ರಮ್ಯ ಕೆ ಜಿ ಮೂರ್ನಾಡು
ನಾನು ಸಣ್ಣವಳಿದ್ದಾಗ ನಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾರಣ ಭಾನುವಾರ ನಮ್ಮಪ್ಪ ಪಿಚ್ಚರ್ ನೋಡಲು ಅವರ ಪರಿಚಯವಿರುವ ಒಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಟಿವಿ, ಹಾಲ್‌ನಲ್ಲಿದ್ದ ಕಾರಣ ನಾವು ಮನೆಯಿಂದ ಆಚೆ ಅಂದ್ರೆ ಹೊರಗಡೆ ಕೂತು ಪಿಚ್ಚರ್ ನೋಡ್ತಿದ್ದೆವು. ಆಗೊಂದು ದಿನ ‘ಹೇಮಾವತಿ’ ಪಿಚ್ಚರ್ ಹಾಕಿದ್ರು. ಅದ್ರಲ್ಲಿ ಹೀರೋ ಶ್ರೀನಿವಾಸಮೂರ್ತಿಯವರಿಗೆ ಬ್ರಾಹ್ಮಣ್ರು ಕೆಲವ್ರು “ನಮ್ ಸಂಸ್ಕಾರ, ಸಂಸ್ಕ ತಿ ಹಾಳ್ಮಾಡ್ದೆ‘ ಅಂತೆಲ್ಲ ಬೈತಿದ್ರು. ಶ್ರೀನಿವಾಸಮೂರ್ತಿ ಅವರಿಗೆಲ್ಲ ಮಾನವೀಯತೆಯ ಪಾಠ ಹೇಳ್ತಿದ್ದ. ಆಗ ನನ್ನಪ್ಪನ ಮುಖದಲ್ಲಿ ಎಂಥದ್ದೋ ಮಿಂಚು ಹೊಳಿತಿತ್ತು. ಆ ಮಿಂಚಿಗೆ ಕಾರಣ ಏನು ಅನ್ನೋದು ಆಗ ಗೊತ್ತಾಗಿರ್ಲಿಲ್ಲ. ಇತ್ತೀಚೆಗೆ ಮತ್ತೆ ಆ ಸಿನಿಮಾನ ನೋಡ್ದಾಗ ನನ್ನಪ್ಪನೊಳಗಿನ ಮಿಂಚಿಗೆ ಕಾರಣ ಗೊತ್ತಾಯ್ತು. ಅದೇ ಆ ಮನೆಯವರು, ಇಂದು ನನ್ನನ್ನು ಮನೆಯೊಳಗೆ ಕರೆದು, ಸೋಫಾದಲ್ಲಿ ಕೂರಿಸಿ, ಕಾಫಿ ಕೊಡುತ್ತಾರಂದ್ರೆ ಇದು ಸಾಧ್ಯವಾದದ್ದು ಸಂವಿಧಾನದಿಂದ.
ನನ್ನೂರು ಕೊಡಗು. ನಾನು ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು. ಇಲ್ಲಿನ ಮೂಲನಿವಾಸಿಗಳಾಗಿದ್ದೂ, ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿರುವ ಅನೇಕ ಸಮುದಾಯಗಳೊಂದಿಗೆ ಶತಮಾನಗಳಾಚೆ ಕೊಡಗಿಗೆ ವಲಸೆ ಬಂದ ನಮ್ಮ ಸಮುದಾಯದ ಅನೇಕರಿಗೆ ಇಂದಿಗೂ ಮನೆಗಳಿಲ್ಲ.
ನನ್ನಮ್ಮನಂತೆ ಅನಕ್ಷರಸ್ಥರೂ, ಮತ್ತು ಅಕ್ಷರಸ್ಥರಾಗಿಯೂ ಶಿಕ್ಷಣ ವಂಚಿತರಾದ ಅನೇಕರು ಇಲ್ಲಿನ ತೋಟಗಳಲ್ಲಿ ಇಂದಿಗೂ ಕೂಲಿಯಾಳುಗಳಾಗಿಯೇ ಉಳಿದು ಹೋಗಿರುವುದಕ್ಕೆ ಕಾರಣ ಉಳ್ಳವರು ಹೇಳುವ ದುಶ್ಚಟಗಳೊಂದೇ ಅಲ್ಲವೆನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ನನ್ನಪ್ಪ ಹೇಳಿದ ಒಂದು ಸಂಗತಿ ನೆನಪಾಗುತ್ತದೆ. ಆ ಕಾಲಕ್ಕೆ ಮೂರ್ನಾಡಿನಲ್ಲಿದ್ದ ಇಂಗ್ಲಿಷ್ ಮೀಡಿಯಂ ಶಾಲೆಗೆ ನನ್ನನ್ನು ಸೇರಿಸುವ ಬಯಕೆಯಾದಾಗ, ಅಲ್ಲಿನ ಮ್ಯಾನೇಜ್ಮೆಂಟ್‌ಗೆ ಕೇಳಿ, ಸ್ವಲ್ಪ ಸ್ವಲ್ಪವೇ ಫೀಸ್ ಕಟ್ತೀನಿ ಅಂತ ನನ್ನಪ್ಪ ಕೋರಿಕೊಂಡಾಗ್ಯೂ, ಮ್ಯಾನೇಜ್ಮೆಂಟ್ ಒಪ್ಪದ ಕಾರಣ ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಬೇಕಾಯ್ತಂತೆ. ಈ ಸರ್ಕಾರಿ ಶಾಲೆಯೂ ಇಲ್ಲದೇ ಹೋಗಿದ್ದಿದ್ದರೆ! ಮತ್ತು ಶಿಕ್ಷಣ ಎಲ್ಲರಿಗೂ ಸಿಗಬೇಕೆಂದು ಸಂವಿಧಾನದಲ್ಲಿ ಇಲ್ಲದೇ ಹೋಗಿದ್ದಿದ್ದರೆ! ನೆನೆದರೇ ದಿಗಿಲು ನನಗೆ!
ಶಾಲೆಗಳಲ್ಲಿ ನನ್ನ ಕಲಿಕೆ ನೋಡಿ ನಮ್ಮಪ್ಪನಿಗೆ ಖುಷಿಯಾಗುತ್ತಿತ್ತು. ಆದರೆ ಯಾರ್ಯಾರೋ “ಹುಡುಗೀರ್ನ ಯಾಕೆ ಓದಿಸ್ತೀಯ?” ಅಂತ ಕೇಳ್ತಿದ್ರಂತೆ. ಆದ್ರೆ ನನ್ನೊಂದಿಗೆ ನನ್ನ ತಂಗಿ, ತಮ್ಮಂದಿರನ್ನೂ ಶಾಲೆಗೆ ಕಳಿಸಿದ ನನ್ನಪ್ಪ ಮತ್ತು ಅಮ್ಮನ ಪ್ರಜ್ಞೆಯ ಕಾರಣವಾಗಿ ನಾನೀಗ ಇಂದು ಸಂವಿಧಾನ ನೀಡಿದ ಮೀಸಲಾತಿಯ ಉಪಯೋಗದಿಂದ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದೇನೆ. ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ.
” ಮಾನವತೆಯ ಮಹಾಶಕ್ತಿಯಾಗಿರುವ ಸಂವಿಧಾನವೇ ನಮ್ಮ ಬದುಕಿನ ಬೆಳಕು ಎಂದು ನನ್ನೊಳಗನ್ನು ಮತ್ತೆ ಎಚ್ಚರಗೊಳಿಸಿ ಕೊಳ್ಳುತ್ತಿದ್ದೇನೆ…”
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…