ಹಾಡು ಪಾಡು

ನನ್ನ ಬಯಾಗ್ರಫಿಯನ್ನೆ ಬದಲಿಸಿದ ಮೊಬೈಲ್ ಫೋಟೋಗ್ರಫಿ

ಕಳೆದ ವರ್ಷ ಒಂದು ಶನಿವಾರ ಸಂಜೆ ಬಾನಲ್ಲಿ ಬಣ್ಣಗಳನ್ನು ಹೋಳಿ ಆಡಲು ಬಿಟ್ಟು ಸೂರ್ಯ ಅಸ್ತಂಗತನಾಗಿದ್ದ. ಆಗಸ ನೋಡಿದವನೇ ವಾವ್ ಎಂದು ಉದ್ಗರಿಸಿದೆ. ಆಗ ಥಟ್ಟನೆ ಹೊಳೆದದ್ದು ಅರಮನೆಯನ್ನು ಈ ಬಣ್ಣಗಳ ಹಿನ್ನೆಲೆಯಲ್ಲಿ ಚಿತ್ರಿಸಿದರೆ ಹೇಗೆ ಎಂದು. ಸಮಯ ವ್ಯರ್ಥ ಮಾಡದೆ ಬೈಕ್ ಹತ್ತಿ ಜಯಮಾರ್ತಾಂಡ ದ್ವಾರ ತಲುಪಿದಾಗ ಅಲ್ಲಿ ಪ್ರವಾಸಿಗರು ಅರಮನೆ ಕಡೆಗೆ ತಿರುಗಿ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಚಿತ್ರಿಸುತ್ತಿದ್ದರು. ಕೆಲವರು ಸೆಲ್ಛಿ ತೆಗೆದುಕೊಳ್ಳುವು ದರಲ್ಲಿ ಬ್ಯುಸಿಯಾಗಿದ್ದರು. ಸಂಜೆಯ ಬಾನ ರಂಗಿನ ಹಿನ್ನೆಲೆಯಲ್ಲಿ ಬೃಹತ್ ದ್ವಾರದ ಚಿತ್ರಗಳನ್ನು ತೆಗೆಯುತ್ತಿದ್ದವನಿಗೆ ಕ್ಯಾಮೆರಾ ಫ್ಲಾಶ್‌ನಂತೆ ಹೊಳೆದದ್ದು ಇಡೀ ಅರಮನೆಯ ಮುಂಭಾಗವನ್ನು ಪ್ಯಾನರಮಾ ಮೋಡ್‌ನಲ್ಲಿ ತೆಗೆದರೆ ಹೇಗೆ ಎಂದು. ಅದಕ್ಕೆ ನನ್ನ ಪ್ರಯತ್ನ ಅಷ್ಟೇ ಅಲ್ಲ, ಅಕ್ಕಪಕ್ಕದಲ್ಲಿದ್ದವರ ಸಹಕಾರವೂ ಅಗತ್ಯವಿತ್ತು. ಮೊಬೈಲ್ ಕ್ಯಾಮೆರಾ ಅಲುಗಾಡದಂತೆ, ಕಟ್ಟಡದ ಒಂದು ತುದಿಯಿಂದ ಮತ್ತೊಂದು ತುದಿವರೆಗೆ ತೆಗೆಯುವ ಸಾಹಸ ಅದಾಗಿತ್ತು. ಅದಕ್ಕೆ ತಾಳ್ಮೆ, ಕೌಶಲ ಹೆಚ್ಚು ಅಗತ್ಯವಿತ್ತು.

