BREAKING NEWS

ವಿಶ್ವಕಪ್‌: ಫೈನಲ್‌ ಪಂದ್ಯದಲ್ಲಿ ನಮಗೆ ಇದೇ ದೊಡ್ಡ ಸವಾಲು ಎಂದ ಆಸೀಸ್‌ ನಾಯಕ!

ನಾಳೆ ( ನವೆಂಬರ್‌ 19 ) ಬಹು ನಿರೀಕ್ಷಿತ ವಿಶ್ವಕಪ್‌ ಫೈನಲ್‌ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್‌ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಏಕದಿನ ವಿಶ್ವಕಪ್‌ ಫೈನಲ್‌ ಆಡಿರುವ ಆಸ್ಟ್ರೇಲಿಯಾ ವಿರುದ್ಧ ಈ ಬಾರಿಯ ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಟೀಮ್‌ ಇಂಡಿಯಾ ಕಣಕ್ಕಿಳಿಯಲಿದೆ.

ಲೀಗ್‌ ಹಂತದಲ್ಲಿನ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದ ಭಾರತ ತಂಡ ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಟ ನ್ಯೂಜಿಲೆಂಡ್‌ ತಂಡದ ವಿರುದ್ಧ 70 ರನ್‌ಗಳ ಜಯ ಸಾಧಿಸುವುದರ ಮೂಲಕ ಟೂರ್ನಿಯ ಕೊನೆಯ ಸೆಣಸಾಟಕ್ಕೆ ಲಗ್ಗೆ ಇಟ್ಟಿದೆ.

ಇನ್ನು ಐದು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿರುವ ಆಸ್ಟ್ರೇಲಿಯಾ ಈ ಬಾರಿಯ ಟೂರ್ನಿಯ ಆರಂಭದಲ್ಲಿ ಎಡವಿತ್ತಾದರೂ ನಂತರದ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸುವುದರ ಮೂಲಕ ಫೈನಲ್‌ ಪ್ರವೇಶ ಪಡೆದುಕೊಂಡಿತ್ತು.

ಹೀಗೆ ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಟ ತಂಡಗಳ ನಡುವೆ ಈ ಬಾರಿಯ ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿರುವುದು ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ನಾಳೆ ತಿಳಿಯಲಿದೆ. ಒಂದೆಡೆ ಎರಡೂ ತಂಡಗಳ ನಡುವಿನ ಅಭಿಮಾನಿಗಳ ಮನದಲ್ಲಿ ಪಂದ್ಯದ ಕುರಿತು ಕಾತುರತೆ ಜತೆಗೆ ಭಯ ಮೂಡಿದ್ದರೆ ಮತ್ತೊಂದೆಡೆ ಕಣಕ್ಕಿಳಿಯಲಿರುವ ಆಟಗಾರರಲ್ಲಿ ಸಹಜವಾಗಿಯೇ ಒತ್ತಡ ಹೆಚ್ಚಾಗಿದೆ.

ಅದರಲ್ಲಿಯೂ ಇತ್ತಂಡಗಳ ನಾಯಕರು ಈ ಮಹಾ ಕದನಕ್ಕೆ ವಿಶೇಷ ತಂತ್ರಗಳನ್ನು ಹೆಣೆಯುವಲ್ಲಿ ನಿರತರಾಗಿದ್ದು ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಫೈನಲ್‌ ಪಂದ್ಯ ಆಡುವುದು ತಮಗೆ ಯಾವ ರೀತಿಯ ಸವಾಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ಟೀಮ್‌ ಇಂಡಿಯಾ ಎಲ್ಲಾ ವರ್ಗದಲ್ಲಿಯೂ ಬಲಿಷ್ಟತೆಯಿಂದ ಕೂಡಿರುವ ತಂಡವಾಗಿದೆ. ಇಂಥ ತಂಡದ ಜತೆ ಒಂದು ಲಕ್ಷ ಜನರ ಮುಂದೆ ಸೆಣಸಾಡುವುದು ನಮಗೆ ನಿಜಕ್ಕೂ ದೊಡ್ಡ ಸವಾಲಾಗಿದೆ” ಎಂದು ಪ್ಯಾಟ್‌ ಕಮಿನ್ಸ್‌ ಹೇಳಿಕೆ ನೀಡಿದ್ದಾರೆ. ಹೌದು, 132000 ಪ್ರೇಕ್ಷಕರು ಪಂದ್ಯ ವೀಕ್ಷಿಸಬಹುದಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಲಿದ್ದು, ಅವರ ಚೀರಾಟ ಹಾಗೂ ಭಾರತ ತಂಡಕ್ಕೆ ಅವರು ಕೊಡುವ ಬೆಂಬಲ ಆಸ್ಟ್ರೇಲಿಯಾ ತಂಡದ ಮೇಲೆ ಒತ್ತಡ ಹೇರುವುದು ಸುಳ್ಳಲ್ಲ.

andolana

Recent Posts

ಮಂಡ್ಯ: ಕೃಷಿ ಯಂತ್ರೋಪಕರಣದಿಂದ ಆಧುನಿಕ ಕೃಷಿಯತ್ತ ರೈತರು: ಡಾ. ಕೆ.ಸಿ.ನಾರಾಯಣಸ್ವಾಮಿ

ಮಂಡ್ಯ: ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವವನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವತಿಯಿಂದ “ಕೃಷಿ ಯಂತ್ರೋಪಕರಣ…

10 mins ago

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲ್‌ಇಡಿ ದೀಪ ಅಳವಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಹಳೆಯ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಾಗ ಬದಲಾಯಿಸುವುದು ಶಕ್ತಿ ಉಳಿತಾಯ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ದೀರ್ಘಾವಧಿಯ ಬಾಳಿಕೆಗೆ…

38 mins ago

ಮಂಡ್ಯ| ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್‌ ಗುದ್ದಲಿಪೂಜೆ

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾತನೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ್‌ ರವಿಕುಮಾರ್‌…

50 mins ago

ಕೆಎಎಸ್‌ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಕೆಪಿಎಸ್‌ಸಿ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ( ಕೆಎಎಸ್)ಯ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ…

1 hour ago

ಹಾಸನ: ವಿಷಕಾರಿ ಮೇವು ತಿಂದು 70ಕ್ಕೂ ಕುರಿಗಳು ಸಾವು

ಹಾಸನ: ವಿಷಕಾರಿ ಮೇವು ತಿಂದು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಜಾವಗಲ್‌ ಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ…

1 hour ago

ಶ್ರೀರಂಗಪಟ್ಟಣ: ವೈಭವದಿಂದ ಜರುಗಿದ ಕರೀಘಟ್ಟ ವೆಂಕಟರಮಣಸ್ವಾಮಿ ಬ್ರಹ್ಮೋತ್ಸವ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕರೀಘಟ್ಟ ವೆಂಕಟರಮಣ ಸ್ವಾಮಿಯ ಬ್ರಹ್ಮೋತ್ಸವ ಇಂದು ವೈಭವದಿಂದ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತ ಮುತ್ತ ಇರುವ…

2 hours ago