BREAKING NEWS

ಮತ್ತೊಮ್ಮೆ ಚಂದ್ರನ ಮೇಲ್ಮೈಯಲ್ಲಿ ‘ಸಾಫ್ಟ್‌ ಲ್ಯಾಂಡ್’ ಆದ ವಿಕ್ರಮ್‌ ಲ್ಯಾಂಡರ್‌ !

ನವದೆಹಲಿ : ಚಂದ್ರಯಾನ-3 ಮಿಷನ್‌ ಅಂಗವಾಗಿ ಆಗಸ್ಟ್‌ 23ರಂದು ಚಂದಿರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್‌ ಯಶಸ್ವಿಯಾಗಿ ಕಾಲಿಟ್ಟ ಹಲವು ದಿನಗಳ ನಂತರ ವಿಕ್ರಮ್ ಮತ್ತೊಮ್ಮೆ ಚಂದ್ರನ ಮೇಲ್ಮೈಯಲ್ಲಿ “ಸಾಫ್ಟ್‌ ಲ್ಯಾಂಡ್” ಆಗಿದೆ ಎಂದು ಇಸ್ರೋ ಇಂದು ಹೇಳಿದೆ.

“ವಿಕ್ರಮ್‌ ಲ್ಯಾಂಡರ್‌ ಚಂದ್ರಯಾನ-3 ಮಿಷನ್‌ ಉದ್ದೇಶಗಳನ್ನು ಮೀರಿದೆ ಹಾಗೂ ಯಶಸ್ವಿಯಾಗಿ “ಹಾಪ್‌ ಪ್ರಯೋಗವನ್ನು” ಪೂರ್ಣಗೊಳಿಸಿದೆ,” ಎಂದು ಇಸ್ರೋ ಹೇಳಿದೆ.

“ಆದೇಶದ ಮೇರೆಗೆ ಅದರ ಇಂಜಿನ್‌ಗಳು ಆರಂಭಗೊಂಡು ಅದು 40 ಸೆಂ.ಮೀ ಮೇಲಕ್ಕೆ ಹೋಗಿ ನಿರೀಕ್ಷೆಯಂತೆ ಸುರಕ್ಷಿತವಾಗಿ 30-40 ಸೆಂ.ಮೀ ದೂರದಲ್ಲಿ ಲ್ಯಾಂಡ್‌ ಆಗಿದೆ,” ಎಂದು ಸಂಸ್ಥೆ ಮಾಹಿತಿ ನೀಡಿದೆ.

“ಈ ಸಾಧನೆಯು ಭವಿಷ್ಯದ ಯೋಜನೆಗಳಿಗೆ ಮತ್ತು ಮಾನವ ಮಿಷನ್‌ಗಳಿಗೆ ಪ್ರೇರಣೆಯಾಗಿದೆ,” ಎಂದು ಇಸ್ರೋ ಹೇಳಿದೆ.

ಕಳೆದ ವಾರ ಚಂದ್ರಯಾನ-3 ಮಿಷನ್‌ನ ಪ್ರಜ್ಞಾನ ರೋವರ್‌ ಅನ್ನು”ಸ್ಲೀಪ್‌ ಮೋಡ್‌”ನಲ್ಲಿರಿಸಲಾಯಿತು ಆದರೆ ಅದರ ಬ್ಯಾಟರಿಗಳು ಚಾರ್ಜ್‌ ಆಗುತ್ತಿವೆ ಹಾಗೂ ರಿಸೀವರ್‌ ಆನ್‌ ಆಗಿದೆ ಎಂದು ಇಸ್ರೋ ಹೇಳಿದೆ.

andolanait

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

4 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

17 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

17 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

17 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

17 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

18 hours ago