ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಯಳದಳ್ಳಿಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ. ಅವನ ಹೆಸರು ಶಿವಕುಮಾರ್. ಈ ಹೆಸರು ಹೇಳಿದರೆ ಯಾರಿರಬಹುದು ಎನ್ನುವ ಪ್ರಶ್ನೆ ಹುಟ್ಟುತ್ತದೆ. ಆದರೆ ಸತೀಶ್ ನೀನಾಸಂ ಎಂದರೆ ತಟ್ಟನೆ ಅವರ ನಟನೆಯ ಶೈಲಿ ಕಣ್ಣಮುಂದೆ ಬಂದು ನಿಲ್ಲುತ್ತದೆ.
ಓದಿನಲ್ಲಿ ಆಸಕ್ತಿ ಇಲ್ಲದ ಸತೀಶ್ ಮನೆ, ಮಠವನ್ನೆಲ್ಲಾ ಬಿಟ್ಟು ಸಿನಿಮಾ ಆಸಕ್ತಿಯಿಂದ ಬೆಂಗಳೂರಿಗೆ ಬಂದವರು. ಮೊದಲಿಗೇ ಥಿಯೇಟರ್‌ನಲ್ಲಿಯೇ ಕೆಲಸ, ಟೀ ಅಂಗಡಿಯಲ್ಲಿ ಡ್ಯೂಟಿ, ಬಸ್‌ಗಳ ಸರ್ವೀಸ್, ಡೆಕೋರೇಷನ್ ಕೆಲಸ ಹೀಗೆ ನೈಜ ಬದುಕಿನಲ್ಲಿ ಹಲವು ಪಾತ್ರಗಳನ್ನು ಮಾಡುತ್ತಾ ಬಂದ ಸತೀಶ್ ನಂತರ ಸೇರಿದ್ದು ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ). ಅದಾದ ಮೇಲೆ ಅವರು ಕೇವಲ ಸತೀಶ್ ಆಗಿ ಉಳಿಯದೇ ಸತೀಶ್ ನೀನಾಸಂ ಆದರು.
ಮಾದೇಶ, ಮನಸಾರೆ, ಲೈಫ್ ಇಷ್ಟೇನೇ, ಪಂಚರಂಗಿ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ ಇವರು ನಂತರ ಲೂಸಿಯಾ ಮೂಲಕ ನಾಯಕನಾಗಿ ಎಂಟ್ರಿಕೊಟ್ಟರು. ಅದಾದ ಮೇಲೆ ಅವರು ಮಾಡಿದ ಪಾತ್ರಗಳೆಲ್ಲವೂ ಕನ್ನಡಿಗರೆಲ್ಲರಿಗೂ ಚಿರಪರಿಚಿತ. ರಂಗಭೂಮಿ ಹಿನ್ನೆಲೆಯಿಂದ ಬಂದು ತಮ್ಮ ವಿಶೇಷ ಮ್ಯಾನರಿಸಂನಿಂದ ಹೆಸರಾದ ಸತೀಶ್ ನೀನಾಸಂ ಅಯೋಗ್ಯ, ಡ್ರಾಮಾ, ಲವ್ ಇನ್ ಮಂಡ್ಯ ಸೇರಿ ಹಲವು ಟರ್ನಿಂಗ್ ಪಾಯಿಂಟ್‌ಗಳಲ್ಲಿ ಗೆದ್ದವರು.
ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…
ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…
ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…