Andolana originals

ಗಾಂಧಿ ಅಭಿಯಾನ ಅರಿವಿನ ಯಾನ : ತುಂಡು ಬಟ್ಟೆಯ ಫಕೀರ ಮತ್ತು ಇಂಗ್ಲೆಂಡ್ ಚಕ್ರವರ್ತಿ

ಡಾ. ಪ್ರಮೀಳಾದೇವಿ ಬಿ.ಕೆ

೧೯೩೧-೩೨ರಲ್ಲಿ ಗಾಂಧಿಜಿಯವರು ಉಪ್ಪಿನ ಸತ್ಯಾಗ್ರಹದ ನಂತರ ರೌಂಡ್ ಟೇಬಲ್ ಮಾತುಕತೆಗಾಗಿ ಇಂಗ್ಲೆಂಡಿಗೆ ಹೋದರು. ಈ ವೇಳೆಗಾಗಲೆ ಗಾಂಧಿಜಿಯವರ ಸತ್ಯಾಗ್ರಹ ಹೋರಾಟದ ಬಗ್ಗೆ ತಿಳಿದಿದ್ದ ಬ್ರಿಟನ್ನಿನ ಜನತೆಗೆ ಅವರನ್ನು ಕಾಣುವ ತವಕ. ತಮ್ಮ ಸರ್ಕಾರದ ವಿರುದ್ಧವೇ ಆದರೂ ಶಾಂತಿಯುತ ಹೋರಾಟ ನಡೆಸುತ್ತಿದ್ದ ಗಾಂಧೀಜಿಯರ ಬಗ್ಗೆ ಇಂಗ್ಲೆಂಡ್‌ನ ಜನರಿಗೆ ಅಪಾರ ಗೌರವದಿಂದ ಅವರ ಮಾತುಗಳನ್ನು ಆಲಿಸುವ ಕಾತರ. ಗಾಂಧೀಜಿಯವರು ಲಂಡನ್, ಯಾರ್ಕ್‌ಶೈರ್, ಮ್ಯಾಂಚೆಸ್ಟರ್ ಮುಂತಾದ ನಗರಗಳಿಗೆ ಭೇಟಿ ನೀಡಿದರು. ಅವರು ಹೋದಲ್ಲೆಲ್ಲಾ ಜನವೋ ಜನ.

ಗಾಂಧೀಜಿಯವರೂ ಕೂಡ ಅಲ್ಲಿನ ಸಾಮಾಜಿಕ ಕಾಳಜಿ ಹೊಂದಿದ್ದ ಪ್ರಸಿದ್ಧ ವ್ಯಕ್ತಿಗಳನ್ನೂ, ಸಾಹಿತಿ ಗಳನ್ನೂ, ಚಿಂತಕರನ್ನೂ ಭೇಟಿ ಮಾಡಿದರು. ತಮ್ಮ ಬೇಡಿಕೆಗಳಿಗಾಗಿ ಹೋರಾಡುತ್ತಿದ್ದ ಅಲ್ಲಿನ ಕಾರ್ಮಿಕರನ್ನೂ ಸಂದರ್ಶಿಸಿ ಅವರ ಕಷ್ಟಗಳನ್ನು ಆಲಿಸಿದರು. ಗಾಂಧೀಜಿಯವರೇನಿದ್ದರೂ ಭಾರತದ ಪ್ರತಿನಿಧಿಯಾಗಿ ಸಮ್ಮೇಳನಕ್ಕೆ ಹೋಗಿದ್ದರಿಂದ ಬ್ರಿಟಿಷ್ ಸಾಮ್ರಾಜ್ಯದ ಚಕ್ರವರ್ತಿ ೫ನೇ ಜಾರ್ಜ್ ಅವರನ್ನು ಭೇಟಿ ಮಾಡಲೆಂಬುದು ಭಾರತದ ವೈಸ್‌ರಾಯ್‌ರ ಅಭಿಲಾಷೆ. ಅಂತೆಯೇ ಅವರು ಗಾಂಧೀಜಿ ಮತ್ತು ಚಕ್ರವರ್ತಿಯ ಭೇಟಿಯನ್ನು ಏರ್ಪಡಿಸಿದರು.

ಚಕ್ರವರ್ತಿಗೂ ಅಷ್ಟೇನೂ ಇಷ್ಟವಿರಲಿಲ್ಲ. ಆದರೂ ತಮ್ಮ ಸಾಮ್ರಾಜ್ಯದ ವಿರುದ್ಧ ಹೊರಾಡುತ್ತಿದವನನ್ನು ಭೇಟಿ ಮಾಡಲೇ ಬೇಕಾಯಿತು.

ಚಕ್ರವರ್ತಿಯನ್ನು ಸಂದರ್ಶಿಸಬೇಕಿದ್ದರೆ ಸರಿಯಾದ ಉಡುಪು ಧರಿಸಿರಬೇಕೆಂಬುದು ಅಲ್ಲಿನ ನಿಯಮ. ಹೇಳಿಕೇಳಿ ಬ್ರಿಟನ್ ಸಂಪ್ರದಾಯವಾದಿಗಳ ರಾಷ್ಟ್ರ. ವಿಶ್ವದ ಶ್ರೀಮಂತ, ‘ಸೂರ‍್ಯ ಮುಳುಗದ ಸಾಮ್ರಾಜ್ಯ’ದ ಒಡೆಯನನ್ನು ಸಂದರ್ಶಿಸಲು ಗಾಂಧೀಜಿಯವರು ಹೇಗೆ ಹೋಗುವರೆಂಬ ಕುತೂಹಲ ಜನರಿಗೆ.

