ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ಬಹುತೇಕ ನಿರ್ದೇಶಕರು ಒಂದೊಂದು ಸುಳಿಯಲ್ಲಿ ಸಿಲುಕಿದ್ದರು
ವಿಮಾನ ರನ್ ವೇಯಲ್ಲಿ ಓಡುತ್ತಾ ಇದ್ದಕ್ಕಿದ್ದಂತೆ ಮೇಲಕ್ಕೆದ್ದಾಗ ಸೀಟಿಗೆ ಆತುಕೊಂಡ ಶಿವಶಂಕರ್ ತಲೆಯನ್ನೊಮ್ಮೆ ಸವರಿಕೊಂಡರು.
ಬೆಂಗಳೂರಿನ ಗೋಲ್ಡನ್ ಎರಾ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಶಿವಶಶಂಕರ್ ಅವರಿಗೆ ದಿಲ್ಲಿಯ ಕನ್ನಾಟ್ ಪ್ಲೇಸ್ ನೆನಪಿಗೆ ಬಂತು. ಅ ಹತ್ತಿರದಲ್ಲಿರುವ ತಮ್ಮ ಕಂಪೆನಿಯ ಹೆಡ್ ಆಫೀಸಿನ ವಿವರಗಳು ಕಣ್ಣೆದುರು ಆಡತೊಡಗಿದವು.
ಗೋಲ್ಡನ್ ಎರಾ ಕಂಪೆನಿ ಒಂದು ಕಾಲದಲ್ಲಿ ಸುಪ್ರೀಮ್ ಲೆವೆಲ್ಲಿನಲ್ಲಿದ್ದ ಕಂಪೆನಿ. ಸಿಮೆಂಟ್ ಮತ್ತು ಉಕ್ಕನ್ನು ಉತ್ಪಾದಿಸುವ ಕಂಪೆನಿ, ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಸರು ಮಾಡಿತ್ತು. ಆದರೆ ಹದಿನೈದು ವರ್ಷಗಳ ಹಿಂದೆ ಸಿಮೆಂಟ್ ಮತ್ತು ಉಕ್ಕು ಉತ್ಪಾದನೆಯಲ್ಲಿ ಏಕಸ್ವಾಮ್ಯ ಸಾಽಸಿದ್ದ ಕಂಪೆನಿಗೆ ಸಡ್ಡು ಹೊಡೆದು ನಿಂತಿದ್ದು ಡೈಮಂಡ್ ಡೈನಾಸ್ಟಿ ಕಂಪೆನಿ. ಯಾವಾಗ ಅದು ಒಂದೊಂದೇ ಹೆಜ್ಜೆ ಇಡುತ್ತಾ ಗೋಲ್ಡನ್ ಎರಾ ಕಂಪೆನಿಯ ಏಕಸ್ವಾಮ್ಯವನ್ನು ಬಡಿದು ಹಾಕಿತೋ ಇದಾದ ನಂತರ ಅದು ಹೈ ಲೆವೆಲ್ಲಿಗೆ ಹೋಯಿತು.
