ವಸಂತಕುಮಾರ ಮೈಸೂರು ಮಠ,
ತಂಬಾಕು ವಿರೋಧಿ ಹೋರಾಟಗಾರ
ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು
ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಸಬ್ಸಿಡಿಯ ಮೂಲಕ ತಂಬಾಕು ಕೃಷಿಯನ್ನು ಉತ್ತೇಜಿಸುವ ಮೂಲಕ ಅನುದಾನ ಮತ್ತು ಬಡ್ಡಿ-ರಹಿತ ಸಾಲದ ರೂಪದಲ್ಲಿ ಎಫ್‌ಸಿವಿ (- ಕ್ಯೂಡ್ ವರ್ಜೀನಿಯಾ) ತಂಬಾಕು ಬೆಳೆಗಾರರಿಗೆ ಪರಿಹಾರವನ್ನು ಹೆಚ್ಚಿಸುವ ಬಗ್ಗೆ ತಂಬಾಕು ವಿರೋಧಿ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸುತ್ತಾರೆ. ತಂಬಾಕು ಮಂಡಳಿ ಕಾಯ್ದೆ, ೧೯೭೫ರ ಅಡಿಯಲ್ಲಿ ಅಂಥ ಹಣಕಾಸಿನ ಸಹಾಯವು ಸಂಪೂರ್ಣವಾಗಿ ಸಾರ್ವಜನಿಕ ಆರೋಗ್ಯ, ತಂಬಾಕು ರೈತರ ಆರೋಗ್ಯ ಮತ್ತು ಪರಿಸರದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ತಂಬಾಕಿನಿಂದ ಬರುವ ನಿಕೋಟಿನ್ ವಿಷಕಾರಿ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಎಫ್‌ಎಸ್‌ಎಸ್‌ಎಐ ಪ್ರಮಾಣೀಕರಿಸಿದ್ದರೂ, ಈ ರೀತಿಯ ತಂಬಾಕು ಕೃಷಿಯನ್ನು ಉತ್ತೇಜಿಸುವುದು ಯಾವ ಕಾರಣಕ್ಕೂ ಒಪ್ಪಲಾಗುವುದಿಲ್ಲ .
ಎಫ್‌ಸಿಟಿಸಿ ಶಿಷ್ಟಾಚಾರದ ಅಡಿಯಲ್ಲಿ ತನ್ನ ಬಾಧ್ಯತೆಯನ್ನು ಪೂರೈಸುವ ಬಗ್ಗೆ ಭಾರತ ನಿಜವಾಗಿಯೂ ಗಂಭೀರವಾಗಿದೆಯೇ? ಅನುಚ್ಛೇದ ೫.೩ ರ ಮಾರ್ಗದರ್ಶಿ ತತ್ವ ೪ನ್ನು ಉಲ್ಲಂಘಿಸಿ ಭಾರತವು ‘ಎಲ್ಲರನ್ನೂ ಸಂತೋಷಗೊಳಿಸುವ’ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ. ತಂಬಾಕು ರೈತರಿಗೆ ಗುಣಮಟ್ಟದ ಎಫ್‌ಸಿವಿ ತಂಬಾಕನ್ನು ಬೆಳೆಯಲು ಸಹಾಯ ಮಾಡುವುದಕ್ಕಾಗಿ, ಭಾರತ ಸರ್ಕಾರ ಮತ್ತು ಅದರ ಏಜೆನ್ಸಿಗಳ ಆಘಾತಕಾರಿ ಉಲ್ಲಂಘನೆ ಮತ್ತು ವಿರೋಧಾಭಾಸದ ಕ್ರಮಗಳನ್ನು ಒಂದು ರಿಯಾಲಿಟಿ ಚೆಕ್ ಬಹಿರಂಗಪಡಿಸುತ್ತದೆ. ಹೀಗಾಗಿ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸಲು ಕೃಷಿ ಕಾರ್ಯವಿಧಾನಗಳು, ರಸಗೊಬ್ಬರಗಳು, ಉಪಕರಣಗಳ ಪೂರೈಕೆ, ವಿಸ್ತರಣಾ ಕಾರ್ಯಕ್ರಮಗಳು, ತಂಬಾಕು ರೈತರಿಗೆ ಪ್ರೋತ್ಸಾಹಕಗಳು, ತೆರಿಗೆ ಕಡಿತಗಳು ಮತ್ತು ತೆರಿಗೆ ವಿನಾಯಿತಿಗಳ ಮೂಲಕ ಸರ್ಕಾರದ ಸಬ್ಸಿಡಿಗಳೊಂದಿಗೆ ತಂಬಾಕು ಉದ್ಯಮವು ಬೆಳೆಯಲು ಸಹಾಯ ಹಸ್ತ ನೀಡುತ್ತಿದೆ.
