ಹಾಡು ಪಾಡು

ಮೆಲ್ಲಹಳ್ಳಿ ಶಿವಣ್ಣ ನಾಯಕರ ಸುಣ್ಣದ ಗೂಡು

ಮಧುಕರ ಮಳವಳ್ಳಿ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸುತ್ತ ಈಗ ಇರುವುದು ಒಂದೋ ಎರಡೋ ಸುಣ್ಣದ ಗೂಡುಗಳು ಮಾತ್ರ.

ನಮ್ಮ ಊರಿನ ಸುತ್ತು-ಮುತ್ತ ಇದ್ದ ಸುಣ್ಣದ ಗೂಡುಗಳು ಮೆಲ್ಲಗೆ ಮರೆಯಾಗುತ್ತಿವೆ. ಈಗ ತಿಂಗಳಿಗೆ ಎರಡು – ಮೂರು ದಿನಗಳು ಮಾತ್ರ ಅವುಗಳು ಹೊಗೆಯಾಡುತ್ತವೆ, ಮಳೆಗಾಲದಲಿ ಮೌನ, ಗೂಡಿನ ಮೇಲೆ ಒಂದು ತಗಡು ಮಾತ್ರ ಇರುತ್ತದೆ.

ಒಂದು ಕಾಲದಲ್ಲಿ ಸುಣ್ಣದ ಯಾವುದೇ ಮನೆ ಇರಲಿ ಬಿಳಿ ಬಣ್ಣದಿಂದ ಹೊಳೆಯುತ್ತಿತ್ತು. ಯಾವುದೇ ಕಾರ‍್ಯ ಅದರೂ, ಇಂದಿನ ದಿನಗಳಲ್ಲಿ ಕೋಣೆಯ ನಾಲ್ಕು ಗೋಡೆಗಳಿಗೆ ಒಂದೊಂದು ಬಣ್ಣ ಬಳಿಯುವುದು ರೂಢಿಯಾಗಿದೆ. ಮತ್ತೆ ಅದು ಕೂಡ ಒಂದು ವೃತ್ತಿಯಾಗಿದೆ. ಆದರೆ ಸುಮಾರು ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಹಳ್ಳಿ – ಅರೆಪಟ್ಟಣ – ಪಟ್ಟಣಗಳಲ್ಲಿ ಬಿಳಿ ಸುಣ್ಣದ್ದೇ ದರ್ಬಾರು ಇರುತ್ತಿತ್ತು.

ಇದೀಗ ಕಳೆದ ಸಂಕಾಂತ್ರಿಯ ಹಬ್ಬಕ್ಕೆ ಎರಡು ಮೂರು ದಿನಗಳು ಇರುವಾಗ ಆ ಗೂಡಿನ ಮುಂದೆ ರಾಶಿ ರಾಶಿ ಸುಣ್ಣದ ಕಲ್ಲುಗಳನ್ನು ಕಂಡೆ. ಮತ್ತೆ ಅವುಗಳನ್ನು ಸುಡುವ ವೇಳೆಗಾಗಿ ಕಾದೆ… ಗಮನಿಸುತ್ತಾ ಹಾಗೆ ಆ ರಾಶಿಗಳ ಮುಂದೆ ವ್ಯಕ್ತಿಯ ಕಂಡೆ. ಶಾಲೆ ಬಿಡುವ ವೇಳೆಗೆ ಸುಣ್ಣದ ಕಲ್ಲಿನ ಚೀಲ ಜೊತೆ ಬೆವೆತು ರಾಶಿಕಲ್ಲಿನ ಜೊತೆಗೆ ಪಕ್ಕದಲ್ಲಿ ಇದ್ದಲಿನ ರಾಶಿ ಎರಡನ್ನು ಮಿಶ್ರಣ ಮಾಡುವ ವೇಳೆಗೆ ಜೊತೆ ಸೇರಿಕೊಂಡೆ. ಪರಿಚಯ ಮಾಡಿಕೊಂಡು ತಮ್ಮ ಹೆಸರು ಎಂದು ಕೇಳಿದೆ. ‘ಶಿವಣ್ಣ ನಾಯಕ’ ಅಂತ ಉತ್ತರಿಸಿದವರು, ಸುಣ್ಣ ಬೇಕಾ ಸ್ವಾಮಿ. ನಾಳೆ ಬನ್ನಿ ಎನ್ನುತ್ತಾ ತಮ್ಮ ಕಾಯಕ ಮುಂದುವರಿಸಿದರು.

