BREAKING NEWS

ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸಾವು : ಚಾಲಕ ವಶಕ್ಕೆ

ಬೆಂಗಳೂರು : ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ಸೇತುವೆ ಬಳಿ ನಡೆದಿದೆ. ಲತಾ ಮೃತ ಮಹಿಳೆ. ಕೆಎಸ್​ಆರ್​ಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಮಹಿಳೆ ಮತ್ತು ಪತಿ ಬೈಕ್​ನಲ್ಲಿ ಬಟ್ಟೆ ಅಂಗಡಿಗೆ ಶಾಪಿಂಗ್​ಗಾಗಿ ತೆರಳುತ್ತಿದ್ದರು. ಮತ್ತೊಂದು ಬೈಕ್​ನಲ್ಲಿ ಪುತ್ರಿ ಕೂಡ ತೆರಳುತ್ತಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಸ್ ಬಂದಿದ್ದು, ಬಸ್​​ ಹಿಂಬದಿ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಮಹಿಳೆ ಮೇಲೆ ಬಸ್​​ ಹರಿದಿದೆ. ಸದ್ಯ ಲತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

lokesh

Recent Posts

ಪಿಎಂ-ಸಿಎಂ ಗುಟ್ಟು ರಟ್ಟು ; ಸಂಭಾಷಣೆ ರಹಸ್ಯ ಬಿಚ್ಚಿಟ್ಟ ಸಿಎಂ

ಮೈಸೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ…

16 mins ago

ಇನ್ನು ಮುಂದೆ ಸೌಜನ್ಯದಿಂದ ವರ್ತಿಸುವುದಿಲ್ಲ ; ಇರಾನ್‌ಗೆ ಟ್ರಂಪ್‌ನ ಕಠಿಣ ಎಚ್ಚರಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು, “ನಾವು ಹೇಳುವ ಒಪ್ಪಂದವನ್ನು…

41 mins ago

ಬಿಟ್‌ಕಾಯಿಲ್‌ ಪ್ರಕರಣ; ನಲಪಾಡ್‌ ಹ್ಯಾರಿಸ್‌ ಮನೆ ಸೇರಿ 17 ಕಡೆ ಇ.ಡಿ ದಾಳಿ

ಬೆಂಗಳೂರು : ಕಾಂಗ್ರೆಸ್ ಶಾಸಕ ಎನ್.​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ…

51 mins ago

ಪ್ರಸ್ತುತ ದಲಿತ ರಾಜಕಾರಣದಲ್ಲಿ ಮಹದೇವಪ್ಪ ಎಂಬ ವಿದ್ಯಮಾನ

ರಮೇಶ್‌ ಎಚ್.ಕೆ. ಶಿವಮೊಗ್ಗ ಕರ್ನಾಟಕದಲ್ಲಿ ದಲಿತ ವರ್ಗಗಳ ರಾಜಕಾರಣ ಎಂದಾಕ್ಷಣ ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಎನ್. ರಾಚಯ್ಯ,…

1 hour ago

ಬೆಂ-ಮೈ ಹೆದ್ದಾರಿಯಲ್ಲಿ ಕಾರು-ಬಸ್ ಡಿಕ್ಕಿ ; ತಪ್ಪಿದ ಭಾರೀ ಅನಾಹುತ, ಪ್ರಯಾಣಿಕರು ಪಾರು

ಮಂಡ್ಯ : ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್…

2 hours ago

ಅಮೆರಿಕ ವಶವಾದ ಇರಾನ್‌ ಹಡಗು ; ಸಶಸ್ತ್ರ ಕಡಲ್ಗಳ್ಳತನ ಎಂದ ಇರಾನ್‌

ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…

2 hours ago