ಮಗು ಅಳುತ್ತಿದೆ ಎಂದರೆ ಮೊಬೈಲ್ ಕೊಡು ಎನ್ನುವ ಕಾಲಕ್ಕೆ ಬಂದು ಮುಟ್ಟಿದ್ದೇವೆ. ಎಳೆಯ ಮಕ್ಕಳಿಂದ ಮೊದಲ್ಗೊಂಡು ಪ್ರೌಢ ವಯಸ್ಕರ ವರೆಗೂ ಮೊಬೈಲ್ ಬೇಕೇ ಬೇಕು. ಆದರೆ ಇಂತಹ ಮಕ್ಕಳ ಕಣ್ಣಿನ ಪಾಲಿಗೆ ಅತಿಯಾದ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್‌ಗಳ ಬಳಕೆ ತೊಂದರೆ ತಂದೊಡ್ಡಬಹುದು.
ಹೆಚ್ಚಿನ ಸಮಯ ಮೊಬೈಲ್ ಸೇರಿ ಇತರ ಉಪಕರಣಗಳ ಪರದೆಗಳನ್ನು ವೀಕ್ಷಣೆ ಮಾಡುವುದರಿಂದ ಕಣ್ಣಿನ ರೆಟಿನಾ ಮೇಲೆ ಕೆಟ್ಟ ಪರಿಣಾಮ ಉಂಟಗುತ್ತದೆ. ಇದು ಮುಂದೆ ದೃಷ್ಟಿ ದೋಷಕ್ಕೆ ಎಡೆಮಾಡಿಕೊಡುವುದು ಖಚಿತ. ಇತ್ತೀಚಿನ ಅಧ್ಯಯನದ ಪ್ರಕಾರ ಶೇ.೩೦ರಿಂದ ೪೦ ರಷ್ಟು ಮಕ್ಕಳು ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹಾಗೆಂದು ಮಕ್ಕಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬೆಸೆದುಕೊಳ್ಳುವಂತೆ ಮಾಡದೇ ಇರಲು ಸಾಧ್ಯವಿಲ್ಲ. ಹೀಗಾಗಿ ಕೆಲವಾರು ಅಂಶಗಳ ಪಾಲನೆ ಮಾಡುವುದರಿಂದ ಕಣ್ಣಿನ ಆರೋಗ್ಯದ ಕಡೆಗೂ ಗಮನ ನೀಡಬಹುದು.
* ದೀರ್ಘ ಕಾಲ ಡಿಜಿಟಲ್ ಪರದೆಗಳನ್ನು ನೋಡುವುದನ್ನು ತಪ್ಪಿಸಿ ಹೊರಗಿನ ಹಸಿರನ್ನು ನೋಡಲು ಮಕ್ಕಳನ್ನು ಪ್ರೋತ್ಸಾಹಿಸಬೇಕು.
* ಮಕ್ಕಳು ಪದೇ ಪದೆ ಕಣ್ಣುಜ್ಜದಂತೆ ಎಚ್ಚರ ವಹಿಸಿ, ಪ್ರತಿ ೨೦ ನಿಮಿಷಗಳಿಗೊಮ್ಮೆ ಮಕ್ಕಳ ಕಣ್ಣುಗಳಿಗೆ ವಿರಾಮ ನೀಡುವಂತೆ ಮಾಡಿ.
* ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟಿವಿ ಬಳಸುತ್ತಿದ್ದರೆ ಪರದೆಯಿಂದ ಮಕ್ಕಳು ಕನಿಷ್ಠ ೩೩ ಸೆ.ಮೀ ದೂರ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ.
* ಏನಾದರೂ ತೊಂದರೆ ಉಂಟಾಗುತ್ತಿದೆ ಎನ್ನಿಸಿದರೆ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳನ್ನು ನೇತ್ರ ವೈದ್ಯರ ಬಳಿ ಕರೆದೊ್ಂದುು ತಪಾಸಣೆ ಮಾಡಿಸಿ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…