ಮಹಿಳೆ ಸಬಲೆ

ಪರಸ್ಪರ ಅರಿತು ಬಾಳಿದರೆ ಸ್ವರ್ಗ ಸುಖ

ಗಂಡ-ಹೆಂಡತಿ ಸಂಬಂಧ ಏಳೇಳು ಜನುಮದ ಅನುಬಂಧ ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚಿನದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪ, ಜಗಳ, ಹೊಡೆದಾಟ, ಕೆಲವೊಮ್ಮೆ ಜಗಳ ತೀರಾ ಅತಿರೇಕಕ್ಕೆ ತಲುಪಿ ಜೀವ ತೆಗೆಯುವ ಹಂತಕ್ಕೆ ತಲುಪುತ್ತಿರುವುದನ್ನು ಕಾಣುತ್ತಿದ್ದೇವೆ.

ಹಿಂದಿನ ಅವಿಭಕ್ತ ಕುಟುಂಬಗಳಿಗೆ ಬದಲಾಗಿ, ನಾವಿಬ್ಬರು – ನಮಗಿಬ್ಬರು ಅಥವಾ ಒಬ್ಬರು, ಇಲ್ಲವೇ ಮಕ್ಕಳಾದರೆ ಸ್ವಚ್ಛಂದವಾಗಿರಲು ಆಗುವುದಿಲ್ಲ ಎಂಬ ಕಾರಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ಹೆಸರಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದನ್ನೇ ಮುಂದೂಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ದಂಪತಿಗಳು ನಗರದ ವಿಲಾಸಿ ಜೀವನದ ಬದುಕಿಗೆ ಹಾತೊರೆಯುತ್ತಾ, ಇಬ್ಬರೂ ದುಡಿಯಲು ಹೋಗುತ್ತಾ ಒತ್ತಡಕ್ಕೆ ಸಿಲುಕಿ ವೈವಾಹಿಕ ಜೀವನ ಹಾಳು ಮಾಡಿ ಕೊಳ್ಳುತ್ತಿರುವ ಸಂಗತಿಗಳು ಅಪರೂಪವೇನಲ್ಲ.

ಗಂಡ-ಹೆಂಡತಿ ಪರಸ್ಪರ ಅರಿತು ಮುನ್ನಡೆದರೆ ಜೀವನ ಹಾಲು- ಜೇನಿನಂತಿರುತ್ತದೆ. ಆದರೆ, ನಗರ ಜೀವನದಲ್ಲಿ ಇಬ್ಬರೂ ದುಡಿಯಲು ಹೋಗುವುದರಿಂದ ಇಗೊ ಬೆಳೆಸಿಕೊಂಡು ಸಣ್ಣಪುಟ್ಟ ವಿಷಯಗಳಿಗೂ ಕಾಲು ಕೆರೆದು ಜಗಳವಾಡುವ ದಂಪತಿ ಅನೇಕ ಅವಾಂತರಗಳನ್ನು ಸೃಷ್ಟಿಸಿಕೊಂಡು,ಡಿವೋರ್ಸ್ ಹಂತಕ್ಕೆ ತಲುಪಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕೆಂದರೆ ಗಂಡ-ಹೆಂಡತಿ ನಡುವೆ ಭಾವನಾತ್ಮಕ ಬಾಂಧವ್ಯ ಖಂಡಿತವಾಗಿ ಇರಲೇಬೇಕು.

ಪರಸ್ಪರ ಅರಿತುಕೊಂಡು ಹೊಂದಾಣಿಕೆಯಿಂದ ಮುನ್ನಡೆದರೆ ಸುಖೀ ಜೀವನ ಸಾಧ್ಯ. ವಿಶೇಷವಾಗಿ ದಂಪತಿಗಳ ನಡುವೆ ಸಂವಹನ ಉತ್ತಮವಾಗಿರಬೇಕು. ಆಗ ವೈವಾಹಿಕ ಸಂಬಂಧವೂ ಗಟ್ಟಿಯಾಗಿರುತ್ತದೆ. ಹೊಗಳಿಕೆಗೆ ಬರ ಬೇಡ ಗಂಡ-ಹೆಂಡತಿ ನಡುವೆ ಪರಸ್ಪರ ಸಣ್ಣಪುಟ್ಟ ವಿಷಯಗಳಿಗೆ ಹೊಗಳಿಕೆಯ ಮಾತುಗಳನ್ನಾಡುತ್ತಿರಬೇಕು. ಹೀಗೆ ಮಾಡುವುದರಿಂದ ದಾಂಪತ್ಯದ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ. ಹೀಗಾಗಿ ದಂಪತಿಯ ನಡುವೆ ಸಣ್ಣಪುಟ್ಟ ಹೊಗಳಿಕೆಯ ಮಾತುಗಳಿಗೆ ಬರ ಬಾರದಿರಲಿ.

