ಭೇರ್ಯ ಮಹೇಶ್
ಕೆ.ಆರ್.ನಗರ-ಸಾಲಿಗ್ರಾಮ ಅವಳಿ ತಾಲ್ಲೂಕುಗಳ ರೈತರ ಮೊಗದಲ್ಲಿ ಮಂದಹಾಸ
ಕೆ.ಆರ್.ನಗರ: ಸ್ವಾತಿ ಮಳೆಯ ಅಬ್ಬರದಿಂದಾಗಿ ಮೈಸೂರು ಜಿಲ್ಲೆಯ ಕೆ.ಆರ್ .ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕು ಗಳಲ್ಲಿ ಉತ್ತಮ ಹಿಂಗಾರು ಮಳೆಯ ಪರಿಣಾಮರಾಗಿ ಬೆಳೆಗೆ ಅತ್ಯುತ್ತಮ ವಾತಾವರಣ ನಿರ್ಮಾಣವಾಗಿದ್ದು, ರೈತರಲ್ಲಿ ಸಂತಸ ಮೂಡಿದೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆ ರೈತರ ಕೈ ಹಿಡಿದಿದೆ. ಹಾಗಾಗಿ ಅವಳಿ ತಾಲ್ಲೂಕಿನೆಲ್ಲೆಡೆ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಇದರ ಜೊತೆಗೆ ಕಳೆದ ವಾರದಿಂದ ಹಿಂಗಾರು ಮಳೆ ಅಬ್ಬರ ಜೋರಾಗಿರುವುದು ರಾಗಿ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಅಕ್ಟೋಬರ್‌ನಲ್ಲಿ ಸುರಿಯುವ ಸ್ವಾತಿ ಮಳೆಯು ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ರಾಗಿಗೆ ಅತ್ಯಂತ ಪೋಷಕಾಂಶಯುಕ್ತ ಮಳೆಯಾಗಿದ್ದು, ರಾಗಿ ನಾಟಿ ಮಾಡಿದ ಕೆಲ ರೈತರಿಗೆ ಅನುಕೂಲಕರವಾಗಿದೆ.
ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು, ರಾಗಿ ಬಿತ್ತನೆ ಮಾಡಲು ಅಥವಾ ಈಗಾಗಲೇ ಬೆಳೆದಿರುವ ಪೈರುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ರಾಗಿ ನಾಟಿ ಕಾರ್ಯ ಅವಳಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದರೆ ಕೆಲ ರೈತರು ರಾಗಿಯನ್ನು ಚೆಲ್ಲಿಕೆ ಮಾಡಿದ್ದಾರೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳು ಕಾವೇರಿ ನದಿ ಪಾತ್ರದಲ್ಲಿದ್ದರೂ, ನೀರಾವರಿ ಸೌಲಭ್ಯವಿಲ್ಲದ ಎತ್ತರದ ಪ್ರದೇಶಗಳಲ್ಲಿ ಹಾಗೂ ಒಣಭೂಮಿ ಪ್ರದೇಶಗಳಲ್ಲಿ ರಾಗಿ ಪ್ರಮುಖ ಒಣಬೇಸಾಯದ ಬೆಳೆಯಾಗಿದೆ. ಹಾಗಾಗಿ ಸ್ವಾತಿ ಮಳೆಯು ನವೆಂಬರ್ ೬ರ ತನಕ ಇರುವ ಕಾರಣದಿಂದಾಗಿ ಒಣ ಬಂಜರು ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತನೆ ಮಾಡಲಾಗಿದೆ.
” ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಅಂದಾಜು ೬೫ ಕ್ವಿಂಟಾಲ್ ರಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹಿಂಗಾರು ಮಳೆ ಅಬ್ಬರದಿಂದಾಗಿ ರೈತರು ರಾಗಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.”
-ಸುಹಾಸಿನಿ, ಸಹಾಯಕಕೃಷಿನಿರ್ದೇಶಕಿ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕು
” ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಸ್ವಾತಿ ಮಳೆ ಅಬ್ಬರ ಜೋರಾಗಿದೆ. ಮಳೆಯಿಲ್ಲದೇ ನಾಲೆಗೆ ಕಟ್ಟು ನೀರು ಬಿಡಲಾಗುತ್ತಿತ್ತು. ಈಗ ಕಾವೇರಿ ನದಿಯಲ್ಲಿ ಹೆಚ್ಚಾಗಿ ನೀರು ಹರಿದುಬರುತ್ತಿದೆ. ಭತ್ತದ ಫಸಲು ಉತ್ತಮವಾಗಿ ಬರುವ ನಿರೀಕ್ಷೆ ಇದೆ. ಭತ್ತಕ್ಕೆ ಯಾವುದೇ ರೋಗಗಳು ಬಾರದಂತಾಗಿದೆ. ಈಗಲಾದರೂ ಖಾಲಿ ಇರುವ ಕೆರೆಕಟ್ಟೆಗಳನ್ನು ಅಧಿಕಾರಿಗಳು ತುಂಬಿಸಲಿ.”
-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ
ಕೆ.ಬಿ.ರಮೇಶನಾಯಕ ಅರಮನೆ, ವಸ್ತುಪ್ರದರ್ಶನ, ಮೃಗಾಲಯ, ದೀಪಾಲಂಕಾರ ಕಣ್ತುಂಬಿಕೊಂಡ ಪ್ರವಾಸಿಗರು ಮೈಸೂರು: ದಸರಾ ಮಹೋತ್ಸವ ಮುಗಿದರೂ ಅರಮನೆ ಸೇರಿದಂತೆ ಸುತ್ತಮುತ್ತಲ ಪ್ರವಾಸಿ…
ಬೆಂಗಳೂರು: ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ…
ಬೆಂಗಳೂರು: ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆಗಳು ನಡೆಯುತ್ತಿವೆ. ಮುಂದಿನ ಡಿಸೆಂಬರ್ ಅಂತ್ಯ ಅಥವಾ…
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಮತ್ತೆ ಒಳಹರಿವು ಹೆಚ್ಚಾಗಿದೆ. ಜಲಾಶಯಕ್ಕೆ 9,457 ಕ್ಯುಸೆಕ್…
ಮೈಸೂರು ಜೆಪಿ ನಗರ ರಿಂಗ್ ರಸ್ತೆಯ ರೈಲ್ವೆ ಅಂಡರ್‌ಬ್ರಿಡ್ಜ್ ಬಳಿಯ ಶ್ರೀನಗರ ಬಡಾವಣೆಗೆ ಹೋಗುವ ರಸ್ತೆಯು ರೈಲ್ವೆ ಕ್ರಾಸಿಂಗ್ ದಾಟಿ…