Andolana originals

ಸೂಪರ್ ಎಲ್‌ನಿನೋ ಪರಿಣಾಮ ಚಳಿ ಪ್ರಮಾಣ ಕ್ಷೀಣ ಸಾಧ್ಯತೆ

ಚಿರಂಜೀವಿ ಸಿ ಹುಲ್ಲಹಳ್ಳಿ

ಅಕ್ಟೋಬರ್‌ನಲ್ಲೇ ಅಲ್ಲಲ್ಲಿ ಇಣುಕುತ್ತಿರುವ ಇಬ್ಬನಿ

ನವೆಂಬರ್‌ಗೂ ಮೊದಲೇ ಬೆಳಗಿನ ವೇಳೆ ಚಳಿಯ ಅನುಭವ 

ಮೈಸೂರು: ಮಧ್ಯಾಹ್ನದ ಹೊತ್ತಿಗೆ ಮೈ ಸುಡುವ ಬಿಸಿಲು. ರಾತ್ರಿ ಕಳೆದು ಬೆಳಕು ಹರಿಯುವ ಹೊತ್ತಿಗೆ ಹುಲ್ಲಿನ ಮೇಲೆ ಮುತ್ತಿನಂತೆ ಹೊಳೆಯುವ ಇಬ್ಬನಿ, ಸೂರ್ಯ ಮೇಲೇರಿದಂತೆ ಮಾಯವಾಗುವ ತೇವದ ಪದರ, ನಗರ ಸೇರಿದಂತೆ ಮೈಸೂರು ಜಿಲ್ಲೆಯ ಹಲವೆಡೆ ಹವಾಮಾನದ ಈ ವೈರುಧ್ಯ ಈಗ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಆತಂಕವನ್ನು ಸೃಷ್ಟಿಸಿದೆ. ಸೋಮವಾರ ಮುಂಜಾನೆ ಹಲವು ಕಡೆಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡ ಇಬ್ಬನಿ, ಅಕ್ಟೋಬರ್ ತಿಂಗಳಿ ನಲ್ಲೇ ಚಳಿಗಾಲದ ಆಗಮನದ ಮುನ್ಸೂಚನೆಯೇ ಎಂಬ ಪ್ರಶ್ನೆ ಮೂಡಿಸಿದ್ದರೆ, ಮಂಗಳವಾರದ ಬಿಸಿಲು, ಹವಾಮಾನದ ಬದಲಾವಣೆಯ ಬಗ್ಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಇಬ್ಬನಿ ಬೀಳುವುದು ಸಹಜ. ಭೂಮಿಯಲ್ಲಿರುವ ತೇವಾಂಶ ಆವಿಯಾಗಿ ವಾತಾವರಣಕ್ಕೆ ಸೇರುತ್ತದೆ. ತಾಪಮಾನದಲ್ಲಿನ ಬದಲಾವಣೆಗಳಿಂದ ಈ ತೇವಾಂಶ ಸಾಂದ್ರೀಕರಣಗೊಂಡು ಇಬ್ಬನಿ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ತಾಪಮಾನದಲ್ಲಿ ಇಳಿಕೆಯಾದಾಗ ಮಂಜಿನಂತಹ ವಾತಾವರಣವೂ ನಿರ್ಮಾಣವಾಗಬಹುದು ಎಂಬುದು ಕೆಲ ಹವಾಮಾನ ತಜ್ಞರ ಅಭಿಪ್ರಾಯ

ಈ ಬಾರಿ ಚಳಿಗಾಲದ ಅವಧಿ ಕಡಿಮೆ: ಪ್ರಸ್ತುತ ಎಲ್‌ನಿನೋ ಪ್ರಭಾವದಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದಲ್ಲದೆ, ತಾಪಮಾನ ಹೆಚ್ಚಾಗಿದೆ. ಇದರಿಂದ ಚಳಿಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ. ನವೆಂಬರ್‌ನಿಂದ ಫೆಬ್ರವರಿ ಅಂತ್ಯದವರೆಗೆ ಇರಬೇಕಾದ ಚಳಿಗಾಲ ಈ ಬಾರಿ ಜನವರಿ ವೇಳೆಗೆ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅವರು.

