BREAKING NEWS

ಮದುವೆಯಾದ ರಾತ್ರಿಯೇ ನವದಂಪತಿ ಇಬ್ಬರೂ ಹೃದಯಾಘಾತಕ್ಕೆ ಬಲಿ

ಲಖನೌ : ಮದುವೆ ಸಮಾರಂಭದ ಶಾಸ್ತ್ರಗಳೆಲ್ಲ ಮುಗಿದಿದ್ದವು. ಹೊಸ ಜೋಡಿಯನ್ನು ಮನೆಗೆ ತುಂಬಿಸಿಕೊಂಡ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ತಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ನವದಂಪತಿ ಮೊದಲ ರಾತ್ರಿಯ ರಸಮಯ ಕ್ಷಣಗಳನ್ನು ಊಹಿಸುತ್ತಾ ನಾಚಿದ್ದರು. ಬೆಳಿಗ್ಗೆ ಅವರಿಬ್ಬರೂ ಎದ್ದು ಕೊಠಡಿಯಿಂದ ಹೊರಬಂದಾಗ ಕಿಚಾಯಿಸಿ ಮಜಾ ತೆಗೆದುಕೊಳ್ಳೋಣ ಎಂಬ ಕೀಟಲೆ ಉದ್ದೇಶದಿಂದ ಮನೆಯವರು ಕಾಯುತ್ತಿದ್ದರು. ಆದರೆ ಸಂಭ್ರಮದಲ್ಲಿದ್ದ ಆ ಎರಡೂ ಕುಟುಂಬಗಳಿಗೆ ಬೆಳ್ಳಂಬೆಳಿಗ್ಗೆಯೇ ಆಘಾತ ಎದುರಾಗಿತ್ತು.

ಮದುವೆಯ ರಾತ್ರಿ ಶೋಭನಕ್ಕೆಂದು ಕೊಠಡಿ ಒಳ ಸೇರಿದ ಈ ಹೊಸ ಜೋಡಿ ಜೀವಂತವಾಗಿ ಹೊರಗೆ ಬರಲೇ ಇಲ್ಲ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ಮದುವೆಯಾಗಿದ್ದ ದಂಪತಿ ಮರು ದಿನ ಶವಗಳಾಗಿ ಪತ್ತೆಯಾಗಿದ್ದಾರೆ. ಅವರ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಆದರೆ ಮದುಮಗ ಮತ್ತು ಮದುಮಗಳು ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

22 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಅವರ ಮದುವೆ ಮೇ 30ರಂದು ನಡೆದಿತ್ತು. ಮದುವೆ ರಾತ್ರಿ ಅವರಿಬ್ಬರೂ ತಮ್ಮ ಕೊಠಡಿ ಸೇರಿಕೊಂಡಿದ್ದಾರೆ. ಆದರೆ ಮರುದಿನ ಅವರು ಕಾಣಿಸಿಕೊಂಡಿದ್ದು ಶವಗಳಾಗಿ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ತೆರಳಿದ್ದ ಪೊಲೀಸರು ಎರಡೂ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಈ ಹಠಾತ್ ಸಾವಿನ ಸುತ್ತಲೂ ಅನುಮಾನ ವ್ಯಕ್ತವಾಗಿತ್ತು. ಶೋಭನಕ್ಕಾಗಿ ಕೊಠಡಿ ಸೇರಿದ ಇಬ್ಬರೂ ಸತ್ತಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದು ಕೊಲೆ ಇರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು. ಆದರೆ ಅವರಿಬ್ಬರೂ ಒಳಗೇ ಇರುವಾಗ ಈ ರೀತಿ ಸಾಯಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿದ್ದವು. ಅಲ್ಲದೆ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆದಿರುವುದು, ಅವರು ಪ್ರತಿರೋಧ ಒಡ್ಡಿರುವುದು ಯಾವುದರ ಕುರುಹೂ ಇರಲಿಲ್ಲ. ಇದರಿಂದ ಊರಿನ ತುಂಬಾ ಅವರಿಬ್ಬರ ಸಾವಿನ ಕುರಿತು ಊಹಾಪೋಹಗಳು ಹರಿದಾಡಿದ್ದವು. ಈಗ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ್ದು, ಎಲ್ಲ ವದಂತಿಗಳಿಗೂ ಮಂಗಳ ಹಾಡಿದೆ. ಹೊಸದಾಗಿ ಮದುವೆಯಾಗಿದ್ದ ಗಂಡ ಮತ್ತು ಹೆಂಡತಿ ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಮರಣೋತ್ತರ ಪರೀಕ್ಷೆ ವರದಿ ತೋರಿಸಿದೆ ಎಂದು ಎಸ್‌ಪಿ ಪ್ರಶಾಂತ್ ವರ್ಮಾ ಹೇಳಿದ್ದಾರೆ. ಆದರೆ ಇನ್ನೂ ಎಳೆಯ ವಯಸ್ಸಿನ ಇಬ್ಬರೂ ಒಟ್ಟಿಗೆ ಹೃದಯಾಘಾತಕ್ಕೆ ಒಳಗಾಗುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡಿದೆ.

ನವದಂಪತಿ ಪ್ರತಾಪ್ ಮತ್ತು ಪುಷ್ಪಾ ಅವರನ್ನು ಪ್ರತಾಪ್‌ನ ಗ್ರಾಮದಲ್ಲಿ ಒಂದೇ ಚಿತೆಯಲ್ಲಿ ಒಟ್ಟಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನರು ಹಾಜರಿದ್ದರು. ಮದುವೆಯ ಸಡಗರದಲ್ಲಿದ್ದ ಎರಡೂ ಕುಟುಂಬಗಳು ದಿನ ಬೆಳಗಾಗುವುದರೊಳಗೆ ಶೋಕದ ಮಡುವಿನಲ್ಲಿದ್ದವು. ಊರಿನ ಜನರು ಕೂಡ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದರು.

lokesh

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

8 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

8 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

8 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

8 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

8 hours ago