BREAKING NEWS

18 ಸಾವಿರ ನೋಟ್‌ಬುಕ್‌ ಬಳಸಿ ಅಂಬೇಡ್ಕರ್‌ ಭಾವಚಿತ್ರ ರಚನೆ

ಮಹಾರಾಷ್ಟ್ರ : ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ 18 ಸಾವಿರ ನೋಟ್‌ಬುಕ್‌ಗಳನ್ನು ಬಳಸಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್ ಅವರ ಭಾವಚಿತ್ರವನ್ನು ರಚಿಸಲಾಗಿದ್ದು, ಮಹಾರಾಷ್ಟ್ರದ ಲಾತೂರ್‌ನಲ್ಲಿ ಈ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ. Mosaic ಕಲಾ ಶೈಲಿಯಲ್ಲಿ ತಯಾರಾದ ಈ ಭಾವಚಿತ್ರದ ಹಿಂದೆ 18 ಕಲಾವಿದರ ಕೈಚಳಕವಿದೆ.
ಪ್ರತಿವರ್ಷ ಏ‍ಪ್ರಿಲ್‌ 14ರಂದು ಅಂಬೇಡ್ಕರ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಭಾರತದ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಬಿ. ಆರ್‌ ಅಂಬೇಡ್ಕರ್ ಅವರ ಗೌರವಾರ್ಥವಾಗಿ ಈ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಭಾವಚಿತ್ರ ಪ್ರದರ್ಶನದ ಮುಂದಾಳತ್ವ ವಹಿಸಿದ್ದ ಲಾತೂರ್ ಬಿಜೆಪಿ ಲೋಕಸಭಾ ಸದಸ್ಯ ಸುಧಾಕರ ಶ್ರಂಗಾರೆ ಹೇಳಿದ್ದಾರೆ.

11 ಸಾವಿರ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ 100*110 ಅಡಿ ಎತ್ತರದ ಭಾವಚಿತ್ರವನ್ನು ತಯಾರಿಸಲಾಗಿದೆ.
ಸಾಮಾಜಿಕ ಬದ್ಧತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರದರ್ಶನದ ನಂತರ ಈ ಪುಸ್ತಕಗಳನ್ನು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ ಎಂದು ಸುಧಾಕರ ಶ್ರಂಗಾರೆ ತಿಳಿಸಿದ್ದಾರೆ.

lokesh

Recent Posts

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…

8 hours ago

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

9 hours ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

9 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

9 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

10 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

10 hours ago