Andolana originals

ಇ-ಖಾತಾ; ಅಧಿಕಾರಿಗಳ ಕರ್ತವ್ಯ ಲೋಪ

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರಿನಲ್ಲಿ ನಡೆದ ವಿಶೇಷ  ಅಭಿಯಾನದಲ್ಲಿ ಬಯಲು

ಪಾಲಿಕೆ ವಲಯ ಕಚೇರಿಗಳಲ್ಲಿ ಹಣ ಕೊಟ್ಟರೆ ಇ-ಖಾತೆ; ತಪ್ಪಿದರೆ ಕಡತವೇ ನಾಪತ್ತೆ!

ಮೈಸೂರು: ಇ-ಖಾತೆಗೆ ಅರ್ಜಿ ಸಲ್ಲಿಸಿ ಒಂದು ವರ್ಷವಾಯಿತು… ಖಾತೆ ಮಾಡಿಕೊಡಲು ೧೫ ಸಾವಿರ ರೂ. ಬೇಡಿಕೆ ಇಟ್ಟರು… ಖಾತೆಗಾಗಿ ಅರ್ಜಿ ಸಲ್ಲಿಸಿದ್ದೆ ಹಣ ನೀಡದ ಕಾರಣ ಕಡತವನ್ನೇ ಇಲ್ಲವಾಗಿಸಿದರು… ಇವು ವರ್ಷಗಳಿಂದಲೂ ಇ-ಖಾತೆಗೆ ಪರದಾಡುತ್ತಿರುವ ಹಲವು ಜನರ ಆಕ್ರೋಶದ ನುಡಿಗಳು.

ನಗರಪಾಲಿಕೆ ವತಿಯಿಂದ ಬುಧವಾರ ಆಯೋಜಿಸ ಲಾಗಿದ್ದ ಇ-ಖಾತಾ ವಿಶೇಷ ಅಭಿಯಾನದಲ್ಲಿ ವಲಯ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿಲ್ಲ ಎಂಬುದು ಈ ಮೇಲಿನ ಜನರ ಮಾತುಗಳಿಂದ ಸಾಬೀತಾಯಿತು.

ಮೈಸೂರು ನಗರ ವ್ಯಾಪ್ತಿ ವಿಸ್ತರಣೆಯಾದ ಕಾರಣದಿಂದ ಜನರು ತಮ್ಮ ಮನೆ, ಬಡಾವಣೆಗಳ ಸಮೀಪವೇ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಹಿಂದೆ ನಗರಪಾಲಿಕೆ ಆಯುಕ್ತರಾಗಿದ್ದ ಪಿ.ಮಣಿವಣ್ಣನ್ ಅವರು ೯ ವಲಯ ಕಚೇರಿಗಳನ್ನು ಸ್ಥಾಪಿಸಿದರು.

ಈ ಮೂಲಕ ಖಾತೆ, ನಕ್ಷೆ, ಕಂದಾಯ ಪಾವತಿ, ಜನನ-ಮರಣ ಪತ್ರ… ಹೀಗೆ ಸಾಕಷ್ಟು ಕೆಲಸಗಳನ್ನು ಆಯಾ ವಲಯ ಕಚೇರಿಗಳಲ್ಲಿಯೇ ನಡೆಯುವಂತೆ ವ್ಯವಸ್ಥೆ ಮಾಡಿದ್ದರು. ಇದರಿಂದ ನಗರಪಾಲಿಕೆಯ ಮುಖ್ಯ ಕಚೇರಿಯಲ್ಲಿ ಒತ್ತಡ ಕೂಡ ಕಡಿಮೆಯಾಗಿತ್ತು. ಆದರೆ, ವಲಯ ಕಚೇರಿಯ ಸಾಕಷ್ಟು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿದ್ದವು. ಅದರಲ್ಲಿಯೂ ಇ-ಖಾತೆ ಮಾಡಿಕೊಡುವ ವಿಚಾರದಲ್ಲಿ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದವು.

ಇನ್ನು ಇ-ಖಾತೆ ಮಾಡಿಕೊಡಲು ಸಾವಿರಾರು ರೂ. ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಹಣ ನೀಡದವರಿಗೆ ಸಕಾಲದಲ್ಲಿ ಖಾತೆ ಮಾಡಿಕೊಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದ್ದವು. ಇದು ಸತ್ಯ ಎಂಬುದು ಬುಧವಾರ ನಡೆದ ಇ-ಖಾತಾ ಅಭಿಯಾನದಲ್ಲಿ ಖಚಿತವಾಯಿತು. ಇ-ಖಾತೆ ಮಾಡಿಸಿಕೊಳ್ಳಲು ಆಗಮಿಸಿದ್ದ ಬಹುತೇಕರು ಹೇಳುತ್ತಿದ್ದ ದೂರು ಒಂದೇ, ನಮ್ಮ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹೀಗಾಗಿ ನಾವು ಅರ್ಜಿ ಸಲ್ಲಿಸಿರಲಿಲ್ಲ ಎಂಬುದು.

