ನಮ್ಮ ಅಂಕೋಲೆಯ ಕನ್ನಡದಲ್ಲಿ ಪ್ರತಿಯೊಂದು ಭಾವನೆ, ಪ್ರತಿ ಸಂವೇದನೆಯನ್ನು ಅರುಹಲು ಶಬ್ದಗಳಿವೆ. ಪ್ರತಿ ಉಪಭಾಷೆಯೂ ಶಬ್ದಗಳ ಸಾಗರ. ಕನ್ನಡ ಶಬ್ದಕೋಶದಲ್ಲಿ ಕಾಣದ ಅನೇಕ ಶಬ್ದಗಳು ಉಪಭಾಷೆಯಲ್ಲಿವೆ.
ನನ್ನೂರು ಅಂಕೋಲಾದ ಜನರ ಉಪಭಾಷೆಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುತ್ತಾರೆ ಮತ್ತು ತನ್ನದೇ ಉಪಭಾಷೆಯಲ್ಲಿ ಇನ್ನೊಬ್ಬ ಉಪಭಾಷಿಕನ ಜೊತೆ ಮಾತನಾಡುತ್ತಾರೆ. ಇಂತಹ ಸಂದರ್ಭದಲ್ಲಿ ಇಬ್ಬರೂ ತಮ್ಮ ತಮ್ಮ ಉಪಭಾಷೆಯಲ್ಲಿ ಮಾತನಾಡುತ್ತಿರುತ್ತಾರೆ. ಆ ಮಾತುಗಳು ಪರಸ್ಪರರಿಗೆ ಅರ್ಥವಾಗುತ್ತದೆ. ಮಾತನಾಡುವ ಹೊತ್ತಿನಲ್ಲಿ ತಾವು ಬೇರೆ ಬೇರೆ ಉಪಭಾಷೆಗಳನ್ನು ಬಳಸಿ ವ್ಯವಹರಿಸುತ್ತಿದ್ದೇವೆ ಎಂಬ ಸಂಗತಿ ಮಾತಾಡುವ ಇಬ್ಬರ ಗಮನಕ್ಕೂ ಬಂದಿರುವುದಿಲ್ಲ. ಅಷ್ಟು ಸಹಜವಾಗಿ, ಸಲೀಸಾಗಿ ವಿನಮ್ರತೆಯಿಂದ ಭಾಷಾ ಕಂಪು ಸುತ್ತಲೂ ಹರಡಿರುತ್ತದೆ. ಒಂದು ಉಪಭಾಷೆ ಇನ್ನೊಂದು ಉಪಭಾಷೆಯಲ್ಲಿ ನಯವಾಗಿ ನಾಜೂಕಾಗಿ ಸಮ್ಮಿಲಿತಗೊಂಡಿರುತ್ತದೆ. ಬಹಳ ಅಪರೂಪದ ಪದಗಳು ಈ ಉಪಭಾಷೆಯಲ್ಲಿವೆ. ಉದಾ: ವಾಡಕ್ಕಿ, ಗುಣಬು, ಬೈಸ್ರಿಗೆ, ದೇಪಳಗಿ, ಗೇಟಿ, ಕಕ್ಕರ್ತಿ, ಕೊಚ್ಲಾ, ದುಂಕ್ಲಾ, ಮೇಡಾ, ಹಚ್ಚಗಿ, ನಾಣಗಿ ಮೊದಲಾದವುಗಳು. ಅವು ಈಗ ಶಿಷ್ಟ ಕನ್ನಡದಲ್ಲಿಯೂ ಸೇರಿ ಭಾಷೆಯನ್ನು ಸಮೃದ್ಧಗೊಳಿಸಿವೆ. ನಮ್ಮ ಅಂಕೋಲೆಯ ಕನ್ನಡದಲ್ಲಿ ಪ್ರತಿಯೊಂದು ಭಾವನೆ, ಪ್ರತಿ ಸಂವೇದನೆಯನ್ನು ಅರುಹಲು ಶಬ್ದಗಳಿವೆ. ಪ್ರತಿ ಉಪಭಾಷೆಯೂ ಶಬ್ದಗಳ ಸಾಗರ. ಕನ್ನಡ ಶಬ್ದಕೋಶದಲ್ಲಿ ಕಾಣದ ಅನೇಕ ಶಬ್ದಗಳು ಉಪಭಾಷೆಯಲ್ಲಿವೆ.