ಹಾಗಂತ ಗೋಲ್ಡನ್ ಎರಾ ಕಂಪೆನಿಯು ಸಂಪೂರ್ಣವಾಗಿ ನೆಲ ಕಚ್ಚಿತು ಅಂತಲ್ಲ. ಆದರೆ ಏನೇ ಮಾಡಿದರೂ, ಎಷ್ಟೇ ಪ್ರಯತ್ನಿಸಿದರೂ ಡೈಮಂಡ್ ಡೈನಾಸ್ಟಿ ಕಂಪೆನಿಯ ಮುಂದೆ ಏಳಲು ಸಾಧ್ಯವಾಗುತ್ತಿಲ್ಲ. ಇಷ್ಟಾದರೂ ಕರ್ನಾಟಕ,ತೆಲಂಗಾಣ,ಹಿಮಾಚಲ ಪ್ರದೇಶ,ಕೇರಳ ಸೇರಿದಂತೆ ಕೆಲ ರಾಜ್ಯಗಳ ಘಟಕಗಳಲ್ಲಿ ಉತ್ಪಾದನೆಯಾಗುವ ಸಿಮೆಂಟ್ ಮತ್ತು ಉಕ್ಕಿಗೆ ಬೇಡಿಕೆ ಹೆಚ್ಚಿರುವುದರಿಂದ ಗೋಲ್ಡನ್ ಎರಾ ಕಂಪೆನಿಗೆ ಈಗಲೂ ಒಂದಷ್ಟು ಶಕ್ತಿ ಇದೆ. ಇಂತಹ ಕಂಪೆನಿಗೆ ಮೂರು ವರ್ಷಗಳ ಹಿಂದೆ ಎಂಡಿ ಆಗಿ ಬಂದ ವೀರೇಂದ್ರ ಕುಮಾರ್ ಅವರು ಕೆಳಗಿಳಿದ ಮೇಲೆ, ಅವರೇನು ಸುಮ್ಮನೆ ಕೆಳಗಿಳಿಯಲಿಲ್ಲ, ಆ ಮಾತು ಬೇರೆ.
ತಾವು ಪಟ್ಟು ಹಿಡಿಯದೇ ಇದ್ದಿದ್ದರೆ,ಅವರ ಬಲೆಯಲ್ಲಿ ಅವರನ್ನೇ ಸಿಲುಕಿಸದೆ ಇದ್ದಿದ್ದರೆ ಮತ್ತು ಗೋಲ್ಡನ್ ಎರಾ ಕಂಪೆನಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತೇನೆ ಅಂತ ಕಂಪೆನಿಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡದಿದ್ದರೆ ತಾವು ಕರ್ನಾಟಕದಲ್ಲಿ ಗೋಲ್ಡನ್ ಎರಾ ಕಂಪೆನಿಯ ಎಂಡಿ ಯಾಗುವುದು ಕಷ್ಟವಾಗುತ್ತಿತ್ತು. ಆದರೆ ಹೀಗೆ ವೀರೇಂದ್ರಕುಮಾರ್ ಅವರನ್ನು ಕೆಳಗಿಳಿಸಿ ಎಂಡಿಯಾದ ಮೇಲೆ ಕಂಪೆನಿಯ ಒಳಸುಳಿಗಳು ಮತ್ತಷ್ಟು ಚೆನ್ನಾಗಿ ಅರ್ಥವಾಗ ತೊಡಗಿವೆ. ಏಕೆಂದರೆ ಡೈಮಂಡ್ ಡೈನಾಸ್ಟಿ ಸೇರಿದಂತೆ ಹಲವು ಕಂಪೆನಿಗಳು ತಮ್ಮ ಕಂಪೆನಿಯ ಪಿಲ್ಲರುಗಳನ್ನು ಅಲುಗಾಡಿಸಲು ನಿರಂತರ ವಾಗಿ ಯತ್ನಿಸುತ್ತಿವೆ. ಮತ್ತು ಕಂಪೆನಿಯ ಪಿಲ್ಲರುಗಳು ಅನಿಸಿಕೊಂಡ ಆಡಳಿತ ಮಂಡಳಿಯ ನಿರ್ದೇಶಕರುಗಳ ಪೈಕಿ ಹಲವರು ಎದುರಾಳಿಗಳ ಜಲಕ್ಕೆ ಸಿಲುಕಿ ಬಿದ್ದಿದ್ದಾರೆ.
