ಆಂದೋಲನ ಪುರವಣಿ

ಗರಿ ಬಿಚ್ಚಿಕೊಳ್ಳುತ್ತಿದೆ ಮೈಸೂರು

ರಾಮ್‌ಸನ್ಸ್ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ; ವರ್ಷ ಪೂರ್ತಿ ಪ್ರದರ್ಶನ, ಮಾರಾಟ

ದಸರಾ ಹತ್ತಿರವಾಗುತ್ತಿದ್ದಂತೆ ಮೈಸೂರು ಗರಿ ಬಿಚ್ಚಿಕೊಳ್ಳುತ್ತಿದೆ. ಎಲ್ಲ ಬಗೆಯ ಚಟುವಟಿಕೆಗಳು ಆರಂಭವಾಗುತ್ತಿದ್ದು, ಕಲಾ ರಸಿಕರು, ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇದರ ಭಾಗವಾಗಿ ನಜರ್‌ಬಾದ್‌ನ ಆಮ್ರಪಾಲಿ ಮಳಿಗೆಯ ಮೇಲಿರುವ ರಾಮ್‌ಸನ್ಸ್ ಬೊಂಬೆ ಮನೆಯಲ್ಲಿ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದ್ದು, ವರ್ಷ ಪೂರ್ತಿ ವೈವಿಧ್ಯಮಯ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಶರನ್ನವರಾತ್ರಿ ಆರಂಭಕ್ಕೆ ೧೮ ದಿನಗಳು ಇರುವಂತೆಯೇ ೧೮ನೇ ವರ್ಷದ ಬೊಂಬೆ ಪ್ರದರ್ಶನಕ್ಕೆ ಗುರುವಾರ ಚಾಲನೆ ಸಿಕ್ಕಿದ್ದು, ಕಲಾ ವೈವಿಧ್ಯವೇ ಇಲ್ಲಿ ಅನಾವರಣಗೊಳ್ಳಲಿದೆ. ಬೊಂಬೆಗಳ ನಗರಿ ಚೆನ್ನಪಟ್ಟಣ, ಕಿನ್ಹಾಳ, ಬೆಂಗಳೂರು, ಪಾಲಿಮಾರುಗಳಲ್ಲಿ ತಯಾರಾದ ಬೊಂಬೆಗಳ ಜೊತೆಗೆ ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶಾದ್ಯಂತ ತಯಾರಾದ ಬೊಂಬೆಗಳಿಗೂ ಇಲ್ಲಿ ಸ್ಥಾನ ಇದ್ದು, ೫೦ ರೂ. ನಿಂದ ಆರಂಭವಾಗಿ ಲಕ್ಷ ರೂ. ವರೆಗೂ ಬೆಲೆ ಇರುವ ಬೊಂಬೆಗಳು ಇಲ್ಲಿರಲಿವೆ.

ರಾಮಾಯಣ ದರ್ಶನ

ಈ ಬಾರಿ ೨೪ ಅಂಶಗಳನ್ನು ಆಧರಿಸಿದ ಬೊಂಬೆಗಳ ವಿಶೇಷತೆ ಇದ್ದು, ರಾಮಾಯಣ, ಮಹಾಭಾರತದ ವಿವಿಧ ಘಟ್ಟಗಳ ಕಥೆಗಳನ್ನು ಬೊಂಬೆಗಳ ಮೂಲಕವೇ ಹೇಳಲಾಗಿದೆ. ಪುತ್ರಕಾಮೇಷ್ಠಿ ಯಾಗ, ರಾಮ ಜನನ, ತಾಟಕಾ ಸಂಹಾರ, ಮಾರೀಚ-ಸುಬಾಹು ಪಲಾಯನ, ಅಹಲ್ಯ ಉದ್ಧಾರ, ಸೀತಾ ಸ್ವಯಂವರ, ಭರತನಿಗೆ ಪಾದುಕಾ ಪ್ರದಾನ, ವನವಾಸ, ಸೀತಾ ಅಗ್ನಿ ಪ್ರವೇಶ ಹೀಗೆ ೨೪ ವರ್ಗಗಳಲ್ಲಿ ಸಂಪೂರ್ಣ ರಾಮಾಯಣ ತಿಳಿಸುವ ಗೊಂಬೆಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿವೆ.

