ಹಾಡು ಪಾಡು

ಸ್ಥಿರತೆಯೇ ಇಲ್ಲದ ಅತಂತ್ರ ಬದುಕು ಇವರದು

ಅಮಿತಾ ರವಿಕಿರಣ್, ಬೆಲ್ಛಾಸ್ಟ್

‘ದೇವರ ಮನೆಯಿದು ಈ ಜಗವೆಲ್ಲ ಬಾಡಿಗೆ ದಾರರು ಜೀವಿಗಳೆಲ್ಲ’ ಎಂಬ ಹಾಡನ್ನು ಕೇಳಿದಾಗಲೆಲ್ಲ, ನನಗೆ ನಾವೆಲ್ಲ ನಿರಾಶ್ರಿತರೇ ಎಂದೆನಿಸುತ್ತದೆ. ಆದರೆ ನಾವು ಮನುಷ್ಯರು ನಿರಾಶ್ರಿತ ನಿರ್ಗತಿಕರೆಂದು ಗುರುತಿಸುವ ಮಂದಿಯೇ ಬೇರೆ. ಅವರನ್ನು ನೋಡುವ ದೃಷ್ಟಿ ಕೋನವೂ!

ಆದರೂ ತಾವು ಹುಟ್ಟಿದ ಭೂ ಭಾಗವನ್ನುಬಿಟ್ಟು, ಬದುಕಬೇಕು, ಸಾಮಾನ್ಯ ಮನುಷ್ಯ ಜೀವನ ನಡೆಸಬೇಕು ಎಂಬ ಕಿಂಚಿತ್ ಆಸೆಯೊಂದಿಗೆ, ತಮ್ಮ ಭಾಷೆ ಮಾತಾಡದ, ಪರಿಚಿತರೇ ಇಲ್ಲದ ಮತ್ತೊಂದು ನಾಡಿಗೆ ರಾತ್ರೋರಾತ್ರಿ ಹೊರಟು ಬರುವುದು ಸಾಮಾನ್ಯ ನಿರ್ಧಾರವಲ್ಲ. ಅಂಥಾ ಧೈರ್ಯವಂತರನ್ನೇ ನಮ್ಮ ಸಮಾಜ ನಿರಾಶ್ರಿತರು ಎಂದು ಕರೆಯುತ್ತದೆ.

ಮುಂಡಗೋಡದಲ್ಲಿ ಹುಟ್ಟಿ ಬೆಳೆದ ನನಗೆ ನಿರಾಶ್ರಿತ ಪದ ಕೇಳುವುದು, ಅಥವಾಜನರನ್ನು ನೋಡುವುದು ಹೊಸದೇನಲ್ಲ. ಆದರೆ ಯುಕೆಗೆ ಬಂದಮೇಲೆಯೇ ಆ ಪದವಿ ಹೊತ್ತ ಸಾಮಾನ್ಯ ಜನರ ಅಸಾಮಾನ್ಯ ಪಯಣದ ಕಥೆಯನ್ನು ಕೇಳಲು ಸಿಕ್ಕಿದ್ದು. ಅವರ ಜೀವನವನ್ನು ಹತ್ತಿರದಿಂದ ನೋಡಲು, ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು. ಹುಟ್ಟಿದ ನೆಲದಲ್ಲಿ ಆದ ರಾಜಕೀಯ ಸ್ಥಿತ್ಯಂತರಗಳು ಮತ್ತು ಅವು ತಂದೊಡ್ಡಿದ ಯುದ್ಧ ಭೀತಿ ಒಂದಷ್ಟು ಜನರನ್ನು ಈ ನಾಡಿಗೆ ಪುಟ್ಟ ದೋಣಿಗಳಲ್ಲಿ ತುಂಬಿ ತಂದರೆ, ಓದುವ, ಬರೆಯುವ, ಚಿತ್ರ ಬಿಡಿಸುವ, ಹಾಡುವ, ನುಡಿಸುವ ಎಲ್ಲಾ ಸೃಜನಶೀಲ ಕೆಲಸಗಳನ್ನು ಹರಾಮ್ ಎಂದ ದೇಶದಿಂದ ಬರೀ ಓದುವ, ಕಲಿಯುವ ಆಸೆ ಹೊತ್ತು ಈ  ನಾಡಿಗೆ ಬಂದ ಯುವಜನರು ಅದೆಷ್ಟೋ.

