ಆಂದೋಲನ ಪುರವಣಿ

ಈಗಲೇ ಭತ್ತ ಖರೀದಿಗೆ ಮುಂದಾಗಿ

ಸರ್ಕಾರಕ್ಕೆ ರೈತ ಸಂಘಗಳ ಆಗ್ರಹ; ವಿಳಂಬವಾದರೆ ನಷ್ಟದ ಸುಳಿಗೆ ಸಿಲುಕುವ ರೈತ

ಭತ್ತ ಕಟಾವು ಮಾಡುವ ಸಮಯ ಬಂದಿದೆ. ಸರ್ಕಾರ ಈಗಲೇ ಭತ್ತ ಖರೀದಿ ಕೇಂದ್ರ ಆರಂಭ ಮಾಡಿ ಖರೀದಿ ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ಆದರೆ ಸರ್ಕಾರ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‌ಎಫ್‌ಸಿ)ಯಿಂದ ಭತ್ತ ಖರೀದಿಗೆ ಮುಂದಾಗಿದೆ. ಆದರೆ ಈ ಕ್ರಮಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದು, ಬೆಂಬಲ ಬೆಲೆ ಹೆಚ್ಚಳಕ್ಕೂ ಬೇಡಿಕೆ ಎದ್ದಿದೆ. ಈ ಬಗ್ಗೆ ಸಮಗ್ರವಾಗಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದ್ದಾರೆ.

ಈಗಾಗಲೇ ಭತ್ತದ ಕೊಯ್ಲು ಆರಂಭವಾಗಿದೆ. ಇಷ್ಟೊತ್ತಿಗೆ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿಗೆ ಮುಂದಾಗಬೇಕಿತ್ತು. ಆದರೆ ಅದಿನ್ನೂ ಆಗಿಲ್ಲ. ಹಿಂದೆಲ್ಲಾ ಜನವರಿ, ಫೆಬ್ರವರಿ ವೇಳೆಗೆ ಖರೀದಿ ಕೇಂದ್ರಗಳು ಆರಂಭವಾಗುತ್ತಿದ್ದವು. ಈಗ ನಮ್ಮ ಹೋರಾಟ, ಒತ್ತಾಯದ ಅಂಗವಾಗಿ ಡಿಸೆಂಬರ್ ಆರಂಭದಲ್ಲಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಕ್ವಿಂಟಾಲ್ ಭತ್ತಕ್ಕೆ ೨೦೪೦, ೨೦೬೦ ರೂ. ಎಂಎಸ್‌ಬಿ ಬೆಲೆ ನಿಗದಿ ಮಾಡಲಾಗಿದ್ದು, ಇದರ ಹೆಚ್ಚಳಕ್ಕೂ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಹೇಳುವ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಖರೀದಿ ಕೇಂದ್ರಗಳು ನಿರಂತರವಾಗಿ ಇರಬೇಕು ಎಂದು ಒತ್ತಾಯಿಸಿದ್ದಾರೆ.

ವಿಳಂಬದಿಂದ ರೈತರಿಗೆ ನಷ್ಟ

ಕಣದಿಂದ ನೇರವಾಗಿ ಭತ್ತ ಖರೀದಿ ಕೇಂದ್ರಕ್ಕೆ ಹೋಗಿ ಮಾರಾಟವಾದರೆ ಅದರಿಂದ ರೈತನಿಗೆ ಒಂದಷ್ಟು ಲಾಭ ಸಿಕ್ಕುತ್ತದೆ. ಆದರೆ ಖರೀದಿ ಕೇಂದ್ರ ತೆರೆಯುವುದು ತಡವಾದರೆ ರೈತರು ಬೇರೆ ದಾರಿ ಇಲ್ಲದೇ ಭತ್ತವನ್ನು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ಇಲ್ಲಿ ಎಂಎಸ್‌ಬಿ ಬೆಲೆಗಿಂತಲೂ ಕಡಿಮೆ ದರಕ್ಕೆ ದಲ್ಲಾಳಿಗಳು ಕೊಂಡುಕೊಳ್ಳುತ್ತಾರೆ. ಸಹಜವಾಗಿಯೇ ರೈತನಿಗೆ ಇದು ನಷ್ಟವನ್ನು ತರುತ್ತದೆ. ಇದರ ಜೊತೆಗೆ ಒಬ್ಬ ರೈತನಿಂದ ಇಂತಿಷ್ಟು ಪ್ರಮಾಣದ ಭತ್ತ ಖರೀದಿ ಮಾಡಬೇಕು ಎನ್ನುವ ನಿಯಮ ಬಿಟ್ಟು ಹೆಚ್ಚಿನ ಭತ್ತ ಖರೀದಿಗೆ ಸರ್ಕಾರ ಮುಂದಾಗಬೇಕು ಎಂಬುದು ನಾಗೇಂದ್ರ ಅವರ ಒತ್ತಾಯ.

