ಹಾಡು ಪಾಡು

ಜಾಝ್ ಸಂಗೀತದ ಅಲೆಯಲಿ. ರಾಜ ಪರಂಪರೆಯ ಜೊತೆಯಲಿ…

ರಶ್ಮಿ ಕೋಟಿ
ಮೈಸೂರು ಸಂಸ್ಥಾನದ 25ನೇ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು 1966ರಲ್ಲಿ ಕೀನ್ಯಾ ದೇಶದ ನೈರೋಬಿಗೆ ತೆರಳಿದ್ದರು. ಅಂದು ಅವರನ್ನು ನೈರೋಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿ (ಹೈ ಕಮಿಷನರ್) ಅಂದಿನ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ನೇಮಿಸಲ್ಪಟ್ಟಿದ್ದ ಪ್ರೇಮ್ ಭಾಟಿಯಾ ಸ್ವಾಗತಿಸಿ, ತಮ್ಮ ನಿವಾಸದಲ್ಲಿ ವಿಶೇಷ ಆತಿಥ್ಯವಿತ್ತರು. ಪ್ರೇಮ್ ಹಾಗೂ ಅವರ ಪತಿ ಶಕುಂತಲಾ ಭಾಟಿಯಾ ಅವರೊಂದಿಗೆ ಮಹಾರಾಜರು ದೇಶಾವರಿ ಮಾತನಾಡುತ್ತಾ ಮಗ್ನರಾದರು. ಆಗ ಹಿನ್ನೆಲೆಯಲ್ಲಿ ಮಹಾರಾಜರ ಅಚ್ಚುಮೆಚ್ಚಿನ ಜಾಝ್ ಸಂಗೀತ ಕೊಠಡಿಯನ್ನು ಆವರಿಸುತ್ತಿದ್ದಂತೆ ಅಂದಿನ ಸಂಜೆಯ ಮಾತುಕತೆ ಅವರಿಬ್ಬರಿಗೂ ಜಾಝ್ ಬಗ್ಗೆ ಇದ್ದ ಪ್ರೀತಿಯನ್ನು ಅನಾವರಣಗೊಳಿಸಿತು. ಆಫ್ರಿಕಾದ ದಿಗಂತದಲ್ಲಿ ಸೂರ್ಯನು ಮುಳುಗುತ್ತಿದ್ದಂತೆ, ಪ್ರೇಮ್ ಮತ್ತು ಮಹಾರಾಜರು ಜಾಝ್ ಜಗತ್ತಿನಲ್ಲಿ ಮುಳುಗಿದರು. ಪಾಶ್ಚಾತ್ಯ ಸಂಗೀತದ ರಸಿಕರಾದ ಮಹಾರಾಜರು ಅಂದಿನ ಜಾಝ್ ಲೋಕದ ಮಾಂತ್ರಿಕರಾಗಿದ್ದ ಲೂಯಿಸ್ ಆರ್ಮ್‌ ಸ್ಟಾಂಗ್ ಅವರ ಪಾಂಡಿತ್ಯ ಮತ್ತು ಬಿಲ್ಲಿ ಹಾಲಿಡೇ ಅವರ ಬಗ್ಗೆ ಅತ್ಯುತ್ಸಾಹದಿಂದ ಚರ್ಚಿಸಿದರು.

ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕಥೆಗಳು ಮತ್ತು ತಮ್ಮ ಬೇಟೆಯಾಡುವ ಅನುಭವದ ಸಾಹಸ ಕಥೆಗಳು ಮಹಾರಾಜರು ಹಾಗೂ ಪ್ರೇಮ್ ಅವರ ಅಂದಿನ ರಾತ್ರಿಯ ಸಂಭಾಷಣೆಯ ವಸ್ತುವಾದವು. ನುರಿತ ಬೇಟೆಗಾರರಾಗಿದ್ದ ಜಯಚಾಮರಾಜ ಒಡೆಯರ್ ತಮ್ಮ ಸಾಹಸಮಯ ಶಿಕಾರಿಯ ಅನುಭವಗಳನ್ನು ಬಿಚ್ಚಿಟ್ಟರು. ಒಮ್ಮೆ ನರಭಕ್ಷಕ ಹುಲಿಯನ್ನು ಬೇಟೆಯಾಡಲು ಹೋದಾಗ ಇಡೀ ರಾತ್ರಿ ಮೈಯೆಲ್ಲ ಕಣ್ಣಾಗಿ, ಕಿವಿಯಾಗಿ ಕಾದು ಕೂತದ್ದು, ಕಡೆಗೆ ಪೊದೆಗಳಲ್ಲಿ ಅಡಗಿರುವ ನರಭಕ್ಷಕ ತನ್ನ ಶಿಕಾರಿಗಾಗಿ ಮೆಲ್ಲಗೆ ಹೆಜ್ಜೆಯೂರುತ್ತಾ ಹೊರಬಂದ ತಕ್ಷಣವೇ ಹೇಗೆ ಗುಂಡಿಟ್ಟು ಹೊಡೆದರೆನ್ನುವ ತಮ್ಮ ಅನುಭವ ವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಈಗ ನೈರೋಬಿಗೆ ಬಂದಿದ್ದ ಅವರು ಫೇಂಡಾಮೃಗಗಳ ಶಿಕಾರಿಯನ್ನು ಮಾಡಬೇಕೆಂಬ ತಮ್ಮ ಬಯಕೆಯನ್ನು ಪ್ರೇಮ್ ಅವರ ಬಳಿ ವ್ಯಕ್ತಪಡಿಸಿದರು. ಪ್ರೇಮ್ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಮಹಾರಾಜರಿಗೆ ತಿಳಿಸಿದರು. ಇವರಿಬ್ಬರ ರೋಮಾಂಚನಕಾರಿ ಯಾದ ಮಾತುಕತೆಗಳನ್ನು ಪ್ರೇಮ್ ಅವರ 15 ವರ್ಷ ವಯಸ್ಸಿನ ಮಗ ಶ್ಯಾಮ್ ಭಾಟಿಯಾ ಮಂತ್ರಮುಗ್ಧನಾಗಿ ಆಲಿಸುತ್ತಿದ್ದ.

ಆಫ್ರಿಕನ್ ಮತ್ತು ಭಾರತೀಯ ಭಕ್ಷ್ಯಗಳನ್ನು ಒಳಗೊಂಡ ಅದ್ದೂರಿ ಭೋಜನದೊಂದಿಗೆ ಅಂದಿನ ಸಂಜೆ ಮುಕ್ತಾಯವಾಯಿತು. ಪ್ರೇಮ್ ಅವರ ಪತ್ನಿ ಸುಸೇನ್‌ ಅವರ ಅಸಾಧಾರಣ ಪಾಕಶಾಲೆಯ ಕೌಶಲಕ್ಕಾಗಿ ಮಹಾರಾಜರು ಶ್ಲಾಘಿಸಿದರು. ಕಡೆಗೆ ಪ್ರೇಮ್ ಮಹಾರಾಜರನ್ನು ಅವರ ಕಾರಿನ ಬಳಿಗೆ ಕರೆದೊಯ್ದು ಬೀಳ್ಕೊಟ್ಟರು.

ವರ್ಷಗಳ ನಂತರ, ಶ್ಯಾಮ್ ಭಾಟಿಯಾ ತನ್ನ ತಂದೆಯ ಹಾದಿ ಯನ್ನೇ ಅನುಸರಿಸುವ ಮೂಲಕ ಲಂಡನ್‌ ಅಬ್ಬರ್ವರ್ ಪತ್ರಿಕೆಯಲ್ಲಿ ಹೆಸರಾಂತ ಪತ್ರಕರ್ತರಾದರು. ನೈರೋಬಿಯಲ್ಲಿನ ಆ ಮಾಂತ್ರಿಕ ರಾತ್ರಿಯು ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿಯಿತು.

