ರಮ್ಯ ಅರವಿಂದ್

ಅನಾದಿಕಾಲದಿಂದಲೂ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳ ಮೂಲಕವೇ ಚಿಕಿತ್ಸೆಯನ್ನು ನೀಡುತ್ತಾ ಬರಲಾಗಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ತನ್ನದೇ ಆದ ಮಹತ್ವ ಹೊಂದಿದೆ. ಅಂತಹ ಆಯುರ್ವೇದ ಅಂಶಗಳಲ್ಲಿರುವ ಗಿಡಮೂಲಿಕೆಗಳ ಪೈಕಿ ‘ ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲು’ ಕೂಡ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಸಸ್ಯವು ನಿಂಬೆಹಣ್ಣಿನ ಸುವಾಸನೆ ಬೀರುವುದರಿಂದ ಇದನ್ನು ನಿಂಬೆ ಹುಲ್ಲು’ ಎಂದು ಕರೆಯುತ್ತಾರೆ.

ಈ ನಿಂಬೆಹುಲ್ಲು ಸಸ್ಯದಿಂದ ಕಾಂತಿವರ್ಧಕಗಳು ಹಾಗೂ ಸೋಂಕು ನಿವಾರಕ ಔಷಧಿಗಳನ್ನು ತಯಾರಿಸಬಹುದಾಗಿದೆ. ಜೊತೆಗೆ ಇದೊಂದು ಆಹಾರ ಪದಾರ್ಥವೂ ಆಗಿದ್ದು, ವಿವಿಧ ಆಹಾರ ತಯಾರಿಕೆಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ಸಸ್ಯದಲ್ಲಿ ಔಷಧಿಯ ಗುಣವಿರುವುದು ವಿಶೇಷವಾಗಿದ್ದು, ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಮನುಷ್ಯನಿಗೆ ಹೆಚ್ಚು ಪರಿಣಾಮಕಾರಿಯಾಗಿರುವ ಈ ಸಸ್ಯವನ್ನು ನಾವು ನಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ದೊಡ್ಡ ಪಾಟ್‌ಗಳಲ್ಲಿ ಬೆಳೆಸಿಕೊಂಡು ಆಗಾಗ್ಗೆ ಬಳಸುವುದು ನಮ್ಮ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ.

ಇತ್ತೀಚಿನ ಯುವಸಮೂಹ ಸಂಜೆಯಾಗುತ್ತಲೇ ಜಂಕ್‌ ಫುಡ್, ಸ್ಟಾಕ್ಸ್‌ಗಳ ಸೇವನೆಗೆ ಜೋತುಬಿದ್ದು, ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆ ಮಾಡಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇಂತಹ ಅನವಶ್ಯಕ ಕೊಬ್ಬಿನಂಶವನ್ನು ಕರಗಿಸಲು ಈ ನಿಂಬೆಹುಲ್ಲು ಹೆಚ್ಚು ಉಪಯೋಗವಾಗಿದೆ. ಚಹ ಅಥವಾ ಕಷಾಯದ ರೂಪದಲ್ಲಿ ಮಾಡಿಕೊಂಡು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಅಲ್ಲದೆ ಅಜೀರ್ಣ ಹಾಗೂ ಚರ್ಮ ಸಂಬಂಧಿತ ಸಮಸ್ಯೆಗಳನ್ನೂ ನಿವಾರಿಸಿ ಕೊಳ್ಳಲು ಇದು ಹೇಳಿ ಮಾಡಿಸಿದ ಮನೆ ಮದ್ದು.

ನಿಂಬೆಹುಲ್ಲಿನ ಚಹಾ: ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿಕೊಂಡು ಕುದಿಸಿದ ನೀರಿಗೆ ಸಣ್ಣಗೆ ಕತ್ತರಿಸಿಕೊಂಡ ನಿಂಬೆ ಹುಲ್ಲನ್ನು ಹಾಕಿಕೊಳ್ಳಬೇಕು. ಐದು ನಿಮಿಷಗಳ ಕಾಲ ಹಾಗೆಯೇ ಅದನ್ನು ಮುಚ್ಚಿಟ್ಟು ನಂತರ ಸೋಸಿ ಕೊಂಡು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಲೆಮನ್ ಗ್ರಾಸ್ ತಂಬುಳಿ: ಲೆಮನ್ ಗ್ರಾಸನ್ನು ಸಣ್ಣದಾಗಿ ಕತ್ತರಿಸಿ ಅದರ ಜೊತೆ ತಾಜಾ ತೆಂಗಿನ ತುರಿ, ಸ್ವಲ್ಪ ಜೀರಿಗೆ, ಒಂದೆರಡು ಹಸಿಮೆಣಸಿನಕಾಯಿ, ಸ್ವಲ್ಪ ನೀರನ್ನು ಸೇರಿಸಿಚೆನ್ನಾಗಿ ರುಬ್ಬಿಕೊಳ್ಳುವುದು ನಂತರ ಅದನ್ನು ಒಂದು ಪಾತ್ರೆಗೆ ಸೋಸಿಕೊಂಡು ಆ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮಜ್ಜಿಗೆ ಅಥವಾ ಮೊಸರನ್ನು ಸೇರಿಸಿ ಬಳಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಸಮತೋಲನವಾಗಿಡಲು ಸಹಾಯಕವಾಗಿದೆ.
ಇನ್ನು ಈ ನಿಂಬೆಹುಲ್ಲು ದಂತದ ಆರೋಗ್ಯಕ್ಕೂ ಹೆಚ್ಚು ಪರಿಣಾಮಕಾರಿ. ನಿಂಬೆಹುಲ್ಲನ್ನು ಬಾಯಿಗೆ ಹಾಕಿ ಜಗಿದರೆ ಬ್ಯಾಕ್ಟಿರಿಯಾ ಹಾಗೂ ಕ್ಯಾವಿಟಿಸ್ ಸಮಸ್ಯೆಯಿಂದ ದೂರವಿರಬಹುದು ಈ ಕುರಿತು ಫುಡ್ ಕೆಮಿಸ್ಟಿ ಜರ್ನಲ್‌ನಲ್ಲಿಯೂ ವರದಿ ಮಾಡಲಾಗಿದೆ. ಇಂತಹ ಬಹುಪಯೋಗಿ ನಿಂಬೆಹುಲ್ಲನ್ನು ಎಲ್ಲಿ ಸಿಕ್ಕಿದರು ಬಿಡದೆ ತಂದು ನಿಮ್ಮ ಮನೆಯ ತೋಟದಲ್ಲಿ ಬೆಳೆಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

abhigna.ramya@gmail.com

andolanait

Share
Published by
andolanait

Recent Posts

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

5 mins ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

7 mins ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

9 mins ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

10 mins ago

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ  ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…

17 mins ago

ಚಾ.ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಯೋಗೇಶ್ ನೇಮಕ

ರಾಜೇಶ್ ಬೆಂಡರವಾಡಿ ಪ್ರಥಮ ಬಾರಿಗೆ ಇತರೆ ಹಿಂದುಳಿದ ವರ್ಗಕ್ಕೆ ಒಲಿದ ಡಿಸಿಸಿ ಅಧ್ಯಕ್ಷ ಸ್ಥಾನ  ಚಾಮರಾಜನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…

24 mins ago