ಇದರ ಪರಿಣಾಮವೇನು ಅಂತ ತಾನು ಯೋಚಿಸುತ್ತಿರುವಾಗಲೇ ದಿಲ್ಲಿಯ ಹೆಡ್ ಆಫೀಸಿನಿಂದ ಫೋನು ಮಾಡಿದ ಕಂಪೆನಿಯ ನಂಬರ್ ತ್ರೀ, ರಿಯಾಂಕ್ ನಾಂದಿ ಅವರು: ‘ಶಿವಶಂಕರ್ ಬೆಂಗಳೂರಿನಲ್ಲಿ ಏನಾಗುತ್ತಿದೆ? ನಮ್ಮ ಕಂಪೆನಿಯ ಬೋರ್ಡ್ ಆ- ಡೈರೆಕ್ಟರುಗಳ ಪೈಕಿ ನಾಲ್ಕೈದು ಮಂದಿ ಎದುರಾಳಿಗಳ ಸ್ಟಿಂಗ್ ಆಪರೇಷನ್ಗೆ ಸಿಲುಕಿಕೊಂಡಿದ್ದಾರಂತೆ. ಇದು ಸಾಬೀತಾದರೆ, ಗೋಲ್ಡನ್ ಎರಾ ಕಂಪೆನಿಯನ್ನು ಅನೈತಿಕ ಚಟುವಟಿಕೆಗಳ ಅಡ್ಡೆ ಅಂತ ಎದುರಾಳಿಗಳು ಪ್ರತಿಬಿಂಬಿಸಬಹುದು’ ಎಂದಿದ್ದರು.
ಇದರ ಸುಳಿವು ತನಗೆ ಇರಲಿಲ್ಲ ಎಂದಲ್ಲ, ಆದರೆ ಅದನ್ನು ಹೇಗೆ ಮ್ಯಾನೇಜ್ ಮಾಡಬೇಕು ಅಂತ ಯೋಚಿಸುತ್ತಿದ್ದೆ. ಆದರೆ ರಿಯಾಂಕ್ ನಾಂದಿ ಅವರು ಆತಂಕದ ಧ್ವನಿಯಲ್ಲಿ ಕೇಳಿದಾಗ ವಿಷಯದ ಗಂಭೀರತೆ ಅರ್ಥವಾಯಿತು. ಅಷ್ಟೇ ಅಲ್ಲ, ಎದುರಾಳಿಗಳ ಸ್ಟಿಂಗ್ ಆಪರೇಷನ್ ಜಲಕ್ಕೆ ಬಿದ್ದವರನ್ನು ಪತ್ತೆ ಮಾಡಿ, ಅವರು ಹೇಗೆ ಸ್ಟಿಂಗ್ ಜಲಕ್ಕೆ ಬಿದ್ದರು ಎಂಬುದನ್ನು ಕನ್ಫರ್ಮ್ ಮಾಡಿಕೊಂಡೆ. ಈ ಪೈಕಿ ಬಸಣ್ಯಪ್ಪ ಅವರನ್ನು ಕರೆಸಿದಾಗ :ಸಾರ್, ನನಗೇನೂ ಗೊತ್ತಿಲ್ಲ ಎಂದು ತಪ್ಪಿಸಿಕೊಳ್ಳಲು ನೋಡಿದರು.
ಆದರೆ ವಿಷಯದ ಗಂಭೀರತೆ ಗೊತ್ತಿದ್ದ ನಾನು:‘ಅಲ್ರೀ ಬಸಣ್ಯಪ್ಪ? ನೀವು ಕಂಪೆನಿಯ ವ್ಯವಹಾರಗಳನ್ನು ಸಬ್ ಲೀಸ್ ಕೊಡುವಾಗ ಇಂತಿಷ್ಟು ಹಣ ಕೊಡಬೇಕು ಅಂತ ಸಂಬಂಧಪಟ್ಟವರಿಗೆ ಏಕೆ ಒತ್ತಾಯಿಸುತ್ತಿದ್ದೀರಿ? ಎಂದರೆ ಗಾಬರಿಯಾದ ಬಸಣ್ಯಪ್ಪ,‘ಸಾರ್,ನಾನೆಲ್ಲಿ ವ್ಯವಹಾರಕ್ಕಿಷ್ಟು