ಸಂಗೀತ ಕಲಾವಿದೆ ಆದ್ದರಿಂದ, workshop, ಗಾಯನ ಕಾರ್ಯಕ್ರಮ ಅಂತೆಲ್ಲ ಇವರನ್ನೆಲ್ಲ ಪದೇ ಪದೇ ಭೇಟಿ ಆಗಿದ್ದೇನೆ. ಒಮ್ಮೆ ಭೇಟಿ ಆದವರು ಇನ್ನೆಂದೂ ಸಿಗದೇ ಬೇರೆ ಊರಿಗೆ ಹೋಗಿಬಿಡುವ ಸಾಧ್ಯತೆಯೂ ಬಹಳಷ್ಟು. Home office ಕಟ್ಟಡವನ್ನು ಕಂಡು ಕೈಮುಗಿದವರನ್ನು ನೋಡಿ ವಿಸ್ಮಯಗೊಂಡಿದ್ದೇನೆ. ಯಾವಾಗ ಇಲ್ಲಿಂದ ಎತ್ತಂಗಡಿ ಮಾಡುತ್ತಾರೋ ಎಂದು ಗೊತ್ತಿಲ್ಲದೆ ನಲುಗುವ, ಬಿಕ್ಕುವ ಜನರಿಗೆ ಸಾಂತ್ವನ ಹೇಳಲೂ ಪದಗಳಿಲ್ಲದೆ ಮೌನವಾಗಿ ನಿಂತು ಅವರನ್ನು ದಿಟ್ಟಿಸಿದ್ದೇನೆ.

ತನ್ನ ೧೧ ವರ್ಷದ ಮಗಳೊಂದಿಗೆ ಅದ್ಯಾವುದೋ ಹಳ್ಳಿಯ ಪುಟ್ಟ ರೂಮ್‌ನಲ್ಲಿ ಉಳಿದುಕೊಂಡಿರುವ ಮುಜ್ಗಾನ್ ತನ್ನ ದೇಶದಲ್ಲಿ ಒಳ್ಳೆಯ ಹೆಸರುಗಳಿಸಿದ್ದ ಇಂಟೀರಿಯರ್ ಡಿಸೈನರ್. ಸಿತಾರ್ ಎಂಬ ಇರಾನಿಯನ್ ವಾದ್ಯ ನುಡಿಸುವ ಒನಿಡ್, ೪ ವರ್ಷ ಒಂದು ದೇಶದಲ್ಲಿದ್ದು, ಅಲ್ಲೇ ತನ್ನ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಿದ್ದ.ಮರುದಿನವೇ ಆತನಿಗೆ ಅಲ್ಲಿಂದ ತೆರಳಬೇಕು ಎಂಬ ಆದೇಶ ಬಂತು.

ಸಾಝ್ ನುಡಿಸಿ ಹಾಡುವ ಮೂರು ಮಕ್ಕಳ ತಂದೆ ಸಮ್ಹಾರ್ ಇರಬಹುದು. ತನ್ನ ತಾಯಿಯನ್ನು ಅಲ್ಲೇ ಬಿಟ್ಟು ಬಂದಿರುವ ವಾಹ್ಲಾಲ ಇರಬಹುದು. ಎಲ್ಲರ ಬದುಕು ksph ಆಫೀಸಿನಿಂದ ಬರುವ ಒಂದು ಹಾಳೆಯ ಮೇಲೆ ಅವಲಂಬಿತವಾಗಿದೆ. ಎಷ್ಟೋ ಸಂಘಟನೆಗಳು ಈ ನಿಟ್ಟಿನಲ್ಲಿ, refugeeಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದರೂ ಸ್ಥಿರತೆ ಇರದೆ ಯಾವ ಮನಸ್ಸು ತಾನೇ ನೆಮ್ಮದಿಯಲ್ಲಿದ್ದೀತು?

” ಯಾವಾಗ ಇಲ್ಲಿಂದ ಎತ್ತಂಗಡಿ ಮಾಡುತ್ತಾರೋ ಎಂದು ಗೊತ್ತಿಲ್ಲದೆ ನಲುಗುವ, ಬಿಕ್ಕುವ ಜನರಿಗೆ ಸಾಂತ್ವನ ಹೇಳಲೂ ಪದಗಳಿಲ್ಲದೆ ಮೌನವಾಗಿ ನಿಂತು ಅವರನ್ನು ದಿಟ್ಟಿಸಿದ್ದೇನೆ.”

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

7 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

20 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

21 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

21 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

21 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

21 hours ago