BREAKING NEWS

ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟ: ಯದುವೀರ್‌ಗೆ ಎದುರಾಳಿಯಾಗಿ ಎಂ. ಲಕ್ಷ್ಮಣ್‌!

ನವದೆಹಲಿ: ಕಾಂಗ್ರೆಸ್‌ನ ಬಹುನಿರೀಕ್ಷಿತ ಲೋಕಸಭಾ ಚುಣಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು (ಮಾ.೨೧) ರಾತ್ರಿ ಎಐಸಿಸಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಬಹು ಮುಖ್ಯ ಪಾತ್ರವಹಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್‌ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮೈಸೂರು ಸೇರದಂತೆ ರಾಜ್ಯದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಸೇರಿದಂತೆ ದೇಶಾದ್ಯಂತ ಒಟ್ಟು 57 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಮೊದಲ ಹಂತದಲ್ಲಿ ಏಳು ಮತ್ತು ಎರಡನೇ ಹಂತದಲ್ಲಿ 17 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆದರೆ ಚಾಮರಾಜನಗರ ಸೇರಿದಂತೆ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಕಾಯ್ದಿರಿಸಿದೆ.

17 ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ

ಮೈಸೂರು ಲೋಕಸಭಾ ಕ್ಷೇತ್ರ- ಎಂ. ಲಕ್ಷ್ಮಣ್‌
ಚಿತ್ರದುರ್ಗ ಲೋಕಸಭಾ ಕ್ಷೇತ್ರ- ಬಿ.ಎನ್‌ ಚಂದ್ರಪ್ಪ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಪದ್ಮರಾಜ್‌
ಬಾಗಲಕೋಟೆ ಲೋಕಸಭಾ ಕ್ಷೇತ್ರ- ಸಂಯುಕ್ತಾ ಪಾಟೀಲ್‌
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ- ಸೌಮ್ಯಾರೆಡ್ಡಿ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ- ಎಂ.ವಿ.ರಾಜೀವ್ ಗೌಡ
ಉಡುಪಿ, ಚಿಕ್ಕಮಗಳೂರು ಕ್ಷೇತ್ರ- ಜಯಪ್ರಕಾಶ್ ಹೆಗ್ಡೆ
ಕಲಬುರಗಿ ಲೋಕಸಭಾ ಕ್ಷೇತ್ರ- ರಾಧಾಕೃಷ್ಣ ದೊಡ್ಡಮನಿ
ದಾವಣಗೆರೆ ಲೋಕಸಭಾ ಕ್ಷೇತ್ರ- ಪ್ರಭಾ ಮಲ್ಲಿಕಾರ್ಜುನ
ಬೆಂಗಳೂರು ಸೆಂಟ್ರಲ್‌ ಕ್ಷೇತ್ರ- ಮನ್ಸೂರ್ ಅಲಿಖಾನ್‌
ಉತ್ತರ ಕನ್ನಡ ಕ್ಷೇತ್ರ- ಡಾ.ಅಂಜಲಿ ನಿಂಬಾಳ್ಕರ್‌
ಧಾರವಾಡ ಲೋಕಸಭಾ ಕ್ಷೇತ್ರ- ವಿನೋದ್ ಅಸೋಟಿ
ಕೊಪ್ಪಳ ಲೋಕಸಭಾ ಕ್ಷೇತ್ರ- ರಾಜಶೇಖರ್ ಹಿಟ್ನಾಳ್‌
ಬೀದರ್ ಲೋಕಸಭಾ ಕ್ಷೇತ್ರ- ಸಾಗರ್ ಖಂಡ್ರೆ

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಲಕ್ಷಾಂತರ ತಂಗಿಯರ ಬದುಕನ್ನು ಹೊಲಿಯುವ ‘ಟೈಲರ್ ಅಣ್ಣʼ

ತಮಿಳುನಾಡಿನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸೆಲ್ವಕುಮಾರ್ ಹೊಲಿಗೆ ತರಬೇತಿ ಯೂಟ್ಯೂಬ್ ತೆರೆದು ಅದರಲ್ಲಿ ‘ಟೈಲರ್ ಬ್ರೋ’ ಎಂದು ಟೈಪಿಸಿದರೆ…

2 hours ago

ಮಡಿಕೇರಿ ನಗರದ ಅನಧಿಕೃತ ಹೋಂಸ್ಟೇಗಳಿಗೆ ನೋಟಿಸ್

ಪುನೀತ್ ಮಡಿಕೇರಿ ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಮತ್ತು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ನಗರದ ಹೋಂಸ್ಟೇಗಳಿಗೆ…

2 hours ago

ಮಿರ್ಲೆ: ಹುಣಸಮ್ಮ ತಾಯಿ ಸಿಡಿ ಉತ್ಸವಕ್ಕೆ ಸಕಲ ಸಿದ್ಧತೆ

ಕೆ.ಟಿ.ಮೋಹನ್ ಕುಮಾರ್ ಫೆ.೨೭ರಂದು ನವಗ್ರಾಮದೇವತೆ ಹುಣಸಮ್ಮತಾಯಿ ಸಿಡಿ ಉತ್ಸವ, ೨೮ರಂದು ರಥೋತ್ಸವ ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ…

2 hours ago

ಮೊಬೈಲ್ ವ್ಯಸನ; ಕೊರೊನಾ ಸಂದರ್ಭ ಮೂಲ ಕಾರಣ

ಕೆ.ಎಸ್.ಚಂದ್ರಶೇಖರಮೂರ್ತಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಚಿಂತನೆಗೆ ಶಿಕ್ಷಕ ವೃಂದ ಸ್ವಾಗತ  ಮೈಸೂರು: ಆಧುನಿಕತೆ ಬೆಳೆಯುತ್ತಾ ಹೋದಂತೆ ಆಧುನಿಕ ತಂತ್ರಜನ…

2 hours ago

‘ಮೈಸೂರು ಮತ್ತೆ ಸ್ವಚ್ಛ ನಗರಿ ಗರಿ ಧರಿಸಬೇಕು’

ಪ್ರಶಾಂತ್ ಎನ್.ಮಲ್ಲಿಕ್ ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್…

3 hours ago

ಸಫಾರಿ ಕಾಡಿನ ನಾಶಕ್ಕೆ ರಹದಾರಿ: ರೈತರ ಆರೋಪ

ಗಿರೀಶ್ ಹುಣಸೂರು ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ …

3 hours ago