‘ನಮ್ ಊರ್ ಅಂಕೋಲಿಲೆ ನಾಕೈದ್ ನಮ್ನಿ ಕನ್ನಡ ಮಾತಾಡ್ತರ. ನಮ್ ಮಾನಿ ಕನ್ನಡಾ ಅಂದ್ರೆ ಸೆಕ್ರಿ ಅಷ್ಟೇ ಸಿಮಿ. ಮಲ್ಲುಂಗಿ ಹೂವಂಗೆ ಪರಮಳಾ. ಅಟ್ಟೂ ಸಬ್ದ ಏವ್. ಮನೀಲೆ ಮಾತಾಡ್ದೆ ಈಗನ್ ಮಕ್ಳಿಗೆ ಭಾಷಿನೆ ಮರ್ತೆ ಹೋಗಿದ್. ನಾಕೈದ್ ಹಳಿ ಸಬ್ದಾ ಹೇಳ್ ಅಂದ್ರೆ ಬಿಗರ ಬಂದಬಿಡ್ತಿದ್. ಇನ್ ಅವ್ರಿಗೆ ತುಟ್ಟನಮುಟ್ಟಿ, ಅಡಕಲಾ, ಅಕ್ಕಿಮಡ್ಕಿ ಇವೆಲ್ಲ ಏನಂದೇ ಗುತ್ತಿಲ್ಲ ಬಿಡ್. ನೀತಿ ನೇಮಾನು ಮರೀತೆ ಬಂದರ. ನೆಂಟ್ರ ಮನೀಗೆ ಬಂದ್ರೂ ಆಗೂಲಾ ಇವ್ರಿಗೆ. ಮುದಲಾದ್ರೆ ಯಾರರೂ ಮನೀಗೆ ಬಂದ್ರೆ ಸಾಕಾಗತಾ. ಆಸ್ರಿಗೆ ತಕಾ ಬತ್ತಿ ಅಂತೆ ಒಳಗೋದವ್ರ ಬೆಲ್ಲ ನೀರು ತಕಾ ಬರೂದೆ ಆಗತ್. ಅವ್ರಿಗೆ ಉಣ್ಸೆ ಕಳಸ್ತದ್ರ. ಗಂಜಿ ಚಿಪ್ಪಿಕಲ್ ಹುಳ್ಗ, ಕೋಳಿ ಪುಡಿ ಹಾಕದ್ರೆ ಆಯ್ತ. ಅಟ್ಟು ಜನಾ ನೆಲಕೆ ಹಾಸಿ ಹಾಕಂಡೆ ಕುಳತೆ ಹೊಟ್ತುಂಬೆ ಉಣ್ತದ್ರ. ಕಂಚ್ನ ಬಟ್ಲಾದಲ್ಲೆ ಉಂಬು ಮಜಾನೆ ಬ್ಯಾರೆ. ಅಡ್ಗಿ ಮಾಡೂಕೂ ಹಿಂಗಸ್ರ ಬೇಜಾರ್ ಮಾಡಕಂಬೂಲಾ ಆಗದ್ರ. ಇಗ ಹಂಗಲ್ಲ. ಒಬ್ರ ಮನೀಗೆ ಒಬ್ರ ಬರೂದು ನಿಂತ್ ಹೋಗಿದ್. ಬಂದ್ರು ನಿಲ್ಲೂಲಾ. ಯಾರ್ಯಾರ್ ಸಂಬಂಧಿಕರಂದೆ ಮರ್ತ ಹೋಗಿದ್. ಮುದಿ ಮುಂಜಿ ಆದ್ರೂ ಬತ್ತರ್ ಮೊಕಾ ಕಾಣಸ್ತರ್ ಹೋಗ ಬಿಡತರ್. ಹಿಂಗಾಗೆ ನಮ್ ಜನಾ, ಭಾಷಿ ಎಲ್ಲ ಮರ್ತೆ ಹೋತಿದ್. ಹೀಂಗೆ ಆತೇ ಹೋದ್ರೆ ಕನ್ನಡ ಭಾಷಿ ಇದ್ದತ್ ಅಂದೆ ಜನಾ ಮರೆಯೂರ್. ನನ್ ಭಾಷಿ ಕನ್ನಡ ನಂಗೆ ಸೇರ್ತೀದ. ಮಾತಾಡೂಕೆ ಬರಿಯೂಕೆ ಖುಷಿ.’
-ಅಕ್ಷತಾ ಕೃಷ್ಣಮೂರ್ತಿ, ಲೇಖಕಿ ಮತ್ತು ಶಿಕ್ಷಕಿ
ಹಾಸನ: ಹಾಸನದಲ್ಲಿ ಹಾಸನಾಂಬೆ ದರ್ಶನದ ಸಂಭ್ರಮ ಮುಂದುವರಿದಿದೆ. ದರ್ಶನದ ಮೂರನೇ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ…
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.…
ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲಿನ ಕಂತನ್ನು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ…
ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ! ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ…
‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ…
‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…