ಮಹಿಳೆ ಸಬಲೆ

ಸಂಬಂಧಗಳಿಗೆ ಅಡ್ಡ ಬರುವ ಮೊಬೈಲ್ ಶನಿರಾಯ

ಮನೆಯ ಮೂಲೆಯೊಂದರಲ್ಲಿ ಕುಳಿತು ದಿನಕ್ಕೆ ಒಮ್ಮೆಯೋ, ಎರಡು ದಿನಗಳಿಗೊಮ್ಮೆಯೋ ರಿಂಗಣಿಸಿ ದೂರದ ಊರುಗಳ ಶುಭ-ಅಶುಭ ಸಮಾಚಾರಗಳನ್ನು ತಲುಪಿಸುವ ಸಾಧನವಾಗಿದ್ದ ಸ್ಥಿರ ದೂರವಾಣಿಗಳು ಮೂಲೆ ಸೇರಿ, ಎಲ್ಲರ ಕೈಗೆ ಮೊಬೈಲ್‌ಗಳು ಬಂದ ಹೊಸದರಲ್ಲಿ ಹಾಯ್, ಹಲೋಗೆ ಸೀಮಿತವಾಗಿದ್ದರೂ ದಿನಕಳೆದಂತೆ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿ ಆಂಡ್ರಾಯ್ಡ್ ಮೊಬೈಲ್‌ಗಳು ಎಲ್ಲರ ಕೈ ಸೇರಿ ಜಗತ್ತಿನ ವಿದ್ಯಮಾನಗಳೆಲ್ಲವನ್ನೂ ಅಂಗೈಯಲ್ಲೇ ತೋರಿಸುವಂತಾದಾಗ, ಮೊಬೈಲ್ ಇಲ್ಲದೇ ದಿನಕಳೆಯುವುದು ಸಾಧ್ಯವೇ ಇಲ್ಲ ಎಂಬಂಥ ಚಡಪಡಿಕೆಗೆ ಸಿಲುಕಿದ್ದೇವೆ.

ಈ ಇಂಟರ್‌ನೆಟ್ ಯುಗದಲ್ಲಿ ಮೊಬೈಲ್ ಫೋನ್‌ಗಳು ಸಂಪರ್ಕ ಸಾಧನವಾಗಷ್ಟೇ ಉಳಿದಿಲ್ಲ. ಬದಲಿಗೆ ಬಹು ಆಯಾಮಗಳಲ್ಲಿ ಬಳಕೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಂತೂ ಗಂಡ-ಹೆಂಡತಿ ಇಬ್ಬರೂ ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋ ಹರಿಬಿಟ್ಟು, ನಮ್ಮ ರೀಲ್ಸ್‌ಅನ್ನು ಎಷ್ಟು ಜನ ವೀಕ್ಷಿಸಿದರು, ಎಷ್ಟು ಜನ ಲೈಕ್ ಒತ್ತಿದರು ಎಂಬುದನ್ನು ಗೆಳೆಯ-ಗೆಳತಿಯರೊಂದಿಗೆ ಖುಷಿಯಿಂದ ಹಂಚಿಕೊಳ್ಳುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಗಂಡನಿಗೆ ಇಷ್ಟವಿದೆಯೋ, ಹೆಂಡತಿಗೆ ಇಷ್ಟವಿದೆಯೋ ಎಂಬುದನ್ನು ಲೆಕ್ಕಿಸದೆ ಮನೆಮಂದಿಯನ್ನೆಲ್ಲ ಮೊಬೈಲ್‌ನೊಳಗೆ ಎಳೆದು ತರುತ್ತಿದ್ದಾರೆ.

ಕೆಲವರು ರೀಲ್ಸ್ ಮಾಡಲು ಆಯ್ಕೆ ಮಾಡಿಕೊಂಡ ಥೀಮ್‌ಗೆ ಮೆಚ್ಚುಗೆ ಗಳಿಸಿದರೆ, ಮತ್ತೆ ಕೆಲವರು ನಗೆಪಾಟಲಿಗೀಡಾದರೂ ರೀಲ್ಸ್ ಮಾಡುವ ಹುಚ್ಚನ್ನು ಮಾತ್ರ ಬಿಡುತ್ತಿಲ್ಲ. ದಾಂಪತ್ಯ, ಪ್ರೇಮ ಸಂಬಂಧ ಆರೋಗ್ಯಕರವಾಗಿರಲು ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುವಂತಹದ್ದು, ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟುಕೊಳ್ಳುವಂತಹದ್ದನ್ನು ಮಾಡುತ್ತಿರುತ್ತಾರೆ. ಮದುವೆಯಾದ ಹೊಸತರಲ್ಲಿ ಅಥವಾ ಪ್ರೀತಿ-ಪ್ರೇಮದ ಬಲೆಗೆ ಬಿದ್ದ ಹೊಸತರಲ್ಲಿ ಸಂಗಾತಿಗಳಿಬ್ಬರೂ ತುಂಬಾ ಖುಷಿಯಾಗಿರುತ್ತಾರೆ.

