ಯುವಜನರಿಗೆ ಎಚ್‌ಐವಿ ಬಗ್ಗೆ ಅರಿವು, ಸುರಕ್ಷಿತ ಲೈಂಗಿಕತೆ ಕುರಿತು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಪರಿಣಾಮ ಮೈಸೂರು ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆ. ಎರಡು-ಮೂರು ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗಲಿದೆ.
ಹತ್ತು ವರ್ಷಗಳ ಸರಾಸರಿ ಪ್ರಮಾಣ ನೋಡಿದರೆ ಸೋಂಕು ಪ್ರಕರಣಗಳು ೫೦೦ರ ಒಳಗೆ ಬಂದಿರುವುದು ಸಂತಸದ ಸಮಾಚಾರ. ಬೆಳಗಾವಿ, ಧಾರವಾಡ, ವಿಜಯಪುರ, ಚಿತ್ರದುರ್ಗ, ರಾಯಚೂರು, ಗುಲ್ಬರ್ಗಾ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಅತಿ ಹೆಚ್ಚು ಎಚ್‌ಐವಿ ಫ್ರಿವೆಲೆನ್ಸ್ ಗಳಿದ್ದು, ಮೈಸೂರಿನಲ್ಲಿ ಸೋಂಕಿತರ ಪ್ರಮಾಣ ತುಂಬಾ ಕಡಿಮೆ ಇದೆ. ಜಿಲ್ಲೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ೯೧,೯೫೩ ಸಾಮಾನ್ಯ ಜನರನ್ನು ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ೫೨೧ ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದೇ ವೇಳೆ ೪೫,೬೩೬ ಗರ್ಭಿಣಿಯರನ್ನು ಪರೀಕ್ಷಿಸಿದ್ದು, ಅದರಲ್ಲಿ ೨೦ ಮಂದಿಗೆ ಸೋಂಕು ಇರುವುದು ದೃಢವಾಗಿತ್ತು.
೨೦೨೧-೨೨ನೇ ಸಾಲಿನಲ್ಲಿ ೧,೩೧,೯೬೪ ಸಾಮಾನ್ಯ ಜನರನ್ನು ಪರೀಕ್ಷಿಸಿದ್ದು, ಅದರಲ್ಲಿ ೭೨೨ ಮಂದಿಗೆ, ೫೦,೧೦೩ ಗರ್ಭಿಣಿಯರಲ್ಲಿ ೨೪ಮಂದಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ೨೦೨೨-೨೩ನೇ ಸಾಲಿನ ಈತನಕ ೧,೩೮,೬೭೬ ಮಂದಿಯನ್ನು ತಪಾಸಣೆ ಮಾಡಿದ್ದು, ೪೫೩ ಮಂದಿಗೆ ಸೋಂಕು ಇರುವುದು ದೃಢವಾಗಿದೆ.
ಮಕ್ಕಳಲ್ಲಿ ಪತ್ತೆಯಾಗದ ಸೋಂಕು
ಮೈಸೂರಿನಲ್ಲಿ ಎಲ್ಲ ಐಸಿಟಿಸಿ ಕೇಂದ್ರಗಳಲ್ಲಿಯೂ ಡಿಎನ್‌ಎ, ಪಿಸಿಆರ್ ಪರೀಕ್ಷಾ ಕೇಂದ್ರಗಳಿದ್ದು, ಇಲ್ಲಿ ಮಾರ್ಚ್ ೨೦೧೦ರಿಂದ ೨೦೨೨ ಅಕ್ಟೋಬರ್ ತನಕ ಎಚ್‌ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ ೪೭ ಮಕ್ಕಳಿಗೆ ಸೋಂಕು ತಗುಲಿರುವುದು ಕಂಡುಬಂದಿತ್ತು. ೨೦೨೨-೨೩ರಲ್ಲಿ ಒಟ್ಟು ಮಕ್ಕಳಿಗೆ ೧೧೪ ಮಕ್ಕಳಿಗೆ ಪರೀಕ್ಷೆ ನಡೆಸಿದ್ದು, ಯಾವ ಮಕ್ಕಳಲ್ಲಿಯೂ ಎಚ್‌ಐವಿ ಸೋಂಕು ಪತ್ತೆಯಾಗಿಲ್ಲ. ಇದು ಎಚ್‌ಐವಿ ನಿಯಂತ್ರಣದಲ್ಲಿ ಹೊಸ ಮೈಲುಗಲ್ಲಿ ಎನ್ನಬಹುದು.
ಉಚಿತ ರಕ್ತನಿಧಿ ಕೇಂದ್ರಗಳು
ಮೈಸೂರಿನಲ್ಲಿ ಲೈಂಗಿಕ ವೃತ್ತಿನಿರತ ಮಹಿಳೆಯರು ಮತ್ತು ವಲಸೆಗಾರರಿಗೆ ಎಚ್‌ಐವಿ ಪರೀಕ್ಷಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ಮೂರು ಟಿಐ ಕೆಲಸಮಾಡುತ್ತಿದ್ದು, ಅಶೋದಯ ಸಂಸ್ಥೆಯು ಎಫ್‌ಎಸ್‌ಡಬ್ಲ್ಯೂ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧೧ ರಕ್ತನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಕೆ.ಆರ್.ಆಸ್ಪತ್ರೆ, ಜೀವಧಾರ, ಜೆಎಸ್ ಎಸ್, ರೋಟರಿ ಚಂದ್ರಕಲಾ, ಕಾಮಾಕ್ಷಿ, ಅಪೋಲೋ, ಸಂತ ಜೋಸೆಫ್, ಕಾವೇರಿ, ಜಯದೇವ, ನಾರಾಯಣ ಹೃದಯಾಲಯ ಆಸ್ಪತ್ರೆಗಳಲ್ಲಿ ಸುರಕ್ಷಿತ ರಕ್ತದಾನದ ಬಗ್ಗೆ ಒತ್ತು ನೀಡುತ್ತಿದ್ದು, ಎಚ್‌ಐವಿ ಸೋಂಕಿತರಿಗೆ ಉಚಿತವಾಗಿ ರಕ್ತವನ್ನು ನೀಡಲಾಗುತ್ತದೆ.
ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…
ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’…
ಶೆಡ್ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…
ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…
ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…