ಎಡಿಟೋರಿಯಲ್

ಎಲ್‌ಪಿಜಿ ಕೊರತೆ; ಜನರ ಆತಂಕ ದೂರ ಮಾಡಬೇಕಿದೆ

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್‌ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ ಎರಡು ರಾಷ್ಟ್ರಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ನೆರೆಹೊರೆಯ ರಾಷ್ಟ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದಕ್ಕೆ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಾಕ್ಷಿಯಾಗಿದೆ. ಪ್ರತಿಯೊಂದು ರಾಷ್ಟ್ರವೂ ಭೌಗೋಳಿಕವಾಗಿ ಒಂದರ ಮೇಲೆ ಇನ್ನೊಂದು ಅವಲಂಬಿತ. ವ್ಯಾಪಾರ ವಹಿವಾಟುಗಳಲ್ಲಿ, ಕೊಡು ಕೊಳ್ಳುವಿಕೆಯಲ್ಲಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದೊಂದಿಗೆ ಸಂಬಂಧ ಹೊಂದಿರಲೇಬೇಕಾಗುತ್ತದೆ.

ನಮಗೆ ಯಾರ ಹಂಗೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಪ್ರಸ್ತುತ ಯಾವ ದೇಶವೂ ಇಲ್ಲ. ಹಾಗಾಗಿ ಎಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಹಗೆ ಕಟ್ಟಿಕೊಂಡರೆ ಅದರ ಪರಿಣಾಮ ಆಯಾ ರಾಷ್ಟ್ರಗಳ ನಾಗರಿಕರ ಮೇಲೆ ಉಂಟಾಗುತ್ತದೆ. ಆದ್ದರಿಂದ ಶಾಂತಿ-ಸಹಬಾಳ್ವೆ ಎಲ್ಲ ದೇಶಗಳ ಮೂಲಮಂತ್ರವಾಗಬೇಕಿದೆ. ಯುದ್ಧದ ಪರಿಣಾಮ ಅನಿಲ ವಾಹಕ ಹಡಗುಗಳು ಬರುವುದು ಕಡಿಮೆ ಆಗಿದೆ. ವಿದೇಶಗಳ ಅನಿಲ ಪೂರೈಕೆಯಿಂದಲೇ ದೇಶದ ಬೇಡಿಕೆ ಹೆಚ್ಚು ಈಡೇರುತ್ತಿವೆ. ಇರಾನ್ ಈಗ ಹಾರ್ಮುಜ್ ಜಲಸಂಽಯನ್ನು ಬಂದ್ ಮಾಡಿದೆ. ಸೌದಿ ಅರೇಬಿಯಾ, ಕುವೈತ್, ಯುಎಇಯಿಂದ ಅತಿ ಹೆಚ್ಚು ಅಡುಗೆ ಅನಿಲ ಪೂರೈಕೆಯಾಗುತ್ತದೆ. ಈಗ ಅಲ್ಲಿಂದ ಅಡುಗೆ ಅನಿಲ ಬರುತ್ತಿಲ್ಲ.

ಯುದ್ಧದ ಕಾರಣದಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಕಂಡು ಬಂದಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುತ್ತಿಲ್ಲ. ಇದರಿಂದ ಹೋಟೆಲ್‌ಗಳು ಮುಚ್ಚುತ್ತಿವೆ. ಇರುವ ಹೋಟೆಲ್‌ಗಳಲ್ಲಿ ಊಟ, ತಿಂಡಿ ಬೆಲೆ ಜಾಸ್ತಿಯಾಗಿದೆ. ಇದರಿಂದ ನಿಜಕ್ಕೂ ಆತಂಕಕ್ಕೆ ಒಳಗಾಗಿರುವವರು ನಗರಪ್ರದೇಶಗಳಲ್ಲಿ ಪಿಜಿಗಳಲ್ಲಿ ಉಳಿದುಕೊಂಡಿರುವ ಹಾಗೂ ಬಾಡಿಗೆ ರೂಂಗಳಲ್ಲಿ ವಾಸಿಸುವ ಯುವಜನತೆ ಹಾಗೂ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು. ಏಕೆಂದರೆ ಈ ವರ್ಗದವರೇ ವಾಣಿಜ್ಯ ಸಿಲಿಂಡರ್‌ಗಳ ಮೇಲೆ ಅವಲಂಬಿತವಾಗಿರುವುದು. ಕಾರಣ ಸಿಲಿಂಡರ್ ಕೊರತೆ ಉಂಟಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸಿಗದಿರುವುದು, ಊಟ ತಿಂಡಿಯ ದರ ಹೆಚ್ಚಳದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರಗಳು ಆದಷ್ಟು ಬೇಗ ವಾಣಿಜ್ಯ ಸಿಲಿಂಡರ್ ಕೊರತೆಯನ್ನು ನೀಗಿಸಬೇಕಿದೆ.

