ಮಹಿಳೆ ಸಬಲೆ

ಹದಿಹರೆಯದ ಆತಂಕಗಳಿಗೆ ಆಯುರ್ವೇದ ಪರಿಹಾರಗಳು

ಡಾ. ಚೈತ್ರ ಸುಖೇಶ್

ಮನುಷ್ಯನ ಬೆಳವಣಿಗೆಯ ಹಾರ್ಮೋನ್ ನಮ್ಮ ಮಿದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್‌ನ ಉತ್ಪಾದನೆ ಒಬ್ಬರಲ್ಲಿ ಹೆಚ್ಚಾದರೆ ಅವರು ಎತ್ತರವಾಗಿ ಬೆಳೆಯು ತ್ತಾರೆ. ಕಡಿಮೆ ಉತ್ಪತ್ತಿಯಾದರೆ ಅವರು ಕುಳ್ಳರಾಗುತ್ತಾರೆ.

ಹದಿಹರೆಯದವರಲ್ಲಿ ಶಾರೀರಿಕ ಬೆಳವಣಿಗೆ ತೀರಾ ಕುಂಠಿತವಾದಾಗ ಅಥವಾ ಅವರಿಗೆ ತೀರಾ ಅತಿಯಾಗಿ ಸ್ರವಿಕೆಯಾಗುವಾಗ ವೈದ್ಯರನ್ನು ಕಾಣಬೇಕು. ಟೆಸ್ಟೋಸ್ಟೆರಾನ್ ಪುರುಷರಲ್ಲಿ ಪುರುಷತ್ವದ ಗುಣ ಲಕ್ಷಣಗಳಿಗೆ ಕಾರಣವಾಗುತ್ತದೆ. ಹಾಗೆಯೇ ಈಸ್ಟ್ರೋಜನ್ ಹೆಣ್ಣು ಮಕ್ಕಳಲ್ಲಿ ಸ್ತ್ರೀ ತನದ ಲಕ್ಷಣಗಳಿಗೆ ಕಾರಣವಾಗುತ್ತದೆ.

ಹೀಗಾಗಿ ಬೆಳೆಯುವ ಮಕ್ಕಳಿಗೆ ಪುಷ್ಟಿಕರವಾದ ಸಮತೋಲನ ಆಹಾರ ನೀಡಬೇಕು. ಆಗ ಉತ್ತಮ ಹಾರ್ಮೋನ್ ಬೆಳವಣಿಗೆಯಾಗಿ ಮಕ್ಕಳು ಆರೋಗ್ಯವಾಗಿರಲು ಸಹಾಯಕವಾಗುತ್ತದೆ. ಬೆಳೆಯುವ ಹಂತದಲ್ಲಿರುವ ಮಕ್ಕಳು ಎಲ್ಲ ಬಗೆಯ ಬೇಳೆ ಕಾಳುಗಳು, ಸೊಪ್ಪು, ತರಕಾರಿ, ಎಲ್ಲ ಬಗೆಯ ಹಣ್ಣುಗಳು, ಹಾಲು, ಮೊಸರು ಹೀಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬೇಕು.

 

ಈ ವಯಸ್ಸಿನಲ್ಲಿ ಮಕ್ಕಳು ಅತಿಯಾದ ಕೊಬ್ಬಿನಾಂಶವಿರುವ ಆಹಾರ, ಸಕ್ಕರೆ ಮಿಶ್ರಿತ ತಿಂಡಿಗಳು, ಎಣ್ಣೆಯಲ್ಲಿ ಕರಿದ ತಿನಿಸುಗಳು, ಕೇಕ್, ಚಾಕೊಲೇಟ್, ಐಸ್‌ಕ್ರೀಂನಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡ ಬೇಕು. ಈ ಆಹಾರಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಇನ್ನು ಬೆಳವಣಿಗೆ ಹಂತದಲ್ಲಿರುವ ಮಕ್ಕಳಿಗೆ ನಾವು ಬೀದಿ ಬದಿಯ ಆಹಾರ, ಫಾಸ್ಟ್ ಫುಡ್‌ಗಳು, ಸಂಸ್ಕರಿಸಿದ ಆಹಾರ, ಸೋಡಾ ಸೇರಿಸಿದ ಆಹಾರ, ಟೇಸ್ಟ್ ಮೇಕರ್ ಮತ್ತು ಕ್ಲೋರಿನ್ ಹಾಕಿದ ಆಹಾರ ಪದಾರ್ಥಗಳನ್ನು ನೀಡಲೇಬಾರದು. ಇಂತಹ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ.

ನಿಯಮಿತ ವ್ಯಾಯಾಮ: ವೇಗದ ನಡಿಗೆ, ಸೈಕಲಿಂಗ್, ಈಜು, ಆಟ ಗಳಲ್ಲಿ ತೊಡಗುವುದು ಬೆಳೆಯುವ ಮಕ್ಕಳಿಗೆ ಅತ್ಯಗತ್ಯ. ಇದರಿಂದ ಅವರ ಮೂಳೆಗಳು ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಬೆಳೆಯುವ ಹಂತದಲ್ಲಿ ಯಾವುದೇ ಚಟುವಟಿಕೆಗಳಿಲ್ಲದಿದ್ದಲ್ಲಿ ದೈಹಿಕ ಬೆಳವಣಿ ಗೆಯು ಕುಂಠಿತವಾಗುತ್ತದೆ. ಅಲ್ಲದೆ ತೂಕ ಹೆಚ್ಚಾಗಿ ಬೊಜ್ಜು ಬರಲು ಕಾರಣವಾಗುತ್ತದೆ.

