ಅಂಕಣಗಳು

ಬಾಪೂ ಆದರ್ಶ ಮಡದಿ ಕಸ್ತೂರ ಬಾ ಗಾಂಧಿ

ಡಾ.ಎಂ.ಡಿ.ಉಮೇಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಅವರು ಏ. ೧೧, ೧೮೬೯ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಗೋಕುಲ್‌ದಾಸ್ ಕಪಾಡಿಯಾ ದಂಪತಿಯ ಪುತ್ರಿಯಾಗಿ ಜನಿಸಿದರು. ಆಗಿನ ಕಾಲದಲ್ಲಿ ಬಾಲಕಿಯರನ್ನು ಶಾಲೆಗೆ ಕಳುಹಿಸುವುದಕ್ಕೆ ಸಮಾಜದಲ್ಲಿ ತಮ್ಮದೇ ಕಟ್ಟುಪಾಡುಗಳನ್ನು ಹೇರಲಾಗಿತ್ತು. ಹಾಗಾಗಿ ಕಸ್ತೂರ ಬಾ ಶಾಲೆಗೆ ಹೋಗಿರಲಿಲ್ಲ ಮತ್ತು ಆಗಿನ ರೀತಿಯಂತೆ ಕಸ್ತೂರಬಾ ಅವರ ವಿವಾಹ ೧೩ನೇ ವಯಸ್ಸಿನಲ್ಲೇ ಮಹಾತ್ಮ ಗಾಂಧೀಜಿಯವರೊಂದಿಗೆ ನಡೆಯಿತು. ಅಕ್ಷರಸ್ಥಳಾಗದಿದ್ದರೂ ಕಸ್ತೂರಬಾ ಪ್ರಾಪಂಚಿಕ ಜ್ಞಾನದಲ್ಲಿ ಕಡಿಮೆಯಿರಲಿಲ್ಲ. ಓದು-ಬರಹ ಬಾರದ ತನ್ನ ಮಡದಿಗೆ ಗಾಂಧೀಜಿ ಓದುವುದನ್ನು ಮತ್ತು ಬರೆಯುವುದನ್ನು ಕಲಿಸಿದರು. ವಿಶೇಷವೆಂದರೆ ಕಸ್ತೂರಬಾ ವಯಸ್ಸಿನಲ್ಲಿ ಗಾಂಧೀಜಿಯವರಿಗಿಂತ ೬ ತಿಂಗಳು ಹಿರಿಯರು.

ಮೋಹನದಾಸ್ ಗಾಂಧಿ ಇನ್ನೂ ಮಹಾತ್ಮ ಗಾಂಧಿ ಆಗಿಲ್ಲದ ಕಾಲದಲ್ಲಿ ಆಗಿನ ಕಾಲದ ಬಹುತೇಕ ಪುರುಷರ ಹಾಗೆಯೇ ಅವರೂ ಇದ್ದವರು. ಪತ್ನಿಯ ಮೇಲೆ ಹಕ್ಕು ಚಲಾಯಿಸುವ, ಪತ್ನಿಯನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವ ವರಸೆಯನ್ನು ಮೋಹನದಾಸ್ ಅನುಸರಿಸಿದರು. ಈ ವಿಚಾರಗಳನ್ನು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಕಸ್ತೂರಬಾ ದಿಟ್ಟೆ, ಸ್ವಾಭಿಮಾನಿ. ಯಾವ ಸಮಯದಲ್ಲಿ ದೃಢವಾಗಿ ದನಿ ಎತ್ತಬೇಕು? ತನಗೆ ಒಪ್ಪದ ವಿಚಾರಕ್ಕೆ ಯಾವಾಗ ತಲೆ ಬಾಗಬೇಕು, ಹಾಗೆಯೇ ತಲೆಬಾಗಬಾರದು? ಎಂಬುದನ್ನು ಅರಿತಿದ್ದರು. ಹಾಗಾಗಿ, ಅವರು ಅನೇಕ ಬಾರಿ ಪತಿಯ ಅಭಿಪ್ರಾಯಕ್ಕೆ ಒಪ್ಪಿಗೆ ನೀಡಿಲ್ಲದ ಸಂಗತಿಗಳನ್ನು ನಾವು ಕಾಣುತ್ತೇವೆ. ಗಾಂಧೀಜಿ ಎಷ್ಟು ದೃಢ ನಿಲುವಿನವರೋ, ಕಸ್ತೂರಬಾ ಕೂಡ ಅಷ್ಟೇ ದೃಢ ನಿಲುವಿನವರು ಎಂಬುದರಲ್ಲಿ ಸಂಶಯವಿಲ್ಲ.

