respect elder citizen
ವಯೋವೃದ್ಧ ತಂದೆ-ತಾಯಿಯನ್ನು ಮಕ್ಕಳೇ ವೃದ್ಧಾಶ್ರಮಕ್ಕೆ ಬಿಡುವುದು, ಮನೆಯಲ್ಲಿದ್ದರೂ ಕಡೆ ಗಣಿಸುವ, ಮಾತು ಮಾತಿಗೂ ಹಂಗಿಸುವ, ಹೀಯಾಳಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ.
ಮಕ್ಕಳ ಈ ರೀತಿಯ ಕಡೆಗಣನೆಯಿಂದ ಮಾನಸಿಕವಾಗಿ ಕುಗ್ಗುತ್ತಿರುವ ಹಿರಿಯ ನಾಗರಿಕರು ಮನೆಯವರಿಗೆ ಹೊರೆಯಾಗದಿರಲಿ ಎಂಬ ಕಾರಣಕ್ಕೆ ಇಳಿವಯಸ್ಸಿನಲ್ಲೂ ದುಡಿಯುತ್ತಿದ್ದಾರೆ. ಹೆಲ್ ಏಜ್ ಇಂಡಿಯಾ ಸಂಸ್ಥೆ ರಾಷ್ಟ್ರವ್ಯಾಪಿ ಕೈಗೊಂಡ ಸಂಶೋಧನಾ ವರದಿಯ ಪ್ರಕಾರ ‘ಬ್ರಿಡ್ಜ್ ದಿ ಗ್ಯಾಪ್: ಅಂಡರ್ ಸ್ಟ್ಯಾಂಡಿಗ್ ಎಲ್ಡರ್ ನೀಡ್ಸ್ (೨೦೨೨)’ ಪ್ರಕಾರ ಭಾರತೀಯ ಸಮಾಜದಲ್ಲಿ ಶೇ.೫೯ರಷ್ಟು ಹಿರಿಯರ ನಿಂದನೆ ಪ್ರಚಲಿತದಲ್ಲಿದೆ ಎಂದು ಹೇಳಲಾಗಿದೆ. ಈ ಪೈಕಿ ಶೇ.೪೬ರಷ್ಟು ಹಿರಿಯರು ಯಾವುದೇ ನಿಂದನೆ ಪರಿಹಾರ ಕಾರ್ಯ ವಿಧಾನದ ಬಗ್ಗೆ ತಿಳಿದಿಲ್ಲ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರಸ್ತುತ ೧೩೮ ಮಿಲಿಯನ್ ವಯೋವೃದ್ಧರಿದ್ದಾರೆ. ೨೦೧೯ ಮತ್ತು ೨೦೩೦ರ ನಡುವೆ ೬೦ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಸಂಖ್ಯೆಯು ಶೇ. ೩೮ರಷ್ಟಾಗುವ ನಿರೀಕ್ಷೆ ಇದೆ.
ಹಿರಿಯರ ಮೇಲಿನ ದೌರ್ಜನ್ಯ, ನಿರ್ಲಕ್ಷ್ಯ ಮತ್ತು ಶೋಷಣೆಯ ವಿರುದ್ಧ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ ೧೫ರಂದು ವಿಶ್ವ ಹಿರಿಯರ ಮೇಲಿನ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ವೃದ್ಧಾಪ್ಯವನ್ನು ಅನುಭವಿಸಲೇಬೇಕು. ಆದರೆ, ಮಕ್ಕಳಿಗೆ ತಮ್ಮ ತಂದೆ-ತಾಯಿಯರು ಹೇಗೆ ಆಸರೆಯಾಗಿರುತ್ತಾರೋ ಅದೇ ರೀತಿ ವಯಸ್ಸಾದ ವೇಳೆ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಮಕ್ಕಳ ಕರ್ತವ್ಯ ಕೂಡ ಆಗಿದೆ. ಆದರೆ, ಈಗಿನವರಿಗೆ ತಂದೆ-ತಾಯಿಗಳು ಇಳಿ ವಯಸ್ಸಿಗೆ ತಲುಪಿದ ಮೇಲೆ ಅವನ್ನು ನೋಡಿಕೊಳ್ಳುವುದೆಂದರೆ ಕಷ್ಟದ ಕೆಲಸ.