ಈ ಸಂಬಂಧದಲ್ಲಿ, ಕ್ಯಾನ್ಸರ್ ರೋಗಿಗಳ ನೆರವು ಸಂಘವು, ಕರ್ನಾಟಕ ಸರ್ಕಾರ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು, ತಂಬಾಕು ಮಂಡಳಿ ಮತ್ತು ರಾಜ್ಯ ತಂಬಾಕು ನಿಯಂತ್ರಣ ಕೋಶದ ನಡುವೆ ತಂಬಾಕು ಬೆಳೆಗಾರರಿಗೆ ನೀಡಲಾಗುತ್ತಿರುವ ಸಬ್ಸಿಡಿಗಳನ್ನು ರದ್ದುಗೊಳಿಸುವುದಕ್ಕಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲಾಗಿದೆ (ಪಿಐಎಲ್ ಸಂಖ್ಯೆ ೫೫೬೯೭/೨೦೧೪) ಮತ್ತು ೧-೬-೨೦೧೫ ರಂದು ಅಂತಿಮ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಉಲ್ಲೇಖಿಸಿದರೆ ಅದು ಅಪ್ರಸ್ತುತವಾಗುವುದಿಲ್ಲ. ಆದರೆ, ಹೈಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕು. ೧೧ ವರ್ಷಗಳು ಕಳೆದರೂ ಮತ್ತು ಜ್ಞಾಪನೆಗಳ ಹೊರ ತಾಗಿಯೂ, ಪಿಐಎಲ್‌ಗೆ ಪ್ರತಿವಾದಿಗಳು ಕ್ರಮ ಕೈಗೊಂಡಿಲ್ಲ ಅಥವಾ ಅದರ ಮೇಲೆ ಕ್ರಮ ಜರುಗಿಸಿದ್ದರೆ, ಅದು ಸಾರ್ವಜನಿಕ ಗಮನದಲ್ಲಿಲ್ಲ.
೨೦೦೧-೦೨ ರಲ್ಲಿ, ಕರ್ನಾಟಕವು ೨೫,೨೦೭ ಬ್ಯಾರನ್ ಹೊಂದಿರುವ ೧೮,೭೫೧ ಪರವಾನಗಿ ಪಡೆದ ತಂಬಾಕು ಬೆಳೆಗಾರರನ್ನು ಹೊಂದಿತ್ತು; ೨೯,೮೫೨ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲು ಅನುಮತಿಸಲಾಗಿತ್ತು. ವಾಸ್ತವವಾಗಿ ೪೭,೬೯೯ ಹೆಕ್ಟೇರ್ ಕೃಷಿ ಪ್ರದೇಶ. ಆದರೆ ೨೦೧೧-೧೨ ರಲ್ಲಿ ಪರವಾನಗಿ ಪಡೆದ ತಂಬಾಕು ಬೆಳೆಗಾರರ ಸಂಖ್ಯೆಯು ೫೭,೫೧೨ ಕೊಟ್ಟಿಗೆಗಳೊಂದಿಗೆ ೪೧,೭೩೭ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿತು. ೮೦,೫೧೬ ಹೆಕ್ಟೇರ್ ಪ್ರದೇಶವನ್ನು ಅನುಮತಿಸಲಾಗಿದೆ ಆದರೆ ವಾಸ್ತವವಾಗಿ ೧,೧೮,೯೮೯ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗಿತ್ತು. ಇದು ತಂಬಾಕು ಉತ್ಪಾದನೆಯ ಎಲ್ಲ ಕ್ಷೇತ್ರಗಳಲ್ಲಿ ಶೇ.