BREAKING NEWS

ಸ್ಕ್ಯಾಂಡಿನೇವಿಯಾ: 6000 ವರ್ಷಗಳ ಹಿಂದಿನ ಚ್ಯೂಯಿಂಗ್​ ಗಮ್ ಪತ್ತೆ

‘ಸ್ಕ್ಯಾಂಡಿನೇವಿಯಾದಲ್ಲಿ 6,000 ವರ್ಷಗಳಷ್ಟು ಹಳೆಯದಾದ ಚ್ಯೂಯಿಂಗ್​ ಗಮ್​  (Chewing Gum) ಪತ್ತೆಯಾಗಿದೆ. ಇಷ್ಟೇ ಅಲ್ಲ ಇದನ್ನು ಜಗಿದವರ ಡಿಎನ್​ಎ (DNA)ಯನ್ನು ಕೂಡ ಇದು ಸಂರಕ್ಷಿಸಿಟ್ಟುಕೊಂಡಿದೆ. ಈ ಚ್ಯೂಯಿಂಗ್​ ಗಮ್​ ಅನ್ನು ಜಗಿದವಳು ಬೇಟೆಗಾರರ ಪುಟ್ಟ ಹುಡುಗಿ, ಈಕೆ ಕಪ್ಪು ಚರ್ಮ, ಕಂದು ಕೂದಲು ಮತ್ತು ನೀಲಿ ಕಣ್ಣುಗಳನ್ನು ಹೊಂದಿದ್ದಳು. ಈ ಚ್ಯೂಯಿಂಗ್​ಗಿಂತ ಮೊದಲು ಈಕೆ ಹಝಲ್​ನಟ್​ ಮತ್ತು ಬಾತುಕೋಳಿಯನ್ನು ತಿಂದಿದ್ದಳು’ ಎನ್ನುವ ಮಾಹಿತಿಯನ್ನು ಹೊತ್ತ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.

ಡಾ. ಡೋರ್ಸಾ ಅಮೀರ್​ ಎಂಬ ಟ್ವೀಟಿಗರು ಇದನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ 5,700 ವರ್ಷ ಹಳೆಯ ಚೂಯಿಂಗ್ ಗಮ್‌ನಿಂದ ಮಾನವ ಜೀನೋಮ್ ಅನ್ನು ಮರಳಿ ಪಡೆದುದರ ಕುರಿತು ಇಂಗ್ಲಿಷ್​ ಲೇಖನವೊಂದರ ಲಿಂಕ್​ ಅನ್ನು ಈಕೆ ಈ ಟ್ವೀಟಿನಡಿ ಲಗತ್ತಿಸಿದ್ದಾರೆ. ಅನೇಕರು ಈ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ.

ಆ ಹುಡುಗಿಯ ಚರ್ಮದ ಬಣ್ಣವನ್ನೂ ಕೂಡ ಅಷ್ಟೊಂದು ದೃಢವಾಗಿ ಪತ್ತೆ ಹಚ್ಚಿದ್ದಾರಲ್ಲ! ಎಂದು ಒಬ್ಬರು ಕೇಳಿದ್ದಾರೆ. ಬಹುಶಃ ಈಕೆ ನನ್ನ ಅಜ್ಜಿಯಾಗಿದ್ದಿರಬಹುದು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಮ್ಮ ಪೂರ್ವಜರು ಬೇಟೆ ಪ್ರವೃತ್ತಿಯಿಂದ ಅವರು ಕೃಷಿಗೆ ಇಳಿದಾಗ ಅವರ ಆಹಾರ ಪದ್ಧತಿಯೂ ಬದಲಾಯಿತು. ಆದ್ದರಿಂದಲೇ ನಮಗೆ ವಿಟಮಿನ್​ ಡಿ ಕೊರತೆ ಉಂಟಾಗಿದೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹ್ ನನಗಂತೂ ಆ ಬಾಲೆ ಪುಟ್ಟ ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಮಗದೊಬ್ಬರು.

andolanait

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

9 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

14 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

15 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

16 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

16 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

22 hours ago