ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ ವಿದ್ಯಮಾನ. ಮೂಲತಃ ಮುಷ್ಕರದ ಉದ್ದೇಶವೇ ಔದ್ಯಮಿಕ ಸೇವೆ-ಕಾರ್ಯಾಚರಣೆಗಳಿಗೆ ಭಂಗ ಉಂಟುಮಾಡುವುದು. ತನ್ಮೂಲಕ ಗ್ರಾಹಕರಿಗೆ ಅನಾನುಕೂಲ ಉಂಟುಮಾಡುವುದು. ಇದು ಕಾರ್ಮಿಕ ಹೋರಾಟದ ಒಂದು ಶಾಂತಿಯುತ ಮಾರ್ಗ. ಗಾಂಽ, ಅಂಬೇಡ್ಕರ್ ಇವರೆಲ್ಲರೂ ಇದನ್ನೇ ಅನುಸರಿಸಿದ್ದಾರೆ.
ಇತ್ತೀಚಿನ ಬ್ಯಾಂಕ್ ನೌಕರರ ಮುಷ್ಕರವೂ ಇದೇ ಹಾದಿಯಲ್ಲಿದೆ. ಸರಣಿ ರಜೆ ಇರುವ ಸಮಯದ ಹಿಂದಿನ-ಮುಂದಿನ ದಿನ ಮುಷ್ಕರ ಹೂಡುವ ಮೂಲಕ ಬ್ಯಾಂಕ್ ನೌಕರರು ಐಬಿಎ ಗೆ ಒಂದು ಸ್ಪಷ್ಟ ಸಂದೇಶ ನೀಡಿzರೆ.
ಗ್ರಾಹಕರಿಗೆ ತೊಂದರೆಯಾಗುವುದು ಸಹಜ ಅದನ್ನು ನಿವಾರಿಸುವುದು ಬ್ಯಾಂಕುಗಳ ಜವಾಬ್ದಾರಿ. ಕಾರ್ಮಿಕ ಸಂಘಗಳದ್ದಲ್ಲ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶೇಕಡಾ ೮೦ರಷ್ಟು ವಹಿವಾಟುಗಳಿಗೆ ಯಾವುದೇ ಭಂಗ ಉಂಟಾಗುವುದಿಲ್ಲ. ಬ್ಯಾಂಕ್ ಯೂನಿಯನ್‌ಗಳಲ್ಲಿ ಐಕ್ಯತೆ ಇದ್ದರೆ , ಆನ್‌ಲೈನ್ ಸೇವೆಗೆ ಭಂಗ ಉಂಟಾಗುವಂತೆ ಮುಷ್ಕರ ಹೂಡಬಹುದು.
೧೬-೦೯-೨೦೧೬ರ ‘ಆಂದೋನಲ’ ಪತ್ರಿಕೆಯ ಓದುಗರ ವಿಭಾಗದಲ್ಲಿ ಬೂಕನಕೆರೆ ವಿಜೇಂದ್ರ ಅವರು ಈ ಮುಷ್ಕರ ಹೂಡಿದ ಯೂನಿಯನ್‌ಳ ವಿರುದ್ಧ ಆರ್‌ಬಿಐ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿzರೆ. ಆರ್‌ಬಿಐಗೂ ಐಬಿಎ ವಿರುದ್ಧದ ಮುಷ್ಕರಕ್ಕೂ ಸಂಬಂಧವೇ ಇಲ್ಲ. ಕಾರ್ಮಿಕರು ಒಂದು ದಿನದ ವೇತನ ಕಳೆದುಕೊಂಡು ಮುಷ್ಕರ ಹೂಡುತ್ತಾರೆ. ನಾಲ್ಕು ದಿನಗಳು ಕಳೆದು ಶಾಖೆಗಳಲ್ಲಿ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಅವರೇ ನಿರ್ವಹಿಸುತ್ತಾರೆ. ಇದೇ ಶಿಕ್ಷೆ ಅಲ್ಲವೇ ?
-ನಾ. ದಿವಾಕರ, ಮೈಸೂರು
ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…
ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…
ನ್ಯಾಯಬೆಲೆ ಅಂಗಡಿಗಳ ಗ್ರಾಹಕರ ಮನವಿಗೆ ಸರ್ಕಾರದ ಸ್ಪಂದನೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12; ಸಂಜೆ 4ರಿಂದ ರಾತ್ರಿ 8…
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…