೧೦೦ಕ್ಕಿಂತ ಹೆಚ್ಚಳಕ್ಕೆ ಕಾರಣವಾಯಿತು. ಇದರ ಜೊತೆಗೆ, ತಂಬಾಕು ಮಂಡಳಿಯು ಅವಧಿ ಮುಗಿದ ಪರವಾನಗಿಗಳನ್ನು ನವೀಕರಿಸಲು ನಿರ್ಧರಿಸಿರುತ್ತದೆ. ಸಾರ್ವಜನಿಕ ಹಣದಿಂದ ನಿರ್ಮಿಸಲಾದ ತನ್ನ ಪ್ಲಾಟ್ ಫಾರ್ಮ್‌ಗಳಲ್ಲಿ ಹರಾಜಿನ ಸಲುವಾಗಿ ಹೆಚ್ಚುವರಿ ಬೆಳೆದ ಪ್ರಮಾಣವನ್ನು ಖರೀದಿಸಲು ಅನುಮತಿಸುತ್ತದೆ
ಮತ್ತು ಅಕ್ರಮವಾಗಿ ಬೆಳೆದ ತಂಬಾಕನ್ನು ಕೂಡ ಅನುಮತಿಸುತ್ತದೆ. ಎಫ್‌ಸಿಟಿಸಿ ಎಲ್ಲಿ? ರಾಜಕೀಯ ಒತ್ತಡದ ಕಾರಣದಿಂದಾಗಿ ೨೦೨೬-೨೭ರ ಬಜೆಟ್‌ನಲ್ಲಿ ವಿತ್ತ ಸಚಿವರು ವಿಽಸಿದ ೧೮% ತಂಬಾಕಿನ ಮೇಲಿನ ತೆರಿಗೆಯನ್ನು ಇತ್ತೀಚೆಗೆ ಹಿಂತೆಗೆದುಕೊಂಡಿರುವುದು ತಂಬಾಕು ನಿಯಂತ್ರಣದಲ್ಲಿ ಭಾರತವು ಹೇಗೆ ದ್ವಿ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಎಫ್‌ಸಿಟಿಸಿಗೆ ತನ್ನ ಬದ್ಧತೆಯನ್ನು ಗೌರವಿಸುವಲ್ಲಿ ಅದು ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ಡ್ಯುಯಲ್ ಪಾಲಿಸಿಯ ಮತ್ತೊಂದು ಸ್ಪಷ್ಟ ಉದಾಹರಣೆಯೆಂದರೆ, ಜೀವ ವಿಮಾ ನಿಗಮ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ವಿಮಾ ನಿಽಗಳ ೮೩,೩೦೦ ರೂ. ಕೋಟಿಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ಭಾರತದಲ್ಲಿ ತಂಬಾಕು ಪ್ರಮುಖ ಕಂಪೆನಿಯ ಷೇರುಗಳಲ್ಲಿ ಹೂಡಿಕೆ ಮಾಡಿರುವುದರ ಜೊತೆಗೆ, ಜಗಿಯುವ ತಂಬಾಕನ್ನು ತಯಾರಿಸುವ ಇತರ ತಂಬಾಕು ಉದ್ಯಮಗಳ ಷೇರುಗಳಲ್ಲಿ ೫೦ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಪ್ರಮಾಣವನ್ನು ಹೊಂದಿರುತ್ತದೆ. ಆದರೆ ಎಲ್‌ಐಸಿ ಜನರ ಆರೋಗ್ಯಕ್ಕೆ ಹಾನಿಕರವಾದ ಮತ್ತು ನಿಕೋಟಿನ್ ವಿಷಕಾರಿ ಎಂದು ಪರಿಗಣಿಸಲ್ಪಟ್ಟ ತಂಬಾಕು ಕಂಪೆನಿಗಳಲ್ಲಿ ಹಣ ತೊಡಗಿಸುವುದು ಎಷ್ಟು ಸರಿ ಎನ್ನುವುದು ಪ್ರಶ್ನಾರ್ಹವಾಗಿದೆ.