ದಸರಾ ದರ್ಶನ

ಬೊಂಬೆಗಳ ಮೂಲಕವೇ ದಸರಾ ಸಂದರ್ಭದಲ್ಲಿ ಮೈಸೂರಿನ ಅಂದವನ್ನು ಹೆಚ್ಚಿಸುವ ಚೆಂದದ ನೋಟಗಳು, ರಾಜ ಮನೆತನದ ಸೊಬಗು, ಅಂಬಾರಿ ಆನೆ, ಅರಮನೆ ಅಂದ ಹೀಗೆ ಎಲ್ಲ ಬಗೆಯ ನೋಟಗಳನ್ನು ಗೊಂಬೆಗಳ ಮೂಲಕವೇ ಒದಗಿಸಿಕೊಡುವ ಪ್ರಯತ್ನವನ್ನೂ ಇಲ್ಲಿ ಕಾಣಬಹುದಾಗಿದೆ.

ಇದರೊಂದಿಗೆ ಚಾಮುಂಡಿಯ ಉತ್ಸವ ಮೂರ್ತಿ, ಕೇರಳದ ಚಂಡೆಮೇಳ, ನಾಟ್ಯ ಮಯೂರಿ, ವಾದಿ ರಾಜ ತೀರ್ಥರು, ಶಿರಸಿ ಮಾರಿಕಾಂಬಾ, ಗುರುರಾಯ, ಸಾಯಿ ಬಾಬಾ ಅವರ ಜೀವನ ಚರಿತ್ರೆ, ಆನೆ, ಕುದುರೆ, ಸಿಂಹ, ಹುಲಿಗಳ ಬೊಂಬೆಗಳು ಆಕರ್ಷಣೆಯ ಕೇಂದ್ರವಾಗಿವೆ.

ಸೆ. 8ರಂದು ಉದ್ಘಾಟನೆಯಾಗಿರುವ ರಾಮ್‌ಸನ್ಸ್ ಬೊಂಬೆಗಳ ಪ್ರದರ್ಶನವು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ವರೆಗೆ ವರ್ಷ ಪೂರ್ತಿ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ರಘು ಧಮೇಂದ್ರ ದೂ. ಸಂ. 9880111625 ಅನ್ನು ಸಂಪರ್ಕಿಸಬಹುದು.

andolana

Recent Posts

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ…

2 hours ago

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಬಂಧನ

ಬೆಂಗಳೂರು: 42ನೇ ಎಸಿಜೆಎಂ ನ್ಯಾಯಾಲಯ ಅರೆಸ್ಟ್‌ ವಾರೆಂಟ್‌ ಜಾರಿಯ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಮಡಿಕೇರಿ| ಗಾಂಜಾ ಮಾರಾಟ: ಮೈಸೂರು ಮೂಲದ ನಾಲ್ವರ ಬಂಧನ

ಮಡಿಕೇರಿ: ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು…

2 hours ago

ಹನೂರು: ಚಿರತೆ ದಾಳಿಗೆ ಹಸುವಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಿರತೆ ದಾಳಿ ನಡೆಸಿದ ಪರಿಣಾಮ ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ…

2 hours ago

ಹನೂರು: ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಮತ್ತೆ ಕಾಡ್ಗಿಚ್ಚು: ಅರಣ್ಯ ಪ್ರದೇಶ ಸುಟ್ಟು ಭಸ್ಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಹಾವಿನಮೂಲೆ…

2 hours ago

ನಾಳೆ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ

ಬೆಂಗಳೂರು: ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ರಣರಂಗವಾಗಿ ಏರ್ಪಟ್ಟು, 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ…

2 hours ago