ಪ್ರಸ್ತುತ ತಾಪಮಾನ ಹಿಂದಿನ ದಿನಕ್ಕಿಂತ ಸುಮಾರು ಒಂದು ಡಿಗ್ರಿ ಏರಿಕೆಯಾಗಿದೆ. ಹೀಗಾಗಿ ಇಬ್ಬನಿ ಕಾಣಿಸಿಕೊಂಡಿರುವುದನ್ನು ತಾಪಮಾನ ಗಣನೀಯವಾಗಿ ಕುಸಿದಿರುವುದರ ಪರಿಣಾಮವೆಂದು ಹೇಳಲಾ ಗದು. ತೇವಾಂಶ ಮತ್ತು ಸ್ಥಳೀಯ ವಾತಾವರಣ ಕೂಡ ಇದಕ್ಕೆ ಕಾರಣವಾಗುತ್ತವೆ. ಎಲ್‌ನಿನೋ ಪ್ರಭಾವ ಎಷ್ಟು ಕಾಲ ಮುಂದು ವರಿಯಲಿದೆ ಎಂಬುದನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನ ಹಾಗೂ ಅಲ್ಲಿನ ವಾತಾವರಣದ ಬೆಳವಣಿಗೆಗಳನ್ನು ಅವಲಂಬಿಸಿ ಇದರ ಅವಧಿ ನಿರ್ಧಾರವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಮಳೆ ಕೊರತೆ ಶೇ.೩೮: ಪೆಸಿಫಿಕ್ ಮಹಾಸಾಗರದ ಉಷ್ಣವಲಯ ಭಾಗದಲ್ಲಿ ಸಮುದ್ರದ ಮೇಲ್ಮೈ ತಾಪಮಾನ ಸಾಮಾನ್ಯಕ್ಕಿಂತ ೪ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ ೨೪-೨೫ ಡಿಗ್ರಿ ಇರಬೇಕು. ಆದರೆ, ಈಗ ೩೦ಡಿಗ್ರಿಯಷ್ಟು ಆಗಿರುವ ಪರಿಣಾಮ ಹವಾಮಾನದಲ್ಲಿ ಬದಲಾವಣೆಯಾಗಿದೆ. ಹೀಗಾಗಿ ಮಳೆ ಕೊರತೆ, ಬಿಸಿಲಿನ ತಾಪಮಾನ ಕೂಡ ಏರಿಕೆ ಆಗಿದೆ. ಈ ವರ್ಷ ಎಲ್‌ನಿನೋ ಪ್ರಭಾವದಿಂದ ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಶೇ.೩೮ರಷ್ಟು ಕಡಿಮೆಯಾಗಿದೆ ಎಂದು ನಾಗನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ವಿಜ್ಞಾನಿ ಡಾ.ಗೋವಿಂದರಾಜು ಮಾಹಿತಿ ನೀಡಿದರು.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಇಂತಹ ವ್ಯವಸ್ಥೆಗಳಿಂದ ಮಳೆ ಬೀಳುವುದು ಸಾಮಾನ್ಯ. ನವೆಂಬರ್ ಅಂತ್ಯದವರೆಗೂ ಚಂಡಮಾರುತ ಪ್ರೇರಿತ ಮಳೆಯ ಸಾಧ್ಯತೆ ಇರುತ್ತದೆ. ಡಿಸೆಂಬರ್‌ನಲ್ಲಿ ಮಳೆ ಪ್ರಮಾಣ ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಎಂದು ಹೇಳಿದರು.

ಎಲ್‌ನಿನೋ ಪ್ರಭಾವ ಮುಂದುವರಿದರೆ ಮಳೆಯ ಪ್ರಮಾಣ ಹಾಗೂ ತಾಪಮಾನದ ಮೇಲೆ ಪರಿಣಾಮ ಬೀರಬಹುದು. ಆದರೆ, ಈ ಪ್ರಭಾವ ಯಾವಾಗ ಕಡಿಮೆಯಾಗಲಿದೆ ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು. ಕೃಷಿಗೆ ಇಬ್ಬನಿ ಅನುಕೂಲ, ಅತಿಯಾದ ಮಳೆ ಹಾನಿಕಾರಕ ಪ್ರಸ್ತುತ ಇಬ್ಬನಿ ಹಾಗೂ ಸಾಧಾರಣ ಪ್ರಮಾಣದ ಮಳೆ ಕೃಷಿಗೆ ಅನುಕೂಲ ಆಗಬಹುದು. ವಿಶೇಷವಾಗಿ ಮಳೆಯನ್ನೇ ಅವಲಂಬಿಸಿರುವ ಒಣಭೂಮಿ ಪ್ರದೇಶಗಳಲ್ಲಿನ ರಾಗಿ, ಕಡಲೆಕಾಯಿ, ಹುರುಳಿ, ಎಳ್ಳು ಸೇರಿದಂತೆ ವಿವಿಧ ಬೆಳೆಗಳಿಗೆ ತೇವಾಂಶ ದೊರೆಯುವುದು ಉಪಯುಕ್ತವಾಗಲಿದೆ. ಬೋರ್ ವೆಲ್ ಸೌಲಭ್ಯವಿಲ್ಲದ ಹೊಲಗಳಲ್ಲಿ ಮಳೆ ಕೃಷಿಗೆ ನೆರವಾಗುತ್ತದೆ. ಕೆಲ ಬೆಳೆಗಳ ಬೆಳವಣಿಗೆಗೆ ಇಬ್ಬನಿಯೂ ಅನುಕೂಲವಾಗಬಹುದು ಎಂದು ತಿಳಿಸಿದರು. ಕೊಯ್ಲಿನ ಸಮಯದಲ್ಲಿ ಅತಿಯಾದ ಮಳೆಯಾದರೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಸುಮಾರು ಒಂದು ಇಂಚಿಗಿಂತ ಹೆಚ್ಚು ಮಳೆಯಾದರೆ ಪರಿಸ್ಥಿತಿಗೆ ಅನುಗುಣವಾಗಿ ರಾಗಿ, ಭತ್ತ ಹಾಗೂ ತರಕಾರಿ ಬೆಳೆಗಳಿಗೆ ತೊಂದರೆಯಾಗಬಹುದು. ಆದ್ದರಿಂದ ಪ್ರಸ್ತುತ ಮಳೆಯ ಪ್ರಮಾಣ ಮತ್ತು ಮುಂದಿನ ದಿನಗಳ ಹವಾಮಾನ ಬೆಳವಣಿಗೆ ಕೃಷಿಗೆ ನಿರ್ಣಾಯಕವಾಗಲಿದೆ.