ಗಾಂಧೀಜಿಯವರಿಗೆ ಇದರ ಪರಿವೆ ಇರಲಿಲ್ಲ. ಬ್ರಿಟನ್ನಿನ ಆ ಮೈಕೊರೆಯುವ ಚಳಿಯಲ್ಲೂ ಅವರು ಇದೂವರೆಗೂ ತಮ್ಮ ಎರಡು ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಒಂದು ಭೇಟಿಗಾಗಿ ತಮ್ಮ ಉಡುಪಿನ ನಿಯಮ ಬದಲಾಯಿಸಲು ಗಾಂಧೀಜಿಯವರು ಸಿದ್ಧರಿರಲ್ಲಿಲ್ಲ. ಕಾರ್ಮಿಕರಾಗಲಿ, ಚಕ್ರವರ್ತಿಯಾಗಲಿ ಅವರದು ಒಂದೇ ನಿಲುವು. ಬದಲಾವಣೆಯೇನಿಲ್ಲ. ಅರಮನೆಯ ಭೇಟಿಯನ್ನು ಏರ್ಪಡಿಸಿದವರು ಚಕ್ರವರ್ತಿಯನ್ನು ಕಾಣಬೇಕಿದ್ದರೆ ಆಸ್ಥಾನದ ನಿಯಮದಂತೆ ತಲೆಯಿಂದ ಕಾಲಿನವರೆಗೆ ಮುಚ್ಚುವ ಬಟ್ಟೆ ಧರಿಸಬೇಕೆಂದು ಹೇಳಿದರೆ, ಗಾಂಧೀಜಿ ಯಾವ ಕಾರಣಕ್ಕೂ ತಮ್ಮ ಉಡುಪಿನ ನಿಯಮ ಮುರಿಯುವದಿಲ್ಲವೆಂದೇ ಹೇಳಿದರು.

ಅಂತೂ ತಮ್ಮ ಉಡುಪಿನ ನಿಯಮವನ್ನೇ ಪಾಲಿಸಿದ ಮಹಾತ್ಮರು ಚಕ್ರವರ್ತಿಯನ್ನು ಸಂದರ್ಶಿಸಿ ಬಕ್ಕಿಂಗ್‌ಹ್ಯಾಮ್ ಅರಮನೆಯಿಂದ ಹೊರ ಬಂದರು.

ಹೊರಗೆ ಕಾಯುತ್ತಿದ್ದ ಪತ್ರಕರ್ತನೊಬ್ಬ ಕೀಟಲೆ ಯಿಂದ ‘ನಮ್ಮ ಚಕ್ರವರ್ತಿಯನ್ನು ಭೇಟಿ ಮಾಡಲು ಈ ಕನಿಷ್ಠ ಉಡುಪಿನಲ್ಲೆ ಹೋಗಿದ್ದಿರೇ’ ಎಂದರೆ ಗಾಂಽಜಿಯವರು ಅಷ್ಟೇ ತುಂಟತನದಿಂದ ‘ನಿಮ್ಮ ಚಕ್ರವರ್ತಿಯೇ ನಮಗಿಬ್ಬರಿಗೂ ಆಗುವಷ್ಟು ಬಟ್ಟೆ ಧರಿಸಿದ್ದರಲ್ಲಾ’ ಎಂದಾಗ ಅಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ.

ಆಂದೋಲನ ಡೆಸ್ಕ್

Recent Posts

ಯುದ್ಧಕ್ಕೆ ದಿನಾಂಕ ಫಿಕ್ಸ್: ‘ವಿಜಯದಶಮಿ’ಗೆ ಸಮರ ಸಾರಿದ ಕೇಂದ್ರ ಸಚಿವ ಎಚ್‌ಡಿಕೆ

ಹಾಸನ: ಇಡೀ ದೇಶವೇ ಅಲ್ಲೋಲ, ಕಲ್ಲೋಲ ಆಗುವ ಸುದ್ದಿ ಕೊಡುತ್ತೇನೆ ಎಂಬ ಮಾತನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ. ಈ…

12 hours ago

ಉಗ್ರ ಮಸೂದ್‌ ಅಜರ್‌ ಸುಳಿವು ಕೊಟ್ಟವರಿಗೆ 24 ಲಕ್ಷ ರೂ ಬಹುಮಾನ ಘೋಷಿಸಿದ ಪಾಕ್‌

ಇಸ್ಲಾಮಾಬಾದ್:‌ ಉಗ್ರ ಮಸೂದ್‌ ಅಜರ್‌ ಸುಳಿವು ಕೊಟ್ಟವರಿಗೆ 24 ಲಕ್ಷ ರೂ ಬಹುಮಾನ ನೀಡುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ದೇಶದ…

12 hours ago

ಸೆಪ್ಟೆಂಬರ್ ತಿಂಗಳಲ್ಲೇ ಕರ್ನಾಟಕದಲ್ಲಿ ಬಿರು ಬೇಸಿಗೆಯ ವಾತಾವರಣ

ಬೆಂಗಳೂರು: ಮುಂಗಾರು ಮಳೆಯ ಅಬ್ಬರ ಕಾಣಬೇಕಿದ್ದ ಸೆಪ್ಟೆಂಬರ್ ತಿಂಗಳಲ್ಲೇ ಕರ್ನಾಟಕದಲ್ಲಿ ಬಿರು ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ…

13 hours ago

ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ: ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ: ಮೈಸೂರು ದಸರಾಗಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಅದ್ದೂರಿತನದ ಬದಲು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ…

13 hours ago

ಹನೂರು: ಬಿಸಿಯೂಟಕ್ಕೂ ನೀರಿಲ್ಲ – ಖಾಲಿ ಬಿಂದಿಗೆ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆ

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದ ಸೆಂಟ್ ಆಂಥೋನಿ ಶಾಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕುಡಿಯುವ…

14 hours ago

ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯ: ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ…

17 hours ago