ಮತ್ತೆ ಕೆಲವರು ನಾವು ಇ-ಖಾತೆಗೆ ಅರ್ಜಿ ಸಲ್ಲಿಸಿ ಒಂದು ವರ್ಷವಾಯಿತು. ಇನ್ನೂ ಕೂಡ ಖಾತೆ ಮಾಡಿಕೊಟ್ಟಿಲ್ಲ. ಇದನ್ನು ಪ್ರಶ್ನಿಸಿದಲ್ಲಿ ಸರ್ವರ್ ಸಮಸ್ಯೆ ಎಂದು ಹೇಳುತ್ತಾರೆ. ನಂತರ ಕಚೇರಿಯವರೇ ಕೆಲವರು ಹಣ ನೀಡಿದರೆ ನಿಮ್ಮ ಕೆಲಸವಾಗುತ್ತದೆ ಎಂದು ಪುಕ್ಕಟೆ ಸಲಹೆ ನೀಡುತ್ತಾರೆ ಎಂದು ಅಲವತ್ತುಕೊಂಡರು.

ಇ-ಖಾತಾ ಅಭಿಯಾನ ನಡೆಸಿದ ಪ್ರಾದೇಶಿಕ ಆಯುಕ್ತರು ಹಾಗೂ ನಗರಪಾಲಿಕೆ ಆಯುಕ್ತರು ಬುಧವಾರ ತಮ್ಮ ಅಧಿಕಾರಿಗಳು ವಲಯ ಕಚೇರಿಗಳಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡುವಂತಾಯಿತು. ವಲಯ ಕಚೇರಿಗಳಲ್ಲಿ ಜನರಿಗೆ ಉತ್ತಮ ಸ್ಪಂದನೆ ದೊರಕಿದ್ದರೆ, ಈ ಪ್ರಮಾಣದಲ್ಲಿ ಜನರು ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ  ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇನ್ನು ಮುಂದಾದರೂ ನಗರ ಪಾಲಿಕೆ ಆಯುಕ್ತರು ತಮ್ಮ ಅಧೀನ ಅಧಿಕಾರಿಗಳ ಕಾರ್ಯ ವೈಖರಿ ಮೇಲೆ ನಿಗಾವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ

” ವಲಯ ಕಚೇರಿಗಳಲ್ಲಿ ಇ-ಖಾತೆ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ದಾಖಲೆಗಳು ಸರಿ ಇದ್ದರೂ ವಿನಾಕಾರಣ ಅಲೆದಾಡಿಸುತ್ತಾರೆ. ಪ್ರಶ್ನೆ ಮಾಡಿದರೆ, ಇಲ್ಲದ ನೆಪಗಳನ್ನು ಹೇಳಿ ಸಾಗಹಾಕುತ್ತಾರೆ. ಒಟ್ಟಾರೆ ಅಧಿಕಾರಿಗಳ ಉದ್ದೇಶ ಬೇರೆಯೇ ಇರುತ್ತದೆ.”

-ವೆಂಕಟೇಶ್, ವಾರ್ಡ್ ಸಂಖ್ಯೆ ೪೭ರ ನಿವಾಸಿ

” ನನ್ನ ಸ್ವತ್ತಿಗೆ ಇ-ಖಾತೆ ಮಾಡಿಸಿಕೊಳ್ಳಲು ವಲಯ ಕಚೇರಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಅಧಿಕಾರಿಗಳು ಸ್ಪಂದಿಸಲಿಲ್ಲ. ಸಾಕಷ್ಟುಬಾರಿ ಅಲೆದರೂ ಕೆಲಸವಾಗಲಿಲ್ಲ. ಇದೀಗ ಆಯುಕ್ತರು ವಿಶೇಷ ಅಭಿಯಾನ ನಡೆಸುವ ಮೂಲಕ ನಮಗೆ ನೆರವಾಗಿದ್ದಾರೆ.”