‘ಶಿವಣ್ಣ ಇದು ನಿಮ್ಮ ಕುಲಕಸುಬಾ’ ಅಂದೆ. ‘ಹೌದು ಸಾ, ನಮ್ಮಪ್ಪ ನಂಗೆ ಹತ್ತು ವರ್ಷ ಇರುವಾಗ ಇದರ ಪರಿಚಯ ಮಾಡಿಸಿದ್ದರು. ಈಗ ನನ್ನ ಬದುಕು ಇದರಲ್ಲೇ ನಡೆಯುತ್ತಾಯಿದೆ ಎಂದು ಸುಣ್ಣದ ಕಲ್ಲು ಮತ್ತು ಇದ್ದಿಲನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಲು ತೊಡಗಿದರು. ಈ ಕಲ್ಲುಗಳನ್ನು ಎಲ್ಲಿಂದಾ ತರುವಿರಿ ಎಂದು ಕೇಳಿದರೆ, ‘ಸಾ , ಇದನ್ನ ನೀರು ಹರಿಯುವ ಹೊಳೆ ಅಂದರೆ ಆಡ್ಡಾಳದಿಂದ ಅಲ್ಲಿ ದಿನ ಪೂರ್ತಿ ಕಲ್ಲುಗಳನ್ನು ಆಯ್ದುಕೊಂಡು ತರಬೇಕು. ತಂದು ಸಗಣಿ ಅಂದರೆ ತೊಪ್ಪೆಯ ಜೊತೆ ತೆಂಗಿನಗರಿ ಮೊದಲು ಹಾಕಿ ನಂತರ ಈ ಕಲಸಿದ ಕಲ್ಲುಗಳನ್ನು ಆ ಗೂಡಿಗೆ ಹಾಕಿ ಬೆಂಕಿ ಹಾಕಿ ರಾತ್ರಿ ಪೂರ್ತಿ ಬೆಂದ ವೇಳೆ ಬೆಳಗಿನ ಜಾವ ಬಂದು ಕೈ ಬೆಚ್ಚಗೆ ಇರುವಾಗ ಈ ಕೆಳಗಿರುವ ಒಲೆಯಿಂದ ಸುಣ್ಣವನ್ನು ತೆಗಿಬೇಕು. ಅಂದರೆ ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಬೆಂದಿರುವ ಕಲ್ಲು ಸುಣ್ಣದ ಕಲ್ಲಾಗಿರುತ್ತದೆ. ಈ ಎತ್ತರದ ಗೂಡಿನಲ್ಲಿ ೧,೫೦೦ ರೂ. ಬೆಲೆಯ ಸುಣ್ಣ ಸಿಗುತ್ತೆ. ಅದು ಹಬ್ಬ-ಹರಿದಿನಗಳಲ್ಲಿ ಮಾತ್ರ. ಇಲ್ಲ ಅಂದರೆ ನಮಗೆ ಅಡಕೆ, ಬಾಳೆ, ತೆಂಗಿನ ತೋಟದವರು ಆರ್ಡರ್ ಕೊಟ್ಟರೆ ನಾವು ಸುಣ್ಣ ಸುಡುತ್ತೀವಿ. ಅವರು ರೋಗ ಬಾರದೆ ಇರಲಿ ಮತ್ತೆ ಹೆಚ್ಚಿನ ಇಳುವರಿ ಕೊಡಲಿ ಅಂತ ಸುಣ್ಣನಾ ಬಳಸುತ್ತಾರೆ. ಹಿಂದೆ ಆಲೆ ಮನೆಯಲ್ಲಿ ಬೆಲ್ಲ ಇಳಿಸಲು ಸುಣ್ಣ ಕೇಳುತ್ತಾಯಿದ್ದರು. ಈಗ ಕೆಮಿಕಲ್ ಬಳಸುತ್ತಾರೆ. ನಮ್ಮನ್ನು ಮಾತೇ ಆಡಿಸಲ್ಲ. ಮೊದಲು ಹಬ್ಬ ಬಂದಾಗ ಮನೆಮಂದಿಗೆಲ್ಲಾ ಕೆಲಸ. ಕಲ್ಲು ತರಲು, ಸುಡಲು, ಮತ್ತೆ ವ್ಯಾಪಾರ ಮಾಡಲು, ನಾವು ಒಂದ್ ಹತ್ತು ಊರಿಗೆ ಸುಣ್ಣ ಕೊಡುತ್ತಾ ಇದ್ವಿ. ಸುಣ್ಣ ಸಿಗದೆ ಹೋದರೆ ಹೆಂಗಸರಿಂದ ಮೊರದಲ್ಲಿ ನಮ್ಮ ತಲೆಗೆ ಏಟು ಬೀಳ್‌ತಾ ಇದ್ದವು. ನಾವು ಕೂಡ ಎಲೆ – ಅಡಕೆಗೆ ಅಂತಾ ಸುಣ್ಣನಾ ಮಾಡ್ತಾ ಇದ್ದವು. ಈಗ ಎಲ್ಲಾ ಮಾಯಾ ಎನ್ನುತ್ತಾ ಗೂಡಿಗೆ ಬೆಂಕಿ ಹಾಕಿದರು.