ಅಂತ ಫಿಕ್ಸ್ ಮಾಡುತ್ತಿದ್ದೇನೆ ಅಂತ ತಪ್ಪಿಸಿಕೊಳ್ಳಲು ನೋಡಿದರು. ಆದರೆ ನಾನು ನೇರವಾಗಿಯೇ: ಅಲ್ರೀ, ನೀವು ನೇರವಾಗಿ ಫಿಕ್ಸು ಮಾಡದಿದ್ದರೂ ನಿಮ್ಮ ಮಾವ, ಹಿಂದೆ ಈ ಕಂಪೆನಿಯ ಡೈರೆಕ್ಟರ್ ಆಗಿದ್ದರಲ್ಲ ಹನುಮಂತರಾವ್ ಅವರು ನಿಮ್ಮ ಹೆಸರನ್ನು ಬಳಸಿಕೊಂಡು ಇಂತಿಷ್ಟು ದುಡ್ಡು ಕೊಡಬೇಕು ಅಂತ ಫಿಕ್ಸು ಮಾಡುತ್ತಿzರೆ. ನಮ್ಮ ಕಂಪೆನಿಯ ಎದುರಾಳಿಗಳು ಅದನ್ನೇ ರೆಕಾರ್ಡು ಮಾಡಿಕೊಂಡು, ಗೋಲ್ಡನ್ ಎರಾ ಕಂಪೆನಿಯ ವ್ಯವಹಾರ ಚೆನ್ನಾಗಿಲ್ಲ ಎಂದು ಹೇಳಲು ತಯಾರಿ ನಡೆಸಿದ್ದಾರೆ’ ಎಂದಾಗ ತೆಪ್ಪಗಾದರು.
ಆಗ ನಾನು: ‘ಇನ್ನು ಮುಂದೆ ಈ ವಿಷಯದಲ್ಲಿ ಎಚ್ಚರವಾಗಿರಿ, ನಿಮ್ಮ ಮಾವನನ್ನು ಕಂಪೆನಿಯ ವ್ಯವಹಾರಕ್ಕೆ ಬರದಂತೆ ನೋಡಿಕೊಳ್ಳಿ’ ಅಂತ ಹೇಳಿ ಕಳಿಸಿದೆ. ಇದಾದ ನಂತರ ಮತ್ತೊಬ್ಬ ನಿರ್ದೇಶಕರಾದ ಪಿನಾತಿ ಕಮಲೇಶ್ ಅವರನ್ನು ಕರೆಸಿದೆ. ರಿಯಾಕ್ಷನ್ ಯಥಾ ಪ್ರಕಾರ ಅಮಾಯಕತೆಯಿಂದ ಕೂಡಿತ್ತು.
ಅವರು ಕೂಡಾ ತಮಗೇನು ಗೊತ್ತಿಲ್ಲ ಎಂಬಂತೆ ಕೈ ಆಡಿಸಿದಾಗ ವಿಷಯ ಎಷ್ಟು ಗಂಭೀರವಾಗಿದೆ ಎಂಬುದನ್ನು ಅವರಿಗೆ ಬಿಡಿಸಿ ಹೇಳಿದೆ. ‘ಅಲ್ರೀ ಕಮಲೇಶ್? ನೀವೇಕೆ ಆ ರಿಯಾಲಿಟಿ ಷೋ ಹೆಣ್ಣು ಮಗಳ ಬೆನ್ನು ಬಿದ್ದಿದ್ದೀರಿ? ನನ್ನ ಜತೆ ಮಲಗಿದರೆ ಹತ್ತು ಕೋಟಿ ಕೊಡುತ್ತೇನೆ ಅಂತ ಆಫರ್ ಕೊಡುತ್ತಿದ್ದೀರಿ? ನೀವು ಎಷ್ಟೇ ಸಲ ಆಫರ್ ಕೊಟ್ಟರೂ ಆಕೆ ಒಪ್ಪುತ್ತಿಲ್ಲ. ಅಂದ ಮೇಲೆ ನಿಮ್ಮ ಚಾಳಿ ಏಕೆ ಮುಂದುವರಿದಿದೆ? ಎಂದಾಗ ಬಾಯಿ ಮುಚ್ಚಿಕೊಂಡರು.