ನಂತರದ ದಿನಗಳಲ್ಲಿ ಈ ಸಂಬಂಧಗಳಿಗೆ ಈ ಮೊಬೈಲ್ ಎಂಬ ಮಾಯಾಜಾಲವೇ ಹುಳಿ ಹಿಂಡುವ ಸಾಧನವಾಗಿದೆ. ಎಷ್ಟು ಹೊತ್ತಿನಲ್ಲೂ ಮೊಬೈಲ್‌ನಲ್ಲಿ ಯಾರೊಂದಿಗೋ ಸಂಭಾಷಣೆಯಲ್ಲಿ, ಚಾಟಿಂಗ್, ವಿಡಿಯೋ ಕರೆಯಲ್ಲಿ ತೊಡಗಿರುತ್ತಾನೆ/ಳೆ ಎಂಬ ಅಪವಾದಗಳಿಂದಾಗಿ ಸಂಬಂಧಗಳು ಹಾಳಾಗುತ್ತಿರುವುದು ಹೊಸದೇನಲ್ಲ.

ಸಂಬಂಧಗಳಲ್ಲಿ ದಿನಕಳೆದಂತೆ ಮನಸ್ತಾಪ, ಜಗಳ, ಅಂತರ ಕಾಯ್ದುಕೊಳ್ಳುವಿಕೆ, ಕಡೆಗೊಮ್ಮೆ ಆತ್ಮಹತ್ಯೆಯೋ, ಕೊಲೆಯೋ, ವಿಚ್ಛೇದನವೋ ಆಗಿ ಸಂಬಂಧಗಳು ಅಂತ್ಯವಾಗುತ್ತಿವೆ. ಮನಃಶಾಸಜ್ಞರು ಹೇಳುವ ಪ್ರಕಾರ ಮೊಬೈಲ್ ಫೋನ್‌ಅನ್ನು ಇತಿಮಿತಿಯಲ್ಲಿ ಬಳಸುವ ಎಚ್ಚರಿಕೆಯಲ್ಲಿರುವವರ ಸಂಬಂಧ ಸದಾ ಕಾಲ ಖುಷಿಯಾಗಿರುತ್ತದೆ. ಉತ್ತಮ ಸಂಬಂಧದಲ್ಲಿರುವ ದಂಪತಿಗಳು ಯಾವಾಗಲೂ ಪರಸ್ಪರ ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಮಾತನಾಡುತ್ತಾರಂತೆ. ನಿಜವಾಗಿಯೂ ನನ್ನ ಸಂಗಾತಿ ಸಂತೋಷ ವಾಗಿದ್ದಾಳೆಯೇ/ಸಂತೋಷವಾಗಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತಾರಂತೆ. ಸಂಬಂಧದಲ್ಲಿ ಖುಷಿಯಾಗಿರುವ ಜೋಡಿಗಳು ಪರಸ್ಪರ ತಮ್ಮ ಸಂಗಾತಿಯ ಇಷ್ಟಕಷ್ಟಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಲ್ಲದೇ ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಪರಸ್ಪರ ಒಂದು ಕರೆ ಮಾಡಿಯೋ ಅಥವಾ ಮೆಸೇಜ್ ಮಾಡಿಯೋ ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುತ್ತಾರಂತೆ.

ಈ ರೀತಿಯ ದೈನಂದಿನ ಚೆಕ್-ಇನ್‌ಗಳು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಜೊತೆಗೆ ತಮ್ಮ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಲು-ಆ ಕನಸುಗಳನ್ನು ನನಸು ಮಾಡುವ ದಾರಿ ಕಂಡುಕೊಳ್ಳಲು ಪರಸ್ಪರ ಮುಕ್ತ ಮಾತುಕತೆ ಪರಿಣಾಮಕಾರಿ ಎನ್ನುತ್ತಾರೆ.