ಮಹಾತ್ಮ ಗಾಂಧೀಜಿಯವರು ತಮ್ಮ ಆತ್ಮ ಕಥೆಯಲ್ಲಿ ‘ಕಸ್ತೂರ ಬಾ ಸ್ವತಂತ್ರ ನಿಲುವಿನವರು, ದೃಢವಾದಿ,ಹಟವಾದಿ,ಎಷ್ಟೋ ಸಲ ನಮ್ಮ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದುಂಟು. ದೀರ್ಘ ಅವಽಯವರೆಗೆ ನಾವು ಪರಸ ರರಿಂದ ದೂರ ಇದ ದ್ದೂ ಉಂಟು. ಆದರೆ ಸಮಯವು ಪರಸರರನ್ನು ಅರ್ಥಮಾಡಿಕೊಳ ಲು ನಮಗೆ ಸಹಕರಿಸಿತು. ಸಂದರ್ಭಗಳನ್ನು ನಾವು ಚೆನ್ನಾಗಿ ಅರಿತುಕೊಳ್ಳಲು ಸಾಧ್ಯವಾಯಿತು. ಸಾರ್ವಜನಿಕವಾಗಿ ನಮ್ಮ ಪಾತ್ರ ಏನಿದೆ ಎಂಬ ಕಡೆಗೆ ನಾವು ಇಬ್ಬರೂ ಬಹುಮಟ್ಟಿಗೆ ಒಂದೇ ವೇಗದಲ್ಲಿ ಗಮನ ನೀಡುವುದು ಸಾಧ್ಯವಾಯಿತು’ಎಂದು ಪ್ರಸ್ತಾಪಿಸಿದ್ದಾರೆ.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಇರುವ ಸಂದರ್ಭದಲ್ಲಿ ಒಮ್ಮೆ ಅಸ್ಪೃಶ್ಯರೊಬ್ಬರು ಗಾಂಧೀಜಿಯವರನ್ನು ಭೇಟಿ ಮಾಡಲು ಮನೆಗೆ ಆಗಮಿಸುತ್ತಾರೆ. ಆಗಿನ ಕಾಲದಲ್ಲಿ ಈಗಿನಂತೆ ಮನೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇರಲಿಲ್ಲ. ಬಂದಂತಹ ಅತಿಥಿಗಳು ಡಬ್ಬದಲ್ಲಿ ಶೌಚಾಲಯ ಮಾಡುವ ವ್ಯವಸ್ಥೆಯಿತ್ತು. ಪಾಯಿಖಾನೆ ಡಬ್ಬವನ್ನು ಹೊರಹಾಕಲು ಕಸ್ತೂರಬಾ ಅವರಿಗೆ ಗಾಂಧೀಜಿ ಸೂಚಿಸಿದಾಗ ಕಸ್ತೂರ ಬಾ ನಿರಾಕರಿಸಿದ್ದೂ ಉಂಟು. ಆಗ ಗಾಂಧೀಜಿ ಅವರು ಕಸ್ತೂರಬಾ ಅವರನ್ನು ಹೊರಹಾಕಿದ ಪ್ರಸಂಗಗಳೂ ಸಂಭವಿಸಿವೆ.