ಕಾನೂನು/ನೀತಿ ನಿರೂಪಣೆಯಲ್ಲಿ ಎಲ್ಲ ರಾಜಕೀಯ ಹಸ್ತಕ್ಷೇಪವನ್ನು ತಡೆಗಟ್ಟಲು ರಾಜಕಾರಣಿಗಳಿಗೆ ಸಂಸತ್ತಿನ ನೀತಿ ಸಂಹಿತೆಯ ಅಡಿಯಲ್ಲಿ ಕಟ್ಟುನಿಟ್ಟಾದ ಕಾನೂನುಗಳನ್ನು ಜಾರಿಗೆ ತರುವುದು ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಸೋಗಿನಲ್ಲಿ ತಂಬಾಕು ಉದ್ಯಮ ಮತ್ತು ಅದರ ಚಟುವಟಿಕೆಗಳೊಂದಿಗಿನ ಹವ್ಯಾಸವನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಕ್ಯಾನ್ಸರ್ ಮತ್ತಿತರ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ತಂಬಾಕು ಕೃಷಿ ನಿಷೇಽಸುವ ಮೂಲಕ, ಪೂರೈಕೆಯನ್ನು ಕಡಿಮೆ ಮಾಡುವ ಮೂಲಕ, ತಂಬಾಕು ಉತ್ಪನ್ನಗಳ ಬೇಡಿಕೆ ಕಡಿತವನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೆ, ಖರ್ಚು ಮಾಡಲಾಗುತ್ತಿರುವ ಸಾರ್ವಜನಿಕ ಹಣವು ನಿಷ್ಛಲ/ ನಿಷ್ಪ್ರಯೋಜಕ ವೆಚ್ಚವಾಗದಂತೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗುತ್ತದೆ.
” ಕಾನೂನು/ನೀತಿ ನಿರೂಪಣೆಯಲ್ಲಿ ಎಲ್ಲ ರಾಜಕೀಯ ಹಸ್ತಕ್ಷೇಪವನ್ನು ತಡೆಗಟ್ಟಲು ರಾಜಕಾರಣಿಗಳಿಗೆ ಸಂಸತ್ತಿನ ನೀತಿ ಸಂಹಿತೆಯ ಅಡಿಯಲ್ಲಿ ಕಟ್ಟುನಿಟ್ಟಾದ ಕಾನೂನುಗಳನ್ನು ಜಾರಿಗೆ ತರುವುದು ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಸೋಗಿನಲ್ಲಿ ತಂಬಾಕು ಉದ್ಯಮ ಮತ್ತು ಅದರ ಚಟುವಟಿಕೆಗಳೊಂದಿಗಿನ ಹವ್ಯಾಸವನ್ನು ಸಂಪೂರ್ಣವಾಗಿ ನಿಲ್ಲಿಸುವುದು.”
” ಕೇಂದ್ರ ಸರ್ಕಾರ ತಂಬಾಕು ಮಂಡಳಿಯು ಅನುದಾನ ಮತ್ತು ಬಡ್ಡಿರಹಿತ ಸಾಲ ಸೌಲಭ್ಯವನ್ನು ಎ-ಸಿವಿ ತಂಬಾಕು ಬೆಳೆಗಾರರಿಗೆ ೫೦,೦೦೦ ರೂ.ಗಳಿಂದ ೭೫,೦೦೦ ರೂ.ಗಳಿಗೆ ಹೆಚ್ಚಳ ಮಾಡಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದು ತಂಬಾಕು ಬೆಳೆ ಉತ್ತೇಜಿಸುವ ನಿರ್ಧಾರ ಎಂಬುದು ತಂಬಾಕು ವಿರೋಧಿ ಹೋರಾಟಗಾರರ ಪ್ರತಿಪಾದನೆಯಾಗಿದೆ.”
ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…
೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…
ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…
ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…
ರಾಜೇಶ್ ಬೆಂಡರವಾಡಿ ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ…
ದಿನೇಶ್ ಕುಮಾರ್ ಎಚ್.ಎಸ್. ಮೈಸೂರು: ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಡುವೆಯೂ ಕೆಂಪು ಸುಂದರಿ ಟೊಮ್ಯಾಟೋ ಬೆಲೆ ಪಾತಾಳಕ್ಕಿಳಿದಿದೆ. ಕಳೆದ…