ಪಡಿತರ ವ್ಯವಸ್ಥೆಗೆ ಬಳಸಿಕೊಳ್ಳಿ

ರಾಜ್ಯದಲ್ಲಿ ೧.೩೮ ಕೋಟಿ ಜನತೆಗೆ ಪಡಿತರ ವ್ಯವಸ್ಥೆ ಇದೆ. ಇದರಲ್ಲಿ ಅಕ್ಕಿ, ರಾಗಿ, ಗೋಧಿ, ಎಣ್ಣೆ, ಕಾಳುಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಅಗತ್ಯವಾದ ಅಕ್ಕಿಯನ್ನು ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಬದಲಾಗಿ ನಮ್ಮಲ್ಲಿ ಬೆಳೆದ ಭತ್ತವನ್ನೇ ಖರೀದಿ ಮಾಡಿ ಪಡಿತರ ವ್ಯವಸ್ಥೆಗೆ ಬಳಕೆ ಮಾಡಿಕೊಂಡರೆ ರೈತರಿಗೆ ಅನುಕೂಲ ಆಗುತ್ತದೆ. ಇದನ್ನೇ ಹನುಮನಗೌಡ ಬಾದರಲಿ ಅವರನ್ನೊಳಗೊಂಡ ಸಮಿತಿ ಕೊಟ್ಟ ವರದಿಯಲ್ಲಿ ಹೇಳಲಾಗಿದೆ. ಇದರ ಬಗ್ಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಡಾ. ಪ್ರಕಾಶ್ ಕಮ್ಮರಡಿ ಅವರೂ ಹೇಳಿದ್ದಾರೆ.

ಈಗ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಭತ್ತ ಖರೀದಿ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ರೈತರು ತಾವು ಬೆಳೆದ ಭತ್ತ ಮಾರಲು ವಾರಗಟ್ಟಲೆ ಕ್ಯೂ ನಿಲ್ಲಬೇಕಾಗುತ್ತದೆ. ಸಾಗಣೆ ವೆಚ್ಚವೂ ಹೆಚ್ಚುತ್ತದೆ. ಮಧ್ಯವರ್ತಿಗಳ ಹಾವಳಿಯೂ ಹೆಚ್ಚುತ್ತದೆ. ಹೀಗಾಗಿ ಸರ್ಕಾರ ಹಿಂದಿನ ಪದ್ಧತಿಯಂತೆ ಸ್ಥಳೀಯ ಗಿರಣಿಗಳ ಮೂಲಕ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಮಾಡಬೇಕು ಎನ್ನುವುದು ನಾಗೇಂದ್ರ ಒತ್ತಾಯ.

ಎಲ್ಲ ರೈತರೂ ಒಂದೇ

ಸರ್ಕಾರ ದ.ಕನ್ನಡ, ಉ.ಕನ್ನಡ, ಉಡುಪಿ ಜಿಲ್ಲೆಗಳ ಕುಚಲಕ್ಕಿಗೆ ೫೦೦ ರೂ. ಸಹಾಯಧನ ಕೊಡುತ್ತಿದೆ. ಈ ತಾರತಮ್ಯ ಸರಿಯಲ್ಲ. ಎಲ್ಲ ರೈತರೂ ಒಂದೇ ಆಗಿದ್ದು, ಈ ಸಹಾಯಧನವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಬೇಕು. ರಸಗೊಬ್ಬರ, ಸಾಗಣೆ ವೆಚ್ಚ, ಕಟಾವು ಖರ್ಚು ಹೆಚ್ಚಾಗುತ್ತಿದೆ. ಇದರಿಂದ ಸ್ವಾಮಿನಾಥ್ ವರದಿ ಪ್ರಕಾರ ಕ್ವಿಂಟಾಲ್ ಭತ್ತಕ್ಕೆ ೩,೫೦೦ ರೂ. ಕ್ವಿಂಟಾಲ್ ಭತ್ತಕ್ಕೆ ಕೊಡಬೇಕು ಎಂಬುದು ರೈತರ ಆಗ್ರಹ.

andolana

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

4 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

5 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

7 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

8 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

8 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

9 hours ago