ಹೆಚ್ಚಿನವರು ತಮ್ಮ ಭಯ ಮತ್ತು ಒತ್ತಡಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಸಂಬಂಧದಲ್ಲಿ ಸಂತೋಷವಾಗಿರುವ ಜೋಡಿಗಳು ತಮಗೆ ಕಾಡುವ ಆತಂಕದ ಬಗ್ಗೆ ತಮ್ಮ ಸಂಗಾತಿಯ ಬಳಿ ಮುಕ್ತವಾಗಿ ಹಂಚಿಕೊಳ್ಳುತ್ತಾರೆ ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಿಗೇ ಪ್ರಯತ್ನಿಸುತ್ತಾರೆ. ಕೆಲಸದ ಸ್ಥಳದಲ್ಲಿ ಎದುರಾಗುವ ಸಮಸ್ಯೆಗಳಾಗಿರಬಹುದು, ಸಂಬಂಧದಲ್ಲಿ ಉಂಟಾಗುವ ಅಭದ್ರತೆಯ ಭಾವನೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಈ ಮಾತುಕತೆಗಳು ಪರಸ್ಪರ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತವೆ. ತಮ್ಮ ಮನಸ್ಸಿನಲ್ಲಿ ಮೂಡುವ ಸಣ್ಣಪುಟ್ಟ ಆಲೋಚನೆಗಳು ಸಿಲ್ಲಿ, ವಿಚಿತ್ರ, ತಮಾಷೆಯಂತೆ ಕಾಣಬಹುದು. ಆದರೆ ಇಂತಹ ಮಾತುಕತೆಗಳು ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಮನೆಗಳಲ್ಲಿ ಮೊಬೈಲ್ ಫೋನ್ ಅನ್ನು ಬದಿಗಿಟ್ಟು ಮನೆಯವರೊಂದಿಗೆ ಹರಟೆ ಹೊಡೆಯಿರಿ, ಮನಸ್ಸು ಹಗುರಾಗಲಿದೆ.

ಆಂದೋಲನ ಡೆಸ್ಕ್

Recent Posts

ಮಂಡ್ಯ | ಸೆಸ್ಕಾಂ ಎಇ ಲೋಕಾ ಬಲೆಗೆ

ಮಂಡ್ಯ : ಲಂಚ ಪಡೆಯುತ್ತಿದ್ದಾಗ ಸೆಸ್ಕಾಂ ಉಪ ವಿಭಾಗದ ಸಹಾಯಕ ಇಂಜಿನಿಯರ್ (ಎಇ) ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ…

3 hours ago

ಬಲಪ್ರಯೋಗದ ಮೂಲಕ ಜನರ ಧ್ವನಿ ಅಡಗಿಸಲು ಯತ್ನ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ನೀಟ್‌ ಪರೀಕ್ಷೆ ಅಕ್ರಮ ಹಾಗೂ ಜಂತರ್‌ ಮಂತರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ…

9 hours ago

ಸಂಸತ್‌ ಮುಂಗಾರು ಅಧಿವೇಶನ: ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಮನವಿ

ನವದೆಹಲಿ: ಇಂದಿನಿಂದ ಸಂಸತ್‌ ಅಧಿವೇಶನ ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.…

11 hours ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ: ಜಾಗೃತ ಕರ್ನಾಟಕ ಆತಂಕ

ಅರ್ಹರು ಮತ ಹಕ್ಕು ಕಳೆದುಕೊಳ್ಳುವ ಆತಂಕ; ಚುನಾವಣಾ ಆಯೋಗಕ್ಕೆ ‘ಜಾಗೃತ ಕರ್ನಾಟಕ’ ಸಮಯೋಚಿತ ಪ್ರಶ್ನೆ ಕರ್ನಾಟಕದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ…

12 hours ago

ವಾಂಗ್ಚುಕ್ ಹೋರಾಟ ಕುರಿತು ನಿರ್ಲಕ್ಷ್ಯ ಸಲ್ಲದು

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸುಮಾರು ೨೦ ದಿನಗಳ ಕಾಲ…

15 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಪುಟ ವಿಸ್ತರಣೆ ನಿರೀಕ್ಷೆ: ಸಂಕಟ ಪರೀಕ್ಷೆ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಈವಾರ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಅಂದ ಹಾಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಈಗಾಗಲೇ…

15 hours ago