ಸುಣ್ಣದ ಗೂಡಿನ ಪವಾಡ, ಸಿದ್ದಪಾಜ್ಜಿಯ ಕತೆಯಲ್ಲೂ ಬರುತ್ತೆ ಒಂದ್ ಸಾರಿ ನೀವು ಕೇಳಿ ಸಾ ಎನ್ನು ವಾಗ ಗೂಡಿನಿಂದ ಹೊಗೆಯೂ ಗಾಳಿಗೆ ಜೊತೆಗೂಡಿ ದಾಗ, ಸಾ ನಾಳೆ ಹೊತ್ತಾರೆನೆ ಬನ್ನಿ ಸುಣ್ಣದ ಕಲ್ಲು ಬೆಣ್ಣೆಯಾಗಿರುತ್ತದೆ ಎಂದು, ಇನ್ನು ಒಂದ್ ಚೀಲ ಕಲ್ಲ್ ಅದೇ ಹೋಗಿ ಬತ್ತೀನಿ. ನೀವು ನಾಳೆ ಹೊತ್ತಾರೆ ಬನ್ನಿಯೆಂದು ತನ್ನ ಹಳೆಯ ಟಿವಿಎಸ್‌ನಲ್ಲಿ ಕುದುರೆಯಂತೆ ಸವಾರಿ ಮಾಡುತ್ತಾ ಮಾಯವಾದರು.