ದಶಕಗಳ ನಂತರ ಲಂಡನ್‌ನಿಂದ ಮೈಸೂರಿಗೆ ದಸರಾ ಸಂದರ್ಭದಲ್ಲಿ ಆಗಮಿಸಿದ್ದ ಹಿರಿಯ ಪತ್ರಕರ್ತ ಶಾಮ್ ಭಾಟಿಯಾ ಅವರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ಸ್ವಾಗತಿಸಿ ದರು. ಅರಮನೆಯ ವೈಭವದ ನಡುವೆ ಅವರು ಕುಳಿತಾಗ, ಶ್ಯಾಮ್ ಅವರಿಗೆ ತಾವು ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ಜಯಚಾಮರಾಜ ಒಡೆಯರ್ ಹಾಗೂ ತಮ್ಮ ತಂದೆಯ ನಡುವಿನ ಸಂಭಾಷಣೆಯ ಚಿತ್ರಣ ಕಣ್ಣ ಮುಂದೆ ಮಿಂಚಿದವು. ಶಾಮ್ ಬೆರಗುಗಣ್ಣಿನಿಂದ ಸುತ್ತಲೂ ನೋಡಲಾರಂಭಿಸಿದರು. ಗೋಡೆಗಳ ಮೇಲೆ ಅಲಂಕಾರಿಕ ರೀತಿಯಲ್ಲಿ ಜೋಡಿಸಲ್ಪಟ್ಟಿದ್ದ ಪೋಲೋ ಆಟದ ಕೋಲು ಗಳು, ಪಿಸ್ತೂಲುಗಳು, ಕುದುರೆಗಳಿಗೆ ಕಟ್ಟುವ ಜೀನುಗಳು, ರಾಜಪರಂಪರೆಯನ್ನು ಬಿಂಬಿಸುವ ಚಿತ್ರಪಟಗಳು ಪತ್ರಕರ್ತ ಶಾಮ್ ಅವರ ಕುತೂಹಲವನ್ನು ಕೆರಳಿಸಿದವು. ಅತಿಥಿಯ ಆಸಕ್ತಿ ಯನ್ನು ಗಮನಿಸಿದ ಯದುವೀರ್ ತಮ್ಮ ಪೂರ್ವಜರ ಕಥೆಗಳನ್ನು ಹಂಚಿಕೊಂಡರು, ಶಾಮ್ ಕುತೂಹಲದಿಂದ ಆಲಿಸಿದರು.

ನಿಮ್ಮ ಅಜ್ಜನ ಜಾಝ್ ಪ್ರೀತಿ ನನ್ನ ನೆನಪಿನಲ್ಲಿ ಅವಿಸ್ಮರಣೀಯ ವಾಗಿ ಉಳಿದಿದೆ’ ಎಂದು ಶ್ಯಾಮ್ ಆ ಮೋಡಿಯ ರಾತ್ರಿಯನ್ನು ನೆನಪಿಸಿಕೊಂಡರು. ಯದುವೀರ್ ಮುಗುಳ್ನಕ್ಕು, ‘ಜಾಝ್ ನಮ್ಮ ಕುಟುಂಬದ ಪರಂಪರೆಯ ಭಾಗವಾಗಿದೆ. ನನ್ನ ಅಜ್ಜನ ಅಮೂಲ್ಯ ವಾದ ಜಾಝ್ ಸಂಗ್ರಹವು ಇನ್ನೂ ನಮ್ಮ ಬಳಿ ಇವೆ’ ಎಂದು ಹೇಳಿದರು.

ಮುಸ್ಸಂಜೆಯಾಗುತ್ತಿದ್ದಂತೆ, ಶಾಮ್ ಮತ್ತು ಯದುವೀರ್ ಜಾಝ್ನ ಚರ್ಚೆಯಲ್ಲಿ ಮುಳುಗಿದರು, ಅರಮನೆಯ ಸಭಾಂಗಣಗಳು ಎಲಾ ಫಿಟ್ಟಿಗೆರಾಲ್ಡ್ ಮತ್ತು ಡ್ಯೂಕ್ ಎಲಿಂಗ್ ಟನ್‌ರ ಸಂಗೀತದ ಚರ್ಚೆಗಳು ಪ್ರತಿಧ್ವನಿಸಿದವು. ಅವುಗಳು ಅಸಾಧಾರಣ ರಾತ್ರಿಗಳು. ನನ್ನ ಅಜ್ಜ ಹೇಳುತ್ತಿದ್ದರು, ‘ನಮ್ಮ ರಾಜವಂಶವು ಸಂಪ್ರದಾಯಗಳನ್ನು ಸೇತುವೆ ಮಾಡುವಂತೆಯೇ ಜಾಝ್ ಸಂಸ್ಕೃತಿಗಳನ್ನು ಸೇತುವೆ ಮಾಡುತ್ತದೆ ಎಂದು.