ಬೌದ್ಧಿಕ ಬೆಳವಣಿಗೆ: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿಯಾಗಬೇಕು. ಕಲಿಕೆಯಲ್ಲಿ ಆಸಕ್ತಿ, ನೆನಪಿನ ಶಕ್ತಿ, ಆಲೋಚನೆ ಮಾಡುವುದು, ವ್ಯಾವಹಾರಿಕ ಜ್ಞಾನ ಈ ಎಲ್ಲ ಬುದ್ಧಿ ಪ್ರಕಾರಗಳು ಹದಿಹರೆಯದಲ್ಲಿಯೇ ವಿಕಾಸಗೊಳ್ಳಬೇಕು.

ಪ್ರೀತಿ, ವಾತ್ಸಲ್ಯ, ಸ್ನೇಹ, ಧೈರ್ಯ, ಸಂತೋಷ ಮಕ್ಕಳಲ್ಲಿ ಹೆಚ್ಚಾಗಿ, ಭಯ, ಸಿಟ್ಟು, ದುಃಖ, ದ್ವೇಷ ಮುಂತಾದ ನಕಾರಾತ್ಮಕ ಭಾವನೆಗಳು ದೂರವಾಗಬೇಕು.

ಹದಿಹರೆಯದಲ್ಲಿ ಕಾಡುವ ಮರೆವಿನ ಸಮಸ್ಯೆಯನ್ನು ಹೋಗಲಾಡಿಸಿ, ಬುದ್ಧಿ ಶಕ್ತಿಯನ್ನು ಚುರುಕುಗೊಳಿಸಲು ಕೆಲ ವೊಂದು ಆಯುರ್ವೇದ ಮನೆಮದ್ದುಗಳು ತಂಬಾ ಸಹಕಾರಿಯಾಗಿವೆ.

  • ಶಂಖಪುಷ್ಪ ಪುಡಿಯನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಸೇವಿಸುವುದು
  • ಬ್ರಾಹ್ಮೀ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ತಿನ್ನುವುದು
  • ಪ್ರತಿದಿನ ತಲೆ ಮತ್ತು ಪಾದಗಳಿಗೆ ಎಳ್ಳೆಣ್ಣೆ ಅಥವಾ ಬ್ರಾಹ್ಮೀ ತೈಲದಿಂದ ಮಸಾಜ್ ಮಾಡುವುದು.

ಹೀಗೆ ಮಾಡುವುದರಿಂದ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ.

ಮಕ್ಕಳಲ್ಲಿ ಹಾರ್ಮೋನ್‌ ಉತ್ತಮ ರೀತಿಯಲ್ಲಿ ವೃದ್ಧಿಗೊಳ್ಳಲು ಸಹಕಾರಿಯಾಗುವ ಅಂಶಗಳು

  • ಶುದ್ಧತುಪ್ಪವನ್ನು ಮಿತಿಯಲ್ಲಿ ಸೇವಿಸಿದರೆ ಅದು ಮಿದುಳಿನ ಆರೋಗ್ಯಕ್ಕೆ ಸಹಕಾರಿ
  • ಬಜೆಗೆ ನೀರು ಹಾಕಿ ಕುದಿಸಿ ಕಷಾಯ ಮಾಡಿ ಸೇವಿಸುವುದ ರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ
  • ಬಾದಾಮಿ, ಅಶ್ವಗಂಧ ಸೇವನೆಯಿಂದ ನೆನಪಿನ ಶಕ್ತಿ ಬಲಗೊಳಿಸುತ್ತದೆ
  • ನಿತ್ಯ ಬ್ರಾಹ್ಮೀ ತೈಲವನ್ನು ಉಪಯೋಗಿಸುವುದು ಒಳಿತು
  • ಬೂದುಗುಂಬಳಕಾಯಿ ರಸಕ್ಕೆ ತುಪ್ಪ ಮತ್ತು ಕಲ್ಲು ಸಕ್ಕರೆ ಸೇರಿಸಿ ಸೇವಿಸುವುದರಿಂದ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ
  • ನೆಲ್ಲಿಕಾಯಿ ರಸ, ಕೇಸರಿ ಹಾಕಿದ ಹಾಲು ಸೇವನೆ ಕೂಡ ಉತ್ತಮ
  • ವೃಕ್ಷಾಸನ, ಪ್ರಾಣಾಯಾಮ, ಏಕಾಗ್ರತೆ, ಜ್ಞಾಪನ ಶಕ್ತಿ ಹೆಚ್ಚಿಸಲು ಸಹಕಾರಿ

 

ಆಂದೋಲನ ಡೆಸ್ಕ್

Recent Posts

ಎಸ್‌ಸಿ, ಎಸ್‌ಟಿಗಳ ಹಕ್ಕು ರಕ್ಷಣೆಗೆ ಕ್ರಮ : ಡಾ.ಮೂರ್ತಿ

ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು…

4 hours ago

ಬೆಂಕಿ ಅವಘಡ | ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲು ಸೂಚನೆ ಕೊಟ್ಟ ಯತೀಂದ್ರ ಸಿದ್ದರಾಮಯ್ಯ!

ಮೈಸೂರು : ಸೋಮವಾರ ಪಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ…

5 hours ago

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ತಮಿಳುನಾಡು ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್‌ ಬಂಪರ್‌ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ…

8 hours ago

ಮುಂಗಾರು ಕೊರತೆ: ಹಾರಂಗಿ ಜಲಾಶಯದ ಒಳಹರಿವು ತೀವ್ರ ಕುಸಿತ

ಮಡಿಕೇರಿ: ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲವಾದರೂ ಜಿಲ್ಲೆಯಲ್ಲಿ ಮಳೆ…

10 hours ago

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮು ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ…

11 hours ago

ನಟ ವಿಜಯ್‌ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್‌ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ…

12 hours ago