ಗಾಂಧೀಜಿ ಮಾತ್ರ ತಮ್ಮ ಕಾರ್ಯದಿಂದ ಎಂದೂ ವಿಚಲಿತರಾಗಲಿಲ್ಲ. ನುಡಿದಂತೆ ನಡೆಯಲ್ಲೂ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗಾಂಧೀ ‘ಲಕ್ಷಿ ’ ಎಂಬ ಅಸ್ಪೃಶ್ಯ ಬಾಲಕಿಯನ್ನು ದತ್ತು ಪುತ್ರಿಯಾಗಿ ಸ್ವೀಕರಿಸಿದ್ದು ಚರಿತ್ರಾರ್ಹ ಸಂಗತಿಗಳಾಗಿವೆ. ಈ ಎರಡೂ ಘಟನೆಗಳು ಕಸ್ತೂರ ಬಾ ಅವರ ಮೇಲೆ ಅಪಾರ ಪರಿಣಾಮವನ್ನು ಬೀರುವುದರ ಜೊತೆಗೆ ಮನಃಪರಿವರ್ತನೆಯನ್ನು ಉಂಟುಮಾಡಿದವು. ಗಾಂಧೀಜಿಯವರ ಕೊನೆಯ ಘಟ್ಟದವರೆಗೂ ಎಲ್ಲಾ ಹೋರಾಟಗಳ ಸಂದರ್ಭಗಳಲ್ಲೂ ಕಸ್ತೂರಬಾ ಪತಿಗೆ ಆದರ್ಶ ಮಡದಿಯಾಗಿ ನಡೆದುಕೊಂಡರು.

ಗಾಂಧೀಜಿಯವರ ಮಡದಿಯಾಗಿ ಕಸ್ತೂರ ಬಾ ತಮ್ಮ ಬದುಕನ್ನೇ ಭಾರತಕ್ಕೆ ಸಮರ್ಪಣೆ ಮಾಡಿದರು. ಸಾರ್ವಜನಿಕ ಜೀವನದ ಪ್ರತಿಯೊಂದು ಏರಿಳಿತದಲ್ಲೂ ಅವರು ಗಾಂಧೀಜಿಯವರ ಜೊತೆಗೆ ನಿಂತರು. ಪತಿಯ ಕನಸನ್ನು ನನಸು ಮಾಡಲು ತಮ್ಮನ್ನು ತಾವು ಅರ್ಪಿಸಿಕೊಂಡರು. ಸರಳ ಜೀವನವನ್ನು ಒಪ್ಪಿಕೊಂಡರು. ಮಕ್ಕಳನ್ನು ಪತಿಯ ವಿಚಾರಗಳ ನೆಲೆಯಲ್ಲಿ ಬೆಳೆಸಿದರು. ಗಾಂಧೀಜಿ ಉಪವಾಸ, ಸತ್ಯಾಗ್ರಹ ಕೈಗೊಂಡಾಗ ಅವರು ಜೈಲಿನಲ್ಲಿರಲಿ, ಮನೆಯಲ್ಲಿರಲಿ, ತಾವೂ ಉಪವಾಸ ಮಾಡಿದರು. ಪತಿಯ ಸಲಹೆಯಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕೈಬಿಟ್ಟರು. ಬಂಗಾರ ತೊಡುಗೆಗಳ ಮೋಹವನ್ನು ತ್ಯಜಿಸಿದರು. ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಹೋರಾಟಗಳಲ್ಲಿ ಕಸ್ತೂರಬಾ ಅವರು ಸಕ್ರಿಯವಾಗಿ ಭಾಗವಹಿಸಿದರು. ದಕ್ಷಿಣ ಆಫ್ರಿಕಾದಲ್ಲಿನ ಹೋರಾಟದ ಸಮಯದಲ್ಲೂ ಗಾಂಽಜಿಗೆ ದೊಡ್ಡ ಬೆಂಬಲವಾಗಿದ್ದರು. ಇದರ ಜೊತೆಗೆ ಅಸ್ಪೃಶ್ಯತಾ ನಿರ್ಮೂಲನೆ, ಖಾದಿ ಪ್ರಚಾರ, ನೈರ್ಮಲ್ಯ, ಗ್ರಾಮೀಣ ಸೇವೆ, ಮೊದಲಾದ ಸಮಾಜ ಸುಧಾರಣಾ ರಚನಾತ್ಮಕ ಕಾರ್ಯಗಳಲ್ಲಿ ನೇರವಾಗಿ ತೊಡಗಿಸಿಕೊಂಡರು.