ಮುಂಜಾನೆ ಐದು ಗಂಟೆ ಈ ಚಳಿಗಾಲದಲ್ಲೂ ಎದ್ದು ಹೊರಟೆ ಸುಣ್ಣದ ಕಲ್ಲೂ ಸುಣ್ಣವಾಗಿರುವುದನ್ನು ನೋಡಲು. ಮೆಲ್ಲಹಳ್ಳಿಯ ಶಿವಣ್ಣ ನಾಯಕರು ಅರ್ಧ ಗಂಟೆ ತಡವಾಗಿ ಬಂದರು. ಚಳಿಯಲ್ಲೂ ಗೂಡು ಬೆಚ್ಚಗೆ ಇತ್ತು. ಬಂದವಾ ಸಾ ಚಳಿ ಸಾ ಲೇಟ್ ಆಯಿತಾ ಎನ್ನುತ್ತಾ ಗೂಡ ಒಮ್ಮೆ ನೋಡಿ ಇವತ್ತು ಒಳ್ಳೆ ಸುಣ್ಣ ಸಾ ಎಂದು ಗೂಡಿನ ಕೆಳಗಿನ ಒಲೆಯಿಂದ ಸುಣ್ಣವನ್ನು ಆಚೆಗೆ ಎಳೆಯ ತೊಡಗಿದರು. ಬೂದಿಯನ್ನು ಬೇರೆ ಮಾಡುತ್ತಾ ಸುಣ್ಣವನ್ನು ಬೇರೆ ಮಾಡುತ್ತಾ ಮೂರು ದಿಕ್ಕಿನ ಒಲೆಗಳ ಮುಂದೆ ಸುಣ್ಣದ ರಾಶಿ ಕಂಡು ಖುಷಿಗೊಂಡರು. ಹಬ್ಬದ ವ್ಯಾಪಾರಕ್ಕಾ ಅಂದೆ ಇಲ್ಲ ಸಾ ನಂಗೆ ತೋಟದ ಆರ್ಡರ್ ಅದೇ ಅನ್ನುತ್ತಲೆ ಮೂರು ಚೀಲಗಳಿಗೆ ತುಂಬಿಕೊಂಡರು. ನಿಮಗೆ ಸರ್ಕಾರದಿಂದ ಸಹಾಯ ಏನಾದರೂ ಬರುತ್ತಾ ಅಂದೆ. ಎಲ್ಲಿ ಸಾ ಇರುವ ಈ ಒಂದ್ ಗೂಡನ್ನು ಇನ್ನು ಅಚ್ಚ್‌ಕಟ್ಟು ಮಾಡುವ ಅಂತ ಪಂಚಾಯಿತಿಯಲ್ಲಿ ಸಹಾಯ ಕೇಳಿದರೆ, ಹೊಲ ಯಾರ ಹೆಸರಲ್ಲಿ ಅದೇ… ಹಿಂಗೇ ನೂರೆಂಟು ಕ್ಯಾತೆ. ಸರ್ಕಾರದಿಂದ ಸಹಾಯ ಬಂದರೆ, ಅದು ಬೇಡ ಸಾಲ ಅಂತ ಕೊಡಲಿ ಮಳೆ, ಗಾಳಿ, ಬಿಸಿಲಿಗೆ ಈ ಗೂಡಿಗೆ ಒಂದ್ ನೆರಳು ಮಾಡುತ್ತೀನಿ. ಸಾ ಇನ್ನು ಎರಡು ಚೀಲ ಕಲ್ಲು ಹಾಕಿ ಬೆಂಕಿ ಹಾಕ್‌ಬೇಕು. ಹಬ್ಬದ ವ್ಯಾಪಾರಕ್ಕೆ ಸುಣ್ಣ ಬೇಕು. ನಿಮಗೆ ಗೊತ್ತಿರುವವರಿಗೆ ಹೇಳಿ ಸಾ. ನಮ್ಮ ಬದುಕು ಒಂದ್ ಚೂರು ಚಂದವಾಗಲಿ ಎನ್ನುತ್ತಾ ಹೊರಟರು.

ಸುಣ್ಣದ ಗೂಡಿನ ಬೂದಿ, ಗಾಳಿಗೆ ಹೊರ ಬಂದು ಘಮ್ ಎನ್ನುತ್ತಾಯಿತ್ತು

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

5 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

18 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

18 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

18 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

18 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

18 hours ago