ಬ್ರೆಜಿಲ್: ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬಲಪಂಥೀಯ ಅಭ್ಯರ್ಥಿ ಫ್ಲಾವಿಯೊ ಬೊಲ್ಸೊನಾರೊ ಅವರನ್ನು ಸೋಲಿಸಿ, ನಾಲ್ಕನೇ ಅಧ್ಯಕ್ಷೀಯ ಅವಧಿಗೆ ಆಯ್ಕೆಯಾಗಿದ್ದಾರೆ.
ಲುಲಾ ಸುಮಾರು ಶೇ.51.8ರಷ್ಟು ಮತಗಳನ್ನು ಪಡೆದಿದ್ದು, ಎದುರಾಳಿಗಿಂತ ಸುಮಾರು 44 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಅಂತಿಮ ಸುತ್ತಿನಲ್ಲಿ ಗೆಲುವು ದಾಖಲಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ಟೀಕಾಕಾರರಾಗಿರುವ ಲುಲಾ, ಬ್ರೆಜಿಲ್‌ನ ಸಾರ್ವಭೌಮತ್ವ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ಈ ಹಿಂದೆ 2003ರಿಂದ 2010ರವರೆಗೆ ಎರಡು ಅವಧಿ ಅಧ್ಯಕ್ಷರಾಗಿದ್ದು, 2023ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ್ದರು. ಈಗ ನಾಲ್ಕನೇ ಅವಧಿಗೆ ಜನಾದೇಶ ಪಡೆದಿದ್ದಾರೆ.
ಈ ನಡುವೆ ಫ್ಲಾವಿಯೊ ಬೊಲ್ಸೊನಾರೊ ಸೋಲು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಮತದಾನದ ಅವಧಿಯನ್ನು ಎರಡು ಗಂಟೆ ವಿಸ್ತರಿಸಿದ ನಿರ್ಧಾರ ಪ್ರಶ್ನಿಸಿ ಚುನಾವಣೆ ರದ್ದತಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಮೈಸೂರು: ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಅಧಿಕೃತವಾಗಿ ಉತ್ತರ ನೀಡಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ…
ಅವ್ಯವಸ್ಥೆ, ಪೊಲೀಸರ ಅತಿರೇಕದ ವರ್ತನೆ, ಅಧಿಕಾರಿಗಳ ದೌಲತ್ತು, ಜನಸಾಮಾನ್ಯರ ಸಂಕಷ್ಟ- ಈ ಬಾರಿಯ ದಸರಾ ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾಗಿದ್ದು…
ಶಶಿ ಸಂಪಳ್ಳಿ ರೊಬೋಟಿಕ್ ಆನೆಗಳ ಬಳಕೆ ಪರ್ಯಾಯ ಆಯ್ಕೆ ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತ ಆನೆ ದಿಕ್ಕೆಟ್ಟು…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಬಹುತೇಕ ನಿರ್ದೇಶಕರು ಒಂದೊಂದು ಸುಳಿಯಲ್ಲಿ ಸಿಲುಕಿದ್ದರು ವಿಮಾನ ರನ್ ವೇಯಲ್ಲಿ ಓಡುತ್ತಾ ಇದ್ದಕ್ಕಿದ್ದಂತೆ ಮೇಲಕ್ಕೆದ್ದಾಗ…
ಲಕ್ಷ್ಮೀಕಾಂತ್ ಕೊಮಾರಪ್ಪ ಅರೇಬಿಕಾ ಕಾಫಿ ತಳಿಯನ್ನೇ ಹೆಚ್ಚಾಗಿ ಕಾಡುತ್ತಿರುವ ರೋಗ ಫಸಲು ನೀಡುವ ಗಿಡಗಳೇ ನಾಶ, ಬೆಳೆಗಾರರಿಗೆ ಆರ್ಥಿಕ ಸಂಕಷ್ಟ …
ಕೆ.ಬಿ.ರಮೇಶನಾಯಕ ಅರಮನೆ, ವಸ್ತುಪ್ರದರ್ಶನ, ಮೃಗಾಲಯ, ದೀಪಾಲಂಕಾರ ಕಣ್ತುಂಬಿಕೊಂಡ ಪ್ರವಾಸಿಗರು ಮೈಸೂರು: ದಸರಾ ಮಹೋತ್ಸವ ಮುಗಿದರೂ ಅರಮನೆ ಸೇರಿದಂತೆ ಸುತ್ತಮುತ್ತಲ ಪ್ರವಾಸಿ…