ಹಿರಿಯ ಜೀವಗಳನ್ನು ಕಂಡರೆ ಅಸಡ್ಡೆ, ಬುದ್ಧಿವಾದ ಹೇಳಿದರೂ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಅದಲ್ಲದೇ ಆಸ್ತಿಗಾಗಿ ಹಿರಿಯ ಜೀವಗಳನ್ನು ನಿಂದಿಸುವುದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವ ಎಷ್ಟೋ ಮಕ್ಕಳಿದ್ದಾರೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಹೀಗಾಗಿ ಹಿರಿಯರ ನಿಂದನೆಯ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಇತಿಹಾಸ ೨೦೧೧ರ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಮೂಲಕ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ಪ್ರತಿ ವರ್ಷ ಜೂನ್ ೧೫ರಂದು ಆಚರಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಯಿತು. ಈ ನಿರ್ಣಯಕ್ಕೆ ಸದಸ್ಯ ರಾಷ್ಟ್ರಗಳು, ಸಂಸ್ಥೆಗಳು ಹಿರಿಯರ ನಿಂದನೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆಯನ್ನು ಉತ್ತೇಜಿಸಲು ವಾರ್ಷಿಕವಾಗಿ ಈ ದಿನವನ್ನು ಆಚರಿಸಲು ಕರೆ ನೀಡಲಾಯಿತು.
ಅಂದಿನಿಂದ ವಿಶ್ವಸಂಸ್ಥೆಯಲ್ಲಿ ‘ಇಂಟರ್‌ನ್ಯಾಷನಲ್ ನೆಟ್‌ವರ್ಕ್ ಫರ್ ಪ್ರಿವೆನ್ಶನ್ ಆಫ್ ಎಲ್ಡರ್ ಅಬ್ಯೂಸ್’ ಮತ್ತು ‘ವಿಶ್ವ ಆರೋಗ್ಯ ಸಂಸ್ಥೆ’ ಜಂಟಿಯಾಗಿ ಜೂನ್ ೧೫ರಂದು ಈ ದಿನವನ್ನು ಆಚರಿಸಿಕೊಂಡು ಬರುತ್ತಿವೆ.
ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಮಹ್ವತ ಹಾಗೂ ಆಚರಣೆ ಹಿರಿಯರ ನಿಂದನೆ ಜಾಗೃತಿ ದಿನದ ಮುಖ್ಯ ಉದ್ದೇಶವೇ ಜಾಗತಿಕ ಮಟ್ಟದಲ್ಲಿ ವಯೋವೃದ್ಧರಿಗೆ ಮಾನಸಿಕವಾಗಿ ಹಾಗೂ ದೈಹಿಕವಾದ ಬೆಂಬಲವನ್ನು ನೀಡುವುದಾಗಿದೆ. ಈ ಇಳಿ ವಯಸ್ಸಿನಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಉತ್ತಮ ಚಿಕಿತ್ಸೆ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಹಾಗೂ ಅವರ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಅದರೊಂದಿಗೆ ನಿರ್ಲಕ್ಷ್ಯ ಅಥಬಾ ದುರ್ವರ್ತನೆಯನ್ನು ಅನುಭವಿಸಿದ ಹಿರಿಯ ನಾಗರಿಕರಿಗೆ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಹಲವಾರು ಸಮುದಾಯಗಳನ್ನು ಪ್ರೋತ್ಸಾಹಿಸುವ ಕೆಲಸಗಳು ನಡೆಯುತ್ತವೆ. ಈ ಮಹತ್ವದ ದಿನದಂದು ಸರ್ಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಮ್ಮೇಳನಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು, ಜಾಗೃತಿ ಅಭಿಯಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿವೆ.
“ಹಿರಿಯರ ಮೇಲಿನ ದೌರ್ಜನ್ಯವು ಸಂಕೀರ್ಣ ಮತ್ತು ಬಹುಮುಖಿ ಸವಾಲನ್ನು ಒಡ್ಡುತ್ತದೆ. ಇದು ಸೂಕ್ಷ್ಮ ಗುರುತಿಸುವಿಕೆ, ಪೂರ್ವಭಾವಿ ತಡೆಗಟ್ಟುವಿಕೆ ಮತ್ತು ನಿರ್ಣಾಯಕ ಕ್ರಮಗಳನ್ನು ಒಳಗೊಂಡ ವ್ಯವಸ್ಥಿತ ವಿಧಾನವನ್ನು ಬಯಸುತ್ತದೆ. ಈ ಸಮಸ್ಯೆಯ ಸಂಕೀರ್ಣ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಪರಿಹಾರಕ್ಕೆ ಅತ್ಯಾಧುನಿಕ ತಂತ್ರಗಳನ್ನು ಬಳಸುವುದು ನಮ್ಮ ಹಿರಿಯ ನಾಗರಿಕರ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.”
ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…
ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…
ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್ ಬಳಿಯ ಅರ್ಪೊರಾದ ನೈಟ್‌ಕ್ಲಬ್ ಬೀರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…
ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…
ಗೋವಾ: ಇಲ್ಲಿನ ನೈಟ್ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್…
ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…