ನೀವು ಕುಡಿಯುವ ನೀರಿನಲ್ಲಿದೆ ನಿಮ್ಮ ಆಯಸ್ಸು, ಜೀವಜಲ ದಿನಕ್ಕೆಷ್ಟು ಬೇಕು ಗೊತ್ತಾ…?
ಸಂಶೋಧಕರು ದೀರ್ಘಕಾಲ ಬದುಕುವ ಮಾರ್ಗಗಳನ್ನು ಸಂಶೋಧಿಸುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಬಹುಬೇಗನೆ ವಯಸ್ಸಾಗಲು, ಆಯಸ್ಸು ಕಡಿಮೆಯಾಗಲು ಪ್ರಮುಖ ಕಾರಣ ಡಿಹೈಡ್ರೇಶನ್. ಸರಿಯಾಗಿ ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಚೆನ್ನಾಗಿ ನೀರು ಕುಡಿದು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವವರು ನೀರು ಕುಡಿಯದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆನ್ನುತ್ತದೆ ಸಂಶೋಧನೆ.
ನಿರ್ಜಲೀಕರಣವು ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹೈಡ್ರೇಶನ್ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸತತ ಮೂರು ದಶಕಗಳ ಕಾಲ ಸುಮಾರು 10,000ಕ್ಕೂ ಹೆಚ್ಚು ಜನರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ನೀರಿನ ಸೇವನೆ ಮತ್ತು ಡಿಹೈಡ್ರೇಶನ್ ಅನ್ನು ನಿರ್ಧರಿಸಲು ಸಂಶೋಧಕರು ಸೀರಮ್ ಸೋಡಿಯಂ ಪರೀಕ್ಷೆಯನ್ನು ಬಳಸಿದ್ದರು. ರಕ್ತದಲ್ಲಿ ಎಷ್ಟು ಸೋಡಿಯಂ ಇದೆ ಎಂಬುದನ್ನು ಇದು ಪರಿಶೀಲಿಸುತ್ತದೆ. ವ್ಯಕ್ತಿಯ ರಕ್ತದಲ್ಲಿ ಸೋಡಿಯಂನ ಸಾಮಾನ್ಯ ಮಟ್ಟವು ಪ್ರತಿ ಲೀಟರ್‌ಗೆ 135-145 ಎಂಎಂಒಎಲ್ ನಡುವೆ ಇರಬೇಕು.
ಸಂಶೋಧನೆಯ ಫಲಿತಾಂಶ: ಪ್ರತಿ ಲೀಟರ್‌ಗೆ 144 ಎಂಎಂಒಎಲ್‌ಗಿಂತ ಹೆಚ್ಚಿನ ಸೋಡಿಯಂ ಮಟ್ಟವು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧನೆಯ ಪ್ರಕಾರ ದೀರ್ಘಕಾಲದ ಡಿಹೈಡ್ರೇಶನ್ ನಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.
ದಿನಕ್ಕೆ ಎಷ್ಟು ನೀರು ಕುಡಿಯಬೇಕು?
ತಜ್ಞರು ದಿನಕ್ಕೆ ಕನಿಷ್ಟ ಆರರಿಂದ ಎಂಟು ಗ್ಲಾಸ್ ನೀರನ್ನು ಕುಡಿಯಲು ಶಿಫಾರ ಮಾಡುತ್ತಾರೆ. ಪುರುಷರು 15 ಗ್ಲಾಸ್ ಮತ್ತು ಮಹಿಳೆಯರು 11.5 ಗ್ಲಾಸ್ ನೀರು ಕುಡಿಯಬೇಕೆಂದು ಶಿಫಾರಸು ಮಾಡುತ್ತಾರೆ. ಹೈಡ್ರೇಟೆಡ್ ಆಗಿರಲು ದಿನವಿಡೀ ಸಾಕಷ್ಟು ನೀರು ಮತ್ತು ಹಣ್ಣಿನ ರಸ ಕುಡಿಯಲು ಪ್ರಯತ್ನಿಸಿ.
ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…
ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’…
ಶೆಡ್ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…
ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…
ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…