ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರವರೆಗಿನ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಚುನಾವಣಾ ಆಯೋಗದಿಂದ ಮತದಾನದ ದಿನಾಂಕ ಬಿಡುಗಡೆಯಾದ ಬಳಿಕವಷ್ಟೇ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಘೋಷಣೆ ಮಾಡಲಿದೆ.
10 ತಾಣಗಳಲ್ಲಿ ಮೊದಲ 20 ಪಂದ್ಯಗಳು ಆಯೋಜನೆಯಾಗಲಿದೆ. ಬೆಂಗಳೂರು, ಮುಂಬೈ, ಗುವಾಹಟಿ, ನ್ಯೂ ಚಂಡೀಗಡ, ಲಖನೌ, ಕೋಲ್ಕತ್ತ, ಚೆನ್ನೆ , ಹೊಸದಿಲ್ಲಿ, ಅಹಮದಾಬಾದ್ ಮತ್ತು ಹೈದರಾಬಾದ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
ಈ ಅವಧಿಯಲ್ಲಿ ನಾಲ್ಕು ಡಬಲ್ ಹೆಡ್ಡರ್ ಪಂದ್ಯಗಳು (ದಿನಕ್ಕೆ 2 ಪಂದ್ಯ) ನಿಗದಿಯಾಗಿವೆ.
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಿಗದಿಯಾಗದಿರುವ ಪಂದ್ಯಗಳು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ಅನುಮೋದನೆಗೆ ಒಳಪಟ್ಟಿರುತ್ತವೆ ಎಂದೂ ಉಲ್ಲೇಖಿಸಲಾಗಿದೆ. ಮೊದಲ ಹಂತದಲ್ಲಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನು ಆಡಲಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ಹೈದರಾಬಾದ್ ವಿರುದ್ಧ, ಏಪ್ರಿಲ್ 5ರಂದು ಬೆಂಗಳೂರಿನಲ್ಲೇ ಚೆನ್ನೆ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಬಳಿಕ ಏಪ್ರಿಲ್ 10ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಏಪ್ರಿಲ್ 12ರಂದು ಮುಂಬೈಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.
ಮೊದಲ ಹಂತದ ವೇಳಾಪಟ್ಟಿ
ಮಾರ್ಚ್ 28: ಆರ್‌ಸಿಬಿ – ಸನ್‌ರೈಸರ್ಸ್ ಹೈದರಾಬಾದ್: ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು.
ಮಾರ್ಚ್ 29, ಮುಂಬೈ ಇಂಡಿಯನ್ಸ್ -ಕೊಲ್ಕತ್ತಾ ನೈಟ್ ರೈಡಸ್ ವಾಂಖೇಡೆ.
ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ -ಚೆನ್ನೆ ಸೂಪರ್ ಕಿಂಗ್ಸ್ ಗುವಾಹಟಿ.
ಮಾರ್ಚ್ 31: ಪಂಜಾಬ್ ಕಿಂಗ್ಸ್ -ಗುಜರಾತ್ ಟೈಟನ್ಸ್ ನ್ಯೂ ಚಂಡೀಗಡ.
ಏಪ್ರಿಲ್ 1: ಲಕ್ನೋ ಸೂಪರ್ ಜೈಂಟ್ಸ್ – ಆರ್‌ಸಿಬಿ : ಲಕ್ನೋ.
ಏಪ್ರಿಲ್ 2: ಕೊಲ್ಕತ್ತಾ -ಸನ್‌ರೈಸರ್ಸ್ ಹೈದರಾಬಾದ್ ಕೊಲ್ಕತ್ತಾ.
ಏಪ್ರಿಲ್ 3: ಚೆನ್ನೆ – ಪಂಜಾಬ್ ಕಿಂಗ್ಸ್ : ಚೆನ್ನೆ .
ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್ – ಮುಂಬೈ ಇಂಡಿಯನ್ಸ್ : ಡೆಲ್ಲಿ
ಏಪ್ರಿಲ್ 4: ಗುಜರಾತ್ ಟೈಟನ್ಸ್ -ರಾಜಸ್ಥಾನ್ ರಾಯಲ್ಸ್ ಅಹಮದಾಬಾದ್.
ಏಪ್ರಿಲ್ 5: ಸನ್‌ರೈಸರ್ಸ್ ಹೈದರಾಬಾದ್- ಲಕ್ನೋ ಸೂಪರ್ ಜೈಂಟ್: ಹೈದರಾಬಾದ್
ಏಪ್ರಿಲ್ 5: ಆರ್‌ಸಿಬಿ -ಚೆನ್ನೆ ಸೂಪರ್ ಕಿಂಗ್ಸ್ : ಬೆಂಗಳೂರು.
ಏಪ್ರಿಲ್ 6: ಕೊಲ್ಕತ್ತಾ- ಪಂಜಾಬ್ ಕಿಂಗ್ಸ್ : ಕೊಲ್ಕತ್ತಾ.
ಏಪ್ರಿಲ್ 7: ರಾಜಸ್ಥಾನ್- ಮುಂಬೈ : ಗುವಾಹಟಿ.
ಏಪ್ರಿಲ್ 8: ಡೆಲ್ಲಿ – ಗುಜರಾತ್ ಡೆಲ್ಲಿ.
ಏಪ್ರಿಲ್ 9: ಕೊಲ್ಕತ್ತಾ -ಲಕ್ನೋ : ಕೊಲ್ಕತ್ತಾ.
ಏಪ್ರಿಲ್ 10: ರಾಜಸ್ಥಾನ್ – ಆರ್‌ಸಿಬಿ : ಗುವಾಹಟಿ.
ಏಪ್ರಿಲ್ 11: ಪಂಜಾಬ್ ಕಿಂಗ್ಸ್- ಸನ್‌ರೈಸರ್ಸ್ ಹೈದರಾಬಾದ್ : ನ್ಯೂ ಚಂಡೀಗಡ
ಏಪ್ರಿಲ್ 11: ಚೆನ್ನೆ – ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೆ .
ಏಪ್ರಿಲ್ 12: ಲಕ್ನೋ- ಗುಜರಾತ್: ಲಕ್ನೋ
ಏಪ್ರಿಲ್ 12: ಮುಂಬೈ- ಆರ್‌ಸಿಬಿ ಮುಂಬೈ.
ಒಡನಾಡಿ ಸ್ಟ್ಯಾನ್ಲಿ ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ ಬಿಜೆಪಿಯವರನ್ನೂ ನಾಚಿಸುವಂತೆ ಕಟ್ಟಾ ಧಾರ್ಮಿಕ ಭಕ್ತನಂತೆ ಕಾಣುವ ವ್ಯಕ್ತಿತ್ವ ಪ್ರಧಾನಿ…
ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ,…
ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್…
ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…
ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…