ಆಂದೋಲನ ಪುರವಣಿ

ಯುವ ಡಾಟ್ ಕಾಮ್ | ಏರುತ್ತಿದ್ದ ಜನಸಂಖ್ಯೆಗೆ ‘ಯುವ’ ಅಂಕುಶ

ಜು.೧೧ ವಿಶ್ವ ಜನಸಂಖ್ಯಾ ದಿನ; ಭಾರತದಲ್ಲಿನ ಯಶಸ್ಸಿಗೆ ಯುವ ಸಮೂಹವೇ ಕಾರಣ

ಇಂದು (ಜುಲೈ ೧೧) ವಿಶ್ವ ಜನಸಂಖ್ಯಾ ದಿನ. ಜಾಗತಿಕವಾಗಿ ಹೆಚ್ಚುತ್ತಿದ್ದ ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ೧೯೮೭ರಲ್ಲಿ ಪ್ರಾರಂಭಿಸಿದ ಈ ಜಾಗೃತಿ ದಿನಾಚರಣೆ ಇಂದು ಫಲ ನೀಡಿದೆ. ಯುವ ಸಮೂಹ ಮನಸ್ಸು ಮಾಡಿದರೆ, ಅವರಲ್ಲಿ ಸೂಕ್ತ ರೀತಿಯ ಅರಿವು ಮೂಡಿಸಿದರೆ ಒಳ್ಳೆಯ ಫಲ ಸಿಕ್ಕೇ ಸಿಕ್ಕುತ್ತದೆ ಎನ್ನುವುದಕ್ಕೆ ವಿಶ್ವಸಂಸ್ಥೆಯ ಆಶಯ ಈಡೇರಿರುವುದೇ ಸಾಕ್ಷಿ.

ಚೀನಾ ಬಿಟ್ಟರೆ ವಿಶ್ವದಲ್ಲಿಯೇ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ. ದೇಶಕ್ಕೆ ಇದು ಕೊಂಚ ಹೊರೆ ಎನ್ನಿಸಿದರೂ ಇದರಲ್ಲಿ ಬಹುಪಾಲು ಯುವ ಸಮೂಹವೇ ಇದೆ ಎನ್ನುವುದು ನಮ್ಮ ಶಕ್ತಿ. ಇದಕ್ಕಾಗಿಯೇ ಭಾರತವನ್ನು ಯುವ ದೇಶ ಎಂದು ಕರೆಯುವುದು. ಜಾಗತಿಕವಾಗಿ ಬಲಿಷ್ಠವಾಗುತ್ತಿರುವ ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಜೊತೆಗೆ ಭವಿಷ್ಯಕ್ಕೆ ದೇಶ ಹೇಗಿರಬೇಕು ಎನ್ನುವ ಸ್ಪಷ್ಟ ಕಲ್ಪನೆಯನ್ನು ಇಟ್ಟುಕೊಂಡು ಮುಂದೆ ಸಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ಇರುವ ಯುವ ಶಕ್ತಿ ಸರಿಯಾದ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿರುವುದು. ಇದರಲ್ಲಿ ಜನಸಂಖ್ಯಾ ನಿಯಂತ್ರಣವೂ ಒಂದು.

ಭಾರತದ ಅತ್ಯುತ್ತಮ ಸಾಧನೆ

೬೦ರ ದಶಕದಲ್ಲಿ ಶೇ.೪೦ರಷ್ಟಿದ್ದ ದೇಶದ ಜನಸಂಖ್ಯಾ ಬೆಳವಣಿಗೆ ೭೦,೮೦ ರ ದಶಕದ ವರೆಗೂ ಹೆಚ್ಚು ಕಡಿಮೆ ಅದೇ ವೇಗದಲ್ಲಿ ಇತ್ತು. ಜಾಗತಿಕವಾಗಿ ಇದೊಂದು ಸಮಸ್ಯೆಯಾಗಿ ಕಾಡತೊಡಗಿದಾಗ ವಿಶ್ವಸಂಸ್ಥೆ ಜನಸಂಖ್ಯಾ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿತು. ವಿವಿಧ ದೇಶಗಳು ಕಾನೂನುಗಳನ್ನು ರೂಪಿಸಿ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾದವು. ಆಗ ಬಡತನ, ಹಸಿವು, ನಿರುದ್ಯೋಗ, ಅನಾರೋಗ್ಯ ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಹೊದ್ದು ಮಲಗಿದ್ದ ಭಾರತ ತಾನು ಜನಸಂಖ್ಯೆ ನಿಯಂತ್ರಣ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದು ಅರಿತು ಜಾಗೃತಿ ಮೂಡಿಸಲು ಮುಂದಾಯಿತು. ಅದರಲ್ಲಿಯೂ ಮುಖ್ಯವಾಗಿ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡು ಕಾಲೇಜು ಹಂತಗಳಲ್ಲಿಯೇ ವಿದ್ಯಾರ್ಥಿಗಳಿಗೆ ಜನಸಂಖ್ಯೆ ನಿಯಂತ್ರಣದ ಅನಿವಾರ್ಯತೆಯನ್ನು ತಿಳಿಸಿತು. ಇದರ ಪರಿಣಾಮವಾಗಿ ೨೦೦೦ನೇ ಇಸವಿಗೆ ಜನಸಂಖ್ಯೆ ಏರಿಕೆ ಪ್ರಮಾಣ ಶೇ.೨೫ಕ್ಕೆ ಇಳಿಯಿತು. ಮುಂದೆ ೨೦೧೫ರಿಂದೀಚೆಗೆ ಶೇ. ೨೦ಕ್ಕಿಂತಲೂ ಕೆಳಗೆ ಇಳಿದು ೨೦೨೦ ರಲ್ಲಿ ಶೇ.೧೭.೪ ಜನಸಂಖ್ಯೆ ಪ್ರಗತಿ ದಾಖಲಾಗಿದೆ.

