ಹಾಡು ಪಾಡು

ಧಾರವಾಡದ ‘ಅಗ್ದಿ ಖರೆ’ ಕನ್ನಡ

‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ

‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ ಸೊಸೆಗೆ ನಿರ್ದೇಶಿಸಿದೆ.‘ಹವಣಿ’ ಅಂದ್ರೇನು ತಕ್ಷಣಕ್ಕೆ ಬಂತು ಪ್ರಶ್ನೆ? ಹವಣಿ ಅಂದ್ರ ಅಂದ್ರ ತಡವರಿಸುವಾಗಲೇ ದೇವರಮನೆಯಲ್ಲಿ ಕೂತ ರಾಯರಿಂದ ಛಕ್ಕನೇ ಉತ್ತರ ಬಂತು ಮೀಡಿಯಂ ಸೈಜ್… ಬಿಜಾಪುರ ಮೂಲದ ಬೆಂಗಳೂರಲ್ಲಿ ಬೆಳೆದ ಸೊಸೆಗೆ ನಮ್ಮ ಧಾರವಾಡ ಭಾಷೆ ತಿಳಿಯುತ್ತಾದರೂ ಇಂಥ ಟಿಪಿಕಲ್ ಶಬ್ದಗಳು ಅವಳಿಗೆ ತಿಳಿಯದು. ಏನು ಧಾರವಾಡ ಭಾಷೆಯ ಸೊಗಸು ಅಂತೀನಿ. ಬೇಂದ್ರೆ ಅಜ್ಜನಿಂದ ಈ ಭಾಷೆಗೆ ಮೆರುಗು ಬಂದಿತು. ‘ಇನ್ನು ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸಲ ಬಂದು ಹೋಗಾಂವಾ’ ಎನ್ನುವ ಹಾಡು ಹಾಡುವಾಗಲಂತೂ ನಾನು ತನ್ಮಯಳಾಗೇ ಬಿಡ್ತೀನಿ. ಗೆಳತಿಯರೆಲ್ಲ ನಿನ್ನ ಬಾಯಲ್ಲೇ ಈ ಹಾಡು ಚಂದ ಅನ್ನುವುದುಂಟು. ಧಾರವಾಡ ಭಾಷೆಯ ಸೊಬಗನ್ನು ಎಷ್ಟು ವರ್ಣಿಸಿದರೂ ಕಡಿಮೆ. ಅಗ್ದಿ ಖರೆ ಅನ್ನುವಾಗ ಏನದು ಅಗ್ದಿ ಅಂತ ಕೇಳಿದ್ದರು ನಾಟಕ ನಿರ್ದೇಶಕರೊಬ್ಬರು. ಕಲಬುರಗಿ ರಂಗಾಯಣದಲ್ಲಿ ಶ್ರೀನಿವಾಸ ವೈದ್ಯರ ಕತೆ ಯಾಧಾರಿತ ‘ತ್ರಯಸ್ಥ’ ನಾಟಕ. ಪ್ರದರ್ಶನಕ್ಕಿಂತ ಮೊದಲು ಆಯ್ದ ನೋಡುಗರನ್ನು ಕರೆಸಿ ಪ್ರದರ್ಶಿಸುತ್ತಾರೆ. ಅಲ್ಲಿ ಈ ಮಾತು ಹೇಳುವಾಗ ಕಲಬುರಗಿ ಹುಡುಗರು ಎಳೆದೆಳೆದು ಅನ್ನುವವರು. ನಾಟಕದ ತುಂಬೆಲ್ಲ ಧಾರವಾಡ ಪದಗಳನ್ನು ಕೆಡಿಸುವಾಗ ನನ್ನ ಮನ ರೋದಿಸುತ್ತಿತ್ತು. ಅದು ಹಂಗಲ್ರೋ ಹಿಂಗ ಅಂತ. ‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ. ಹಂಪನಾ ಅವರು ಹತ್ತಲಿಕ್ಹತ್ತೀವಿ ಎನ್ನುವ ಪದ ಕುರಿತು ಹತ್ತುವುದನ್ನು ಮತ್ತೆ ಹತ್ತಿಸುವುದೇಕೆ? ಎಂದು ಕೇಳಿದ್ದರು. ಅಟೋ ಹೊಂದಿಸುವಾಗಲೇ ಇಲ್ಲಿಯವರು ನನ್ನನ್ನು ಗುರ್ತು ಹಿಡಿದು ಬಿಡತಾರೆ. ‘ಮೇಡಂ ನೀವು ಎಲ್ಲಿಯವರು?’ ಎಂದು ಕೇಳಿಯೇ ಬಿಡತಾರೆ, ಮತ್ತೆ ನಾನು ಹೆಮ್ಮೆಯಿಂದ ಬೀಗುತ್ತೇನೆ ಧಾರವಾಡದವಳೆಂದು.

– ಡಾ.ಲಕ್ಷ್ಮೀಶಂಕರ ಜೋಶಿ, ಸಂಗೀತ ವಿದುಷಿ ಮತ್ತು ಲೇಖಕಿ

ಆಂದೋಲನ ಡೆಸ್ಕ್

Recent Posts

ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ! ಕಿಲೋಮೀಟರ್‌ಗಟ್ಟಲೆ ಸರತಿ ಸಾಲು

ಹಾಸನ: ಹಾಸನದಲ್ಲಿ ಹಾಸನಾಂಬೆ ದರ್ಶನದ ಸಂಭ್ರಮ ಮುಂದುವರಿದಿದೆ. ದರ್ಶನದ ಮೂರನೇ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ…

9 mins ago

ದೆಹಲಿಯಲ್ಲಿ ಮಾಲಿನ್ಯಕ್ಕೆ ಕಡಿವಾಣ: ಶೇ.50 ಸಿಬ್ಬಂದಿಗೆ ಮನೆಯಿಂದಲೇ ಕೆಲಸ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.…

13 mins ago

ಕರ್ನಾಟಕಕ್ಕೆ ₹4,504 ಕೋಟಿ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ!

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲಿನ ಕಂತನ್ನು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ…

17 mins ago

ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ!

ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ! ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ…

19 mins ago

ಕುಂದಾಪ್ರ ಕನ್ನಡವೆಂದರೆ ‘ಭಾಷಿ ಅಲ್ಲ; ಬದ್ಕ್

‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…

25 mins ago

‘ಬಾ ಯಾ ಬಾ, ಉಂಬಟ್ ಬಾ ಮಗಾ’

ಅವ್ವನ ಬೀದರ ಭಾಷೆ ಕಿವಿಯಲ್ಲೇ ಇದ್ದಂತೆ, ಅವಳ ದನಿ ಗುನುಗಿದಂತೆ ಈಗಲೂ ಭಾಸವಾಗುತ್ತದೆ ಬೀದರಿನ ಭಾಷೆಯಲ್ಲಿ ದೇಶೀಯತೆ ನೆನಪಿಸಿಕೊಂಡರೆ, ಅವ್ವನ…

28 mins ago