” ಪ್ರಸ್ತುತ ಜಿಲ್ಲೆಯಲ್ಲಿ ಬೀಳುತ್ತಿರುವ ಇಬ್ಬನಿಯೂ ಅಕಾಲಿಕವಲ್ಲ. ತಾಪಮಾನದ ಹೆಚ್ಚಳದಿಂದ ಇಬ್ಬನಿಯಾಗಿದೆ. ಇದರಿಂದ ಕೃಷಿಗೂ ಅನುಕೂಲವಾಗಲಿದೆ. ಸೂಪರ್ ಎಲ್‌ನಿನೋ ಎಫೆಕ್ಟ್‌ನಿಂದ ಈ ಬಾರಿ ಚಳಿಯ ತೀವ್ರತೆ ಕಡಿಮೆಯಾಗಬಹುದು. ಆದರೆ, ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ವಾಡಿಕೆಗಿಂತ ಶೇ.೩೮ರಷ್ಟು ಮಳೆ ಕಡಿಮೆಯಾಗಿದ್ದು, ಡಿಸೆಂಬರ್ ನಲ್ಲಿ ಮಳೆ ಬೀಳದಿರುವ ಲಕ್ಷಣಗಳಿವೆ.”

 -ಗೋವಿಂದರಾಜು, ನಿವೃತ್ತ ವಿಜ್ಞಾನಿ, ನಾಗನಹಳ್ಳಿ ಕೃಷಿ ವಿಜ್ಞಾನ ಕೇಂದ್ರ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಿಡಿಗೇಡಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯ ಹತ್ತನೇ ಕ್ರಾಸ್ ಮತ್ತು ಇತರೆ ಕ್ರಾಸ್ ರಸ್ತೆಗಳಲ್ಲಿ ಮನೆಗಳ ಮುಂದೆ ಕಾರುಗಳನ್ನು ನಿಲ್ಲಿಸುತ್ತಿದ್ದು, ಕಳೆದ…

46 mins ago

ಓದುಗರ ಪತ್ರ: ಖರ್ಗೆಯವರ ಮಾತುಗಳು ಖಂಡನೀಯ

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಂದೆಯನ್ನು ಕುರಿತಂತೆ ಅವಹೇಳನಾಕಾರಿ…

49 mins ago

ಓದುಗರ ಪತ್ರ: ಶಾಲಾ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸದಿರಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ದಿಢೀರ್ ಬದಲಾವಣೆಯಿಂದ ಶಾಲಾ…

51 mins ago

ಓದುಗರ ಪತ್ರ: ಮತದಾರರ ಹೆಸರು ಡಿಲಿಟ್: ಸ್ಪಷ್ಟನೆ ಅಗತ್ಯ

ಚುನಾವಣಾ ಆಯೋಗವು ನಡೆಸಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ನಂತರ ಕರ್ನಾಟಕದ ಮತದಾರರ ಪಟ್ಟಿಯಿಂದ ಸುಮಾರು ಒಂದು…

54 mins ago

ಇ-ಖಾತಾ; ಅಧಿಕಾರಿಗಳ ಕರ್ತವ್ಯ ಲೋಪ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರಿನಲ್ಲಿ ನಡೆದ ವಿಶೇಷ  ಅಭಿಯಾನದಲ್ಲಿ ಬಯಲು ಪಾಲಿಕೆ ವಲಯ ಕಚೇರಿಗಳಲ್ಲಿ ಹಣ ಕೊಟ್ಟರೆ ಇ-ಖಾತೆ; ತಪ್ಪಿದರೆ ಕಡತವೇ ನಾಪತ್ತೆ!…

1 hour ago

ನವೆಂಬರ್.‌15ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು: ನವೆಂಬರ್‌ 15ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, ಪಿಂಕ್‌ ಲೈನ್‌ ಮೆಟ್ರೋದ 7.5 ಕಿಲೋಮೀಟರ್‌ ಎತ್ತರಿಸಿದ ಮಾರ್ಗವನ್ನು…

19 hours ago