ಹಾಡು ಪಾಡು

ನವರಾತ್ರಿಯ ನೆಪದಲ್ಲಿ ಗಾಂಧಿಯನ್ನು ಕಂಡಿದ್ದು

ನನ್ನ ಮೊದಲ ದಸರಾ ವಿಶೇಷವೆನಿಸಿದ್ದು ‘ಗಾಂಧಿ’ ಚಿತ್ರವಿದ್ದದ್ದರಿಂದ. ದೇವನೂರ ರಿಂದ ಪ್ರಭಾವಿತನಾಗಿ ಎಂದಾದರೂ ನೋಡಬಹುದಾಗಿದ್ದ ಸಿನಿಮಾವನ್ನು ದಸರಾ ಸಿನೆಮಾ ಹಬ್ಬದ ಪರದೆಯ ಮೇಲೆ ನೋಡುವ ಅವಕಾಶ ಒದಗಿಬಂದಿತ್ತು. ಭಾರತದ ಕಥೆಯನ್ನು ಉಸುರುವ ಈ ವಿದೇಶಿ ಸಿನಿಮಾ, ಅದರ ಪ್ರತಿ ಹೆಜ್ಜೆಗೂ ಭಾರತದ ರಾಜಕೀಯ – ಚಾರಿತ್ರಿಕ ಸಂಗತಿಗಳಿಗೆ ಸಾಕ್ಷಿಯಾಗಿದೆ. ಗಾಂಧಿ ಈ ಸಿನಿಮಾದಿಂದಲೇ ಜಗತ್ತಿಗೆ ಪರಿಚಿತರಾದರು ಎಂದು ತಪ್ಪುಗ್ರಹಿಕೆಯನ್ನು ಉಂಟುಮಾಡುವಷ್ಟು ಪ್ರಸಿದ್ಧಿ ಇದರದ್ದು.

ನಮಗೆ ಒಂದಷ್ಟು ಮಂದಿಗೆ ಈ ಚಿತ್ರದ ಪ್ರದರ್ಶನವಿದೆ ಎಂದು ಗೊತ್ತಾದದ್ದೇ ತೀರ ತಡವಾಗಿ. ಹೋಗಬೇಕೋ ಬೇಡವೋ ಎನ್ನುವ ಇಕ್ಕಟ್ಟಿನಲ್ಲಿ ಒಂದಷ್ಟು ಸಮಯ ಕೈಜಾರಿತು. ನೋಡಲೇಬೇಕು ಎಂದು ಗಡಬಡಿಸಿ ಹೊರಟಾಗ ಮತ್ತಷ್ಟು ಸಮಸ್ಯೆ ಎದುರಾಯಿತು. ನಾಡಹಬ್ಬದ ಸಂಭ್ರಮ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದನ್ನು ಪ್ರತಿ ಬೀದಿಯೂ ಸಾರಿ ಸಾರಿ ಹೇಳುತ್ತಿತ್ತು. ನಗರದ ಒಂದೆಡೆಯಿಂದ ಇನ್ನೊಂದೆಡೆಗೆ ನಾವು ತಲುಪುವುದು ಹರಸಾಹಸವೇ ಆಗಿತ್ತು.