ಆಗ ನಾನು ನೇರವಾಗಿ ವಿಷಯ ಪ್ರಸ್ತಾಪಿಸಿದೆ: ನೋಡಿ,ನೀವು ಪದೇ ಪದೇ ಆ ಹುಡುಗಿಗೆ ಆಫರ್ ಕೊಡುತ್ತಿದ್ದಿರಲ್ಲ ಆ ಹುಡುಗಿ ಅದನ್ನು ರೆಕಾರ್ಡ್ ಮಾಡಿಕೊಂಡು ನಮ್ಮ ಎದುರಾಳಿ ಕಂಪೆನಿಯ ಪ್ರಮುಖರಿಗೆ ಕಳಿಸಿದ್ದಾಳೆ. ನಾಳೆ ಗೋಲ್ಡನ್ ಎರಾ ಕಂಪೆನಿಯ ಡೈರೆಕ್ಟರುಗಳು ಕಚ್ಚೆ ಹರುಕರು ಅಂತ ಪ್ರಚಾರವಾದರೆ ಕಂಪೆನಿಯ ಇಮೇಜ್ ಏನಾಗಬೇಕು? ಮೊದಲೇ ನೀವು ಮದುವೆಯನ್ನು ಹೊರತುಡಿಸಿ ಎಕ್ಸ್ ಟ್ರಾ ಅಫರ್ ನಲ್ಲಿದ್ದೀರಿ. ಇದು ಗೊತ್ತಾದಾಗ ನಿಮ್ಮ ಹೆಂಡತಿ ಸೂಸೈಡ್ ಮಾಡಿಕೊಳ್ಳಲು ಯತ್ನಿಸಿದ್ದರು. ಈಗ ಈ ವಿಷಯ ಗೊತ್ತಾದರೆ ನಿಮ್ಮ ಕುಟುಂಬ ಬೀದಿಗೆ ಬೀಳುತ್ತದೆ’ ಎಂದಾಗ ಕಮಲೇಶ್ ತಲೆ ತಗ್ಗಿಸಿದರು.
ಹೀಗೆ ನೋಡುತ್ತಾ ಹೋದರೆ ಬಹುತೇಕ ನಿರ್ದೇಶಕರು ಒಂದೊಂದು ಸುಳಿಯಲ್ಲಿ ಸಿಲುಕಿ ಬಿದ್ದಿದ್ದರು. ಒಂದೋ ಹನಿಟ್ರ್ಯಾಪ್ ಗೆ, ಇಲ್ಲವೇ ಕಂಪೆನಿಗೆ ಕೆಟ್ಟ ಹೆಸರು ತರುವ ಕೆಲಸಗಳಿಗೆ ಕೈ ಹಾಕಿ ಟ್ರ್ಯಾಪ್ ಆಗಿದ್ದರು. ಒಬ್ಬರಂತೂ ಕಂಪೆನಿಯಿಂದ ಅಸಹಾಯಕ ಸಂಸ್ಥೆಗಳಿಗೆ ಅನುದಾನ ಕೊಡುವುದನ್ನೇ ಉಪಯೋಗಿಸಿಕೊಂಡು ತಮ್ಮ ಬಳಿ ಬರುವ ಸಂಸ್ಥೆಗಳ ಹೆಣ್ಣು ಮಕ್ಕಳಿಗೆ:‘ನಿಮ್ಮ ಸಂಸ್ಥೆಗೆ ಹೆಚ್ಚು ಹಣ ಕೊಡಿಸುತ್ತೇನೆ. ನನಗೆ ಸಹಕರಿಸಿ ಎಂದು ಆಮಿಷ ಒಡ್ಡುತ್ತಿದ್ದರು.