ಗಾಂಧೀಜಿಯವರು ತಮ್ಮ ಹೋರಾಟಗಳಲ್ಲಿ ಸಹಸ್ರಾರು ಜನರನ್ನು ಹುರಿದುಂಬಿಸುತ್ತಿದ್ದಂತೆ ಕಸ್ತೂರಬಾ ಕೂಡ ಆಗಿನ ಕಾಲದಲ್ಲಿ ಮಹಿಳೆಯರಲ್ಲಿ ಅಪಾರ ಸ್ಛೂರ್ತಿಯನ್ನು ತುಂಬುವುದರ ಮೂಲಕ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಲಕ್ಷಾಂತರ ಮಹಿಳೆಯರನ್ನು ಕರೆತಂದ ಕೀರ್ತಿಯು ಗಾಂಧೀಜಿಯವರಿಗೆ ಎಷ್ಟು ಸಲ್ಲುತ್ತದೋ, ಕಸ್ತೂರ ಬಾ ಅವರಿಗೂ ಅಷ್ಟೇ ಸಲ್ಲುತ್ತದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ದೇಶಸೇವೆಯಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸುತ್ತಿದ್ದರು. ಗಾಂಧೀಜಿಯವರ ವಿಭಿನ್ನ ಜೀವನದೊಂದಿಗೆ ಅವರು ತಾದಾತ್ಮ್ಯ ಹೊಂದಿದರು. ಒಂದೆಡೆ ಗಾಂಽಜಿಗೆ ಒತ್ತಾಸೆಯಾಗಿ, ಇನ್ನೊಂದೆಡೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ವಿಶೇಷವಾಗಿ ಮಹಿಳೆಯರಿಗೆ ಒತ್ತಾಸೆಯಾಗಿ ಕಸ್ತೂರಬಾ ತಮ್ಮನ್ನು ಅನವರತ ತೊಡಗಿಸಿಕೊಂಡರು. ಕಸ್ತೂರಬಾ,ಗಾಂಧೀಜಿಯವರು ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಳವಳಿಗಳ ಅವಿಭಾಜ್ಯ ಮತ್ತು ನಿರಂತರವಾದ ಭಾಗ ಎನಿಸಿದರು. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು ಅವರ ಹೆಸರಿನಲ್ಲಿ ‘ಕಸ್ತೂರ ಬಾ ಗಾಂಽ ಬಾಲಿಕಾ’ ವಿದ್ಯಾಲಯಗಳನ್ನು ಸ್ಥಾಪಿಸಿದೆ. ಹಾಗೆಯೇ ಏಪ್ರಿಲ್ ೧೧ರ ಕಸ್ತೂರಬಾ ಗಾಂಽಯವರ ಜನ್ಮದಿನದ ನೆನಪಿಗಾಗಿ, ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಸುರಕ್ಷಿತ ಪ್ರಸವದ ಬಗ್ಗೆ ಜಾಗೃತಿ ಮೂಡಿಸಲು ‘ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನ’ವನ್ನಾಗಿ ಭಾರತ ಸರ್ಕಾರ ಘೋಷಿಸಿದೆ.

(ಲೇಖಕರು, ಉಪನ್ಯಾಸಕರು, ಗಾಂಧೀ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ)

ಆಂದೋಲನ ಡೆಸ್ಕ್

Recent Posts

ʼವಿದ್ಯಾವಂತರು ಸಮುದಾಯಕ್ಕೆ ಆಸರೆಯಾಗಬೇಕುʼ

  ಈ ನಡೆ ಶೋಷಿತ ಸಮುದಾಯಗಳ ಪ್ರಗತಿಗೆ ಸಹಕಾರಿ -ಟಿ.ಕೆ.ಹರೀಶ್ ಶಿಕ್ಷಣ ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿರಬಾರದು. ಅದು…

4 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಶಿಕ್ಷಣವೇ ದೇಶ ಕಟ್ಟುವ ಹಾದಿ ಎಂದು ತಿಳಿದಿದ್ದ ದೇಶಪಾಂಡೆಯವರು

ಡಾ.ಎಂ.ಡಿ.ಉಮೇಶ್‌, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಇಂಗ್ಲೆಂಡಿನಲ್ಲಿ ಶಾಕಾಹಾರದ ದಿನಗಳು

ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು.…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 18 ಶನಿವಾರ

7 hours ago

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

20 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

22 hours ago