ಹೊಗಳಿಕೆಯ ಭರದಲ್ಲಿ ಪರಸ್ಪರ ಒಬ್ಬರಿ ಗೊಬ್ಬರು ಕಾಲೆಳೆಯುವ ಪ್ರಯತ್ನ ಬೇಡ. ಗಂಡನ ಆಸೆಗಳಿಗೆ ಹೆಂಡತಿ, ಹೆಂಡತಿಯ ಆಸೆಗಳಿಗೆ ಗಂಡ ಬೆಂಬಲ ಕೊಡುವುದನ್ನು ಮಾಡುತ್ತಿರಬೇಕು. ಈ ರೀತಿಯ ಸಕಾರಾತ್ಮಕ ಅಂಶಗಳು, ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುತ್ತವೆ. ಎಷ್ಟೇ ಅನ್ಯೋನ್ಯವಾಗಿದ್ದರೂ ಹೆಂಡತಿಯಾದವಳು ಕೆಲ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ. ದೈಹಿಕ ಅನ್ಯೋನ್ಯತೆ ಎಂದರೆ ಕೇವಲ ದೈಹಿಕ ಸಂಪರ್ಕವಲ್ಲ.

ನಿಮ್ಮ ಸಂಗಾತಿಯೊಂದಿಗಿನ ರಸಘಳಿಗೆಗಳನ್ನು ಆಸ್ವಾದಿಸಿರಿ. ಒಟ್ಟಿಗೇ ಪುಸ್ತಕ ಓದುವುದು, ಒಟ್ಟಿಗೇ ಸಿನಿಮಾ ನೋಡುವುದು ಹೀಗೆಲ್ಲಾ ಒಟ್ಟಿಗೇ ಸಮಯ ಕಳೆಯುವುದರಿಂದ ಸಂಬಂಧ ಬಲಗೊಳ್ಳುತ್ತದೆ. ಗುಣಮಟ್ಟದ ಸಮಯ ಕಳೆಯಿರಿ ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಭವಿಷ್ಯದ ಬಗ್ಗೆ ಚಿಂತೆ ಮಾಡುವುದರಿಂದ ದುಡಿಮೆ, ಸಂಪಾದನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಗಂಡ-ಹೆಂಡತಿ ಪರಸ್ಪರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದು ದಾಂಪತ್ಯ ದಲ್ಲಿ ವಿರಸಕ್ಕೆ ಕಾರಣವಾಗುತ್ತಿದೆ.

ಹೀಗಾಗಿ ಕುಟುಂಬಕ್ಕೂ ಒಂದಷ್ಟು ಸಮಯವನ್ನು ಮೀಸಲಿಡಿ. ವಾರಾಂತ್ಯಗಳಲ್ಲಿ ಪ್ರವಾಸಕ್ಕೆ ತೆರಳುವ, ಹೊರಗೆ ಡಿನ್ನರ್‌ಗೆ ಹೋಗುವ ಮೂಲಕ ಗಂಡ-ಹೆಂಡತಿ ಸಾಧ್ಯವಾದಷ್ಟು ಒಟ್ಟಿಗೇ ಸಮಯ ಕಳೆಯುವುದನ್ನು ರೂಢಿಸಿ ಕೊಳ್ಳಬೇಕು. ದಾಂಪತ್ಯ ಜೀವನ ಸುಖಮಯ ವಾಗಿರಲು ಇವು ಅನಿವಾರ್ಯ ಕೂಡ. ಪರಸ್ಪರ ನಂಬಿಕೆ ಇರಲಿ ಯಾವುದೇ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ.

ಗಂಡ-ಹೆಂಡತಿಯ ನಡುವೆ ನಂಬಿಕೆ-ವಿಶ್ವಾಸ ಗಟ್ಟಿಯಾಗಿರಬೇಕು. ಹೀಗಿದ್ದಾಗ ಮಾತ್ರ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ಕಷ್ಟ-ಸುಖವನ್ನು ಅರಿತು ಮುನ್ನಡೆದಾಗ ಡಿವೋರ್ಸ್‌ಗೆ ಅಲ್ಲಿ ಆಧ್ಯತೆ ಬರುವುದಿಲ್ಲ. ಕುಡಿಯಲು ಹಣ ನೀಡಲಿಲ್ಲ, ಅಡುಗೆ ಸರಿಯಾಗಿ ಮಾಡಲಿಲ್ಲ, ಬೇಡವೆಂದರೂ ತವರು ಮನೆಗೆ ಹೋದಳು ಎಂಬ ಕ್ಷುಲ್ಲಕ ಕಾರಣಗಳಿಗೆ ಪತ್ನಿಯನ್ನು ಹೊಡೆದು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗುವ ವಿಷಯಗಳು ಈಗೀಗ ಸಾಮಾನ್ಯವಾಗಿವೆ. ತನ್ನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯನ್ನೇ ಮಾಡದೆ ಕ್ಷಣಿಕ ಸುಖಕ್ಕಾಗಿ ಬೆಳೆಸುವ ಅಕ್ರಮ ಸಂಬಂಧಗಳು ಜೀವಕ್ಕೆ ಎರವಾಗುವುದು ಮಾತ್ರವಲ್ಲ, ಜೀವನವನ್ನೇ ಬಲಿ ಪಡೆದುಕೊಳ್ಳುತ್ತಿವೆ. ಹೀಗಾಗಿ ಗಂಡ- ಹೆಂಡತಿ ಅರಿತು ಬಾಳಿದರೆ ಸ್ವರ್ಗ ಸುಖ ಎಂಬುದರಲ್ಲಿ ಎರಡು ಮಾತಿಲ್ಲ.

ಆಂದೋಲನ ಡೆಸ್ಕ್

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

5 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

5 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

6 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

7 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

7 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

10 hours ago