ಹೀಗಾಗಿ ಅವರನ್ನೂ ಕರೆಸಿ:‘ನಿಮ್ಮ ವಿರುದ್ಧ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ.ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿ ಕಳಿಸಿದೆ. ಆದರೆ ಎಚ್ಚರಿಕೆ ನೀಡಿ ಕಳಿಸಿದರೂ ಆತಂಕ ತಪ್ಪಿರಲಿಲ್ಲ. ಅದರಲ್ಲೂ ರಿಯಾಂಕ್ ನಾಂದಿ ಅವರು -ನು ಮಾಡಿ:‘ಬೆಂಗಳೂರಿನಲ್ಲಿ ಏನಾಗುತ್ತಿದೆ? ಸ್ಟಿಂಗ್ ಆಪರೇಷನ್ ಬಲೆಯಲ್ಲಿ ನಮ್ಮ ಕಂಪೆನಿಯ ಪಿಲ್ಲರುಗಳನ್ನು ಎದುರಾಳಿಗಳು ಮುಗಿಸಿದರೆ, ನೈತಿಕವಾಗಿ ಬಡಿದು ಹಾಕಿದರೆ ಏನು ಕತೆ? ಈಗಲೇ ನಮ್ಮ ಕಂಪೆನಿ ದೇಶದ ಕೆಲ ರಾಜ್ಯಗಳಿಗೆ ಸೀಮಿತವಾಗಿದೆ. ಹೀಗಿರುವಾಗ ಅಲ್ಲೂ ದುರ್ಬಲರಾದರೆ ದಿಲ್ಲಿಯಲ್ಲಿ ಪುನಃ ಮೆರೆಯುವ ನಮ್ಮ ಕನಸು ವಿಫಲವಾಗುತ್ತದೆ’ ಎಂದಾಗ ಚಿಂತೆ ಶುರುವಾಯಿತು.
ಈ ವಿಷಯದಲ್ಲಿ ಏನಾದರೂ ಮಾಡದಿದ್ದರೆ ಪರಿಸ್ಥಿತಿ ಕಷ್ಟವಾಗುತ್ತದೆ ಎಂದು ತನಗೆ ಗೊತ್ತಿದೆ. ಹಾಗಂತಲೇ ನೇರವಾಗಿ ರಿಯಾಂಕ್ ನಾಂದಿ ಅವರನ್ನು ಕಂಡು ವಸ್ತುಸ್ಥಿತಿಯ ವಿವರ ನೀಡಲು, ಸ್ಟಿಂಗ್ ಆಪರೇಷನ್ ಬಲೆಗೆ ಬಿದ್ದ ನಿರ್ದೇಶಕರನ್ನು ಆಡಳಿತ ಮಂಡಳಿಯಿಂದ ಹೊರಗೆ ಹಾಕುವ ಪ್ರಪೋಸಲ್ಲು ತೆಗೆದುಕೊಂಡು ದಿಲ್ಲಿಗೆ ಹೊರಟಿದ್ದೇನೆ ಎಂದುಕೊಂಡರು ಶಿವಶಂಕರ್.
ಅಷ್ಟರ ತಮ್ಮ ಸೀಟಿನ ಹಿಂಭಾಗದಲ್ಲಿ ಯಾರೋ ಮಾತನಾಡಿದ ಸದ್ದು ಕೇಳಿದಂತಾಯಿತು. ಆಲಿಸಿದರೆ ಅದು ತಮ್ಮ ಕಂಪೆನಿಯ ಮತ್ತೊಬ್ಬ ಡೈರೆಕ್ಟರ್ ಸತ್ಯೇಂದ್ರ ಕುಮಾರ್ ಅವರದು. ಅವರೂ ತಮ್ಮಂತೆ ರಿಯಾಂಕ್ ನಾಂದಿಯವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಕ್ಲಾರಿಫಿಕೇಷನ್ ಕೊಡಲು ಹೊರಟಿರಬೇಕು. ಹಾಗೆಂಬ ಭಾವ ಗಟ್ಟಿಯಾಗುತ್ತಿದ್ದಂತೆ ಕುಳಿತಿದ್ದ ಜಗದ ಶಿವಶಂಕರ್ ಮಿಸುಕಾಡಿದರು. ಈ ಮನುಷ್ಯನ ಕತೆಯೂ ಅದೇ. ಮಾತೆತ್ತಿದರೆ ಆ ಮಾಂಗ್ರಿಲಾ ಹೋಟೆಲ್ಲಿಗೆ ಹೋಗಿ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳನ್ನು ಮಂಚಕ್ಕೆ ಎಳೆದುಕೊಳ್ಳುವ ಪ್ರಾಣಿ. ಇವತ್ತು ದಿಲ್ಲಿಗೆ ಬಂದು ರಿಯಾಂಕ್ ನಾಂದಿಯವರ ಬಳಿ ಸ್ಟಿಂಗ್ ಆಪರೇಷನ್ ಕೇವಲ ತಮ್ಮ ಎದುರಾಳಿಗಳ ಷಡ್ಯಂತ್ರ, ಅದರಲ್ಲಿ ಯಾವುದೇ ಸತ್ಯವಿಲ್ಲ ಅಂತ ಕತೆ ಕಟ್ಟಬಹುದು.