-ಮೈಖೆಲ್ ಪಿಂಟೋ, ವಾರ್ಡ್ ಸಂಖ್ಯೆ ೮ರ ನಿವಾಸಿ

” ನನ್ನ ಆಸ್ತಿಗೆ ಸಂಬಂಧಿಸಿದಂತೆ ಈಗಾಲೇ ಖಾತೆ ಆಗಿದೆ. ಇ-ಖಾತೆ ಮಾಡಿಸಬೇಕು ಎಂಬ ನಿಯಮ ಬಂದ ಮೇಲೆ ವಲಯ ಕಚೇರಿಗೆ ಅರ್ಜಿ ಸಲ್ಲಿಸಲು ತೆರಳಿದ್ದೆ. ಅಲ್ಲಿ ಲಂಚಕ್ಕೆಬೇಡಿಕೆ ಇಟ್ಟರು. ಹೀಗಾಗಿ ಅರ್ಜಿಯನ್ನೇ ಸಲ್ಲಿಸಲಿಲ್ಲ. ಇದೀಗ ಅಭಿಯಾನದಲ್ಲಿ ಅರ್ಜಿ ಸಲ್ಲಿಸುತ್ತಿದ್ದೇನೆ.”

-ಮೊಗಣ್ಣೇಗೌಡ, ವಾರ್ಡ್ ಸಂಖ್ಯೆ ೫೭ರ ನಿವಾಸಿ

” ಇ-ಖಾತೆ ಮಾಡಿಸಿಕೊಳ್ಳಲು ಕಳೆದ ಒಂದು ವರ್ಷದಿಂದ ಕಾಯುತ್ತಿದ್ದೇನೆ ಒಂದಲ್ಲ ಎರಡು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಆದರೂ ಅಧಿಕಾರಿಗಳು ಖಾತೆ ಮಾಡಿಕೊಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಇಲ್ಲಿಗೆ ಬರಬೇಕಾಯಿತು.”

-ಜಯಂತಿ, ವಾರ್ಡ್ ಸಂಖ್ಯೆ ೩೯ರ ನಿವಾಸಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಿಡಿಗೇಡಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯ ಹತ್ತನೇ ಕ್ರಾಸ್ ಮತ್ತು ಇತರೆ ಕ್ರಾಸ್ ರಸ್ತೆಗಳಲ್ಲಿ ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸುತ್ತಿದ್ದು, ಕಳೆದ…

19 mins ago

ಓದುಗರ ಪತ್ರ: ಖರ್ಗೆಯವರ ಮಾತುಗಳು ಖಂಡನೀಯ

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಂದೆಯನ್ನು ಕುರಿತಂತೆ ಅವಹೇಳನಾಕಾರಿ…

21 mins ago

ಓದುಗರ ಪತ್ರ: ಶಾಲಾ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸದಿರಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ದಿಢೀರ್ ಬದಲಾವಣೆಯಿಂದ ಶಾಲಾ…

24 mins ago

ಓದುಗರ ಪತ್ರ: ಮತದಾರರ ಹೆಸರು ಡಿಲಿಟ್: ಸ್ಪಷ್ಟನೆ ಅಗತ್ಯ

ಚುನಾವಣಾ ಆಯೋಗವು ನಡೆಸಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ನಂತರ ಕರ್ನಾಟಕದ ಮತದಾರರ ಪಟ್ಟಿಯಿಂದ ಸುಮಾರು ಒಂದು…

26 mins ago

ಸೂಪರ್ ಎಲ್‌ನಿನೋ ಪರಿಣಾಮ ಚಳಿ ಪ್ರಮಾಣ ಕ್ಷೀಣ ಸಾಧ್ಯತೆ

ಚಿರಂಜೀವಿ ಸಿ ಹುಲ್ಲಹಳ್ಳಿ ಅಕ್ಟೋಬರ್‌ನಲ್ಲೇ ಅಲ್ಲಲ್ಲಿ ಇಣುಕುತ್ತಿರುವ ಇಬ್ಬನಿ ನವೆಂಬರ್‌ಗೂ ಮೊದಲೇ ಬೆಳಗಿನ ವೇಳೆ ಚಳಿಯ ಅನುಭವ  ಮೈಸೂರು: ಮಧ್ಯಾಹ್ನದ…

40 mins ago

ನವೆಂಬರ್.‌15ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು: ನವೆಂಬರ್‌ 15ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, ಪಿಂಕ್‌ ಲೈನ್‌ ಮೆಟ್ರೋದ 7.5 ಕಿಲೋಮೀಟರ್‌ ಎತ್ತರಿಸಿದ ಮಾರ್ಗವನ್ನು…

18 hours ago