ಬಾಸ್ಕೆಟ್‌ಬಾಲ್ ದಿಗ್ಗಜ ಮೈಕಲ್ ಜೆಫ್ರಿ ಜೋರ್ಡಾನ್ ಅವರು 1998ರ ಎನ್‌ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13‘ ಶೂ ದಾಖಲೆ $2.2 ಮಿಲಿಯನ್‌ಗೆ(₹180,545,950) ಮಾರಾಟವಾಗಿದೆ.ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎಂದೆನಿಸಿದೆ. ಇದೇ ಆಟದಲ್ಲಿ ಧರಿಸಿದ್ದ ಜೆರ್ಸಿ $10.1 ಮಿಲಿಯನ್‌ಗೆ ಮಾರಾಟವಾಗಿತ್ತು.
ಈ ಹಿಂದೆ ಅಂದರೆ 2021ರಲ್ಲಿ ಅಮೆರಿಕದ ಜನಪ್ರಿಯ ರ್ಯಾಪ್ ಹಾಡುಗಾರ, ಯೀಜಿ(yeezy) ಕಂಪನಿಯ ಮಾಲೀಕ ಕಾನ್ಯೆ ವೇಸ್ಟ್ ಅವರ ‘ನೈಕ್ ಏರ್ ಯೀಜಿ 1‘ ಎಂಬ ಸ್ನೀಕರ್ ಈ ದಾಖಲೆಯನ್ನು ಹೊಂದಿತ್ತು. ಈ ಸ್ನೀಕರ್‌ಅನ್ನು ಅಮೆರಿಕ ಮೂಲದ ದಲ್ಲಾಳಿ ಕಂಪೆನಿ ಸೋಥೆಬಿಸ್ ಸುಮಾರು $1.8 ಮಿಲಿಯನ್‌ಗೆ ಮಾರಟ ಮಾಡಿತ್ತು. ಇದೇ ವೇಳೆ ಜೋರ್ಡಾನ್ ಅವರ ನೈಕ್ ‘ಏರ್ ಶಿಪ್‘ ಶೂ $1.47 ಮಿಲಿಯನ್‌ಗೆ ಮಾರಟವಾಗಿತ್ತು.
1998ರಲ್ಲಿ ನಡೆದ ‘ಎನ್‌ಬಿಎ ಫೈನಲ್ ಗೇಮ್ 2‘ ಸರಣಿಯಲ್ಲಿ ಚಿಕಾಗೋ ಬುಲ್ಸ್(ಜೋರ್ಡಾನ್ ಪ್ರತಿನಿಧಿಸಿದ ತಂಡ) ಮತ್ತು ಉತಾಹ್ ಜಾಝ್(utah jazz) ನಡುವೆ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯವು ಜೋರ್ಡಾನ್ ಅವರ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದ ವೇಳೆ ಜೋರ್ಡಾನ್ ‘ಏರ್ ಜೋರ್ಡಾನ್ 13‘ ಸ್ನೀಕರ್ಸ್ ಧರಿಸಿದ್ದರು. ಉತಾಹ್ ಜಾಝ್ ವಿರುದ್ಧ ಬುಲ್ಸ್ 93-88 ಅಂತರದಲ್ಲಿ ಗೆಲುವು ಪಡೆದು ಚಾಂಪಿಯನ್ ಆಗಿತ್ತು. ಈ ಪಂದ್ಯವನ್ನು ‘ಲಾಸ್ಟ್ ಡ್ಯಾನ್ಸ್‘ ಎಂದು ಕರೆಯಲಾಗಿದೆ.
ಜೋರ್ಡಾನ್ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರರಾಗಿದ್ದು, ಚಿಕಾಗೋ ಬುಲ್ಸ್ ತಂಡದಲ್ಲಿ ಪ್ರತಿನಿಧಿಸಿ ಸುಮಾರು 15 ಎನ್‌ಬಿಎ ಸರಣಿಯಲ್ಲಿ ಆಡಿದ್ದಾರೆ. ಆರು ಬಾರಿ ಎನ್‌ಬಿಎ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. 1980 ಮತ್ತು 1990 ರ ದಶಕದಲ್ಲಿ ವಿಶ್ವದಾದ್ಯಂತ ಬಾಸ್ಕೆಟ್‌ಬಾಲ್ ಜನಪ್ರಿಯತೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…