ಕಾತರ ಹೆಚ್ಚಿ ಏದುಸಿರು ಬಿಡುತ್ತಾ ಚಿತ್ರಮಂದಿರ ತಲುಪಿದೆವು. ಕುಳಿತುಕೊಳ್ಳುವಷ್ಟರಲ್ಲಿ ದೊಡ್ಡ ಪರದೆಯ ಮೇಲೆ ದೃಶ್ಯಗಳು ಚಲಿಸತೊಡಗಿದ್ದವು. ಒಡನಾಡಿಗಳಲ್ಲಿ ಕೆಲವರು ಬಾರದ್ದರಿಂದ ನಮ್ಮ ಸಂತಸದ ಆಗಸಕ್ಕೆ ಎರಡೋ ಮೂರೋ ಗೇಣು ಕಮ್ಮಿಯಾಗಿತ್ತು! ಹೊರಗಿನದ್ದೆಲ್ಲವನ್ನೂ ಮರೆಯುವಂತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಮೋಹನದಾಸನನ್ನು ಮೊದಲ ಬಾರಿಗೆ ಎಚ್ಚರಿಸಿದ ರೈಲು ಡಬ್ಬಿಯ ಪ್ರಕರಣ, ದಕ್ಷಿಣ ಆಫ್ರಿಕಾದ ಹೋರಾಟದ ಕಿಚ್ಚು, ಭಾರತಕ್ಕೆ ಮರಳುವಾಗಿನ ಘಟನೆಗಳನ್ನು ಚಿತ್ರಿಸುವಲ್ಲಿ, ಅದರ ಸೂಕ್ಷ್ಮವನ್ನು ಬಿಂಬಿಸುವಲ್ಲಿ ನಿರ್ದೇಶಕ ತೋರಿರುವ ಶ್ರದ್ಧೆ ಅಗಾಧವಾದದ್ದು. ಅಮರೀಶ್ ಪುರಿ, ರೋಹಿಣಿ ಹಟ್ಟಂಗಡಿ, ನೀನಾ ಗುಪ್ತ, ಅಲೋಕ್ ನಾಥ್, ಸಯೀದ್ ಜಾಫ್ರಿ, ಸುಪ್ರಿಯಾ ಪಾಠಕ್ ಮೊದಲಾದವರನ್ನು ಅವರ ಎಳೆಯ ವಯಸ್ಸಿನ ಮುಖಗಳಲ್ಲಿ ವಿವಿಧ ಪಾತ್ರಧಾರಿಗಳಾಗಿ ಗುರುತಿಸುವುದೇ ನಮಗೆ ಮೋಜಿನ ಸಂಗತಿಯಾಗಿತ್ತು.

ಈ ಚಿತ್ರ ತೆರೆಕಂಡಾಗ ಇದ್ದ ಟಾಕೀಸಿಗೆ ಬೆಂಕಿ ಕೊಡುವ, ಹಾವು ಬಿಟ್ಟು ಹೆದರಿಸಿ ಪ್ರದರ್ಶನಗಳನ್ನು ಸ್ಥಗಿತಗೊಳಿಸುವ ಅಪಾಯಗಳು ಇರಲಿಲ್ಲವಾದರೂ, ಈ ಸಿನಿಮಾ ಬಂದ ನಂತರದ ದಶಕಗಳಲ್ಲಿ ಗಾಂಧಿ ವಿರೋಧ ಗಣನೀಯವಾಗಿ ಹೆಚ್ಚುತ್ತಲೇ ಬಂದಿದೆ. ಅನುಮಾನದಿಂದ ಕಾಣುವವರನ್ನು, ವಿರೋಧಿಸುವವರನ್ನು ಒಳಗೊಳ್ಳಬಲ್ಲ ಚೈತನ್ಯ ಗಾಂಧಿ ಎಂಬುವ ಹೆಸರು. ಅಂತಹ ಚೇತನ ಒಂದರ ಮಾನವೀಯ ಚಿತ್ರಣವೇ ಈ ಸಿನಿಮಾ.