ಹಾಗನ್ನಿಸಿದ ಕೂಡಲೇ ತಮ್ಮ ತಲೆಯನ್ನೊಮ್ಮೆ ಸವರಿಕೊಂಡ ಶಿವಶಂಕರ್ ಅವರು:‘ಯಾರ್ರೀ ಅದು ಫಿಲಂ ಹೀರೋಯಿನ್ನು?ಮಾಂಗ್ರಿಲಾ ಹೋಟೆಲಿನಲ್ಲಿ ನಿಮಗೆ ಕಮನಿ ಕಡುವವರು?’ಎಂದು ಹಿಂದಿದ್ದ ಸತ್ಯೇಂದ್ರಕುಮಾರ್ ಅವರಿಗೆ ಕೇಳಿಸುವಂತೆ ಗೊಣಗಿಕೊಂಡರು. ಅವರು ಗೊಣಗಾಡಿದ್ದನ್ನು ಕೇಳಿಸಿಕೊಂಡ ಸತ್ಯೇಂದ್ರಕುಮಾರ್ ಅವರಿಗೆ ಗಾಬರಿಯಾಯಿತು. ಅಂದರೆ? ತಾವು ಮಾಂಗ್ರಿಲಾ ಹೋಟೆಲ್ಲಿಗೆ ಹೋಗುವುದು,ರಸಮಯ ದಿನಗಳನ್ನು ಕಳೆಯುವುದು ಈ ಎಂಡಿಗೆ ಗೊತ್ತಿದೆ ಅನ್ನಿಸಿ ಧಾವಂತವಾಯಿತು.
ಹಾಗಂತಲೇ ಸೀಟಿನಿಂದ ಸ್ವಲ್ಪ ಮುಂದಕ್ಕೆ ಬಾಗಿ:‘ಸಾರ್,ಅದೇನೋ ಹೇಳಿದ್ರಿ?’ಎಂದರು. ಮುಖದಲ್ಲಿ ಸಣ್ಣಗೆ ಬೆವರುಹರಿಯುತ್ತಿತ್ತು.ಆದರೆ ಶಿವಶಂಕರ್ ಅವರು ಉತ್ತರಿಸಲಿಲ್ಲ.ಬದಲಿಗೆ ನಿದ್ದೆಗೆ ಜಾರಿದವರಂತೆ ಗೊರಕೆ ಹೊಡೆಯತೊಡಗಿದರು.
ಹಾಗೆ ಗೊರಕೆ ಹೊಡೆಯುವಂತೆ ನಟಿಸಿದರೂ ಈ ಬಾರಿ ದಿಲ್ಲಿಗೆ ಹೋಗಿ ರಿಯಾಂಕಾ ನಾಂದಿಯವರನ್ನು ಭೇಟಿ ಮಾಡಿದಾಗ: ಸ್ಟಿಂಗ್ ಆಪರೇಷನ್ ಜಾಲಕ್ಕೆ ಸಿಲುಕಿದ ಇಂತಹವರನ್ನು ಮೊದಲು ಕಂಪೆನಿಯ ಆಡಳಿತ ಮಂಡಳಿಯಿಂದ ಕಿತ್ತು ಹಾಕಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ಗೋಲ್ಡನ್ ಎರಾ ಕಂಪೆನಿ ಮುನ್ನಡೆಸುವುದು ಕಷ್ಟ ಎಂದು ಹೇಳಲೇಬೇಕು ಅಂದುಕೊಂಡರು. ಅಷ್ಟರ ವಿಮಾನ ಎಡಕ್ಕೆ ಮತ್ತು ಬಲಕ್ಕೆ ವಾಲುತ್ತಾ ದಿಲ್ಲಿ ಏರ್ ಪೋರ್ಟಿನಲ್ಲಿ ಇಳಿಯಲು ಸಜ್ಜಾಗತೊಡಗಿತು.
