ವೀರ್ಯವು ಲೈಂಗಿಕಾಂಗಗಳಿಂದ ಹೊರಚೆಲ್ಲಲ್ಪಡುತ್ತದೆ. ಈ ವೇಳೆ ಸ್ನಾಯುಗಳು ವಿಕಸನ, ಸಂಕುಚಿತ ಕ್ರಿಯೆಗೆ ಒಳಪಟ್ಟು ಶಕ್ತಿಯು ವ್ಯಯವಾಗುತ್ತದೆ. ಈ ವೇಳೆ ಸೊಂಟದ ಸುತ್ತಲೂ ನಿಶ್ಯಕ್ತಿಯ ಅನುಭವ ಆಗುವುದು ಸ್ವಾಭಾವಿಕ. ಇದು ವೀರ್ಯನಾಶದಿಂದ ಆಗುತ್ತಿದೆ ಎಂದು ತಿಳಿಯುವುದು ಮೂಢನಂಬಿಕೆ. ಕೆಲವರಲ್ಲಿ ಕೆಲವೊಮ್ಮೆ ಮೂತ್ರ ವಿಸರ್ಜನೆ ಸಮಯದಲ್ಲೇ ಅಥವಾ ಕೊನೆಯಲ್ಲಿ ಮಜ್ಜಿಗೆ ಬಣ್ಣದಂಥ ಮೂತ್ರ ಅಥವಾ ಲೋಳೆಯಂತಹ ವಿಸರ್ಜನೆಯಾಗಬಹುದು. ಆಗ ಮೂತ್ರದೊಂದಿಗೆ ವೀರ್ಯ ವಿಸರ್ಜನೆಯಾಗುತ್ತಿದೆ ಎಂದು ಬಹಳಷ್ಟು ಮಂದಿ ತಪ್ಪು ತಿಳಿದುಕೊಂಡಿರುತ್ತಾರೆ. ಲೈಂಗಿಕಾಂಗಳಲ್ಲಿರುವ ಯುರೇತ್ರಲ್ ಮತ್ತು ಪ್ರಾನ್ಟೇಟ್ ಗ್ರಂಥಿಗಳು ಸ್ರವಿಸುವ ರಸರಗಳು ಒಮ್ಮೊಮ್ಮೆ ಮೂತ್ರದ ಜೊತೆಗೆ ಬೆರಕೆಯಾವುದೇ ಮಜ್ಜಿಗೆ ಬಣ್ಣದ ಮೂತ್ರ ವಿಸರ್ಜನೆಗೆ ಕಾರಣ. ಹಾಗಾಗಿ ಯುವಕರು ಮೂತ್ರದ ಬಣ್ಣದ ವ್ಯತ್ಯಾಸಕ್ಕೂ ವೀರ್ಯನಾಶಕ್ಕೂ ಸಂಬಂಧವಿದೆ ಎಂದುಕೊಳ್ಳಬಾರದು.
ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೊರ ಚೆಲ್ಲುವ ವೀರ್ಯದ ಬಣ್ಣ, ಪ್ರಮಾಣ, ಸಾಂದ್ರತೆಯು ಲೈಂಗಿಕ ಪ್ರಚೋದನೆಯ ತೀವ್ರತೆ, ವಯಸ್ಸು, ಹಾರ್ಮೋನ್‌ಗಳ ಮಟ್ಟ, ಸಂಗಾತಿಯೊಡನೆ ಇರುವ ಸಾಮರಸ್ಯ ಮತ್ತು ಪುರುಷನ ಆರೋಗ್ಯವನ್ನು ಅವಲಂಬಿಸಿರುತ್ತದೆ. ವಯಸ್ಸಾದಂತೆ ವೀರ್ಯದ ಬಣ್ಣವು ತಿಳಿ ಹಳದಿ ಬಣ್ಣಕ್ಕೆ ತಿರುಗಬಹುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ ನಿಮಿತ್ತ ಹಾಗೂ ವಯಸ್ಸು ಹೆಚ್ಚಾದಂತೆ ವೀರ್ಯದ ಪ್ರಮಾಣವೂ ಕಡಿಮೆಯಾಗಬಹುದು. ಯುವಕರಲ್ಲಿ ವೀರ್ಯ ಸ್ಖಲನ, ವೀರ್ಯದ ಪ್ರಮಾಣದಲ್ಲಿ ವ್ಯತ್ಯಾಸವಾದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಮದುವೆಯಾಗಿ ಮಕ್ಕಳಾಗಿದ್ದರೆ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಬೆಂಗಳೂರು: ರಾಜ್ಯದಲ್ಲಿನ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ…
ಬಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತ ಸಂಭವಿಸುವ ಕೇವಲ 23 ನಿಮಿಷಗಳ ಮೊದಲು…
ಬೆಂಗಳೂರು: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.…
ನವದೆಹಲಿ: ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾಗಿದ್ದಾರೆ. ಅಜಿತ್…
ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…