ಗಾಂಧಿಯ ಪಾತ್ರಕ್ಕೆ ಜೀವ ತುಂಬಿದ ಬೆನ್ ಕಿನ್ಸ್‌ಲೇ, ಆ ಸಲುವಾಗಿ ಹಲ್ಲು ಕೀಳಿಸಿಕೊಂಡಿದ್ದರಂತೆ. ಚಾರಿತ್ರಿಕ ಸಂಗತಿಗಳನ್ನು ಗಮನದಲ್ಲಿರಿಸಿ ಕಥೆ ಹೆಣೆಯುವ ಕಸುಬುಗಾರಿಕೆ ನಿರ್ದೇಶಕ ರಿಚರ್ಡ್ ಅಟೆನ್‌ಬರೋ ಅವರ ಶಕ್ತಿ ಎಂದೇ ಹೇಳಬೇಕು. ಆ ಮಾಂತ್ರಿಕ, ಆಳದ ಸಂವೇದನೆಗಳನ್ನು ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ದಾಟಿಸಬಲ್ಲ. ಒಮ್ಮೆ ಬಂದು ಹೋಗುವ ಓಂ ಪುರಿ ನೋಡುಗರ ಸ್ಮೃತಿಯಲ್ಲಿ ಅಚ್ಚಳಿಯದೇ ಉಳಿದುಬಿಡುತ್ತಾರೆ.

ಈ ಚಿತ್ರದ ಮಿತಿಯ ಬಗ್ಗೆ ಮಾತನಾಡುತ್ತಾ ದೇವನೂರರು ‘ಅಂಬೇಡ್ಕರರ ಪಾತ್ರವಿದ್ದಿದ್ದರೆ ಅದು ಜಿನ್ನಾನ ಪಾತ್ರದಂತೆ ಆಗಿ ಬಿಡುತ್ತಿತ್ತೇನೋ’ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ. ಪ್ರತಿರೋಧದ ನಡುವೆಯೂ, ಈ ಚಿತ್ರವನ್ನು ನೋಡಿ ಇದರ ನೆವದಲ್ಲಿ ಅಂಬೇಡ್ಕರ್‌ರನ್ನು ನೆನೆಯುವ ದೇವನೂರ ಮಹಾದೇವ ಇದರ ಬಗ್ಗೆ ಬರೆದದ್ದೆಲ್ಲವೂ ಗತ ಇತಿಹಾಸದ ಭಾಗ. ಅವರಿಗೆ ಗಾಂಧಿ ಪ್ರತಿಪಾದಿಸುವ ಅಹಿಂಸೆಯ ಮಾನವೀಯ ನೆಲೆಯನ್ನು ಅರಿತುಕೊಳ್ಳಲು ಸಾಧ್ಯವಾಗಿಸಿದ್ದು ಈ ‘ಗಾಂಧಿ’ ಎನ್ನುವ ಸಂಗತಿ ನೆನಪಾಗಿ ನನಗೆ ರೋಮಾಂಚನ ವಾಯಿತು.

ಚಿತ್ರಮಂದಿರದಿಂದ ಹೊರಬರುತ್ತಿರುವಂತೆ ಸಂಜೆಗೆತ್ತಲು ಎಲ್ಲೆಡೆ ಲಗ್ಗೆ ಇಟ್ಟಿತ್ತು. ಅದರ ಬೆನ್ನು ಬಿಡದಂತೆ ಬೆಳಗಲಿರುವ ಬೆಳಕಿನ ಮೊತ್ತವೂ ಹಿಂಬಾಲಿಸಿತ್ತು. ನಾನು ಗಟ್ಟಿಯಾಗಿ ‘ನಾನೂ ಗಾಂಽ ಚಿತ್ರ ನೋಡಿದೆ!’ ಎಂದು ಉದ್ಗರಿಸಿದೆ. ನೆರಳು ಬೆಳಕಿನ ಏರಿಳಿತ ಗೆಳೆಯರ ಮುಖದಲ್ಲಿ ಮೂಡಿದ್ದ ತಿಳಿನಗೆಯನ್ನು ನೋಡಲು ಅಡ್ಡಿಪಡಿಸಿತ್ತು.

” ಅನುಮಾನದಿಂದ ಕಾಣುವವರನ್ನು, ವಿರೋಽಸುವವರನ್ನು ಒಳಗೊಳ್ಳಬಲ್ಲ ಚೈತನ್ಯ ಗಾಂಧಿ ಎಂಬುವ ಹೆಸರು”

ಅಭ್ಯುದಯ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

20 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

24 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

37 mins ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

44 mins ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

4 hours ago