ದಸರಾ ಸಾಂಸ್ಕೃತಿಕ ಆಚರಣೆಗಳಿಂದ ಅರಮನೆಯ ಸಂಕೀರ್ಣ ವಾಸ್ತುಶಿಲ್ಪದವರೆಗೆ, ಅವರ ಚರ್ಚೆಯು ಶತಮಾನಗಳವರೆಗೆ ವ್ಯಾಪಿಸಿತು. ಯದುವೀರ್ ಅವರು ತಮ್ಮ ಮುತ್ತಜ್ಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯನ್ನು ಹೆಮ್ಮೆಯಿಂದ ವಿವರಿಸಿದರು. ತಮ್ಮ ಪೂರ್ವಜರ ಶಿಕಾರಿಯ ಸಹಾಸ ಕಥನಗಳನ್ನು ಮೆಲುಕು ಹಾಕಿದರು. ಅವರು ಬೇಟೆಯಾಡಿದ್ದ ವಿವಿಧ ಕ್ರೂರ ಮೃಗಗಳ ಚಿತ್ರಗಳನ್ನು ಹಂಚಿಕೊಂಡರು. ಅದು ಶಾಮ್ ಅವರಿಗೆ ತಾವು ಚಿಕ್ಕವರಿದ್ದಾಗ ತಮ್ಮ ನಿವಾಸದಲ್ಲಿ, ತಮ್ಮ ತಂದೆ ಪ್ರೇಮ್ ಭಾಟಿಯಾ ಹಾಗೂ ಜಯಚಾಮರಾಜ ಒಡೆಯರ್ ಅವರ ನಡುವೆ ನಡೆದ ಶಿಕಾರಿಯ ಮಾತುಕತೆಯನ್ನು ನೆನಪಿಸಿಕೊಂಡರು. ಜಯಚಾಮರಾಜ ಒಡೆಯರ್ ನೈರೋಬಿಯಲ್ಲಿ ಫೇಂಡಾಮೃಗದ ಶಿಕಾರಿ ಮಾಡಿದರೇ ಎಂದು 58 ವರ್ಷಗಳಿಂದ ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿತು. ಮುಸ್ಸಂಜೆಯಾಗುತ್ತಿದ್ದಂತೆ ಯದುವೀರ್ ಶಾಮ್ ಅವರಿಗೆ ರತ್ನಖಚಿತ ಸಿಂಹಾಸನ ತೋರಿಸುವುದರೊಂದಿಗೆ ಅಪೂರ್ವ ಭೇಟಿಯೊಂದು ಅಪರೂಪದ ಮಾತುಕತೆಯೊಂದಿಗೆ ಸಂಪನ್ನವಾಯಿತು.

ಮೈಸೂರು ಸಂಸ್ಥಾನದ 25ನೇ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು 1966ರಲ್ಲಿ ಕೀನ್ಯಾ ದೇಶದ ನೈರೋಬಿಗೆ ತೆರಳಿದ್ದರು. ಅವರಿಗೆ ಅಲ್ಲಿ ಭಾರತೀಯ ರಾಯಭಾರಿಯಾಗಿದ್ದ (ಹೈ ಕಮಿಷನರ್) ಪ್ರೇಮ್ ಭಾಟಿಯಾ ಆತಿಥ್ಯ ನೀಡಿದ್ದರು. ಇದೀಗ 58 ವರ್ಷಗಳ ನಂತರ ಪ್ರೇಮ್ ಭಾಟಿಯಾ ಅವರ ಮಗ, ದಿ ಅಬ್ಸರ್ವರ್ ಪತ್ರಿಕೆಯ ಡಿಪ್ಲೋಮ್ಯಾಟಿಕ್ ಎಡಿಟರ್ ಆಗಿದ್ದ ಶಾಮ್ ಭಾಟಿಯಾ ಅವರನ್ನು ಮೈಸೂರಿನ ತಮ್ಮ ನಿವಾಸದಲ್ಲಿ ಜಯಚಾಮರಾಜ ಒಡೆಯರ್ ಅವರ ಮೊಮ್ಮಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬರಮಾಡಿಕೊಂಡರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರಿಬ್ಬರ ನಡುವಿನ ಸಂಭಾಷಣೆಯ ಒಂದು ಐತಿಹಾಸಿಕ ಕ್ಷಣಕ್ಕೆ ಈ ಭೇಟಿ ಸಾಕ್ಷಿಯಾಯಿತು.

ಆಂದೋಲನ ಡೆಸ್ಕ್

Recent Posts

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

26 mins ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

1 hour ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

2 hours ago

ಡಿ.ಕೆ.ಸಹೋದರರಿಗೆ ಮದುವೆ ಕರೆಯೋಲೆ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರಿಗೆ ನೀಡಿ…

2 hours ago

ಶುಚಿತ್ವ, ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡ ಜಯದೇವ :ಸಿ.ಎಂ ಪ್ರಶಂಸೆ

ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…

2 hours ago

ಪ್ರಹ್ಲಾದ್‌ ಜೋಶಿರವರ ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಕೇಂದ್ರ ಸಚಿವ ಸ್ಥಾನಕ್ಕೆ ಶೋಭೆ ತರಲ್ಲ-ಎಚ್‌.ಕೆ.ಪಾಟೀಲ

ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್‌ ಎನ್‌ಕೌಂಟರ್‌ ಹೇಳಿಕೆ…

2 hours ago