” ಈ ಮಧ್ಯೆ ಸರ್ಕಾರದ ಪ್ರಮುಖರೊಬ್ಬರು ಇಲ್ಲಿನ ಮತ್ತು ನೆರೆ ರಾಜ್ಯದ ಚಿತ್ರನಟಿಯೊಬ್ಬರ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಕ್ಯಾಸೆಟ್ ಬಹಿರಂಗವಾಗುವ ಘಳಿಗೆ ಹತ್ತಿರವಾಗಿದೆ ಎಂಬ ಮಾತು ಕೇಳಿ ಬಂತಾದರೂ ಅದು ಬಹಿರಂಗವಾಗಲಿಲ್ಲ. ಮೂಲಗಳ ಪ್ರಕಾರ, ಆರೋಪ ಹೊತ್ತ ನಾಯಕ ಸ್ಟಿಂಗ್ ಆಪರೇಷನ್ ನಡೆಸಿದವರ ಮಾತಿಗೆ ಮಣಿದ ಪರಿಣಾಮವಾಗಿ ಇದು ಬಹಿರಂಗವಾಗಲಿಲ್ಲ.”
ಅವ್ಯವಸ್ಥೆ, ಪೊಲೀಸರ ಅತಿರೇಕದ ವರ್ತನೆ, ಅಧಿಕಾರಿಗಳ ದೌಲತ್ತು, ಜನಸಾಮಾನ್ಯರ ಸಂಕಷ್ಟ- ಈ ಬಾರಿಯ ದಸರಾ ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾಗಿದ್ದು…
ಶಶಿ ಸಂಪಳ್ಳಿ ರೊಬೋಟಿಕ್ ಆನೆಗಳ ಬಳಕೆ ಪರ್ಯಾಯ ಆಯ್ಕೆ ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತ ಆನೆ ದಿಕ್ಕೆಟ್ಟು…
ಲಕ್ಷ್ಮೀಕಾಂತ್ ಕೊಮಾರಪ್ಪ ಅರೇಬಿಕಾ ಕಾಫಿ ತಳಿಯನ್ನೇ ಹೆಚ್ಚಾಗಿ ಕಾಡುತ್ತಿರುವ ರೋಗ ಫಸಲು ನೀಡುವ ಗಿಡಗಳೇ ನಾಶ, ಬೆಳೆಗಾರರಿಗೆ ಆರ್ಥಿಕ ಸಂಕಷ್ಟ …
ಕೆ.ಬಿ.ರಮೇಶನಾಯಕ ಅರಮನೆ, ವಸ್ತುಪ್ರದರ್ಶನ, ಮೃಗಾಲಯ, ದೀಪಾಲಂಕಾರ ಕಣ್ತುಂಬಿಕೊಂಡ ಪ್ರವಾಸಿಗರು ಮೈಸೂರು: ದಸರಾ ಮಹೋತ್ಸವ ಮುಗಿದರೂ ಅರಮನೆ ಸೇರಿದಂತೆ ಸುತ್ತಮುತ್ತಲ ಪ್ರವಾಸಿ…
ಭೇರ್ಯ ಮಹೇಶ್ ಕೆ.ಆರ್.ನಗರ-ಸಾಲಿಗ್ರಾಮ ಅವಳಿ ತಾಲ್ಲೂಕುಗಳ ರೈತರ ಮೊಗದಲ್ಲಿ ಮಂದಹಾಸ ಕೆ.ಆರ್.ನಗರ: ಸ್ವಾತಿ ಮಳೆಯ ಅಬ್ಬರದಿಂದಾಗಿ ಮೈಸೂರು ಜಿಲ್ಲೆಯ ಕೆ.ಆರ್…