರದಿಯೂ ಪೂರ್ಣಗೊಂಡು ಸರ್ಕಾರದ ಕೈ ಸೇರಿತ್ತು. ಪರಿಶಿಷ್ಟ ಸಂಸದರ ಒತ್ತಡಕ್ಕೆ ಮಣಿದಿದ್ದ ಸರ್ಕಾರ ಸಂವಿಧಾನ ಪರಾ ಮರ್ಶೆ ಹೆಸರಿನಲ್ಲಿ ಮೀಸಲಾತಿ ವಿಷಯನ್ನು ಮುಟ್ಟದಂತೆ ಸರ್ಕಾರವೇ ಸಂವಿ ಧಾನ ಪರಾಮರ್ಶೆಯಲ್ಲಿ ಮೀಸಲಾತಿಯ ವಿಷಯನ್ನು ಕೈಬಿಟ್ಟಿತು.

ವಿಪರ್ಯಾಸ ಎಂದರೆ ಈ ಸಂವಿಧಾನ ಪರಾಮರ್ಶೆಯ ವರದಿ ಸಚಿವ ಸಂಪುಟದ ಚರ್ಚೆಗೂ ಬರಲಿಲ್ಲ!. ಹೀಗಾಗಿ ಬಿಜೆಪಿಯ ಷಡ್ಯಂತರ ಹಳ್ಳ ಹಿಡಿದದ್ದು ಇತಿಹಾಸ. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಪಕ್ಷದಲ್ಲಿ ಆಂತರಿಕ ವಾಗಿಯಾಗಲಿ ಅಥವಾ ಹೊರಗಿನ ಹೋರಾಟದ ಒತ್ತಡಗಳಿಗಾಗಲಿ ಮಣಿ ಯುವರೇ? ಒಂದು ವೇಳೆ ಈ ಒತ್ತಡಗಳಿಗೆ ಮಣಿದರೆ, ೨೪೦ ಸದಸ್ಯ ಬಲ ಹೊಂದಿರುವ ಬಿಜೆಪಿಯಲ್ಲಿ ಪರಿಶಿಷ್ಟ ಜತಿಯ ೩೦ ಮತ್ತು ಪರಿಶಿಷ್ಟ ಪಂಗಡದ ೨೫ ಮಂದಿ ಸದಸ್ಯರು ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆಯೇ? ಕೇವಲ ೨೪೦ ಸ್ಥಾನಗಳನ್ನು ಪಡೆದು ನಿತೀಶ್ ಕುಮಾರ್ ನೇತೃತ್ವದ ಸಮತಾ ಪಕ್ಷ ಮತ್ತು ಎನ್ . ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಬೆಂಬಲದಿಂದ ಉಸಿರಾಡುತ್ತಿರುವ ಮೋದಿ ಸರ್ಕಾರ ಮೀಸಲಾತಿಯಂತಹ ಸೂಕ್ಷ್ಮ ವಿಷಯದಲ್ಲಿ ತಪ್ಪು ಹೆಜ್ಜೆ ಇಡಲಿದೆಯೇ? ಒಂದು ವೇಳೆ ಈ ತಪ್ಪು ಹೆಜ್ಜೆ ಇಟ್ಟರೆ ಸರ್ಕಾರದ ಪರಿಸ್ಥಿತಿ ಏನಾಗಬಹುದು? ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಮೌನವಾಗಿಯೇ ಇರುವರೇ? ಸಂವಿಧಾನದ ವಿಷಯದಲ್ಲಿ ಹೆಚ್ಚು ಜಗೃತರಾಗಿ ಎಲ್ಲಡೆ ಹತ್ತಾರು ಹೆಸರುಗಳಲ್ಲಿ ಸಂಘಟಿತರಾಗಿರುವ ಪರಿಶಿಷ್ಟ ಜತಿಯ ಜನರು ತಮ್ಮ ಒಳಬೇಗುದಿಯನ್ನು ಹೊರಹಾಕಿದಾಗ ಸರ್ಕಾರದ ಪರಿಸ್ಥಿತಿ ಏನಾಗಬಹುದು? ತಮ್ಮ ಸರ್ಕಾರದ ಪತನಕ್ಕೆ ಬಿಜೆಪಿಯಾಗಲಿ, ಪ್ರಧಾನಿ ಮೋದಿಯವರಾಗಲಿ ಮುಂದಾಗುವರೇ ಎನ್ನುವ ಪ್ರಶ್ನೆಗೆ ಅಂತಹ ಪರಿಸ್ಥಿತಿ ಎದುರಾದಾಗಲೇ ಸತ್ಯ ತಿಳಿದೀತು

” ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ , ಸಂವಿಧಾನ ಬದಲಿಸುವ ಅವಕಾಶ ತಮಗೇನಾದರೂ ಸಿಕ್ಕರೆ, ಸಂವಿಧಾನದ ವಿಧಿ ೧೪ರ ಪ್ರಕಾರ ಎಲ್ಲರೂ ಸಮಾನರು ಎಂದು ಹೇಳುವ ಅಂಶವನ್ನು ಆಧಾರವನ್ನಾಗಿಟ್ಟುಕೊಂಡು ಮೀಸಲಾತಿಯನ್ನು ರದ್ದುಪಡಿಸುವೆ ಎಂಬುದಾಗಿ ಮಾತನಾಡಿರುವುದನ್ನು ಗಮನಿಸಿದರೆ ಅವರು ಕೇವಲ ಸಂವಿಧಾನದ ವಿಧಿಗಳನ್ನಷ್ಟೇ ಆಧಾರವನ್ನಾಗಿ ಟ್ಟುಕೊಂಡು ಹೇಳಿರುವುದು ಸ್ಪಷ್ಟವಾಗಿ ಕಾಣುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಲಬೆರಕೆ ಮಾಫಿಯಾ: ಕ್ರಮ ಅಗತ್ಯ

ತೆಲಂಗಾಣದಲ್ಲಿ ೩೦,೦೦೦ ಕೆ.ಜಿ. ನಕಲಿ ಮಸಾಲೆ ಜಪ್ತಿಯಾಗಿರುವುದು ಕೇವಲ ಎಚ್ಚರಿಕೆಯಲ್ಲ ನಮಗಿದು ನೇರ ಬೆದರಿಕೆ! ಮಸಾಲೆ, ಹಾಲು, ಎಣ್ಣೆ ಹಾಗೂ…

32 seconds ago

ಓದುಗರ ಪತ್ರ: ಉದ್ಯಾನವನಗಳಲ್ಲಿ ಸಂಗೀತ ವಾದ್ಯ ಜೋಡಣೆ: ಪಾಲಿಕೆ ಕ್ರಮ ಅಭಿನಂದನಾರ್ಹ

ಮೈಸೂರು ಮಹಾನಗರ ಪಾಲಿಕೆಯು ಹೊರಾಂಗಣ ಸಂಗೀತ ವಾದ್ಯಗಳ ಜೋಡಣೆ ಎಂಬ ಹೆಸರಿನಲ್ಲಿ ಉದ್ಯಾನವನಗಳಲ್ಲಿ ಸಂಗೀತ ವಾದ್ಯಗಳನ್ನು ಜೋಡಿಸುವ ವಿನೂತನ ಪ್ರಯೋಗವನ್ನು…

2 mins ago

ಕುಕ್ಕರಿನ ಸೀಟಿ ಕೂಗಲು ಶುರುವಾಗಿದೆ!

ಬಿ.ಎಸ್.ವಿನಯ್ ಇಲ್ಲಿಯವರೆಗೆ ನಮ್ಮಂತಹ ಅಂಕಲ್ -ಆಂಟಿಗಳು ಜೆನ್ ಝೀಗಳ ಬಗ್ಗೆ ಒಳ್ಳೆಯ ಮಾತಾಡಿದ್ದಕ್ಕಿಂತ ಮೂಗು ಮುರಿದದ್ದೇ ಹೆಚ್ಚು. ಈ ಹುಡುಗರಿಗೆ…

10 mins ago

ಕೆಲವಷ್ಟು ಭರವಸೆಗಳು ಮತ್ತು ಹಲವಷ್ಟು ಆತಂಕಗಳು

ಸ್ವಾಮಿ ಪೊನ್ನಾಚಿ ನಾನು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳುವ ಕಾಲಕ್ಕೆ ಹೆಚ್ಚು ಕಡಿಮೆ ಚಳವಳಿಗಳ ಕಾವು ನಿಂತೇ ಹೋಗಿತ್ತು. ಜೋರು ಗಾಳಿ…

13 mins ago

ಹಳೆಯ ಹಳವಂಡಗಳಿಲ್ಲದ ಭವಿಷ್ಯದ ಬೆಳಕು ಈ ಜೆನ್ ಝೀಗಳು

ಸುಧಾ ಆಡುಕಳ ಶುಭಂ ಹದಿಹರಯವನ್ನು ಇತ್ತೀಚೆಗಷ್ಟೇ ದಾಟಿದ ಹೊಸ ತಲೆಮಾರಿನ ಹುಡುಗ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವನಮ್ಮ ಹೇಳುವ ಕತೆಗಳೆಂದರೆ…

19 mins ago

ಕೊಡಗು ಜಿಲ್ಲೆಯಲ್ಲಿ ಈವರೆಗೆ 44 ಮನೆಗಳಿಗೆ ಹಾನಿ

ನವೀನ್ ಡಿಸೋಜ ಮಳೆ ಅವಾಂತರದಿಂದ ಇಬ್ಬರು ಸಾವು, ೬ ಜಾನುವಾರುಗಳು ಬಲಿ; ಎನ್‌ಡಿಆರ್‌ಎಫ್ ಮಾನದಂಡದಂತೆ ಪರಿಹಾರ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…

24 mins ago