ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾವಳಿ ತೀವ್ರಗೊಂಡಿದೆ. ಕಳೆದ 4 ವರ್ಷದಲ್ಲಿ 35 ಮಂದಿ ಆನ್ ಲೈನ್ ಬೆಟ್ಟಿಂಗ್ ದಂಧೆಗೆ ಬಲಿಯಾಗಿದ್ದಾರೆ. ಆತಂಕಕಾರಿ ವಿಚಾರ ಏನಂದ್ರೆ ಮಕ್ಕಳು, ವಿದ್ಯಾರ್ಥಿಗಳು ಕೂಡಾ ಆನ್ ಲೈನ್ ಬೆಟ್ಟಿಂಗ್ ನಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಕ್ರಿಕೆಟ್, ಫುಟ್ ಬಾಲ್, ಟಿನ್ನಿಸ್, ಕುದುರೆ ರೇಸಿಂಗ್ ಮತ್ತು ಇ- ಸ್ಫೋಟ್ಸ್‌ಗಳಲ್ಲಿ ಹಣ ಹೂಡಲಾಗುತ್ತಿದೆ. ಅಲ್ಲದೆ, ಕ್ಯಾಸಿನೊ ಆಟಗಳಾದ ಸ್ಲಾಟ್ ಮಷೀನ್ಗಳು, ಬ್ಲ್ಯಾಕ್ ಜಾಕ್ ಮತ್ತು ಲೈವ್ ಕ್ಯಾಸಿನೋಗಳು ಇವೆ. ಇಷ್ಟೇ ಅಲ್ಲದೆ, ಫ್ಯಾಂಟಸಿ ಗೇಮ್ಸ್ ಡ್ರೀಮ್ 11, ಎಂಪಿಎಲ್ ನಂತಹ ಪ್ಲಾಟ್ ಫಾರ್ಮ್‍ಗಳು ಇವೆ. ಜೊತೆಗೆ ರಮ್ಮಿ, ಲಾಟರಿ ಆಟಗಳು ಇವೆ.
ಕಳೆದ ಐದು ವರ್ಷಗಳಲ್ಲಿ ಒಟ್ಟು 468 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 4 ವಿದ್ಯಾರ್ಥಿಗಳು ಮತ್ತು ಮಕ್ಕಳು ಆನ್ ಲೈನ್ ಬೆಟ್ಟಿಂಗ್ ಗೆ ಬಲಿಯಾದರೆ, 31 ಇತರರು ಪ್ರಾಣಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಆನ್‍ಲೈನ್ ಗೇಮ್‍ನಿಂದ ವಿದ್ಯಾರ್ಥಿಗಳು ಯುವಕರು, ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಪ್ರೋಗ್ರಾಮ್ ಅನ್ನು ನಡೆಸಲಾಗುತ್ತಿದೆ. ಆನ್‍ಲೈನ್ ಗೇಮ್ಸ್‌ನಿಂದ ಆಗುವ ದುಷ್ಪರಿಣಾಮದ ಬಗ್ಗೆ ಉಪನ್ಯಾಸ, ದೃಶ್ಯರೂಪಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಬೀಟ್‍ಗಳಲ್ಲಿ ಯುವಕರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಯಾವುದೇ ತರಹದ ಆನ್‍ಲೈನ್ ಗೇಮ್ಸ್ ಮತ್ತು ಆನ್‍ಲೈನ್ ಜೂಜುಗಳ ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೆ ಆನ್ ಲೈನ್ ಗೇಮ್ಸ್ ಮತ್ತು ಜೂಜಿನಲ್ಲಿ ತೊಡಗಿಸಿಕೊಂಡವರ ಮೇಲೆ ದಾಳಿ ನಡೆಸಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ.
ನವದೆಹಲಿ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಹಿನ್ನಡೆಯಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ನ್ಯಾಯಾಲಯ, ಎರಡು…
ಬ್ರೇಕ್ ಬೀಳಬೇಕು ಅತಿಯಾಸೆಗೆ! ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಇನ್ನೆಲ್ಲಿಗೆ ಹೋಗಬೇಕೆಂಬುದು ತಿಳಿಯದೆ ವಿಲವಿಲ ಒzಡಿತು ಕಾಡಾನೆ ಪಡೆ!ಹೊಸದೇನಲ್ಲ ಮಾನವ-ವನ್ಯಜೀವಿಗಳ ಸಂಘರ್ಷ! ಬೆಳೆದಂತೆಲ್ಲ…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊದಲ ಎರಡು ಸೀಟುಗಳಲ್ಲಿ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ಹಾಗೂ…
ನವೆಂಬರ್ ೨೬ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಕೇವಲ ಸರ್ಕಾರ, ರಾಜಕಾರಣಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸೀಮಿತವಾಗಬಾರದು. ಕಟ್ಟಕಡೆಯ…
ಗಿರಿಧರ ಗುಂಜಗೋಡು, ಐಟಿ ಉದ್ಯೋಗಿ ಮತ್ತು ಪ್ರವಾಸಿ ಲೇಖಕ ಅರಮನೆ ಸುತ್ತಮುತ್ತ ಖಾಸಗಿ ವಾಹನಗಳ ನಿಷೇಧವಿರಲಿ ಮೈಸೂರಿಗರಿಗೆ ಇಲ್ಲಿನ ಇತಿಹಾಸ,…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಕಾಂಬೋಡಿಯಾದಿಂದ ವಿಯಾಟ್ನಾಮ್‌ಗೆ ಸೈಕಲ್ ತುಳಿದ ಧೀರ ಮುಂಬೈಯ ವಿಕ್ರೋಲಿ ಎಂಬಲ್ಲಿನ ಶಿಜೊಯ್ ಜಾಕೋಬ್ ಹುಟ್ಟಿದಾಗ…