ಹಾದಿ ಬೀದಿಗಳಲ್ಲಿ ಜಾಗೃತಿ

ಮನೆಗೊಂದು ಮಗು ಊರಿಗೊಂದು ವನ, ನಾವಿಬ್ಬರು ನಮಗಿಬ್ಬರು, ಆರತಿಗೊಬ್ಬ ಕೀರ್ತಿಗೊಬ್ಬಳು, ಪುಟ್ಟ ಕುಟುಂಬ ಸುಖೀ ಕುಟುಂಬ ಹೀಗೆ ನಾನಾ ಬಗೆಯ ಜಾಗೃತಿ ಸಂದೇಶಗಳನ್ನು ಸರ್ಕಾರ ಹಳ್ಳಿ ಹಳ್ಳಿಗಳಲ್ಲಿಯೂ ಪ್ರಚಾರ ಮಾಡಿತು. ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚು ಮಾಡಿ ಹುಟ್ಟಿದ ಮಕ್ಕಳಲ್ಲಿ ಬಹುಪಾಲು ಮಕ್ಕಳು ಬದುಕುಳಿಯುವಂತೆ ನೋಡಿಕೊಳ್ಳಲಾಯಿತು. ಪೌಷ್ಠಿಕ ಆಹಾರ ವಿತರಣೆ ಮಾಡಿ ಭವಿಷ್ಯದಲ್ಲಿ ಆರೋಗ್ಯವಂತ ಯುವ ಸಮುದಾಯ ಸೃಷ್ಟಿಯಾಗುವಂತೆ ಎಲ್ಲ ಸರ್ಕಾರಗಳೂ ನೋಡಿಕೊಂಡವು ಇದೆಲ್ಲದರ ಪರಿಣಾಮ ದೇಶ ಮಾನವ ಸಂಪನ್ಮೂಲಕ ಕೇಂದ್ರವಾಯಿತು.

ಜನಸಂಖ್ಯಾ ನಿಯಂತ್ರಣ ಯಶಕ್ಕೆ ಕಾರಣ

* ಯುವ ಜನತೆಯಲ್ಲಿ ಅರಿವು

* ಬಾಲ್ಯ ವಿವಾಹ ನಿಷೇಧ

* ಆರೋಗ್ಯ ಕ್ಷೇತ್ರದ ಸುಧಾರಣೆ

* ವಿದ್ಯಾರ್ಥಿ ಮಟ್ಟದಲ್ಲಿಯೇ ಜಾಗೃತಿ

* ರಾಜ್ಯಗಳ ಸಮರ್ಪಕ ಕಾರ್ಯ ನಿರ್ವಹಣೆ

 

andolanait

Recent Posts

ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು: ಶಾಸಕ ಶ್ರೀವತ್ಸ ಆಗ್ರಹ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ದಾಖಲೆ ಪರಿಶೀಲನೆಯ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಈ ಕೇಸನ್ನು ಸಿಬಿಐ ತನಿಖೆಗೆ…

46 mins ago

ಮುಡಾ ಪ್ರಕರಣ ಸಿವಿಲ್ ಮ್ಯಾಟ್ರೂ ಎಂದ ಗೃಹ ಸಚಿವ ಜಿ.ಪರಮೇಶ್ವರ್

ತುಮಕೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಈ ವಿಚಾರ…

1 hour ago

ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲು

ವಿಜಯಪುರ: ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್‌ ಅಹಮದ್‌ ಖಾನ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಬಿಜೆಪಿ…

2 hours ago

ಮುಡಾ ಕಚೇರಿಯಲ್ಲಿ ಇಂದು ಕೂಡ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಇಂದು ಕೂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್‌ ಹಾಕಲಾಗಿದೆ.…

2 hours ago

ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮೈಸೂರು: ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ನಾಗೇಂದ್ರ ಎಂಬುವವರು…

2 hours ago

ಕಪಿಲಾ ನದಿಗೆ ಮತ್ತೊಂದು ಸೇತುವೆ

ನಂಜನಗೂಡು: ವರುಣ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸಂಪರ್ಕಿಸಲು ಕಪಿಲಾ ನದಿಗೆ ಮತ್ತೊಂದು ಸೇತುವೆ ಮಂಜೂರಾಗಿದೆ. ತಾಲ್ಲೂಕಿನ ನಂಜನಗೂಡು-ಹುಲ್ಲಹಳ್ಳಿ…

3 hours ago