ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಕಾಫಿ ತೋಟದಲ್ಲಿ ಕಾರ್ಮಿಕ ಮಹಿಳೆಯನ್ನು ಕಾಡಾನೆ ಬಲಿ ಪಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಹೊಸಪೇಟೆ ಮೂಲದ ಬೋರಮ್ಮ ಎಂಬುವವರೇ ಮೃತಪಟ್ಟ ದುರ್ದೈವಿ.
ತಾಲ್ಲೂಕಿನ ಪುರ ಗ್ರಾಮದ ಲೈನ್ ಮನೆಯ ಬಳಿ ಕಾಡಾನೆ ದಾಳಿ ಮಾಡಿದ್ದು, ಚಿಕ್ಕಮಗಳೂರಿನಲ್ಲಿ 7 ದಿನಗಳ ಅಂತರದಲ್ಲಿ ಎರಡನೇ ಬಲಿಯಾಗಿದೆ.
ಕಾಡಾನೆ ಸೆರೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಮತ್ತೊಂದು ಕಡೆ ಕಾರ್ಮಿಕ ಮಹಿಳೆಯನ್ನು ಆನೆ ಬಲಿ ಪಡೆದಿದೆ.
ಕಾಡಾನೆ ಸೆರೆಗೆ ಏಳು ಕುಮ್ಕಿ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ದಾಳಿ ಮಾಡಿ ಕಾಡಾನೆ ಮಹಿಳೆಯನ್ನು ಬಲಿ ಪಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯ ಹತ್ತನೇ ಕ್ರಾಸ್ ಮತ್ತು ಇತರೆ ಕ್ರಾಸ್ ರಸ್ತೆಗಳಲ್ಲಿ ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸುತ್ತಿದ್ದು, ಕಳೆದ…
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಂದೆಯನ್ನು ಕುರಿತಂತೆ ಅವಹೇಳನಾಕಾರಿ…
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ದಿಢೀರ್ ಬದಲಾವಣೆಯಿಂದ ಶಾಲಾ…
ಚುನಾವಣಾ ಆಯೋಗವು ನಡೆಸಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ನಂತರ ಕರ್ನಾಟಕದ ಮತದಾರರ ಪಟ್ಟಿಯಿಂದ ಸುಮಾರು ಒಂದು…
ಚಿರಂಜೀವಿ ಸಿ ಹುಲ್ಲಹಳ್ಳಿ ಅಕ್ಟೋಬರ್‌ನಲ್ಲೇ ಅಲ್ಲಲ್ಲಿ ಇಣುಕುತ್ತಿರುವ ಇಬ್ಬನಿ ನವೆಂಬರ್‌ಗೂ ಮೊದಲೇ ಬೆಳಗಿನ ವೇಳೆ ಚಳಿಯ ಅನುಭವ ಮೈಸೂರು: ಮಧ್ಯಾಹ್ನದ…
ಎಚ್.ಎಸ್.ದಿನೇಶ್‌ಕುಮಾರ್ ಮೈಸೂರಿನಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಬಯಲು ಪಾಲಿಕೆ ವಲಯ ಕಚೇರಿಗಳಲ್ಲಿ ಹಣ ಕೊಟ್ಟರೆ ಇ-ಖಾತೆ; ತಪ್ಪಿದರೆ ಕಡತವೇ ನಾಪತ್ತೆ!…