ಹೇಗೋ ನಾಲ್ಕಾರು ಚಿತ್ರಗಳನ್ನು ತೆಗೆದೆ. ಮನೆಗೆ ಬಂದವನೆ ಕುತೂಹಲ ತಡೆಯಲಾಗದೆ, ಮುಖ ತೊಳೆದು ಕನ್ನಡಿಯಲ್ಲಿ ನನ್ನ ಅದೇ ಮುಖ ನೋಡುವ ಮುನ್ನ, ಮೊಬೈಲ್ ತೆಗೆದು ಅರಮನೆ ಚಿತ್ರಗಳನ್ನು ನೋಡಿದೆ. ಚಿತ್ರಗಳು ನಿರೀಕ್ಷೆ ಮೀರಿ ಬಂದಿದ್ದವು. ಒಂದು ಚಿತ್ರವನ್ನು ಕೇಂದ್ರೀಕರಿಸಿ, ಕ್ರಾಪ್ ಮಾಡಿ, ಸ್ವಲ್ಪ ಸ್ಯಾಚುರೇಷನ್ ಹೆಚ್ಚಿಸಿ ನೋಡಿದಾಗ ಫೋಟೋಗ್ರಫಿ ಹವ್ಯಾಸ ನನಗೆ ಫ್ಯಾಷನ್ ಆಗಿರುವುದಕ್ಕೆ ಸಾರ್ಥಕವಾಯಿತು ಎನಿಸಿತು.

ಈ ಅಂಬಾವಿಲಾಸ ಅರಮನೆ ಛಾಯಾಗ್ರಾಹಕರಿಗೆ ಪೋಸ್ ಕೊಟ್ಟಿರುವಷ್ಟು ಮೈಸೂರಿನ ಯಾವ ಕಟ್ಟಡವೂ ನೀಡಿಲ್ಲ ಎನ್ನಬಹುದು. ಹಗಲಿನಲ್ಲಿ ಅಮೋಘವಾಗಿ ಕಂಡರೆ, ಇರುಳಿನಲ್ಲಿ ವಿದ್ಯುತ್ ದೀಪಾಲಂಕಾರವಿದ್ದಾಗ ಅದ್ಭುತವಾಗಿ ಕಾಣುತ್ತದೆ. ಪ್ರವಾಸಿಗರನ್ನು ಮೈಸೂರಿಗೆ ಸೆಳೆಯುವ ಐಕಾನ್ ಸೌಧವೇ ಈ ಅಂಬಾವಿಲಾಸ ಅರಮನೆ.

ನಾನು ಕುಟುಂಬದ ಜೊತೆ ಭಾನುವಾರ ಸಂಜೆಯ ಹೊತ್ತಿನಲ್ಲಿ ಅರಮನೆಯ ವಿದ್ಯುತ್ ದೀಪಾಲಂಕಾರ ನೋಡಲು ತೆರಳಿದಾಗಲೂ ಕುಟುಂಬದವರ ಚಿತ್ರಗಳಿಗಿಂತ ಅರಮನೆಯ ವಿವಿಧ ಆಯಾಮಗಳ ಚಿತ್ರಗಳನ್ನು ತೆಗೆಯುತ್ತಿರುತ್ತೇನೆ. ನೂರಾರು ಬಾರಿ ಕಣ್ತುಂಬಿಕೊಂಡಿರುವ ನನಗೆ ಇನ್ನೂ ಅದರ ಕುರಿತು ಕುತೂಹಲ ತಣಿದಿಲ್ಲ ಎಂದ ಮೇಲೆ ಒಮ್ಮೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಎಷ್ಟು ಪುಳಕವಾಗಬೇಡ?

ಮೊಬೈಲ್ ಕ್ಯಾಮೆರಾದಲ್ಲಿ ಫೋಟೋಗಳನ್ನು ಚಿತ್ರಿಸಲು ಇರುವ ಮೋಡ್‌ಗಳ ಕುರಿತು ಅನೇಕರು ತಲೆಕೆಡಿಸಿಕೊಳ್ಳುವುದಿಲ್ಲ. ಮ್ಯಾಕ್ರೋ ಮೋಡ್‌ನಲ್ಲಿ ಸಣ್ಣ ಕೀಟ, ನೀರಿನ ಹನಿಗಳನ್ನು ಚಿತ್ರಿಸಬಹುದಾದರೆ, ಸೂಪರ್ ಮೂನ್ ಮೋಡ್‌ನಲ್ಲಿ ದೂರದ ಚಂದ್ರನನ್ನು ಅಂದವಾಗಿ ಸೆರೆಹಿಡಿಯಬಹುದಾಗಿದೆ. ಇನ್ನು ಪ್ಯಾನರಾಮ ಮೋಡ್‌ನಲ್ಲಿ ಅದ್ಭುತ ಎನ್ನುವಂತಹ ಪ್ರಯೋಗಗಳನ್ನು ಮಾಡಬಹುದು. ಉತ್ತಮ ಚಿತ್ರ ತೆಗೆಯಲು ದುಬಾರಿ ಫೋನ್ ಖರೀದಿಸಬೇಕಿಲ್ಲ. ಸಾಧಾರಣ ಮೊಬೈಲ್ ಫೋನ್‌ನಲ್ಲಿಯೇ ಅಸಾಧಾರಣ ಚಿತ್ರಗಳನ್ನು ತೆಗೆಯಬಹುದು.

ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳು ಡಿಜಿಟಲ್ ಸ್ಕ್ರೀನ್‌ಗೆ ಸೀಮಿತ ಎಂದು ಅನೇಕರು ತಪ್ಪಾಗಿ ಭಾವಿಸಿದ್ದಾರೆ. ದೊಡ್ಡ ಬ್ಲೋಅಪ್‌ಗಳನ್ನು ಪ್ರಿಂಟ್ ಹಾಕಿಸಬಹುದಾದ ಗುಣಮಟ್ಟದ ಚಿತ್ರಗಳನ್ನು ಸಹ ಸೆರೆಹಿಡಿಯಬಹುದು. ವಿಶೇಷವಾದ ಚಿತ್ರ ತೆಗೆಯಲು ಪ್ರವಾಸಿ ತಾಣಗಳಿಗೆ ಹೋಗಬೇಕಿಲ್ಲ, ನಿಮ್ಮೂರಿನ ಸ್ಥಳಗಳನ್ನೇ ವಿಭಿನ್ನವಾಗಿ ಚಿತ್ರಿಸಬಹುದು. ಮೊಬೈಲ್ ಫೋನ್‌ನಲ್ಲಿ ಗುಣಮಟ್ಟಕ್ಕೆ ರಾಜಿಯಾಗದ ವಿಡಿಯೋಗಳನ್ನು ಸಹ ಚಿತ್ರಿಸಬಹುದು. ಸ್ಪಲ್ಪ ತರಬೇತಿ ಜೊತೆಗೆ ಹೆಚ್ಚು ಆಸಕ್ತಿ ಇದ್ದರೆ ಯಾರು ಬೇಕಾದರೂ ಮೊಬೈಲ್ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಪರಿಣತರಾಗಬಹುದು. ಮತ್ತೆ ಇನ್ನೇಕೆ ತಡ, ಹತ್ತಿ ನಿಮ್ಮ ಗಾಡಿ, ಎತ್ತಿ ನಿಮ್ಮ ಮೊಬೈಲ್ ಫೋನ್, ಕ್ಲಿಕ್ಕಿಸಿ ವಿಭಿನ್ನ, ವಿಶಿಷ್ಟ ಚಿತ್ರಗಳ, ಪ್ರಕಟಿಸಿ ನಿಮಗಿಷ್ಟವಾದ ಜಾಲತಾಣಗಳಲ್ಲಿ, ಆಗ ನಿಮ್ಮ ಅಭಿರುಚಿ ಮೆಚ್ಚುವರು ನಿಮ್ಮ ಚಿತ್ರಗಳ ಅಭಿಮಾನಿಗಳು

“ಪುಟ್ಟ ಮೊಬೈಲಿನಲ್ಲಿ ವಿಶೇಷವಾದ ಚಿತ್ರಗಳನ್ನು ತೆಗೆಯಲು ಪ್ರವಾಸಿ ತಾಣಗಳಿಗೆ ಹೋಗಬೇಕಿಲ್ಲ, ನಿಮ್ಮೂರಿನ ಸ್ಥಳಗಳನ್ನೇ ವಿಭಿನ್ನವಾಗಿ ಚಿತ್ರಿಸಬಹುದು”

– ಜಿ.ಎಲ್.ತ್ರಿಪುರಾಂತಕ

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

10 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

10 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

11 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

12 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

12 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

12 hours ago