ಎಲ್‌ಪಿಜಿ ಕೊರತೆಯನ್ನು ನೆಪವಾಗಿಸಿಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ದೇಶದ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಅಽಕಾರಿಗಳು ದಾಳಿ ನಡೆಸಿ ಸಿಲಿಂಡರ್ ಜಪ್ತಿ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ. ಮನೆ ಬಳಕೆ ಅನಿಲ ಪೂರೈಸುವುದು ಸರ್ಕಾರದ ಆದ್ಯತೆ ಆಗಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆಯಿಂದಾಗಿ ಲಾಭಕೋರರು ಮನೆ ಬಳಕೆಯ ಸಿಲಿಂಡರ್ ಬಳಸಿಕೊಳ್ಳಲು\ಮುಂದಾಗುವುದು ಸಹಜ. ವಾಣಿಜ್ಯ ಸಿಲಿಂಡರ್ ಕೊರತೆ ಇಲ್ಲದಿದ್ದಾಗಲೂ ಹೋಟೆಲ್ ಉದ್ಯಮದ ಹಲವು ಮಂದಿ ಮನೆಬಳಕೆ ಸಿಲಿಂಡರ್ ಬಳಸುತ್ತಿರುವುದು ಮಾಮೂಲಿಯಾಗಿದೆ. ಇನ್ನು ವಾಣಿಜ್ಯ ಸಿಲಿಂಡರ್ ಕೊರತೆ ಉಂಟಾದಾಗ ಸುಮ್ಮನಿರುತ್ತಾರೆ. ಹಾಗಾಗಿ ಸ್ಥಳೀಯ ಆಡಳಿತ ಇದಕ್ಕೆ ಕಡಿವಾಣ ಹಾಕಬೇಕಿದೆ. ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಣೆ ಪುನರಾರಂಭವಾಗಿದೆ.

ದೇಶದಲ್ಲಿ ಗೃಹಬಳಕೆಗೆ ಬೇಕಾಗುವಷ್ಟು ದಾಸ್ತಾನು ಇದೆ. ಜನರು ಧಾವಂತಕ್ಕೆ ಒಳಗಾಗಿ ಎಲ್‌ಪಿಜಿ ಗ್ಯಾಸ್ ಬುಕ್ ಮಾಡುತ್ತಿದ್ದಾರೆ. ಈವರೆಗೂ ೫೫ ಲಕ್ಷವಿದ್ದ ಎಲ್‌ಪಿಜಿ ಬುಕಿಂಗ್ ಈಗ ೮೫ ಲಕ್ಷಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಯುದ್ಧ ತಕ್ಷಣಕ್ಕೆ ನಿಲ್ಲುವುದಿಲ್ಲ. ಹಾಗಾಗಿ ಸಿಲಿಂಡರ್ ಪೂರೈಕೆ ಸಮಸ್ಯೆ ಸದ್ಯಕ್ಕೆ ಬಗೆಹರಿಯುವುದಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮಗೆ ಸಿಲಿಂಡರ್ ಯಾವ ಕಾಲಕ್ಕೆ ಸಿಗುತ್ತದೆಯೋ ಎಂದು ಭಾವಿಸಿರುವ ಜನ ಸಹಜವಾಗಿ ಆತಂಕಕ್ಕೆ ಒಳಗಾಗಿ ಸಿಲಿಂಡರ್ ಸ್ಟಾಕ್ ಮಾಡಿಕೊಳ್ಳುವ ಭರದಲ್ಲಿ ಬುಕಿಂಗ್ ಮಾಡುತ್ತಿರಬಹುದು. ಇದು ಸಮೂಹ ಸನ್ನಿಯಂತಾಗಿರಬಹುದು. ಆದರೆ ಜನರ ಈ ಆತಂಕ ದೂರ ಮಾಡಬೇಕಾಗಿರುವುದು ಸರ್ಕಾರಗಳ ಜವಾಬ್ದಾರಿಯಲ್ಲವೆ? ಜನರಿಗೆ ಅಗತ್ಯ ಸಿಲಿಂಡರ್ ಸಿಗುತ್ತಿದೆ ಎಂಬ ಭರವಸೆ ಮೂಡಿಸುವುದು ಮುಖ್ಯವಲ್ಲವೆ? ಇದರೊಂದಿಗೆ ಮಾಧ್ಯಮಗಳೂ ಕೂಡ ವಾಸ್ತವಾಂಶಗಳನ್ನು ಹೇಳುವ ಮೂಲಕ ಜನರಲ್ಲಿನ ಆತಂಕ ದೂರ ಮಾಡಬೇಕಿದೆ. ಅಲ್ಲದೆ ಗ್ಯಾಸ್ ಏಜೆನ್ಸಿಗಳು ಕೃತಕ ಅಭಾವ ಸೃಷ್ಟಿಸದೆ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಸಬೇಕಿದೆ. ಜೊತೆಗೆ ಅಧಿಕಾರಿಗಳೂ ಕೂಡ ಬುಕಿಂಗ್, ಸಿಲಿಂಡರ್ ಪೂರೈಕೆ ಮತ್ತು ದುರ್ಬಳಕೆ ತಡೆಯಲು ಮಾನಿಟರಿಂಗ್ ಮಾಡಬೇಕಿದೆ

” ಎಲ್‌ಪಿಜಿ ಕೊರತೆಯನ್ನು ನೆಪವಾಗಿಸಿಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ದೇಶದ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸಿಲಿಂಡರ್ ಜಪ್ತಿ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

5 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

6 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

6 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

7 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

7 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

13 hours ago